ಬ್ರೇಕಿಂಗ್ ನ್ಯೂಸ್
11-03-22 02:23 pm Mangalore Correspondent ಕರಾವಳಿ
ಮಂಗಳೂರು, ಮಾ.11: ದಕ್ಷಿಣ ಕನ್ನಡ ಜಿಲ್ಲೆಯ ಮೂವರು ಮಹಿಳೆಯರು ಸಿವಿಲ್ ಜಡ್ಜ್ ಪರೀಕ್ಷೆಯಲ್ಲಿ ತೇರ್ಗಡೆಯಾಗಿದ್ದು ನ್ಯಾಯಾಧೀಶರ ಹುದ್ದೆಗೆ ನೇಮಕಗೊಂಡಿದ್ದಾರೆ. ಮೂಡುಬಿದಿರೆ ವಕೀಲರ ಸಂಘದ ಸದಸ್ಯೆ ಸುನೀತಾ ಭಂಡಾರಿ, ಮಂಗಳೂರು ವಕೀಲರ ಸಂಘದ ಜೋಯ್ಲಿನ್ ಮೆಂಡೋನ್ಸ, ಬೆಳ್ತಂಗಡಿ ವಕೀಲರ ಸಂಘದ ಶ್ರುತಿ ಕೆ.ಎಸ್. ನ್ಯಾಯಾಧೀಶರ ಹುದ್ದೆಗೆ ಆಯ್ಕೆಯಾದವರು.
ರಾಜ್ಯದಲ್ಲಿ ಒಟ್ಟು 94 ನ್ಯಾಯಾಧೀಶರ ಹುದ್ದೆಗಳಿಗೆ 239 ಮಂದಿ ಪರೀಕ್ಷೆ ಬರೆದಿದ್ದರು. ಅದರಲ್ಲಿ 75 ಮಂದಿ ನ್ಯಾಯಾಧೀಶರ ಹುದ್ದೆಗೆ ಆಯ್ಕೆಯಾಗಿದ್ದಾರೆ. ಬೆಳ್ತಂಗಡಿ ವಕೀಲರ ಸಂಘದ ಸದಸ್ಯೆಯಾಗಿರುವ ಶ್ರುತಿ ಕೆ.ಎಸ್. ಉಜಿರೆ ಟಿಬಿ ಕ್ರಾಸ್ ನಿವಾಸಿಯಾಗಿದ್ದು, ಐದು ವರ್ಷಗಳಿಂದ ವಕೀಲರಾಗಿ ಪ್ರಾಕ್ಟೀಸ್ ಮಾಡುತ್ತಿದ್ದರು. ಮೂರನೇ ಬಾರಿಯ ಪ್ರಯತ್ನದಲ್ಲಿ ಜಡ್ಜ್ ಹುದ್ದೆಗೆ ಆಯ್ಕೆಗೊಂಡಿದ್ದಾರೆ. ಬೆಳ್ತಂಗಡಿಯಲ್ಲಿ ಧನಂಜಯ ರಾವ್ ಅವರ ಜೂನಿಯರ್ ಆಗಿ ಪ್ರಾಕ್ಟೀಸ್ ಮಾಡುತ್ತಿದ್ದರು. ಶ್ರುತಿ ಕೆ.ಎಸ್. ಅವರ ಪತಿ ರಂಜಿತ್ ನಾಯ್ಕ್ ಮಂಗಳೂರಿನಲ್ಲಿ ವಕೀಲರಾಗಿದ್ದಾರೆ.

ಮಂಗಳೂರು ತಾಲೂಕಿನ ಮೂಡುಪೆರಾರ ನಿವಾಸಿ ಜೋಯ್ಲಿನ್ ಮೆಂಡೋನ್ಸ 2012ರಲ್ಲಿ ಕಾನೂನು ವ್ಯಾಸಂಗ ಪೂರೈಸಿ, ಆಬಳಿಕ ಮಂಗಳೂರಿನಲ್ಲಿ ಹಿರಿಯ ವಕೀಲ ಅನಂತಕೃಷ್ಣ ಅವರಲ್ಲಿ ಪ್ರಾಕ್ಟೀಸ್ ಮಾಡುತ್ತಿದ್ದರು. ಇವರ ತಂದೆ ದಿ.ಫ್ರಾನ್ಸಿಸ್ ಮೆಂಡೋನ್ಸ ಮತ್ತು ತಾಯಿ ಪಾವಲಿನ್. ತಂದೆ, ತಾಯಿ ಕೃಷಿ ಹಿನ್ನೆಲೆಯವರು. ಜೋಯ್ಲಿನ್ ಅವರ ಅಣ್ಣ ಜೋಯ್ಸನ್ ಮೆಂಡೋನ್ಸ ಭಾರತೀಯ ಸೇನೆಯಲ್ಲಿ ಕರ್ತವ್ಯದಲ್ಲಿದ್ದಾರೆ. ನ್ಯಾಯಾಧೀಶರ ಹುದ್ದೆಗೇರಲು ಜೋಯ್ಲಿನ್ ಅವರು ಆರು ಬಾರಿ ಪರೀಕ್ಷೆ ಬರೆದಿದ್ದಾರೆ. 2019ರಲ್ಲಿ ಒಮ್ಮೆ ಸಂದರ್ಶನವನ್ನೂ ಎದುರಿಸಿದ್ದರು. ಆದರೆ ಆಯ್ಕೆ ಸಾಧ್ಯವಾಗಿರಲಿಲ್ಲ. ಈ ಬಾರಿ ಪರೀಕ್ಷೆ ಸೇರಿದಂತೆ ಮೂರು ಹಂತಗಳನ್ನು ಪೂರೈಸಿ, ಜಡ್ಜ್ ಹುದ್ದೆಗೆ ಆಯ್ಕೆಗೊಂಡಿದ್ದಾರೆ. ಜೋಯ್ಲಿನ್ ಅವರ ಪತಿ ಆಲ್ವಿನ್ ಸಲ್ದಾನಾ ದುಬೈನಲ್ಲಿ ಉದ್ಯೋಗದಲ್ಲಿದ್ದಾರೆ. ಇವರಿಗೆ ಮೂರೂವರೆ ವರ್ಷದ ಮಗು ಇದೆ. ತಾಯಿ ಮತ್ತು ಅಣ್ಣನೇ ನನಗೆ ಪ್ರೇರಣೆ ಎಂದಿದ್ದಾರೆ ಜೋಯ್ಲಿನ್.
ಮೂಡುಬಿದಿರೆಯ ವಾಲ್ಪಾಡಿ ನಿವಾಸಿಯಾಗಿರುವ ಸುನೀತಾ ಭಂಡಾರಿ, 2016ರಲ್ಲಿ ಕಾನೂನು ಪದವಿ ಪೂರೈಸಿ ಮೂಡುಬಿದಿರೆಯಲ್ಲಿ ವಕೀಲಿ ವೃತ್ತಿ ಆರಂಭಿಸಿದ್ದರು. ಪ್ರವೀಣ್ ಎಸ್. ಲೋಬೊ ಅವರಲ್ಲಿ ಪ್ರಾಕ್ಟೀಸ್ ಮಾಡುತ್ತಿದ್ದರು. ತನ್ನ ಮೊದಲ ಪ್ರಯತ್ನದಲ್ಲಿಯೇ ಸುನೀತಾ ನ್ಯಾಯಾಧೀಶರ ಹುದ್ದೆ ಗಿಟ್ಟಿಸಿಕೊಂಡಿದ್ದಾರೆ. ತಂದೆ ದಿವಂಗತ ಮಾಧವ ಭಂಡಾರಿ ಮತ್ತು ತಾಯಿ ಯಮುನಾ ಭಂಡಾರಿ ದಂಪತಿಯ ಮೂವರು ಹೆಣ್ಣು ಮಕ್ಕಳಲ್ಲಿ ಕಿರಿಯಳಾಗಿರುವ ಸುನೀತಾ ಬಡತನದ ಹಿನ್ನೆಲೆಯಿಂದ ಬಂದವರಾಗಿದ್ದು ನ್ಯಾಯದಾನದ ಹುದ್ದೆಗೇರಿ ದೊಡ್ಡ ಸಾಧನೆ ಮಾಡಿದ್ದಾರೆ. ಸುನೀತಾ ಅವಿವಾಹಿತರಾಗಿದ್ದಾರೆ. ಕರಾವಳಿಯಲ್ಲಿ ಸೀಮಿತ ಸಂಖ್ಯೆಯಲ್ಲಿರುವ ಕ್ಷೌರಿಕ ಹಿನ್ನೆಲೆಯ ಈ ಸಮುದಾಯದಲ್ಲಿ ನ್ಯಾಯಾಧೀಶರ ಹುದ್ದೆಗೇರಿದವರು ಅತ್ಯಂತ ವಿರಳ. ಈ ಸಾಧನೆ ಮಾಡಿದ ಮೊದಲ ಮಹಿಳೆ ಇವರೇ ಆಗಿರಬೇಕು.
Mangalore Three advocates from Dakshina Kannada (DK) district, who appeared for the civil judges’ examination which was held recently, have cleared the examinations and appointed as judges. They are Suneeta Bhandary, Shruthi K S and Joylin. The trio is among the list of 75 successful candidates published by the Judges Appointment Committee.
13-11-25 08:33 pm
HK News Desk
ಸಿದ್ದರಾಮಯ್ಯ ಸಿಎಂ ಆಗಿ ಮುಂದುವರಿದರೆ ತಪ್ಪೇನು? ನಾವ...
12-11-25 11:10 pm
ಧರ್ಮಸ್ಥಳ ಶವ ಹೂತ ಪ್ರಕರಣದಲ್ಲಿ ಎಸ್ಐಟಿ ತನಿಖೆಯ ತಡ...
12-11-25 11:06 pm
ಯಾರೂ ಗೂಟ ಹೊಡೆದು ಇರಕ್ಕಾಗಲ್ಲ, ಬಿಹಾರ ಚುನಾವಣೆ ಟೈಮ...
12-11-25 09:03 pm
ವಿಮಾನ ನಿಲ್ದಾಣದಲ್ಲಿ ನಮಾಜ್ ; ಅವರು ಎಲ್ಲಾದ್ರೂ ಶ್ರ...
10-11-25 07:17 pm
13-11-25 08:41 pm
HK News Desk
Tiruchi Aircraft: ತಿರುಚಿ- ಪುದುಕೋಟೈ ಹೆದ್ದಾರಿಯಲ...
13-11-25 05:13 pm
Delhi Blast: ದೆಹಲಿ ಸ್ಫೋಟಕ್ಕೆ ಟರ್ಕಿ ನಂಟಿನ ಶಂಕೆ...
13-11-25 04:52 pm
ಅಮಾಯಕರನ್ನು ಕೊಲ್ಲುವುದು ಇಸ್ಲಾಂನಲ್ಲಿ ಅತಿದೊಡ್ಡ ಪಾ...
12-11-25 02:54 pm
ದೆಹಲಿ ಘಟನೆ, ಆತ್ಮಹತ್ಯಾ ಬಾಂಬರ್ ಆಗಿರಲಿಲ್ಲ, ಆಕಸ್ಮ...
11-11-25 10:56 pm
13-11-25 07:41 pm
Mangalore Correspondent
Belthangady, Kadaba Suicide, Mangalore; ಕಡಬದ...
13-11-25 05:01 pm
Kumble Toll Plaza: ಕುಂಬಳೆ ಟೋಲ್ ಪ್ಲಾಜಾಕ್ಕೆ ಭಾರ...
13-11-25 01:44 pm
Mangalore NMPT, Dinesh Gundu Rao, Congress, B...
12-11-25 06:56 pm
Ullal Dargah Committee: ಉಳ್ಳಾಲ ದರ್ಗಾ ಕಮಿಟಿಯಲ್...
11-11-25 10:42 pm
13-11-25 10:09 pm
Mangalore Correspondent
Sexual Harassment in Anekal: ಸ್ಕ್ಯಾನಿಂಗ್ ವೇಳ...
13-11-25 10:00 pm
ವಿದೇಶಿ ಕಂಪನಿಯಲ್ಲಿ ಹೂಡಿಕೆ ಮಾಡಿದರೆ ದುಪ್ಪಟ್ಟು ಲಾ...
12-11-25 12:32 pm
ಬೆಳ್ತಂಗಡಿ ಶ್ರೀರಾಮ ಕ್ರೆಡಿಟ್ ಸೊಸೈಟಿಯಲ್ಲಿ ಭಾರೀ ಅ...
11-11-25 06:33 pm
Fraud Dream Deal Mangalore, KSRTC: ತಿಂಗಳಿಗೆ ಒ...
09-11-25 10:27 pm