ಬ್ರೇಕಿಂಗ್ ನ್ಯೂಸ್
26-03-22 10:10 pm Udupi Correspondent ಕರಾವಳಿ
ಉಡುಪಿ, ಮಾ.26: ಕಟ್ಟಡ ಮತ್ತು ವ್ಯಾಪಾರ ಪರವಾನಗಿ ಪಡೆಯದೆ ಅಕ್ರಮವಾಗಿ ಹೊಟೇಲ್ ನಡೆಸಲಾಗುತ್ತಿದೆ ಎಂಬ ಕಾರಣಕ್ಕೆ ಉಡುಪಿಯ ಜಾಮಿಯಾ ಮಸೀದಿ ಬಳಿ ಕಾರ್ಯಾಚರಿಸುತ್ತಿದ್ದ ಎರಡು ಹೊಟೇಲ್ ಗಳನ್ನು ಉಡುಪಿ ನಗರಸಭೆ ಅಧಿಕಾರಿಗಳು ಪೊಲೀಸ್ ಭದ್ರತೆಯಲ್ಲಿ ತೆರವು ಮಾಡಿದ್ದಾರೆ.
ಜಾಮಿಯಾ ಮಸೀದಿಗೆ ಸೇರಿದ್ದ ಕಟ್ಟಡದಲ್ಲಿ ಝರಾ ಮತ್ತು ಜೈತೂನ್ ಹೆಸರಲ್ಲಿ ಎಸ್ ಡಿಪಿಐ ಜಿಲ್ಲಾಧ್ಯಕ್ಷ ನಜೀರ್ ಅಹ್ಮದ್ ಹಾಗೂ ಅವರ ಸಹೋದರ ಹೊಟೇಲ್ ನಡೆಸುತ್ತಿದ್ದರು. ಇತ್ತೀಚೆಗೆ ಹೊರಭಾಗದಲ್ಲಿ ನವೀಕರಣವನ್ನೂ ಮಾಡಿಸಿದ್ದರು. ನಗರಸಭೆ ಆಯುಕ್ತ ಉದಯ ಕುಮಾರ್ ಶೆಟ್ಟಿ ಹಾಗೂ ಉಡುಪಿ ತಹಸೀಲ್ದಾರ್ ಅರ್ಚನಾ ಭಟ್ ನೇತೃತ್ವದಲ್ಲಿ ತೆರವು ಕಾರ್ಯಾಚರಣೆ ನಡೆಯಿತು.
ಬೆಳಗ್ಗೆ ಜೆಸಿಬಿ ಮತ್ತು ಪೌರ ಕಾರ್ಮಿಕರನ್ನು ಕರೆಸಿ ತೆರವು ಕಾರ್ಯಾಚರಣೆಗೆ ಮುಂದಾದಾಗ, ಮಾಲೀಕರ ಕಡೆಯಿಂದ ವಿರೋಧವೂ ಕೇಳಿಬಂದಿದೆ. ಆದರೆ ಅಕ್ರಮವಾಗಿ ಇರುವುದಕ್ಕೆ ಸಾಕಷ್ಟು ಬಾರಿ ನೋಟೀಸ್ ನೀಡಲಾಗಿದೆ. ಈ ಬಗ್ಗೆ ಕೋರ್ಟ್ ಆದೇಶವೂ ಇದ್ದು ಅದರಂತೆ ತೆರವು ಕಾರ್ಯಾಚರಣೆ ಮಾಡುತ್ತಿದ್ದೇವೆ ಎಂದು ಮಾಲಕರ ಬಳಿ ಸಮಜಾಯಿಷಿ ನೀಡಿದ್ದಾರೆ. ಆದರೆ ಹೊಟೇಲ್ ತೆರವು ಮಾಡಿದ್ದಕ್ಕೆ ಬಿಜೆಪಿಯ ದ್ವೇಷ ರಾಜಕಾರಣ ಕಾರಣ ಎಂದು ಎಸ್ಡಿಪಿಐ ಆಕ್ರೋಶ ವ್ಯಕ್ತಪಡಿಸಿದೆ.
ಬಿಜೆಪಿಯಿಂದ ದ್ವೇಷದ ರಾಜಕಾರಣ
ಹಿಜಾಬ್ ವಿಚಾರದಲ್ಲಿ ಎರಡು ಬಾರಿ ಸರಕಾರದ ನಡೆಯನ್ನು ಟೀಕಿಸಿ ಹೇಳಿಕೆ ನೀಡಿದ್ದನ್ನು ನೆಪವಾಗಿಸಿ ಉಡುಪಿ ಶಾಸಕರು ಈ ಕೃತ್ಯ ಮಾಡಿಸಿದ್ದಾರೆ. ಉಡುಪಿ ನಗರಸಭೆ ಆಡಳಿತದ ಮೇಲೆ ಒತ್ತಡ ಹೇರಿ ಈ ಕೆಲಸ ಮಾಡಿಸಿದ್ದಾರೆ. ಉಡುಪಿಯಲ್ಲಿ ಸಾಕಷ್ಟು ಅಕ್ರಮ ಕಟ್ಟಡ, ವ್ಯಾಪಾರ ಕೇಂದ್ರಗಳಿದ್ದು ಎಲ್ಲವನ್ನೂ ತೆರವು ಕಾರ್ಯ ಮಾಡಿದ್ದಾರೆಯೇ. ಎರಡು ಹೊಟೇಲ್ ಗಳು ಮಾತ್ರ ಇವರಿಗೆ ಕಂಡಿದ್ದಾ ಎಂದು ಎಸ್ಡಿಪಿಐ ಜಿಲ್ಲಾಧ್ಯಕ್ಷ ನಜೀರ್ ಅಹ್ಮದ್ ಪ್ರಶ್ನೆ ಮಾಡಿದ್ದಾರೆ. ನಾನು ಪುಕ್ಕಟೆಯಾಗಿ ವ್ಯಾಪಾರ ಮಾಡುತ್ತಿರಲಿಲ್ಲ. ಸರಕಾರಕ್ಕೆ ಪ್ರತಿ ತಿಂಗಳು 37 ಸಾವಿರ ರೂ. ಜಿಎಸ್ಟಿ ಕಟ್ಟುತ್ತಿದ್ದೆ. ಎರಡು ಲಕ್ಷ ಬಾಡಿಗೆ ಪಾವತಿ ಮಾಡುತ್ತಿದ್ದೆ. ಸುಮಾರು 27 ಮಂದಿ ಕೆಲಸಗಾರರು ಇದ್ದರು. ಈಗ ಎಲ್ಲವನ್ನೂ ಬಿಜೆಪಿ ಆಡಳಿತ ಕೆಡವಿ ಹಾಕಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕೋರ್ಟ್ ತಡೆ ತೆರವಾಗಿದ್ದರಿಂದ ತೆರವು
ತೆರವು ಮಾಡಿರುವ ಜೈತೂನ್ ಹಾಗೂ ಝರಾ ಹೊಟೇಲ್ ಗಳು ವ್ಯಾಪಾರ ಮತ್ತು ಕಟ್ಟಡ ಪರವಾನಗಿ ಪಡೆದಿಲ್ಲ. 2018ರಲ್ಲಿ ಅನಧಿಕೃತ ಕಟ್ಟಡಗಳ ತೆರವಿಗೆ ನಗರಸಭೆಯಿಂದ ನೋಟೀಸ್ ನೀಡಲಾಗಿತ್ತು. ಹೊಟೇಲ್ ಮಾಲೀಕರು ನೋಟೀಸ್ ವಿರುದ್ಧ ತಡೆಯಾಜ್ಞೆ ತಂದಿದ್ದರು. ಕೋರ್ಟ್ ತಡೆ ಇತ್ತೀಚೆಗೆ ತೆರವುಗೊಂಡಿದ್ದರಿಂದ ಈಗ ತೆರವು ಕಾರ್ಯ ಮಾಡಿದ್ದೇವೆ. ಇದರ ಹಿಂದೆ ಯಾವುದೇ ರಾಜಕೀಯ ಇಲ್ಲ ಎಂದು ನಗರಸಭೆ ಪೌರಾಯುಕ್ತ ಉದಯ ಶೆಟ್ಟಿ ಹೇಳಿದ್ದಾರೆ.
In the last general session of the city municipality here, a resolution was passed to clear illegal buildings. Following the same, in an early morning operation undertaken on Saturday March 26, the building which housed a hotel belonging to the Social Democratic Party of India (SDPI) district president here, was brought down.
06-05-25 01:35 pm
HK News Desk
Hassan Suicide, Police Constable Harrasment:...
05-05-25 01:30 pm
ಅಲ್ಲೊಂದು, ಇಲ್ಲೊಂದು ಕೊಲೆ ಆಗತ್ತೆ, ಅದನ್ಯಾಕೆ ಧರ್ಮ...
04-05-25 09:55 pm
ಸಿಇಟಿ ಬಳಿಕ ನೀಟ್ ಪರೀಕ್ಷೆಗೂ ಜನಿವಾರಕ್ಕೆ ಕತ್ತರಿ !...
04-05-25 09:26 pm
ಹಿಮಾಲಯ - ದೆಹಲಿಗೆ ಸುನಾಮಿ, ಮಹಾನ್ ನಾಯಕರ ದುರ್ಮರಣ...
04-05-25 09:15 pm
06-05-25 02:45 pm
HK News Desk
ಭಾರತ - ಪಾಕ್ ಯುದ್ಧ ಸನ್ನಿವೇಶ ; ದೇಶಾದ್ಯಂತ ಮೇ 7ರಂ...
05-05-25 11:10 pm
ಪಾಕ್ ವಾಯು ಪ್ರದೇಶದಲ್ಲಿ ಭಾರತದ ವಿಮಾನಗಳಿಗೆ ನಿರ್ಬಂ...
30-04-25 06:59 pm
India Pakistan War: ಭಾರತೀಯ ಸೇನಾಪಡೆಗೆ ಪರಮಾಧಿಕಾ...
30-04-25 03:14 pm
Pakistan, No-fly zone islamabad: ಭಾರತದ ಪ್ರತೀಕ...
30-04-25 02:13 pm
06-05-25 04:02 pm
Mangalore Correspondent
Suhas Shetty Murder, Mangalore, Police: ಅಹಿತಕ...
06-05-25 12:32 pm
Mangalore Police, Sharan Pumpwell: ದಕ್ಷಿಣ ಕನ್...
05-05-25 10:59 pm
Suhas Shetty murder, MP Brijesh Chowta, Param...
05-05-25 10:43 pm
Mangalore Suhas Shetty murder, BJP Umanath Ko...
05-05-25 07:15 pm
03-05-25 02:16 pm
Mangalore Correspondent
Suhas Shetty Murder, Thokottu Attack, Mangalo...
02-05-25 12:00 pm
Mangalore Bajpe Murder, Suhas Shetty: ಹಳೆ ದ್ವ...
01-05-25 10:06 pm
Mangalore, Illegal Rice, crime: ಉತ್ತರ ಕರ್ನಾಟಕ...
30-04-25 04:09 pm
Mangalore Mudipu Murder, Mob, Police, Crime:...
29-04-25 09:59 pm