ಬ್ರೇಕಿಂಗ್ ನ್ಯೂಸ್
18-02-22 06:33 pm Mangalore Correspondent ಕರಾವಳಿ
ಮಂಗಳೂರು, ಫೆ.18 : ಮಂಗಳೂರು ನಗರದ ಹಲವು ಕಡೆಗಳಲ್ಲಿ ಗ್ಯಾಸ್ ಲೀಕೇಜ್ ಆಗಿರುವ ರೀತಿ ವಿಚಿತ್ರ ವಾಸನೆ ಕಂಡುಬಂದಿದ್ದು, ಜನರು ಈ ಬಗ್ಗೆ ಬಹಳಷ್ಟು ಆತಂಕಕ್ಕೆ ಒಳಗಾಗಿದ್ದಾರೆ. ಆದರೆ, ಈ ಬಗ್ಗೆ ಜಿಲ್ಲಾಡಳಿತದಿಂದಾಗಲೀ, ಪೊಲೀಸ್ ಇಲಾಖೆಯಿಂದಾಗಲೀ ಯಾವುದೇ ಅಧಿಕೃತ ಮಾಹಿತಿ ಲಭ್ಯವಾಗಿಲ್ಲ.
ಫೆ.17ರ ಗುರುವಾರ ಸಂಜೆಯಿಂದ ದಿಢೀರ್ ಆಗಿ ಗ್ಯಾಸ್ ವಾಸನೆ ಕಂಡುಬಂದಿತ್ತು. ಮಣ್ಣಗುಡ್ಡ, ಕೊಟ್ಟಾರ, ಕಂಕನಾಡಿ, ಕಾರ್ ಸ್ಟ್ರೀಟ್, ಬೆಂದೂರುವೆಲ್, ಬಂದರು ಹೀಗೆ ಹಲವು ಕಡೆಗಳಲ್ಲಿ ಜನರು ಗ್ಯಾಸ್ ವಾಸನೆಯನ್ನು ಗ್ರಹಿಸಿದ್ದಾರೆ. ಈ ಬಗ್ಗೆ ಸ್ಥಳೀಯರು ಮಾಧ್ಯಮ ಪ್ರತಿನಿಧಿಗಳು, ಪೊಲೀಸರ ಬಳಿ ಕರೆ ಮಾಡಿ ಕೇಳತೊಡಗಿದ್ದರು.
ಆದರೆ 24 ಗಂಟೆ ಕಳೆದರೂ, ಗ್ಯಾಸ್ ಲೀಕೇಜ್ ಬಗ್ಗೆ ಮೂಲವನ್ನು ಪತ್ತೆ ಮಾಡಲು ಸಾಧ್ಯವಾಗಿಲ್ಲ. ಈ ನಡುವೆ, ಎಂಆರ್ ಪಿಎಲ್ ಅಧಿಕಾರಿಗಳು ಗ್ಯಾಸ್ ಲೀಕೇಜ್ ಆಗಿರುವುದು ನಮ್ಮ ಕಡೆಯಿಂದ ಅಲ್ಲ ಎಂದು ಸ್ಪಷ್ಟನೆ ಕೊಟ್ಟಿದ್ದಾರೆ. ಇದೇ ವೇಳೆ ಪೊಲೀಸ್ ಕಮಿಷನರ್ ಶಶಿಕುಮಾರ್ ಕೂಡ ಸ್ಪಷ್ಟನೆ ಕೊಟ್ಟಿದ್ದು, ನಾವು ಎಂಆರ್ ಪಿಎಲ್, ಎಚ್ ಪಿಸಿಎಲ್, ಎಂಸಿಎಫ್, ಟೋಟಲ್ ಗ್ಯಾಸ್, ಪೆಟ್ರೋಲ್ ಪಂಪ್ ಹೀಗೆ ಹಲವಾರು ಕಡೆಗಳಲ್ಲಿ ತಪಾಸಣೆ ಕೈಗೊಂಡಿದ್ದು ಯಾವುದೇ ಕಡೆ ಗ್ಯಾಸ್ ಸೋರಿಕೆ ಆಗಿರುವುದು ಕಂಡುಬಂದಿಲ್ಲ ಎಂದು ಹೇಳಿದ್ದಾರೆ.
ಗ್ಯಾಸ್ ಸೋರಿಕೆ ಆಗಿದೆಯೇ ಎಂಬ ಬಗ್ಗೆ ಜಿಲ್ಲಾಧಿಕಾರಿ ರಾಜೇಂದ್ರ ಕೆ.ವಿ. ವಿಪತ್ತು ನಿರ್ವಹಣಾ ಪ್ರಾಧಿಕಾರದ ಮೂಲಕ ತನಿಖೆಗೆ ಸೂಚನೆ ನೀಡಿದ್ದಾರೆ. ರಾತ್ರಿ ವೇಳೆ ಗ್ಯಾಸ್ ಸೋರಿಕೆಯಾದ ರೀತಿಯಲ್ಲಿ ಘಾಟು ವಾಸನೆ ಕಂಡುಬಂದಿದ್ದು, ಈ ಬಗ್ಗೆ ವಿಪತ್ತು ನಿರ್ವಹಣಾ ಪ್ರಾಧಿಕಾರಕ್ಕೆ ಸಾರ್ವಜನಿಕರು ದೂರು ನೀಡಿದ್ದಾರೆ. ಈ ಬಗ್ಗೆ ಮಾಹಿತಿ ಕಲೆಹಾಕಲು ಪೊಲೀಸ್ ಇಲಾಖೆ ಮತ್ತು ಅಗ್ನಿಶಾಮಕ ಇಲಾಖೆ ಮತ್ತು ಕಾರ್ಖಾನೆ ಮತ್ತು ಬಾಯ್ಲರ್ ಇಲಾಖೆಗೆ ಸೂಚನೆ ನೀಡಲಾಗಿದೆ. ಮೂಲ ಪತ್ತೆಗೆ ಕಾರ್ಯಾಚರಣೆ ನಡೆಸಲಾಗುತ್ತಿದೆ. ಸಾರ್ವಜನಿಕರು ಮಾಹಿತಿ ಹೊಂದಿದ್ದಲ್ಲಿ ಟೋಲ್ ಫೀ ಸಂಖ್ಯೆ 1077 ಗೆ ಕರೆ ಮಾಡಿ ತಿಳಿಸುವಂತೆ ಜಿಲ್ಲಾಧಿಕಾರಿ ಕೋರಿದ್ದಾರೆ.
ಗೈಲ್ ಕಂಪನಿಯಿಂದ ಮನೆ ಮನೆಗೇ ಗ್ಯಾಸ್
ಮಂಗಳೂರು ನಗರದಲ್ಲಿ ಗೈಲ್ ಕಂಪನಿಯಿಂದ ಮನೆ ಮನೆಗೆ ಗ್ಯಾಸ್ ಒದಗಿಸುವ ಪೈಪ್ ಲೈನ್ ಕಾಮಗಾರಿ ನಡೆಯುತ್ತಿದ್ದು, ಬಹುತೇಕ ಕಡೆ ಪೈಪ್ ಲೈನ್ ಕೆಲಸ ಆಗುತ್ತಿದೆ. ಆದರೆ ಅದಕ್ಕಿನ್ನೂ ಗ್ಯಾಸ್ ಸಂಪರ್ಕ ನೀಡಲಾಗಿಲ್ಲ ಎನ್ನುವ ಮಾಹಿತಿಗಳಿವೆ. ಪ್ರಾಯೋಗಿಕವಾಗಿ ಗ್ಯಾಸ್ ಸಂಪರ್ಕ ನೀಡಿದ ವೇಳೆ ಸೋರಿಕೆಯಾಗಿರುವ ಸಾಧ್ಯತೆ ಇದೆಯೇ ಎನ್ನುವ ಬಗ್ಗೆಯೂ ತನಿಖೆ ನಡೆಸಲಾಗುತ್ತಿದೆ. ಕಳೆದ ಎರಡು ವರ್ಷಗಳಿಂದ ಗ್ಯಾಸ್ ಪೈಪ್ ಲೈನ್ ಮಾಡಲಾಗುತ್ತಿದ್ದು, ಇದರ ಬಗ್ಗೆ ಖಚಿತ ಮಾಹಿತಿಗಳು ಲಭ್ಯವಾಗಿಲ್ಲ.
In a mysterious development that has stumped authorities in the city, citizens in various parts of the city have complained of smell of gas pervading the air. In what could possibly be a gas leakage, people in various areas have reached out to media persons and police wanting to know the source.
12-11-25 11:10 pm
Bangalore Correspondent
ಧರ್ಮಸ್ಥಳ ಶವ ಹೂತ ಪ್ರಕರಣದಲ್ಲಿ ಎಸ್ಐಟಿ ತನಿಖೆಯ ತಡ...
12-11-25 11:06 pm
ಯಾರೂ ಗೂಟ ಹೊಡೆದು ಇರಕ್ಕಾಗಲ್ಲ, ಬಿಹಾರ ಚುನಾವಣೆ ಟೈಮ...
12-11-25 09:03 pm
ವಿಮಾನ ನಿಲ್ದಾಣದಲ್ಲಿ ನಮಾಜ್ ; ಅವರು ಎಲ್ಲಾದ್ರೂ ಶ್ರ...
10-11-25 07:17 pm
54 ಹೆಕ್ಟೇರ್ ಅರಣ್ಯ ನಾಶ ಭೀತಿ ; ಶರಾವತಿ ಪಂಪ್ಡ್ ಸ್...
10-11-25 02:58 pm
13-11-25 05:13 pm
HK Staffer
Delhi Blast: ದೆಹಲಿ ಸ್ಫೋಟಕ್ಕೆ ಟರ್ಕಿ ನಂಟಿನ ಶಂಕೆ...
13-11-25 04:52 pm
ಅಮಾಯಕರನ್ನು ಕೊಲ್ಲುವುದು ಇಸ್ಲಾಂನಲ್ಲಿ ಅತಿದೊಡ್ಡ ಪಾ...
12-11-25 02:54 pm
ದೆಹಲಿ ಘಟನೆ, ಆತ್ಮಹತ್ಯಾ ಬಾಂಬರ್ ಆಗಿರಲಿಲ್ಲ, ಆಕಸ್ಮ...
11-11-25 10:56 pm
Mangaluru Kasaragod Highway: ಮಂಗಳೂರು- ಕಾಸರಗೋಡ...
11-11-25 10:20 pm
13-11-25 05:01 pm
HK Staffer
Kumble Toll Plaza: ಕುಂಬಳೆ ಟೋಲ್ ಪ್ಲಾಜಾಕ್ಕೆ ಭಾರ...
13-11-25 01:44 pm
Mangalore NMPT, Dinesh Gundu Rao, Congress, B...
12-11-25 06:56 pm
Ullal Dargah Committee: ಉಳ್ಳಾಲ ದರ್ಗಾ ಕಮಿಟಿಯಲ್...
11-11-25 10:42 pm
Bomb blast in New Delhi, High Alert in Dakshi...
11-11-25 10:15 pm
12-11-25 12:32 pm
Mangalore Correspondent
ಬೆಳ್ತಂಗಡಿ ಶ್ರೀರಾಮ ಕ್ರೆಡಿಟ್ ಸೊಸೈಟಿಯಲ್ಲಿ ಭಾರೀ ಅ...
11-11-25 06:33 pm
Fraud Dream Deal Mangalore, KSRTC: ತಿಂಗಳಿಗೆ ಒ...
09-11-25 10:27 pm
ಬಹುಕೋಟಿ ವಂಚಕ ರೋಷನ್ ಸಲ್ದಾನಗೆ ಸೇರಿದ 2.85 ಕೋಟಿ ಮ...
09-11-25 03:50 pm
ಕೋಮುದ್ವೇಷದ ಕೊಲೆ ; ಪ್ರತೀಕಾರಕ್ಕೆ ಪ್ರಚೋದಿಸಿ ಇನ್...
08-11-25 11:15 pm