ಬ್ರೇಕಿಂಗ್ ನ್ಯೂಸ್
25-03-22 12:20 pm Mangalore Correspondent ಕರಾವಳಿ
ಮಂಗಳೂರು, ಮಾ.25: ದೇವಸ್ಥಾನಗಳ ಆವರಣದಲ್ಲಿ ಮುಸ್ಲಿಮ್ ವ್ಯಾಪಾರಸ್ಥರಿಗೆ ಅವಕಾಶ ಇಲ್ಲ ಎಂದು ಬೋರ್ಡ್ ಹಾಕುತ್ತಿರುವ ಹಿಂದು ಸಂಘಟನೆಗಳ ಕ್ರಮವನ್ನು ಯುವ ಕಾಂಗ್ರೆಸ್ ನಾಯಕ ಮಿಥುನ್ ರೈ ಖಂಡಿಸಿದ್ದು, ಈ ರೀತಿ ಕೋಮು ವೈಷಮ್ಯ ಹರಡಲು ಕೆಲವರು ಯತ್ನಿಸುತ್ತಿದ್ದರೂ ಜಿಲ್ಲಾಡಳಿತ ಇದನ್ನು ನೋಡಿ ಸುಮ್ಮನೆ ಕುಳಿತುಕೊಳ್ಳುವುದು ಸರಿಯಲ್ಲ. ಈ ಬಗ್ಗೆ ಕ್ರಮ ಜರುಗಿಸದಿದ್ದರೆ ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ನಡೆಸುತ್ತೇವೆ ಎಂದು ಹೇಳಿದ್ದಾರೆ.
ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಮಿಥುನ್ ರೈ, ಮೂಲ್ಕಿಯ ಬಪ್ಪನಾಡು ದುರ್ಗಾಪರಮೇಶ್ವರಿ ಕ್ಷೇತ್ರ ದೇಶದಲ್ಲೇ ಕೋಮು ಸಾಮರಸ್ಯಕ್ಕೆ ಹೆಸರಾಗಿರುವ ದೇವಸ್ಥಾನ. ಅಲ್ಲಿಗೆ ಎಲ್ಲ ಮತೀಯರು ಬಂದು ದೇವಿಗೆ ಕೈಮುಗಿಯುತ್ತಾರೆ. ಬಪ್ಪನಾಡಿನ ವಾರ್ಷಿಕ ಜಾತ್ರೆಗೆ ಒಂದೂವರೆ ಲಕ್ಷ ಅಟ್ಟಿಯಷ್ಟು ಮಲ್ಲಿಗೆ ಹೂವಿನ ಅರ್ಪಣೆಯಾಗುತ್ತದೆ. ಇಷ್ಟೊಂದು ಮಲ್ಲಿಗೆ ಹೂವು ಅರ್ಪಣೆಯಾಗುವ ಇನ್ನೊಂದು ದೇವಸ್ಥಾನ ನಾವು ಕಾಣಲು ಸಾಧ್ಯವಿಲ್ಲ. ಆದರೆ ಈ ಮಲ್ಲಿಗೆಯನ್ನು ಬೆಳೆಸುವವರು ಶಂಕರಪುರದ ಕ್ರಿಸ್ತಿಯನ್ನರು. ಕ್ರಿಶ್ಚಿಯನ್ನರು ಬೆಳೆಸಿದ ಮಲ್ಲಿಗೆಯನ್ನು ಮುಸ್ಲಿಮರು ಪಡೆದು ಮಾರಾಟ ಮಾಡುತ್ತಾರೆ. ಅದನ್ನು ಹಿಂದುಗಳು ಪಡೆದು ದೇವಿಗೆ ಅರ್ಪಿಸುತ್ತಾರೆ.
ಇಂತಹ ಸಾಮರಸ್ಯ ಹಿಂದಿನಿಂದಲೂ ಬೆಳೆದುಕೊಂಡು ಬಂದಿದೆ. ಆದರೆ, ಈಗ ಈ ಸಾಮರಸ್ಯವನ್ನೇ ಕದಡುವ ಕೆಲಸ ಆಗುತ್ತಿದೆ. ದೇವಸ್ಥಾನದ ಮುಂದೆ ಬ್ಯಾನರ್ ಹಾಕಿ, ಮುಸ್ಲಿಮರಿಗೆ ವ್ಯಾಪಾರಕ್ಕೆ ಬಿಡುವುದಿಲ್ಲ ಎಂದು ಬೆದರಿಕೆ ಹಾಕಿದ್ದಾರೆ. ಎಲ್ಲರಿಗೂ ಗೊತ್ತಿರುವಂತೆ ಬಪ್ಪನಾಡಿನ ದೇವಿಯ ರಥದಲ್ಲಿ ಬಪ್ಪ ಬ್ಯಾರಿಯ ಫೋಟೋ ಕೂಡ ಇದೆ, ದೇವಸ್ಥಾನ ಕಟ್ಟಿಸಿದ ಎಂಬ ಐತಿಹ್ಯ ಇರುವುದಕ್ಕಾಗಿ ಬಪ್ಪ ಬ್ಯಾರಿಗೂ ಅಲ್ಲಿ ಮಹತ್ವ ಇದೆ. ಇಂಥ ಹಿಂದು – ಮುಸ್ಲಿಂ ಸಾಮರಸ್ಯ ಇರುವ ಜಾಗದಲ್ಲಿ ಒಂದು ಬ್ಯಾನರ್ ಹಾಕಿ ಕಿಡಿ ಎಬ್ಬಿಸಿದ್ದಾರೆ.
ಅಲ್ಲಿನ ದೇವಸ್ಥಾನದ ಆಡಳಿತ ಮಂಡಳಿಯವರು ನಾವು ಬ್ಯಾನರ್ ಹಾಕಿಲ್ಲ. ಮುಸ್ಲಿಮರನ್ನು ವ್ಯಾಪಾರದಿಂದ ನಿರ್ಬಂಧಿಸಿಲ್ಲ ಎಂದು ಹೇಳಿದ್ದಾರೆ. ಬ್ಯಾನರ್ ಕಾರಣದಿಂದಾಗಿ ಜಿಲ್ಲೆಯ ಜನರು ಗೊಂದಲಕ್ಕೆ ಒಳಗಾಗಿದ್ದಾರೆ. ಈ ರೀತಿಯ ಬೆಳವಣಿಗೆ ಆಗಿದ್ದರೂ, ಜಿಲ್ಲಾಡಳಿತ ಬ್ಯಾನರ್ ತೆರವು ಮಾಡಲು ಮುಂದಾಗಿಲ್ಲ. ಬ್ಯಾನರ್ ತೆರವು ಮಾಡದೇ ಇರುವುದರಿಂದಲೇ ಸಾಮರಸ್ಯಕ್ಕೆ ಧಕ್ಕೆಯಾಗಿ ವಿವಾದ ಎದ್ದಿದೆ. ನಿಮಗೆ ಬ್ಯಾನರ್ ತೆರವು ಮಾಡಲು ಧೈರ್ಯ ಇಲ್ಲವೇ ಎಂದು ಜಿಲ್ಲಾಧಿಕಾರಿಯನ್ನು ಮಿಥುನ್ ರೈ ಪ್ರಶ್ನೆ ಮಾಡಿದ್ದಾರೆ.
ಬಪ್ಪನಾಡು ದೇವಿ ಎಲ್ಲ ಮತೀಯರನ್ನು ಒಂದೇ ದೃಷ್ಟಿಯಿಂದ ನೋಡಿ, ಬೇಡಿ ಬಂದವರನ್ನು ಕಾಯುತ್ತಾ ಬಂದವಳು. ಇಂತಹ ಬ್ಯಾನರ್ ಹಾಕಿದವರನ್ನೂ ಆಕೆ ನೋಡಿಕೊಳ್ಳುತ್ತಾಳೆ. ಆದರೆ, ಜಿಲ್ಲಾಡಳಿತ ಇದನ್ನೆಲ್ಲ ನೋಡಿಕೊಂಡು ಸುಮ್ಮನಿರುವುದನ್ನು ಸಹಿಸಲು ಸಾಧ್ಯವಿಲ್ಲ. ಜಿಲ್ಲಾಧಿಕಾರಿ ಮೌನ ವಹಿಸಿದರೆ ಘೆರಾವ್ ಎದುರಿಸಬೇಕಾದೀತು ಎಂದು ಮಿಥುನ್ ರೈ ಎಚ್ಚರಿಕೆ ನೀಡಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದ ಮಾಜಿ ಸಚಿವ ಅಭಯಚಂದ್ರ ಜೈನ್, ಜಿಲ್ಲೆಯಲ್ಲಿ ಕೋಮು ಸಾಮರಸ್ಯ ಕದಡುವ ಪ್ರಯತ್ನಗಳು ಆಗುತ್ತಿವೆ. ಅನಾಮಧೇಯ ಹೆಸರಿನಲ್ಲಿ ಬ್ಯಾನರ್ ಹಾಕಿ, ಒಂದು ವರ್ಗವನ್ನು ಎತ್ತಿಕಟ್ಟುವ, ಶಾಂತಿ ಕದಡುವ ಯತ್ನ ಆಗುತ್ತಿದೆ. ಇದಕ್ಕೆಲ್ಲ ರಾಜ್ಯದಲ್ಲಿ ಆಡಳಿತ ನಡೆಸುವ ಸರಕಾರವೇ ಕಾರಣ. ಇಲ್ಲಿನ ಶಾಸಕರು, ಸಂಸದರು, ಜಿಲ್ಲಾಡಳಿತವೂ ಕಾರಣ ಎಂದು ಹೇಳಿದರು.
Youth Congress leader Mithun Rai vehemently condemned the banners displaying "No permission for business to Muslim traders during temple fesivals" and threatened to gerao the district administration office if they do not take action.
06-05-25 01:35 pm
HK News Desk
Hassan Suicide, Police Constable Harrasment:...
05-05-25 01:30 pm
ಅಲ್ಲೊಂದು, ಇಲ್ಲೊಂದು ಕೊಲೆ ಆಗತ್ತೆ, ಅದನ್ಯಾಕೆ ಧರ್ಮ...
04-05-25 09:55 pm
ಸಿಇಟಿ ಬಳಿಕ ನೀಟ್ ಪರೀಕ್ಷೆಗೂ ಜನಿವಾರಕ್ಕೆ ಕತ್ತರಿ !...
04-05-25 09:26 pm
ಹಿಮಾಲಯ - ದೆಹಲಿಗೆ ಸುನಾಮಿ, ಮಹಾನ್ ನಾಯಕರ ದುರ್ಮರಣ...
04-05-25 09:15 pm
06-05-25 02:45 pm
HK News Desk
ಭಾರತ - ಪಾಕ್ ಯುದ್ಧ ಸನ್ನಿವೇಶ ; ದೇಶಾದ್ಯಂತ ಮೇ 7ರಂ...
05-05-25 11:10 pm
ಪಾಕ್ ವಾಯು ಪ್ರದೇಶದಲ್ಲಿ ಭಾರತದ ವಿಮಾನಗಳಿಗೆ ನಿರ್ಬಂ...
30-04-25 06:59 pm
India Pakistan War: ಭಾರತೀಯ ಸೇನಾಪಡೆಗೆ ಪರಮಾಧಿಕಾ...
30-04-25 03:14 pm
Pakistan, No-fly zone islamabad: ಭಾರತದ ಪ್ರತೀಕ...
30-04-25 02:13 pm
06-05-25 12:32 pm
Mangalore Correspondent
Mangalore Police, Sharan Pumpwell: ದಕ್ಷಿಣ ಕನ್...
05-05-25 10:59 pm
Suhas Shetty murder, MP Brijesh Chowta, Param...
05-05-25 10:43 pm
Mangalore Suhas Shetty murder, BJP Umanath Ko...
05-05-25 07:15 pm
MLA Harish Poonja, Dinesh Gundurao: ಬುರ್ಖಾಧಾರ...
05-05-25 05:10 pm
03-05-25 02:16 pm
Mangalore Correspondent
Suhas Shetty Murder, Thokottu Attack, Mangalo...
02-05-25 12:00 pm
Mangalore Bajpe Murder, Suhas Shetty: ಹಳೆ ದ್ವ...
01-05-25 10:06 pm
Mangalore, Illegal Rice, crime: ಉತ್ತರ ಕರ್ನಾಟಕ...
30-04-25 04:09 pm
Mangalore Mudipu Murder, Mob, Police, Crime:...
29-04-25 09:59 pm