ಬ್ರೇಕಿಂಗ್ ನ್ಯೂಸ್
11-02-22 03:49 pm HK Desk news ಕರಾವಳಿ
ಉಡುಪಿ, ಫೆ.11 : ಕಳೆದ ನವೆಂಬರ್ ತಿಂಗಳಲ್ಲೇ ಹಿಜಾಬ್ ವಿವಾದವನ್ನು ತೀವ್ರ ರೀತಿಯಲ್ಲಿ ಹಬ್ಬಿಸಲು ಮಾಸ್ಟರ್ ಪ್ಲಾನ್ ನಡೆದಿತ್ತಾ ಎನ್ನುವ ಶಂಕೆ ಮೂಡುವ ರೀತಿ ವಿದ್ಯಾರ್ಥಿನಿಯರು ಮಾಡಿದ್ದ ಟ್ವೀಟ್ ಗಳನ್ನು ಪತ್ತೆ ಮಾಡಲಾಗಿದೆ. ಅಕ್ಟೋಬರ್, ನವೆಂಬರ್ ತಿಂಗಳಲ್ಲಿ ಏಕಕಾಲದಲ್ಲಿ ಟ್ವಿಟರ್ ಖಾತೆ ತೆರೆದು ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾದ ಬಗ್ಗೆ ನಾಲ್ವರು ವಿದ್ಯಾರ್ಥಿನಿಯರು ಕೂಡ ಪ್ರಮೋಟ್ ಮಾಡತೊಡಗಿದ್ದರು ಎನ್ನೋದು ಬಯಲಾಗಿದೆ.
ತಮ್ಮ ಟ್ವಿಟರ್ ಖಾತೆಯ ಮೂಲಕ ನವೆಂಬರ್ ತಿಂಗಳಲ್ಲಿ ಬಾಬ್ರಿ ಮಸೀದಿ ಕುರಿತ ಸುಪ್ರೀಂ ಕೋರ್ಟ್ ತೀರ್ಪಿನ ವಿರುದ್ಧ ಯುವತಿಯರು ಟ್ವೀಟ್ ಮಾಡಿದ್ದರು. ಕೋರ್ಟ್ ತೀರ್ಪನ್ನು ಪ್ರಶ್ನಿಸಿದ್ದಲ್ಲದೆ, ನಂಬಿಕೆಗಳನ್ನು ಆಧರಿಸಿ ತೀರ್ಪು ನೀಡಲಾಗಿದೆ. ಇದನ್ನು ನಾವು ಒಪ್ಪುವುದಿಲ್ಲ. ಅದೇ ಜಾಗದಲ್ಲಿ ಬಾಬ್ರಿ ಮಸೀದಿ ನಿರ್ಮಿಸುತ್ತೇವೆ ಎಂದು ಸವಾಲು ಹಾಕಿದ್ದರು. ಯುವತಿಯರ ಪ್ರತಿ ಟ್ವೀಟ್ ಗಳನ್ನು ಸಿಎಫ್ ಐ ರಾಷ್ಟ್ರಾಧ್ಯಕ್ಷ ಮಸ್ಜಿದ್ ಮರು ಟ್ವೀಟ್ ಮಾಡುತ್ತಿದ್ದರು. ವಿಜಯ್ ಪಟೇಲ್ ಎಂಬವರು ಸಿ ಎಫ್ ಐ ಸಂಘಟನೆ ಮತ್ತು ಹಿಜಾಬ್ ಸಂತ್ರಸ್ತ ವಿದ್ಯಾರ್ಥಿನಿಯರ ಟ್ವಿಟರ್ ಟ್ರೆಂಡ್ ರಹಸ್ಯವನ್ನು ಬಯಲು ಮಾಡಿದ್ದಾರೆ.




ಹಿಜಾಬ್ ವಿವಾದ ಆರಂಭವಾಗುವ ಮೊದಲೇ ಈ ನಾಲ್ವರು ಕೂಡ ಸಿಎಎಫ್ ಐ ಸಕ್ರಿಯ ಕಾರ್ಯಕರ್ತರಾಗಿದ್ದಲ್ಲದೆ, ಅದರ ಪರವಾಗಿ ಟ್ವೀಟ್ ಅಭಿಯಾನದಲ್ಲಿ ತೊಡಗಿದ್ದರು. ಕ್ಯಾಂಪಸ್ ಫ್ರಂಟ್ ಸೂಚನೆಯಂತೆ, ಕೇಂದ್ರ ಸರಕಾರ ಜಾರಿ ಮಾಡಿದ್ದ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ವಿರೋಧಿಸಿ ಟ್ವೀಟ್ ಮಾಡಿದ್ದರು.



ಅಲ್ಮಾಸ್, ಮುಸ್ಕಾನ್, ಆಲಿಯಾ ಅಸಾದಿ ಅವರ ಟ್ವಿಟರ್ ಹಿಸ್ಟರಿಯಿಂದ ಸಾಕಷ್ಟು ಸಂಗತಿಗಳು ಬಹಿರಂಗವಾಗಿದ್ದು ಮತೀಯವಾದಿ ವಿಚಾರಗಳನ್ನೇ ಟ್ವೀಟ್ ಮಾಡುತ್ತಾ ಬಂದಿದ್ದರು ಎನ್ನೋದು ಗೊತ್ತಾಗಿದೆ. ಈ ನಡುವೆ, ನವೆಂಬರ್ 21ರಂದು ದೇಶದಲ್ಲಿ ಮಸೀದಿ ಮೈಕುಗಳನ್ನು ನಿಷೇಧಿಸಬೇಕೆಂಬ ಸುಪ್ರೀಂ ಕೋರ್ಟ್ ಆದೇಶವನ್ನು ಪ್ರಶ್ನಿಸಿಯೂ ಇವರು ಟ್ವೀಟ್ ಮಾಡಿದ್ದರು.



ಡಿಸೆಂಬರ್ 12ರಂದು ದೆಹಲಿ ದಂಗೆಯ ಆರೋಪಿ ರೌಫ್ ಶರೀಫ್ ಬಿಡುಗಡೆಗೆ ಆಗ್ರಹಿಸಿ ಇತರ ಮುಸ್ಲಿಂ ಸಂಘಟನೆಗಳ ನಾಯಕರ ಟ್ವೀಟ್ ರೀತಿಯಲ್ಲೇ ಈ ಯುವತಿಯರು ಕೂಡ ಟ್ವೀಟ್ ಮಾಡಿದ್ದರು. ಆವರೆಗೂ ಸುಮ್ಮನಿದ್ದ ವಿದ್ಯಾರ್ಥಿನಿಯರು ಡಿಸೆಂಬರ್ 24ರ ಬಳಿಕ ಉಡುಪಿಯಲ್ಲಿ ಹಿಜಾಬ್ ಹೋರಾಟ ಆರಂಭಿಸಿದ್ದರು ಎನ್ನುವ ಬಗ್ಗೆ ವಿಜಯ್ ಪಟೇಲ್ ಬಹಿರಂಗ ಮಾಡಿದ್ದಾರೆ.




ಯುವತಿಯರು ಮಾಡಿದ್ದ ಟ್ವೀಟ್ ಟ್ರಾಕ್ ರೆಕಾರ್ಡಿನಲ್ಲಿ ಕುತೂಹಲಕಾರಿ ಅಂಶಗಳಿದ್ದು ಅವುಗಳ ಸ್ಕ್ರೀನ್ ಶಾಟ್ ತೆಗದು ಜಾಲತಾಣದಲ್ಲಿ ಬಹಿರಂಗ ಮಾಡಿದ್ದಾರೆ. ವಿದ್ಯಾರ್ಥಿನಿಯರ ನವೆಂಬರ್ ತಿಂಗಳಿಂದ ಬದಲಾದ ನಡೆ ನೋಡಿದರೆ, ಹಿಜಾಬ್ ವಿವಾದ ಪ್ರೀ ಪ್ಲಾನ್ಡ್ ಆಗಿತ್ತಾ ಅನ್ನುವ ಸಂಶಯ ಮೂಡಿಸಿದೆ.
Hijab row Udupi Muslim students tweets against Supreme court goes viral, brain washed. Last Year November 2021 a plan was planned to raise Hijab row worldwide by joining along with Campus front of India.
12-11-25 11:10 pm
Bangalore Correspondent
ಧರ್ಮಸ್ಥಳ ಶವ ಹೂತ ಪ್ರಕರಣದಲ್ಲಿ ಎಸ್ಐಟಿ ತನಿಖೆಯ ತಡ...
12-11-25 11:06 pm
ಯಾರೂ ಗೂಟ ಹೊಡೆದು ಇರಕ್ಕಾಗಲ್ಲ, ಬಿಹಾರ ಚುನಾವಣೆ ಟೈಮ...
12-11-25 09:03 pm
ವಿಮಾನ ನಿಲ್ದಾಣದಲ್ಲಿ ನಮಾಜ್ ; ಅವರು ಎಲ್ಲಾದ್ರೂ ಶ್ರ...
10-11-25 07:17 pm
54 ಹೆಕ್ಟೇರ್ ಅರಣ್ಯ ನಾಶ ಭೀತಿ ; ಶರಾವತಿ ಪಂಪ್ಡ್ ಸ್...
10-11-25 02:58 pm
12-11-25 02:54 pm
HK News Desk
ದೆಹಲಿ ಘಟನೆ, ಆತ್ಮಹತ್ಯಾ ಬಾಂಬರ್ ಆಗಿರಲಿಲ್ಲ, ಆಕಸ್ಮ...
11-11-25 10:56 pm
Mangaluru Kasaragod Highway: ಮಂಗಳೂರು- ಕಾಸರಗೋಡ...
11-11-25 10:20 pm
ಕೆಂಪುಕೋಟೆ ಕಾರು ಬ್ಲಾಸ್ಟ್ ಪ್ರಕರಣ ; ಜೈಶ್ ಉಗ್ರರ ಲ...
11-11-25 03:28 pm
ಐ-20 ಕಾರು ಕೆಂಪುಕೋಟೆ ಸಿಗ್ನಲ್ ನಲ್ಲಿದ್ದಾಗ ಬ್ಲಾಸ್...
10-11-25 11:07 pm
13-11-25 01:44 pm
HK Staffer
Mangalore NMPT, Dinesh Gundu Rao, Congress, B...
12-11-25 06:56 pm
Ullal Dargah Committee: ಉಳ್ಳಾಲ ದರ್ಗಾ ಕಮಿಟಿಯಲ್...
11-11-25 10:42 pm
Bomb blast in New Delhi, High Alert in Dakshi...
11-11-25 10:15 pm
Bhagvati Prem Ship, Mangalore: ಸುರತ್ಕಲ್ ; ಮರಳ...
08-11-25 08:31 pm
12-11-25 12:32 pm
Mangalore Correspondent
ಬೆಳ್ತಂಗಡಿ ಶ್ರೀರಾಮ ಕ್ರೆಡಿಟ್ ಸೊಸೈಟಿಯಲ್ಲಿ ಭಾರೀ ಅ...
11-11-25 06:33 pm
Fraud Dream Deal Mangalore, KSRTC: ತಿಂಗಳಿಗೆ ಒ...
09-11-25 10:27 pm
ಬಹುಕೋಟಿ ವಂಚಕ ರೋಷನ್ ಸಲ್ದಾನಗೆ ಸೇರಿದ 2.85 ಕೋಟಿ ಮ...
09-11-25 03:50 pm
ಕೋಮುದ್ವೇಷದ ಕೊಲೆ ; ಪ್ರತೀಕಾರಕ್ಕೆ ಪ್ರಚೋದಿಸಿ ಇನ್...
08-11-25 11:15 pm