ಬ್ರೇಕಿಂಗ್ ನ್ಯೂಸ್
08-03-22 09:41 am Mangalore Correspondent ಕರಾವಳಿ
ಉಳ್ಳಾಲ, ಮಾ.8: ಮಗಳ ಹುಟ್ಟಿದ ದಿನಕ್ಕೆ ಅದ್ದೂರಿ ಪಾರ್ಟಿ ಮಾಡೋಣ ಎನ್ನುತ್ತಿದ್ದ ತಂದೆಯೇ ಇಲ್ಲವಾಗಿದ್ದಾನೆ. ಹುಟ್ಟಿದ ದಿನದ ಬದಲು ತಂದೆಯ ತಿಥಿ ಕಾರ್ಯ ಮಾಡುವ ದೌರ್ಭಾಗ್ಯ ಆ ಕುಟುಂಬಕ್ಕೆ ಒದಗಿ ಬಂದಿದೆ. ಪತ್ನಿ ಮೇಲಿನ ಕೋಪದಲ್ಲಿ ಐದು ವರ್ಷದ ಪುಟ್ಟ ಕಂದಮ್ಮನನ್ನೇ ಮರೆತು ವ್ಯಕ್ತಿಯೊಬ್ಬ ನೇಣು ಬಿಗಿದು ಆತ್ಮಹತ್ಯೆಗೈದ ಘಟನೆ ಕೊಲ್ಯ ಕಣೀರು ತೋಟದ ಕಣೀರುಬೀಡು ಎಂಬಲ್ಲಿ ನಡೆದಿದೆ.
ಕಣೀರು ತೋಟ ನಿವಾಸಿ ಪ್ರವೀಣ್ ಪೂಜಾರಿ(34) ಯಾನೆ ಪವನ್ ಆತ್ಮಹತ್ಯೆಗೈದ ದುರ್ದೈವಿ. ಪ್ರವೀಣ್ ಖಾಸಗಿ ಬಸ್ಸಿನಲ್ಲಿ ಚೆಕ್ಕರ್ ಆಗಿ ಕೆಲಸ ನಿವರ್ಹಿಸುತ್ತಿದ್ದು ನಿನ್ನೆ ಸಂಜೆ 6 ಗಂಟೆಗೆ ಮನೆಗೆ ಬಂದವರು ಕೋಣೆಯೊಳಗೆ ತೆರಳಿದ್ದರು. ಈ ವೇಳೆ ಪ್ರವೀಣ್ ತಾಯಿ ಮನೆ ಹೊರಗಡೆ ಬೀಡಿ ಕಟ್ಟುತ್ತಿದ್ದರೆನ್ನಲಾಗಿದೆ. ಸಂಜೆ 7.30 ಗಂಟೆಗೆ ಪತ್ನಿ ಕೆಲಸದಿಂದ ಮರಳಿದಾಗ ಕೋಣೆಯೊಳಗಿನ ಪಕ್ಕಾಸಿಗೆ ಪ್ರವೀಣ್ ಶಾಲಿನಿಂದ ನೇಣು ಬಿಗಿದು ಆತ್ಮಹತ್ಯೆಗೈದಿರುವುದು ಬೆಳಕಿಗೆ ಬಂದಿದೆ.

ಕೂಡಲೇ ಪ್ರವೀಣ್ ಅವರನ್ನ ಆಸ್ಪತ್ರೆಗೆ ಸಾಗಿಸಿದರೂ ಅದಾಗಲೇ ಅವರು ಮೃತಪಟ್ಟಿದ್ದರು. ಆತ್ಮಹತ್ಯೆಗೆ ದಾಂಪತ್ಯ ಕಲಹವೇ ಕಾರಣ ಎಂದು ಶಂಕಿಸಲಾಗಿದೆ. ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದೆ.
ಮಗಳ ಬರ್ತ್ ಡೇಯಂದೇ ತಿಥಿಕಾರ್ಯ !
ಪ್ರವೀಣ್ ಪ್ರೇಮ ವಿವಾಹವಾಗಿದ್ದು ದಂಪತಿಗೆ ಐದು ವರ್ಷದ ಮುದ್ದಾದ ಹೆಣ್ಮಗು ಇದೆ. ಮುಂದಿನ ವಾರ ಮಗುವಿನ ಹುಟ್ಟುಹಬ್ಬವನ್ನು ಅದ್ಧೂರಿಯಾಗಿ ಆಚರಿಸುತ್ತೇನೆಂದು ಹೇಳುತ್ತಿದ್ದ ಪ್ರವೀಣ್ ಆತ್ಮಹತ್ಯೆಗೈದಿದ್ದು ಮಗುವಿನ ಹುಟ್ಟುದಿನದಂದೇ ತಂದೆಯ ತಿಥಿ ಮಾಡುವ ದೌರ್ಭಾಗ್ಯ ಒದಗಿಬಂದಿದೆ.
Mangalore 34 year old man commits suicide on the day of his daughters birthday in Ullala. The deceased has been identified as Praveen Poojary. Some family issue is the reason for this extreme step it is said.
13-11-25 08:33 pm
HK News Desk
ಸಿದ್ದರಾಮಯ್ಯ ಸಿಎಂ ಆಗಿ ಮುಂದುವರಿದರೆ ತಪ್ಪೇನು? ನಾವ...
12-11-25 11:10 pm
ಧರ್ಮಸ್ಥಳ ಶವ ಹೂತ ಪ್ರಕರಣದಲ್ಲಿ ಎಸ್ಐಟಿ ತನಿಖೆಯ ತಡ...
12-11-25 11:06 pm
ಯಾರೂ ಗೂಟ ಹೊಡೆದು ಇರಕ್ಕಾಗಲ್ಲ, ಬಿಹಾರ ಚುನಾವಣೆ ಟೈಮ...
12-11-25 09:03 pm
ವಿಮಾನ ನಿಲ್ದಾಣದಲ್ಲಿ ನಮಾಜ್ ; ಅವರು ಎಲ್ಲಾದ್ರೂ ಶ್ರ...
10-11-25 07:17 pm
13-11-25 08:41 pm
HK News Desk
Tiruchi Aircraft: ತಿರುಚಿ- ಪುದುಕೋಟೈ ಹೆದ್ದಾರಿಯಲ...
13-11-25 05:13 pm
Delhi Blast: ದೆಹಲಿ ಸ್ಫೋಟಕ್ಕೆ ಟರ್ಕಿ ನಂಟಿನ ಶಂಕೆ...
13-11-25 04:52 pm
ಅಮಾಯಕರನ್ನು ಕೊಲ್ಲುವುದು ಇಸ್ಲಾಂನಲ್ಲಿ ಅತಿದೊಡ್ಡ ಪಾ...
12-11-25 02:54 pm
ದೆಹಲಿ ಘಟನೆ, ಆತ್ಮಹತ್ಯಾ ಬಾಂಬರ್ ಆಗಿರಲಿಲ್ಲ, ಆಕಸ್ಮ...
11-11-25 10:56 pm
13-11-25 07:41 pm
Mangalore Correspondent
Belthangady, Kadaba Suicide, Mangalore; ಕಡಬದ...
13-11-25 05:01 pm
Kumble Toll Plaza: ಕುಂಬಳೆ ಟೋಲ್ ಪ್ಲಾಜಾಕ್ಕೆ ಭಾರ...
13-11-25 01:44 pm
Mangalore NMPT, Dinesh Gundu Rao, Congress, B...
12-11-25 06:56 pm
Ullal Dargah Committee: ಉಳ್ಳಾಲ ದರ್ಗಾ ಕಮಿಟಿಯಲ್...
11-11-25 10:42 pm
13-11-25 10:00 pm
HK News Desk
ವಿದೇಶಿ ಕಂಪನಿಯಲ್ಲಿ ಹೂಡಿಕೆ ಮಾಡಿದರೆ ದುಪ್ಪಟ್ಟು ಲಾ...
12-11-25 12:32 pm
ಬೆಳ್ತಂಗಡಿ ಶ್ರೀರಾಮ ಕ್ರೆಡಿಟ್ ಸೊಸೈಟಿಯಲ್ಲಿ ಭಾರೀ ಅ...
11-11-25 06:33 pm
Fraud Dream Deal Mangalore, KSRTC: ತಿಂಗಳಿಗೆ ಒ...
09-11-25 10:27 pm
ಬಹುಕೋಟಿ ವಂಚಕ ರೋಷನ್ ಸಲ್ದಾನಗೆ ಸೇರಿದ 2.85 ಕೋಟಿ ಮ...
09-11-25 03:50 pm