ಬ್ರೇಕಿಂಗ್ ನ್ಯೂಸ್
02-03-22 02:48 pm Mangalore Correspondent ಕರಾವಳಿ
ಉಳ್ಳಾಲ, ಮಾ.2: ಉಳ್ಳಾಲ ಭಾರತ್ ಪಿಯು ಕಾಲೇಜಿನಲ್ಲಿ ಹಿಜಾಬ್ ಕಿಚ್ಚು ವ್ಯಾಪಿಸಿದ್ದು ವಿವಾದ ಶಮನಗೊಳಿಸಲು ಕಾಲೇಜು ಆಡಳಿತವು ಹೈರಾಣಾಗಿದೆ. ಕಳೆದ ಶುಕ್ರವಾರ ಸಮಸ್ಯೆ ಉಂಟಾದ ಬಳಿಕ ವಿದ್ಯಾರ್ಥಿಗಳಿಗೆ ನಿನ್ನೆಯ ವರೆಗೂ ರಜೆ ನೀಡಲಾಗಿತ್ತು. ಇಂದು ಮತ್ತೆ ಕಾಲೇಜು ಆರಂಭಗೊಂಡರೂ, ಮುಸ್ಲಿಂ ವಿದ್ಯಾರ್ಥಿ, ವಿದ್ಯಾರ್ಥಿನಿಯರು ಹೈಡ್ರಾಮಾ ನಡೆಸಿದ್ದು ಕಾಲೇಜು ಸಿಬಂದಿ ಪೀಕಲಾಟಕ್ಕೆ ಸಿಲುಕುವಂತಾಗಿತ್ತು.
ಕಾಲೇಜಿಗೆ ಪ್ರವೇಶ ಕೊಡದಿದ್ದರೆ ವರ್ಗಾವಣೆ ಪತ್ರ(ಟಿ.ಸಿ) ನೀಡುವಂತೆ ಮುಸ್ಲಿಂ ವಿದ್ಯಾರ್ಥಿಗಳು ಒತ್ತಾಯಿಸಿದಲ್ಲದೆ, ತರಗತಿಯಲ್ಲಿದ್ದ ಇತರ ಹಿಂದು ವಿದ್ಯಾರ್ಥಿಗಳಿಗೂ ಪಾಠ ನಡೆಸದಂತೆ ಧರಣಿ ನಡೆಸಿದರು. ವಿದ್ಯಾರ್ಥಿಗಳು ಹೊಯ್ದಾಟ ಕಾರಣದಿಂದ ಕಾಲೇಜಿನ ಪ್ರಾಂಶುಪಾಲೆ ಕಲಾವತಿ, ಎಲ್ಲ ವಿದ್ಯಾರ್ಥಿಗಳಿಗೂ ಆನ್ ಲೈನ್ ತರಗತಿ ನಡೆಸುತ್ತೇವೆ. ಕಾಲೇಜಿಗೆ ರಜೆ ಮುಂದುವರಿಸಲಾಗುವುದು ಎಂದು ಹೇಳಿದ್ದಾರೆ. ಇದರಿಂದ ಆಕ್ರೋಶಗೊಂಡ ಎಲ್ಲ ವಿದ್ಯಾರ್ಥಿಗಳು ಆನ್ ಲೈನ್ ಕ್ಲಾಸ್ ಮಾಡಲು ಕೊರೊನಾ ಇದೆಯಾ..? ಆನ್ ಲೈನ್ ಕ್ಲಾಸ್ ನಮಗೆ ಅರ್ಥ ಆಗಲ್ಲ. ಪರೀಕ್ಷೆ ಬೇರೆ ಹತ್ರ ಬರ್ತಿದೆ, ಪಾಠ ಪೂರ್ಣಗೊಂಡಿಲ್ಲ, ಆನ್ ಲೈನ್ ಪಾಠ ಕೇಳಲು ನಮ್ಮಲ್ಲಿ ಮೊಬೈಲ್ ಕೂಡ ಇಲ್ಲವೆಂದರು.

ಪ್ರಾಂಶುಪಾಲೆ ಕಲಾವತಿಯವರು ಮುಸ್ಲಿಂ ವಿದ್ಯಾರ್ಥಿನಿಯರಲ್ಲಿ ಹಿಜಾಬ್ ಕಳಚಿ ತರಗತಿಗೆ ಹೋಗಬೇಕಾಗಿ ಕೋರ್ಟ್ ಆದೇಶವಿದೆ ಎಂದು ಆದೇಶ ಪತ್ರ ತೋರಿಸಿದರು. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ವಿದ್ಯಾರ್ಥಿನಿಯರು, ಇಂತಹ ನಕಲಿ ಆದೇಶ ಪತ್ರಗಳನ್ನ ತೋರಿಸಿ ನೀವುಗಳು ನಮ್ಮನ್ನ ಬೆದರಿಸೋದು ಬೇಡ. ಕೋರ್ಟ್ ಆದೇಶ ಬರುವ ವರೆಗೂ ನಮಗೆ ಹಿಜಾಬ್ ಧರಿಸಲು ಅವಕಾಶ ನೀಡಲೇಬೇಕು. ನಮಗೆ ತರಗತಿಯಲ್ಲೇ ಪಾಠ ಹೇಳಿ ಎಂದು ಪಟ್ಟು ಹಿಡಿದರು. ಅಲ್ಲದೆ, ಹಿಜಾಬ್, ಬುರ್ಖಾ ಧರಿಸಿಕೊಂಡೇ ಎಲ್ಲಾ ವಿದ್ಯಾರ್ಥಿನಿಯರು ಕಾಲೇಜು ತರಗತಿ ಒಳಗೆ ಬಂದು ಕುಳಿತರು.


ಕೊನೆಗೆ, ಪ್ರಾಂಶುಪಾಲರು ಪಿಯು ವಿದ್ಯಾರ್ಥಿಗಳೆಲ್ಲರಿಗೂ ರಜೆ ಘೋಷಿಸಿ ಆನ್ ಲೈನ್ ತರಗತಿ ನಡೆಸುವುದೆಂದು ಹೇಳಿದರು. ಅದರಂತೆ ಹಿಂದು ವಿದ್ಯಾರ್ಥಿಗಳೆಲ್ಲರೂ ಬೆಳಗ್ಗೆಯೇ ಮನೆಗೆ ತೆರಳಿದ್ದು, ಮುಸ್ಲಿಂ ವಿದ್ಯಾರ್ಥಿ, ವಿದ್ಯಾರ್ಥಿನಿಯರು ಹಿಜಾಬ್, ಬುರ್ಖಾ ಧರಿಸಿಯೇ ಮಧ್ಯಾಹ್ನದ ವರೆಗೂ ತರಗತಿಯಲ್ಲೇ ಕುಳಿತು ಪ್ರತಿರೋಧ ವ್ಯಕ್ತಪಡಿಸಿದ್ದಾರೆ. ಕ್ಲಾಸಲ್ಲಿ ಕುಳಿತು ಪ್ರತಿರೋಧ ತೋರಿದ ಮುಸ್ಲಿಂ ವಿದ್ಯಾರ್ಥಿಗಳನ್ನ ಮನೆಗೆ ಕಳುಹಿಸಲು ಉಳ್ಳಾಲ ಪೊಲೀಸರು ಮತ್ತು ಕಾಲೇಜು ಆಡಳಿತದವರು ಹರಸಾಹಸ ಪಟ್ಟಿದ್ದಾರೆ. ಉಳ್ಳಾಲ ಠಾಣಾ ಇನ್ಸ್ ಪೆಕ್ಟರ್ ಸಂದೀಪ್ , ಪಿಎಸ್ ಐ ರೇವಣ ಸಿದ್ಧಪ್ಪ ಅವರು ವಿದ್ಯಾರ್ಥಿಗಳಿಗೆ ನಯವಾಗಿಯೇ ಕ್ಲಾಸ್ ಕೊಟ್ಟು ನ್ಯಾಯಾಲಯದ ಆದೇಶಗಳನ್ನು ಯಾಕೆ, ಹೇಗೆ ಪಾಲಿಸಬೇಕೆಂದು ಮನವರಿಕೆ ಮಾಡಿದ್ದಾರೆ. ಆದರೆ ತರಗತಿಗೆ ಬಂದ ಪ್ರಾಂಶುಪಾಲರಲ್ಲಿ ಟಿ.ಸಿ ನೀಡುವಂತೆ ವಿದ್ಯಾರ್ಥಿಗಳು ಒತ್ತಾಯಿಸಿದ್ದಾರೆ. ಪರೀಕ್ಷೆಗೆ ಕೂರಿಸುವ ಕಾಲೇಜು ಸಂಸ್ಥೆಗಳ ಲಿಖಿತ ಒಪ್ಪಿಗೆ ಪತ್ರ ತಂದಲ್ಲಿ ಟಿ.ಸಿ ಕೊಡುವುದಾಗಿ ಪ್ರಾಂಶುಪಾಲೆ ಕಲಾವತಿ ಹೇಳಿದ್ದಾರೆ. ಮಧ್ಯಾಹ್ನದ ವೇಳೆಗೆ ಎಲ್ಲಾ ವಿದ್ಯಾರ್ಥಿಗಳು ಮನೆಗೆ ತೆರಳಿದ್ದಾರೆ.


ದ್ವಿತೀಯ ಪಿಯು ವಿದ್ಯಾರ್ಥಿ ದರ್ಶನ್ ಮಾತನಾಡಿ, ಅವರು ಹಿಜಾಬ್ ಗೋಸ್ಕರ ಕಾಲೇಜಿಗೆ ಬರುವುದೆಂದು ಪಟ್ಟು ಹಿಡಿದಿದ್ದಾರೆ. ನಾವು ವಿದ್ಯೆ ಕಲಿಯಲು ಕಾಲೇಜಿಗೆ ಬರುತ್ತಿದ್ದೇವೆ. ನಮ್ ಕಾಲೇಜಲ್ಲಿ ಏನ್ ನಡೀತಿದೆ ಗೊತ್ತಾಗ್ತಿಲ್ಲ. ಪರೀಕ್ಷೆ ಸಮೀಪಿಸುವಾಗ ಆನ್ ಲೈನ್ ತರಗತಿ ಎಂದು ರಜೆ ನೀಡಿದರೆ ನಮ್ಮ ಶಿಕ್ಷಣದ ಗತಿ ಏನು..? ಪೋಷಕರು ಕೆಲಸಕ್ಕೆ ತೆರಳುತ್ತಿದ್ದು ಆನ್ ಲೈನ್ ಶಿಕ್ಷಣಕ್ಕೆ ಮೊಬೈಲ್ ಕೂಡ ಇಲ್ಲದ ಪರಿಸ್ಥಿತಿ ಎದುರಾಗಿದೆ ಎಂದು ಅಲವತ್ತು ತೋಡಿದ್ದಾರೆ.

ಪಿಯು ಮುಸ್ಲಿಂ ವಿದ್ಯಾರ್ಥಿನಿ ಶಮೃದ ಮಾತನಾಡಿ ಕೊರೊನಾ ಸಮಯದಲ್ಲೇ ಆನ್ ಲೈನ್ ತರಗತಿ ಕಲಿತು ಸಾಕಾಗಿದೆ. ಮುಂದೆ ನಾವು ಆನ್ ಲೈನ್ ತರಗತಿ ಕಲಿಯಲು ಸಾಧ್ಯವಿಲ್ಲ. ತರಗತಿ ಒಳಗೆ ಹಿಜಾಬ್ಗೆ ಅವಕಾಶ ನೀಡಿ ಪಾಠ ಮುಂದುವರಿಸಲು ಆಗ್ರಹಿಸಿದರು. ಪಿಯು ತರಗತಿ ಆರಂಭಿಸಲು ಕೋರ್ಟ್ ಮತ್ತು ಸರಕಾರದ ಆದೇಶವನ್ನೇ ಪಾಲಿಸಬೇಕಿದೆ. ವಿದ್ಯಾರ್ಥಿಗಳ ಶಿಕ್ಷಣಕ್ಕೆ ತೊಡಕಾಗದೆ ಮತ್ತು ಯಾವುದೇ ಅಹಿತಕರ ಘಟನೆಗಳು ಸಂಭವಿಸಬಾರದೆಂಬ ದೃಷ್ಟಿಯಿಂದ ವಿದ್ಯಾರ್ಥಿಗಳಿಗೆ ರಜೆ ಘೋಷಿಸಿ ಆನ್ ಲೈನ್ ತರಗತಿ ನಡೆಸಲಾಗುವುದೆಂದು ಕಾಲೇಜು ಆಡಳಿತ ಸಮಿತಿಯ ಮೊಗವೀರ ಸಂಘದ ಅಧ್ಯಕ್ಷ ಮನೋಜ್ ಸಾಲ್ಯಾನ್ ಹೇಳಿದ್ದಾರೆ.
Hijab row continues for third day at Bharath PU collage in Ullal in Mangalore. The students are protesting since three days for their entry into the college with Hijab even after the college administration had strictly decided that there won't be entry with hijab.
12-11-25 11:10 pm
Bangalore Correspondent
ಧರ್ಮಸ್ಥಳ ಶವ ಹೂತ ಪ್ರಕರಣದಲ್ಲಿ ಎಸ್ಐಟಿ ತನಿಖೆಯ ತಡ...
12-11-25 11:06 pm
ಯಾರೂ ಗೂಟ ಹೊಡೆದು ಇರಕ್ಕಾಗಲ್ಲ, ಬಿಹಾರ ಚುನಾವಣೆ ಟೈಮ...
12-11-25 09:03 pm
ವಿಮಾನ ನಿಲ್ದಾಣದಲ್ಲಿ ನಮಾಜ್ ; ಅವರು ಎಲ್ಲಾದ್ರೂ ಶ್ರ...
10-11-25 07:17 pm
54 ಹೆಕ್ಟೇರ್ ಅರಣ್ಯ ನಾಶ ಭೀತಿ ; ಶರಾವತಿ ಪಂಪ್ಡ್ ಸ್...
10-11-25 02:58 pm
13-11-25 05:13 pm
HK Staffer
Delhi Blast: ದೆಹಲಿ ಸ್ಫೋಟಕ್ಕೆ ಟರ್ಕಿ ನಂಟಿನ ಶಂಕೆ...
13-11-25 04:52 pm
ಅಮಾಯಕರನ್ನು ಕೊಲ್ಲುವುದು ಇಸ್ಲಾಂನಲ್ಲಿ ಅತಿದೊಡ್ಡ ಪಾ...
12-11-25 02:54 pm
ದೆಹಲಿ ಘಟನೆ, ಆತ್ಮಹತ್ಯಾ ಬಾಂಬರ್ ಆಗಿರಲಿಲ್ಲ, ಆಕಸ್ಮ...
11-11-25 10:56 pm
Mangaluru Kasaragod Highway: ಮಂಗಳೂರು- ಕಾಸರಗೋಡ...
11-11-25 10:20 pm
13-11-25 07:41 pm
Mangalore Correspondent
Belthangady, Kadaba Suicide, Mangalore; ಕಡಬದ...
13-11-25 05:01 pm
Kumble Toll Plaza: ಕುಂಬಳೆ ಟೋಲ್ ಪ್ಲಾಜಾಕ್ಕೆ ಭಾರ...
13-11-25 01:44 pm
Mangalore NMPT, Dinesh Gundu Rao, Congress, B...
12-11-25 06:56 pm
Ullal Dargah Committee: ಉಳ್ಳಾಲ ದರ್ಗಾ ಕಮಿಟಿಯಲ್...
11-11-25 10:42 pm
12-11-25 12:32 pm
Mangalore Correspondent
ಬೆಳ್ತಂಗಡಿ ಶ್ರೀರಾಮ ಕ್ರೆಡಿಟ್ ಸೊಸೈಟಿಯಲ್ಲಿ ಭಾರೀ ಅ...
11-11-25 06:33 pm
Fraud Dream Deal Mangalore, KSRTC: ತಿಂಗಳಿಗೆ ಒ...
09-11-25 10:27 pm
ಬಹುಕೋಟಿ ವಂಚಕ ರೋಷನ್ ಸಲ್ದಾನಗೆ ಸೇರಿದ 2.85 ಕೋಟಿ ಮ...
09-11-25 03:50 pm
ಕೋಮುದ್ವೇಷದ ಕೊಲೆ ; ಪ್ರತೀಕಾರಕ್ಕೆ ಪ್ರಚೋದಿಸಿ ಇನ್...
08-11-25 11:15 pm