ಬ್ರೇಕಿಂಗ್ ನ್ಯೂಸ್
25-06-26 12:13 pm HK News Staffer ದೇಶ - ವಿದೇಶ
ಕಾರಕಾಸ್, ಜೂನ್ 25: ದಕ್ಷಿಣ ಅಮೆರಿಕದ ರಾಷ್ಟ್ರ ವೆನೆಜುವೆಲಾದಲ್ಲಿ ಸಂಭವಿಸಿದ ಎರಡು ಪ್ರಬಲ ಭೂಕಂಪಗಳು ದೇಶವನ್ನೇ ತತ್ತರಗೊಳಿಸಿವೆ. ಕೇವಲ 40 ಸೆಕೆಂಡ್‌ಗಳ ಅಂತರದಲ್ಲಿ 7.2 ಮತ್ತು 7.5 ತೀವ್ರತೆಯ ಭೂಕಂಪಗಳು ಸಂಭವಿಸಿದ ಪರಿಣಾಮ ರಾಜಧಾನಿ ಕಾರಕಾಸ್ ಸೇರಿದಂತೆ ಹಲವು ನಗರಗಳಲ್ಲಿ ಕಟ್ಟಡಗಳು ಕುಸಿದು ಬಿದ್ದಿದ್ದು, ಭಾರೀ ಪ್ರಮಾಣದ ಜೀವಹಾನಿಯ ಭೀತಿ ಎದುರಾಗಿದೆ. ಅಮೆರಿಕದ ಭೂವೈಜ್ಞಾನಿಕ ಸಮೀಕ್ಷೆ (ಯುಎಸ್‌ಜಿಎಸ್) ಸಂಸ್ಥೆ ಈ ದುರಂತದಿಂದ "ಭಾರೀ ಸಾವುನೋವು ಹಾಗೂ ವ್ಯಾಪಕ ಹಾನಿ ಸಂಭವಿಸುವ ಸಾಧ್ಯತೆ ಇದೆ" ಎಂದು ಎಚ್ಚರಿಕೆ ನೀಡಿದೆ.
ಭೂಕಂಪದ ಮೊದಲ ಕಂಪನ ಉತ್ತರ ಕರಾವಳಿ ಭಾಗದ ಮೊರೊನ್ ಸಮೀಪ ದಾಖಲಾಗಿದ್ದು, ಅದರ ಕೇವಲ 39 ರಿಂದ 40 ಸೆಕೆಂಡ್‌ಗಳ ಬಳಿಕ ಇನ್ನಷ್ಟು ಪ್ರಬಲವಾದ ಎರಡನೇ ಭೂಕಂಪ ಅಪ್ಪಳಿಸಿದೆ. ಈ ಅಪರೂಪದ ‘ಡಬ್ಲೆಟ್ ಭೂಕಂಪ’ದಿಂದ ಕಾರಕಾಸ್ ನಗರದಲ್ಲಿ ಅನೇಕ ಕಟ್ಟಡಗಳು ಹಾನಿಗೊಳಗಾಗಿದ್ದು, ಕೆಲವು ಕಟ್ಟಡಗಳು ಸಂಪೂರ್ಣ ಕುಸಿದು ಬಿದ್ದಿವೆ. ಭೂಕಂಪದ ತೀವ್ರತೆಗೆ ಬೆಚ್ಚಿಬಿದ್ದ ಜನರು ಮನೆ, ಕಚೇರಿ ಹಾಗೂ ವಾಣಿಜ್ಯ ಕಟ್ಟಡಗಳಿಂದ ಹೊರಗೆ ಓಡಿ ಬೀದಿಗಳಲ್ಲೇ ಆಶ್ರಯ ಪಡೆದಿದ್ದಾರೆ.
ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ವಿಡಿಯೊಗಳಲ್ಲಿ ಕಟ್ಟಡಗಳು ಕುಸಿಯುತ್ತಿರುವುದು, ಗೋಡೆಗಳು ಬಿರುಕು ಬಿಡುತ್ತಿರುವುದು, ಧೂಳಿನ ಮೋಡಗಳು ಆವರಿಸಿರುವುದು ಹಾಗೂ ಜನರು ಆತಂಕದಿಂದ ಓಡುತ್ತಿರುವ ದೃಶ್ಯಗಳು ಕಾಣಿಸಿಕೊಂಡಿವೆ. ಕಾರಕಾಸ್‌ನ ಹಲವೆಡೆ ಕಟ್ಟಡಗಳ ಅವಶೇಷಗಳಡಿ ಜನರು ಸಿಲುಕಿರುವ ಶಂಕೆ ವ್ಯಕ್ತವಾಗಿದ್ದು, ರಕ್ಷಣಾ ಕಾರ್ಯಾಚರಣೆಗಳು ತೀವ್ರಗತಿಯಲ್ಲಿ ಸಾಗುತ್ತಿವೆ.
ಭೂಕಂಪದ ಬಳಿಕ ವೆನೆಜುವೆಲಾದ ಹಂಗಾಮಿ ಅಧ್ಯಕ್ಷೆ ಡೆಲ್ಸಿ ರೊಡ್ರಿಗಸ್ ದೇಶಾದ್ಯಂತ ರಾಷ್ಟ್ರೀಯ ತುರ್ತು ಪರಿಸ್ಥಿತಿ ಘೋಷಿಸಿದ್ದಾರೆ. ವಿಮಾನ ನಿಲ್ದಾಣ, ಸಾರ್ವಜನಿಕ ಸಾರಿಗೆ ಸೇವೆ ಹಾಗೂ ಹಲವು ಸರ್ಕಾರಿ ಚಟುವಟಿಕೆಗಳನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದ್ದು, ಜನರು ಹಾನಿಗೊಳಗಾದ ಕಟ್ಟಡಗಳಿಂದ ದೂರವಿರಲು ಸೂಚಿಸಲಾಗಿದೆ. ಮೃತರ ಕುಟುಂಬಗಳಿಗೆ ಸಂತಾಪ ಸೂಚಿಸಿರುವ ಅವರು, ಸಾವಿನ ನಿಖರ ಸಂಖ್ಯೆಯನ್ನು ಇನ್ನೂ ಪ್ರಕಟಿಸಿಲ್ಲ.
ಯುಎಸ್‌ಜಿಎಸ್‌ನ ಪ್ರಾಥಮಿಕ ಅಂದಾಜಿನ ಪ್ರಕಾರ ಸಾವಿನ ಸಂಖ್ಯೆ 10 ಸಾವಿರದಿಂದ 1 ಲಕ್ಷದವರೆಗೂ ತಲುಪುವ ಸಾಧ್ಯತೆಯಿದೆ ಎಂದು ಹೇಳಲಾಗಿದೆ. ಆದರೆ ಈ ಅಂಕಿ-ಅಂಶ ಅಧಿಕೃತ ಸಾವಿನ ಸಂಖ್ಯೆ ಅಲ್ಲ; ಇದು ಸಂಭವನೀಯ ಹಾನಿಯ ಮುನ್ನೆಚ್ಚರಿಕಾ ಅಂದಾಜು ಮಾತ್ರ. ಸದ್ಯದವರೆಗೆ ಸರ್ಕಾರ ಅಧಿಕೃತ ಸಾವುನೋವುಗಳ ಲೆಕ್ಕವನ್ನು ಬಿಡುಗಡೆ ಮಾಡಿಲ್ಲ.




ಭೂಕಂಪದ ಬಳಿಕ ಪ್ಯೂರ್ಟೊ ರಿಕೊ, ವರ್ಜಿನ್ ದ್ವೀಪಗಳು ಹಾಗೂ ಕೆಲವು ಕೆರಿಬಿಯನ್ ಪ್ರದೇಶಗಳಿಗೆ ಸುನಾಮಿ ಎಚ್ಚರಿಕೆ ನೀಡಲಾಗಿತ್ತು. ನಂತರ ಪರಿಸ್ಥಿತಿಯನ್ನು ಮರುಪರಿಶೀಲಿಸಿದ ಅಧಿಕಾರಿಗಳು ಎಚ್ಚರಿಕೆಯನ್ನು ಹಿಂಪಡೆದಿದ್ದಾರೆ.
ಇದೇ ವೇಳೆ ಜಪಾನ್‌ನಲ್ಲಿ 6.9 ತೀವ್ರತೆಯ ಹಾಗೂ ಅಮೆರಿಕದ ಕ್ಯಾಲಿಫೋರ್ನಿಯಾದಲ್ಲಿ 5.6 ತೀವ್ರತೆಯ ಭೂಕಂಪಗಳು ದಾಖಲಾಗಿರುವುದು ಜನರಲ್ಲಿ ಆತಂಕ ಮೂಡಿಸಿದೆ. ಆದರೆ ಭೂಕಂಪ ತಜ್ಞರ ಪ್ರಕಾರ ಈ ಮೂರು ದೇಶಗಳಲ್ಲಿ ಸಂಭವಿಸಿದ ಭೂಕಂಪಗಳಿಗೆ ಯಾವುದೇ ನೇರ ಸಂಬಂಧ ಇಲ್ಲ. ಅವು ವಿಭಿನ್ನ ಟೆಕ್ಟೋನಿಕ್ ಪ್ಲೇಟ್‌ಗಳ ಚಲನೆಯಿಂದ ಉಂಟಾಗಿರುವ ಪ್ರತ್ಯೇಕ ಘಟನೆಗಳಾಗಿವೆ.
ಸದ್ಯ ಈ ಕುರಿತು ಪ್ರತಿಕ್ರಿಯೆ ನೀಡಿರುವ ವೆನೆಜುವೆಲಾ ಮಧ್ಯಂತರ ಅಧ್ಯಕ್ಷೆ ಡೆಲ್ಸಿ ರೋಡ್ರಿಗಸ್ ಭೂಕಂಪಗಳಿಂದ ಗಂಭೀರ ಹಾನಿ ಸಂಭವಿಸಿದ ಕಾರಣ ವೆನೆಜುವೆಲಾ ತನ್ನ ಮುಖ್ಯ ವಿಮಾನ ನಿಲ್ದಾಣವನ್ನು ಮುಚ್ಚಿದೆ ಎಂದು ತಿಳಿಸಿದ್ದು, ತುರ್ತು ಪರಿಸ್ಥಿತಿ ಘೋಷಿಸಿದ್ದಾರೆ. ಜೊತೆಗೆ "ನಮ್ಮ ದೇಶದ ಮೇಲೆ ಪರಿಣಾಮ ಬೀರಿದ ಪ್ರಬಲ ಭೂಕಂಪದ ನಂತರದ ಪರಿಸ್ಥಿತಿಯ ಕುರಿತು ವರದಿ ಮಾಡಲು ಶೀಘ್ರದಲ್ಲೇ ನಾನು ವೆನೆಜುವೆಲಾದವರನ್ನು ಉದ್ದೇಶಿಸಿ ಮಾತನಾಡುತ್ತೇನೆ" ಎಂದು ತಮ್ಮ ಅಧಿಕೃತ X ಖಾತೆಯಲ್ಲಿ ಬರೆದುಕೊಂಡಿದ್ದಾರೆ.
13-10-26 04:53 pm
HK News Staffer
ಹಿರಿಯ ಐಪಿಎಸ್ ಅಧಿಕಾರಿ, ಕೆಎಸ್ ಆರ್ ಪಿ ಎಡಿಜಿಪಿ ಎಸ...
13-10-26 03:49 pm
ಸ್ಟಿಂಗ್ ವಿವಾದಕ್ಕೆ ಹೊಸ ತಿರುವು ; ಸಿದ್ದರಾಮಯ್ಯ ಗಟ...
13-10-26 03:38 pm
DK Shivakumar: ನನ್ನ ವಿರುದ್ಧವೇ ಸ್ಟಿಂಗ್ ಆಪರೇಷನ್...
08-10-26 08:00 pm
B.Y. Vijayendra: ಸ್ಟಿಂಗ್, ಡಿಂಗ್ ಆಪರೇಷನ್ ಮಾ...
08-10-26 04:38 pm
12-10-26 05:22 pm
HK News Staffer
ಅಕ್ಟೋಬರ್ 7ರ ದಾಳಿ ಸೂತ್ರಧಾರ ಹಮಾಸ್ ಕಮಾಂಡರ್ ಅಬು ಜ...
11-10-26 10:28 pm
ರಷ್ಯನ್ ತೈಲಕ್ಕಾಗಿ ಭಾರತಕ್ಕೆ ಬರೆ ಹಾಕಿದ್ದ ಅಮೆರಿಕ...
11-10-26 03:20 pm
ರಿಯಾದ್ ಏರ್ಪೋರ್ಟ್ ಮೇಲೆ ಹೌತಿಗಳಿಂದ ಬಾಂಬ್ ದಾಳಿ ;...
11-10-26 02:34 pm
Elon Musk , Ambani, Modi: ಭಾರತದ ಆತ್ಮೀಯ ಪ್ರಧಾನ...
10-10-26 10:31 pm
13-10-26 11:10 pm
HK News Desk
Mangalore News: ಬ್ರಿಟಿಷ್ ಕಾಲದ 'ಸೌತ್ ಕೆನರಾ' ಬದ...
13-10-26 10:28 pm
Agnes Colllege Protest, Vedavyas Kamath: ಮಹಿಳ...
13-10-26 08:41 pm
Agnes College Protest, MLA Bharath Shetty: ವಿ...
13-10-26 07:50 pm
Sullia News: ಸುಳ್ಯ ; ತಡರಾತ್ರಿ ಮೀನು ಹಿಡಿಯಲು ಹ...
13-10-26 02:54 pm
12-10-26 10:36 pm
HK News Desk
Manglore Crime: ಅನೈತಿಕ ಸಂಬಂಧ ಶಂಕೆ ; ಪತ್ನಿಯನ್ನ...
12-10-26 04:12 pm
ದೆವ್ವ ಬಿಡಿಸುವ ನೆಪದಲ್ಲಿ ಮಹಿಳೆ ಮೇಲೆ ನಿರಂತರ ಅತ್ಯ...
12-10-26 03:56 pm
Kochi accident: ಮಿನಿ ಕೂಪರ್ ಅಟ್ಟಹಾಸಕ್ಕೆ ಮಂಗಳೂರ...
12-10-26 10:06 am
Cyber Fraud, Mangalore Doctor: ಮಾಡೆಲಿಂಗ್, ಗೋಲ...
10-10-26 02:27 pm