ಬ್ರೇಕಿಂಗ್ ನ್ಯೂಸ್
16-04-22 05:23 pm Udupi Correspondent ಕರಾವಳಿ
ಉಡುಪಿ, ಎ.16 : ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆ ಪ್ರಕರಣದಲ್ಲಿ ಮಹತ್ವದ ಅಂಶಗಳು ಬಯಲಾಗುತ್ತಿವೆ. ಸಂತೋಷ್ ಸಾವನ್ನಪ್ಪಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದ ಲಾಡ್ಜ್ ಕೊಠಡಿಯಲ್ಲಿ ನಿಷೇಧಿತ ಕೀಟನಾಶಕ ಮೋನೋಕ್ರೋಟೋಫೋಸ್ ಬಾಟಲಿ ಪತ್ತೆಯಾಗಿದ್ದು, ಸಂತೋಷ್ ಕೀಟನಾಶಕ ಸೇವಿಸಿ ಸಾವನ್ನಪ್ಪಿದ್ದರೇ ಎಂಬ ಅನುಮಾನ ಮೂಡಿಸಿದೆ.
ಉಡುಪಿಗೆ ಬರುವ ಮುನ್ನ ಸಂತೋಷ್ ಮತ್ತು ಸ್ನೇಹಿತರು ಚಿಕ್ಕಮಗಳೂರಿನ ಹೋಮ್ ಸ್ಟೇನಲ್ಲಿ ವಾಸ್ತವ್ಯ ಹೂಡಿದ್ದರು. ಅದೇ ಸಂದರ್ಭದಲ್ಲಿ ಸಂತೋಷ್ ತನ್ನೂರಿಗೆ ಒಯ್ಯಲೆಂದು ಕೀಟನಾಶಕ ಖರೀದಿಸಿದ್ದರೇ ಎನ್ನುವ ಬಗ್ಗೆ ಶಂಕೆ ಇದೆ. ಆದರೆ ಲಾಡ್ಜಿನಲ್ಲಿದ್ದಾಗ ಅದೇ ಕೀಟನಾಶಕವನ್ನು ಜ್ಯೂಸ್ ಜೊತೆ ಸೇರಿಸಿ ಸೇವಿಸಿದ್ದರೇ ಎಂಬ ಶಂಕೆ ವ್ಯಕ್ತವಾಗಿದೆ. ತರಕಾರಿ ಗಿಡಗಳಿಗೆ ಹುಳಭಾದೆ ಬರದಂತೆ ಬಳಸುವ ಮೋನೋಕ್ರೋಟೋಫಾಸ್ ಕೀಟನಾಶಕ ಅತ್ಯಂತ ವಿಷಕಾರಿಯಾಗಿದ್ದು ಇದೇ ಕಾರಣಕ್ಕೆ ಸರಕಾರ ಇದರ ಬಳಕೆಯನ್ನು ನಿಷೇಧಿಸಿದೆ.
ಲಾಡ್ಜಿನ ಕಸದ ತೊಟ್ಟಿಯಲ್ಲಿ ಪತ್ತೆಯಾಗಿದ್ದ ವಿಷದ ಬಾಟಲಿ ಕೀಟನಾಶಕ ಎಂಬ ಅಂಶ ಪ್ರಕರಣಕ್ಕೆ ಹೊಸ ತಿರುವು ಕೊಟ್ಟಿದೆ. ಸದ್ಯ ಬಾಟಲಿಯನ್ನು ಫಾರೆನ್ಸಿಕ್ ತಜ್ಞರು ವಶಕ್ಕೆ ಪಡೆದಿದ್ದಾರೆ. ಕೆಲವು ವರ್ಷಗಳ ಹಿಂದೆ ಬಿಹಾರದಲ್ಲಿ ಇದೇ ವಿಷ 23 ಮಕ್ಕಳ ಸಾವಿಗೆ ಕಾರಣವಾಗಿತ್ತು. ಕೀಟನಾಶಕ ಇದ್ದ ಬಾಟಲಿಯಲ್ಲಿ ಹಾಕಿದ್ದ ಎಣ್ಣೆಯನ್ನು ಆಹಾರ ತಯಾರಿಗೆ ಬಳಸಿದ್ದರಿಂದ 23ಕ್ಕೂ ಅಧಿಕ ಮಕ್ಕಳು ಸಾವನ್ನಪ್ಪಿದ್ದರು. ಹೀಗಾಗಿ ಮೋನೋಕ್ರೋಟೋಫಾಸ್ ಅತ್ಯಂತ ಅಪಾಯಕಾರಿ ಎನ್ನಲಾಗಿದ್ದು ಅದರ ಬಳಕೆ ಮಾಡದಂತೆ ಸರಕಾರದ ಕೃಷಿ ಇಲಾಖೆ ಸೂಚನೆ ನೀಡಿತ್ತು. ಸದ್ಯಕ್ಕೆ ಸಂತೋಷ್ ಸಾವಿಗೆ ಕಾರಣವಾದ ವಿಷ ಯಾವುದು ಎನ್ನೋದು ಖಚಿತವಾಗಿಲ್ಲ. ಪೋಸ್ಟ್ ಮಾರ್ಟಂ ವರದಿಯಲ್ಲಿ ವಿಷದ ಬಗ್ಗೆ ಖಚಿತ ಮಾಹಿತಿ ಲಭ್ಯವಾಗಲಿದೆ.
ಆತ್ಮಹತ್ಯೆ ಪ್ರಕರಣದ ತನಿಖೆಗೆ ನಾಲ್ಕು ತಂಡ ರಚನೆ
ಸಂತೋಷ್ ಆತ್ಮಹತ್ಯೆ ಪ್ರಕರಣ ಭೇದಿಸಲು ಉಡುಪಿ ಎಸ್ಪಿ ವಿಷ್ಣುವರ್ಧನ್, ನಾಲ್ಕು ಪ್ರತ್ಯೇಕ ತಂಡಗಳನ್ನು ರಚಿಸಿದ್ದಾರೆ. ಚಿಕ್ಕಮಗಳೂರು ಮತ್ತು ದಾವಣಗೆರೆಯ ಹೋಮ್ ಸ್ಟೇಗಳಲ್ಲಿ ಉಳಿದುಕೊಂಡಿದ್ದ ಬಗ್ಗೆ ಸ್ನೇಹಿತರ ಮಾಹಿತಿಯಂತೆ ಪೊಲೀಸ್ ತಂಡಗಳು ಅಲ್ಲಿಗೆ ತೆರಳಿದೆ. ಮಣಿಪಾಲ ಇನ್ಸ್ ಪೆಕ್ಟರ್ ನೇತೃತ್ವದ ತಂಡ ಚಿಕ್ಕಮಗಳೂರಿಗೆ, ಉಡುಪಿ ಇನ್ಸ್ ಪೆಕ್ಟರ್ ನೇತೃತ್ವದ ತಂಡ ದಾವಣಗೆರೆಗೆ ತೆರಳಿದೆ. ಮಲ್ಪೆ ಮತ್ತು ಬ್ರಹ್ಮಾವರ ಸರ್ಕಲ್ ಇನ್ಸ್ ಪೆಕ್ಟರ್ ತಂಡ ಬೆಳಗಾವಿಗೆ ತೆರಳಿದೆ.
ದಾವಣಗೆರೆ, ಚಿಕ್ಕಮಗಳೂರುಗಳಲ್ಲಿದ್ದಾಗ ಸಂತೋಷ್ ಪಾಟೀಲ್ ಮತ್ತು ಗೆಳೆಯರು ಒಂದೇ ಕೊಠಡಿಯಲ್ಲಿ ಉಳಿದುಕೊಂಡಿದ್ದರು. ಆದರೆ ಉಡುಪಿಯಲ್ಲಿ ಎರಡು ಪ್ರತ್ಯೇಕ ಕೊಠಡಿಯಲ್ಲಿ ಉಳಿದುಕೊಂಡಿದ್ದು ಪೊಲೀಸರ ಸಂಶಯಕ್ಕೆ ಕಾರಣವಾಗಿತ್ತು. ತಾನು ಬೇರೆ ರೂಮ್‌ನಲ್ಲಿ ಮಲಗುತ್ತೇನೆ, ತನ್ನ ಕೊಠಡಿಗೆ ಸ್ನೇಹಿತ ರಾಜೇಶ್ ಬರುತ್ತಾನೆ ಎಂದು ಲಾಡ್ಜ್‌ನಲ್ಲಿ ರೂಮ್ ಬುಕ್ ಮಾಡುವಾಗ ಸಂತೋಷ್ ಪಾಟೀಲ್, ಗೆಳೆಯರಲ್ಲಿ ಹೇಳಿದ್ದರು ಎನ್ನಲಾಗಿದೆ. ಆದರೆ ಆತ ಬಂದಿದ್ದನೇ, ಆ ರಾಜೇಶ್ ಯಾರು ಎನ್ನುವುದು ತಿಳಿದಿಲ್ಲ. ಪೊಲೀಸರು ರಾಜೇಶ್ ಹೆಸರನ್ನು ಎಫ್‌ಐಆರ್‌ನಲ್ಲಿಯೂ ದಾಖಲಿಸಿದ್ದಾರೆ.
ಆದರೆ ರಾಜೇಶ್ ಎಂಬ ವ್ಯಕ್ತಿ ಅಂದು ಯಾರು ಕೂಡ ಲಾಡ್ಜ್‌ಗೆ ಬಂದಿರುವುದು ತಮ್ಮ ಗಮನಕ್ಕೆ ಬಂದಿಲ್ಲ. ಲಾಡ್ಜ್‌ನ ಸಿಸಿ ಕ್ಯಾಮೆರಾಗಳ ದೃಶ್ಯಾವಳಿಗಳನ್ನು ಪೊಲೀಸರು ಪಡೆದುಕೊಂಡಿದ್ದಾರೆ ಎಂದು ಲಾಡ್ಜ್ ಮ್ಯಾನೇಜರ್ ದಿನೇಶ್ ಹೇಳಿದ್ದಾರೆ.
The mysterious death of contractor Santosh Patil has raised many doubts. While this may sound like a suicide, the cause of the politically motivated death has taken on many dimensions. The investigation is currently under way as Santosh Patil committed suicide by ingesting poison. So what was that poison that caused this mysterious death? Where did Santosh buy this stuff? Here are the information for interresting.
01-05-25 01:48 pm
Bangalore Correspondent
Dk Suresh, Pavitra, wife Video: ಡಿ.ಕೆ ಬ್ರದರ್...
01-05-25 01:08 pm
MA Saleem, DGP-IGP, Prashanth Thakur, Police:...
30-04-25 05:08 pm
R Ahsok, Cm Siddaramaiah, Pak: ಕಾಂಗ್ರೆಸ್ನವರಿ...
29-04-25 10:45 pm
CM Siddaramaiah, Belagavi, BJP Suresh Kumar:...
29-04-25 09:51 pm
30-04-25 06:59 pm
HK News Desk
India Pakistan War: ಭಾರತೀಯ ಸೇನಾಪಡೆಗೆ ಪರಮಾಧಿಕಾ...
30-04-25 03:14 pm
Pakistan, No-fly zone islamabad: ಭಾರತದ ಪ್ರತೀಕ...
30-04-25 02:13 pm
ಮೋದಿ 'ಗಾಯಬ್' ಎಂದು ಕಾಂಗ್ರೆಸ್ ಪೋಸ್ಟ್ ; ಕಾಂಗ್ರೆಸ...
29-04-25 03:45 pm
'ನನಗೆ ಪಾಕಿಸ್ತಾನದಲ್ಲಿ ಯಾರೂ ಇಲ್ಲ, ದಯವಿಟ್ಟು ಉಳಿಸ...
28-04-25 06:52 pm
02-05-25 03:52 am
Mangaluru Staff
Suhas Shetty murder, Mangalore Bandh: ಸುಹಾಸ್...
02-05-25 03:29 am
Mangalore, Kudupu Murder case, MLA Bharath Sh...
01-05-25 09:29 pm
Mangalore Kudupu Murder Case, Update, Police:...
01-05-25 05:38 pm
Ramanath Rai, Kudupu Murder case, SIT: ಧರ್ಮಾಧ...
01-05-25 04:01 pm
01-05-25 10:06 pm
Mangalore Correspondent
Mangalore, Illegal Rice, crime: ಉತ್ತರ ಕರ್ನಾಟಕ...
30-04-25 04:09 pm
Mangalore Mudipu Murder, Mob, Police, Crime:...
29-04-25 09:59 pm
Kudupu Murder, Mangalore Crime, Police: ಕುಡುಪ...
29-04-25 02:53 pm
Belthagady, Blackmail, Mangalore crime: ಬೆಳ್ತ...
28-04-25 11:39 am