ಬ್ರೇಕಿಂಗ್ ನ್ಯೂಸ್
26-03-22 02:09 pm Mangalore Correspondent ಕರಾವಳಿ
ಮಂಗಳೂರು, ಮಾ.26 : ಖಾವಿ ಅನ್ನೋದೇ ಬೆಂಕಿ ಇದ್ದಹಾಗೆ, ಸಿದ್ದರಾಮಯ್ಯ ಬೆಂಕಿಗೆ ಕೈ ಹಾಕಿದ್ದಾರೆ. ಈ ಬೆಂಕಿಯಲ್ಲಿ ಸಿದ್ದರಾಮಯ್ಯ ಹಾಗೂ ಕಾಂಗ್ರೆಸ್ ಭಸ್ಮವಾಗಲಿದೆ. ಕಾಂಗ್ರೆಸ್ ಸರ್ವನಾಶವಾಗಲಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ವಾಗ್ದಾಳಿ ನಡೆಸಿದ್ದಾರೆ.
ಮಂಗಳೂರಿನಲ್ಲಿ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ನಳಿನ್ ಕುಮಾರ್, ಹಿಂದಿನಿಂದಲೂ ಸಿದ್ದರಾಮಯ್ಯ ಅವರಿಗೆ ಹಿಂದೂ ಸಂಸ್ಕೃತಿಯ ಬಗ್ಗೆ ಗೌರವವಿಲ್ಲ. ನಾನು ನಾಸ್ತಿಕವಾದಿ ಎಂದೇ ಹೇಳಿಕೊಂಡು ಬಂದಿದ್ದಾರೆ. ಆದರೆ ಕದ್ದುಮುಚ್ಚಿ ದೇವಾಲಯಗಳಿಗೆ ಹೊಗುತ್ತಾರೆ.
ಪಂಚರಾಜ್ಯಗಳ ಚುನಾವಣೆ, ಹಿಜಾಬ್ ವಿವಾದದ ಬಳಿಕ ಸಿದ್ದರಾಮಯ್ಯ ತಮ್ಮ ಮಾನಸಿಕ ಸ್ಥಿಮಿತವನ್ನೇ ಕಳೆದುಕೊಂಡಿದ್ದಾರೆ. ಮಾಜಿ ಮುಖ್ಯಮಂತ್ರಿಯಾಗಿ ವಿಧಾನಸಭೆಯಲ್ಲಿ ಒಬ್ಬ ಹಿರಿಯ ನಾಯಕನಾಗಿ ದೇಶದ ಸಂಸ್ಕೃತಿ, ಪರಂಪರೆ ಹಾಗೂ ಗುರುಪೀಠಗಳ ಬಗ್ಗೆ ಅತಿ ಹೆಚ್ಚು ತಿಳಿದುಕೊಂಡವರು. ಆದರೆ ರಾಜಕೀಯ ಪೀಠಕ್ಕಿಂತ ಗುರುಪೀಠವೇ ಶ್ರೇಷ್ಠ ಅಂತ ನಂಬಿರುವ ಸಂಸ್ಕೃತಿ ನಮ್ಮದು. ಅಂಥ ಗುರುಪೀಠಗಳಿಗೆ ಗುರು ಸಂಸ್ಕೃತಿ ಗೆ ಸಿದ್ದರಾಮಯ್ಯ ಅವಹೇಳನ, ಅವಮಾನ ಮಾಡಿದ್ದಾರೆ. ಇದರ ಪರಿಣಾಮ ಗೊತ್ತಾಗಲಿದೆ.

ಈ ಹಿಂದೆ ಧರ್ಮಸ್ಥಳಕ್ಕೆ ಮಾಂಸಾಹಾರ ಸೇವಿಸಿ ಹೋದ್ರೆ ಏನು? ಅಂತ ಸಿದ್ದರಾಮಯ್ಯ ಸವಾಲು ಹಾಕಿದ್ದರು. ಆನಂತರ ತಮ್ಮ ಮುಖ್ಯಮಂತ್ರಿ ಸ್ಥಾನವನ್ನೇ ಕಳೆದುಕೊಳ್ಳಬೇಕಾಗಿ ಬಂದಿತ್ತು ಎಂದು ನೆನಪಿಸಿದ ನಳಿನ್ ಕುಮಾರ್, ಹಿಂದೊಮ್ಮೆ ವೀರಶೈವ, ಲಿಂಗಾಯತರನ್ನು ಒಡೆಯುವ ಕೆಲಸಕ್ಕೆ ಸಿದ್ದರಾಮಯ್ಯ ಕೈ ಹಾಕಿದ್ದರು. ಅದರ ಪರಿಣಾಮ ಏನಾಯಿತು ಅನ್ನೋದು ಗೊತ್ತಿದೆ. ಸಿದ್ದರಾಮಯ್ಯ ಅವರ ಈ ರೀತಿಯ ಹೇಳಿಕೆಗೆ ಕಾಂಗ್ರೆಸ್ ನಲ್ಲಿರುವ ಆಂತರಿಕ ಕಚ್ಚಾಟವೇ ಕಾರಣ. ಡಿಕೆ ಶಿವಕುಮಾರ್ ಮೇಲೆ ಮೇಲುಗೈ ಸಾಧಿಸಲು ಸಿದ್ದರಾಮಯ್ಯ ಹೊರಟಿದ್ದಾರೆ.
ಅದರ ನೆಪದಲ್ಲಿ ಏನೋ ಮಾತನಾಡಲು ಹೋಗಿ ಭಾರತದ ಸಂಸ್ಕೃತಿಗೆ ಮತ್ತು ಹಿಂದೂ ನಂಬಿಕೆಗಳಿಗೆ ಅವಮಾನ ಮಾಡಿದ್ದಾರೆ. ಈ ಹಿಂದೆ ಹಿಂದುತ್ವದಲ್ಲಿ ನಂಬಿಕೆ ಇಟ್ಟವನು, ಭಗವದ್ಗೀತೆ ರಾಮಾಯಣ ಮಹಾಭಾರತ ಓದಿದ್ದೇನೆ ಎಂದು ಇವರೇ ಹೇಳಿಕೊಂಡಿದ್ದರು. 'ರಾವಣ' ಕೂಡ ಶ್ರೇಷ್ಠ ಪಂಡಿತ , ಅತಿ ಜ್ಞಾನಿಯಾಗಿದ್ದ. ಹಾಗೆಂದು ಓದಿದ್ದ ಜ್ಞಾನವೆಲ್ಲ ಸಹಾಯಕ್ಕೆ ಬಂದಿದೆ ಅಂತ ಅರ್ಥ ಅಲ್ಲ. ಆದರೆ ಶ್ರೀರಾಮ ತಾನು ನಂಬಿದ್ದ ನಂಬಿಕೆಗಳಿಂದ, ಪಾಲಿಸಿದ ಆದರ್ಶದಿಂದಾಗಿ ದೊಡ್ಡವನಾದ ಎಂದು ಹೇಳಿ ಪರೋಕ್ಷವಾಗಿ ಸಿದ್ದರಾಮಯ್ಯ ಅವರನ್ನು ರಾವಣನಿಗೆ ಹೋಲಿಸಿ ವ್ಯಂಗ್ಯವಾಡಿದ್ದಾರೆ.
Siddaramaiah speaks against sanyasis, this spark will set congress on fire slams Nalin Kumar Kateel in Mangalore. Leader of Opposition in the State Legislative Assembly and former Congress chief minister S. Siddaramiah finds himself isolated in his own party for his statement comparing hijab with sarees worn by Hindu women. He further went on to compare hijab with the customary attire of swami jis of various mutts in the State.
13-11-25 08:33 pm
HK News Desk
ಸಿದ್ದರಾಮಯ್ಯ ಸಿಎಂ ಆಗಿ ಮುಂದುವರಿದರೆ ತಪ್ಪೇನು? ನಾವ...
12-11-25 11:10 pm
ಧರ್ಮಸ್ಥಳ ಶವ ಹೂತ ಪ್ರಕರಣದಲ್ಲಿ ಎಸ್ಐಟಿ ತನಿಖೆಯ ತಡ...
12-11-25 11:06 pm
ಯಾರೂ ಗೂಟ ಹೊಡೆದು ಇರಕ್ಕಾಗಲ್ಲ, ಬಿಹಾರ ಚುನಾವಣೆ ಟೈಮ...
12-11-25 09:03 pm
ವಿಮಾನ ನಿಲ್ದಾಣದಲ್ಲಿ ನಮಾಜ್ ; ಅವರು ಎಲ್ಲಾದ್ರೂ ಶ್ರ...
10-11-25 07:17 pm
13-11-25 10:56 pm
HK News Desk
ಇಬ್ಬರು ಉಗ್ರರ ಡೈರಿ ಪತ್ತೆ ; ಮಹತ್ತರ ಮಾಹಿತಿ ಬಹಿರಂ...
13-11-25 08:41 pm
Tiruchi Aircraft: ತಿರುಚಿ- ಪುದುಕೋಟೈ ಹೆದ್ದಾರಿಯಲ...
13-11-25 05:13 pm
Delhi Blast: ದೆಹಲಿ ಸ್ಫೋಟಕ್ಕೆ ಟರ್ಕಿ ನಂಟಿನ ಶಂಕೆ...
13-11-25 04:52 pm
ಅಮಾಯಕರನ್ನು ಕೊಲ್ಲುವುದು ಇಸ್ಲಾಂನಲ್ಲಿ ಅತಿದೊಡ್ಡ ಪಾ...
12-11-25 02:54 pm
13-11-25 07:41 pm
Mangalore Correspondent
Belthangady, Kadaba Suicide, Mangalore; ಕಡಬದ...
13-11-25 05:01 pm
Kumble Toll Plaza: ಕುಂಬಳೆ ಟೋಲ್ ಪ್ಲಾಜಾಕ್ಕೆ ಭಾರ...
13-11-25 01:44 pm
Mangalore NMPT, Dinesh Gundu Rao, Congress, B...
12-11-25 06:56 pm
Ullal Dargah Committee: ಉಳ್ಳಾಲ ದರ್ಗಾ ಕಮಿಟಿಯಲ್...
11-11-25 10:42 pm
13-11-25 10:09 pm
Mangalore Correspondent
Sexual Harassment in Anekal: ಸ್ಕ್ಯಾನಿಂಗ್ ವೇಳ...
13-11-25 10:00 pm
ವಿದೇಶಿ ಕಂಪನಿಯಲ್ಲಿ ಹೂಡಿಕೆ ಮಾಡಿದರೆ ದುಪ್ಪಟ್ಟು ಲಾ...
12-11-25 12:32 pm
ಬೆಳ್ತಂಗಡಿ ಶ್ರೀರಾಮ ಕ್ರೆಡಿಟ್ ಸೊಸೈಟಿಯಲ್ಲಿ ಭಾರೀ ಅ...
11-11-25 06:33 pm
Fraud Dream Deal Mangalore, KSRTC: ತಿಂಗಳಿಗೆ ಒ...
09-11-25 10:27 pm