ಬ್ರೇಕಿಂಗ್ ನ್ಯೂಸ್
02-02-22 06:09 pm HK Desk news ಕರಾವಳಿ
Photo credits : Headline Karnataka
ಉಡುಪಿ, ಫೆ.2 : ಉಡುಪಿ ಸರಕಾರಿ ಶಾಲೆಯ ಹಿಜಾಬ್ ಕಿರಿಕ್ ಈಗ ಕುಂದಾಪುರಕ್ಕೂ ಹರಡಿದೆ. ಕುಂದಾಪುರದ ಸರಕಾರಿ ಪದವಿಪೂರ್ವ ಕಾಲೇಜಿನಲ್ಲಿ ವಿದ್ಯಾರ್ಥಿನಿಯರು ಹಿಜಾಬ್ ಧರಿಸಿ ತರಗತಿಗೆ ಬಂದಿದ್ದರೆ, ಹಿಂದು ಯುವಕರು ಕೇಸರಿ ಶಾಲು ಧರಿಸಿ ಬಂದು ಕಾಲೇಜಿನಲ್ಲಿ ಹೊಸ ವಿವಾದ ಎಬ್ಬಿಸಿದ್ದಾರೆ.
ಕಾಲೇಜಿನಲ್ಲಿ ಹಿಜಬ್ ಮತ್ತು ಕೇಸರಿ ಶಾಲಿನ ಮಧ್ಯೆ ಜಗಳ ಎದ್ದಿದ್ದು ಸಾಮರಸ್ಯ ಕೆಡಿಸಿದೆ. ಹಿಜಬ್ ಧರಿಸಿ 27 ವಿದ್ಯಾರ್ಥಿನಿಯರು ಇಂದು ಕಾಲೇಜಿಗೆ ಬಂದಿದ್ದರೆ, ಇದಕ್ಕೆ ಕೌಂಟರ್ ಆಗಿ 40 ಕ್ಕೂ ಅಧಿಕ ಹಿಂದು ಹುಡುಗರು ಕೇಸರಿ ಶಾಲು ಧರಿಸಿ ತರಗತಿಗೆ ಬಂದಿದ್ದಾರೆ.



ಕಾಲೇಜಿನಲ್ಲಿ ವಿವಾದ ಉಂಟಾಗುತ್ತಿದ್ದಂತೆ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ ನೇತೃತ್ವದಲ್ಲಿ ಕಾಲೇಜಿನಲ್ಲಿ ಸಭೆ ನಡೆಸಲಾಗಿದೆ. ಸಭೆಯಲ್ಲಿ ಪಾಲ್ಗೊಂಡ ಮುಸ್ಲಿಂ ಪೋಷಕರನ್ನು ಶಾಸಕರು ಮನವೊಲಿಸಲು ಪ್ರಯತ್ನಿಸಿದ್ದಾರೆ. ಆದರೆ ತಮ್ಮ ಧರ್ಮ ಪಾಲನೆಗೆ ಯಾಕೆ ಅವಕಾಶ ಇಲ್ಲ ಎಂದು ಪೋಷಕರು ಪ್ರಶ್ನೆ ಮಾಡಿದ್ದು ಇತರ ಧರ್ಮಗಳ ಹಬ್ಬಗಳಿಗೆ ನಾವು ಅಡ್ಡಿ ಪಡಿಸಲ್ಲ. ಇಸ್ಲಾಮ್ ನಿಯಮದಂತೆ ಹಿಜಾಬ್ ಧರಿಸಿ ಬರಲು ಅವಕಾಶ ನೀಡಬೇಕು ಎಂದು ಕೇಳಿಕೊಂಡಿದ್ದಾರೆ. ಶಾಸಕರು ಈ ಮಾತಿಗೆ ಒಪ್ಪಿಗೆ ನೀಡಿಲ್ಲ.



ಹಿಜಾಬ್ ವಿಚಾರದಲ್ಲಿ ಒಮ್ಮತಕ್ಕೆ ಬರಲು ಸಭೆ ವಿಫಲವಾಗಿದ್ದು ಕೊನೆಗೆ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ ಶಿಕ್ಷಣ ಸಚಿವ ನಾಗೇಶ್ ಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ. ಕಾಲೇಜು ಕಾಂಪೌಂಡ್ ಒಳಗಡೆ ಸಮವಸ್ತ್ರ ಮಾತ್ರ ಧರಿಸಿ ಬರಲು ಅವಕಾಶ ನೀಡುವಂತೆ ಸಚಿವರು ಸೂಚನೆ ನೀಡಿದ್ದಾರೆ. ಸಚಿವರ ಸೂಚನೆಯನ್ನು ಶಾಸಕರು ಸಭೆಯಲ್ಲಿ ಹೇಳಿದ್ದಾರೆ. ಆದರೆ ಮುಸ್ಲಿಂ ಪೋಷಕರು ತಮ್ಮ ಪಟ್ಟನ್ನು ಸಡಿಲಿಸಲಿಲ್ಲ.


ಇದೇ ವೇಳೆ, ಮುಸ್ಲಿಂ ವಿದ್ಯಾರ್ಥಿನಿಯರು ಹಿಜಾಬ್ ಧರಿಸಿ ಬಂದರೆ ಹಿಂದುಗಳು ಕೇಸರಿ ಶಾಲು ಧರಿಸಿ ಬರುವುದಾಗಿ ಹಿಂದು ಜಾಗರಣ ವೇದಿಕೆ ಪ್ರಮುಖರು ಎಚ್ಚರಿಸಿದ್ದಾರೆ. ಸರಕಾರದ ನಿಯಮ ಪಾಲಿಸಲು ನಾವು ಬದ್ಧ. ಆದರೆ ಹಿಜಾಬ್ ಧರಿಸಿ ಬಂದರೆ ನಮ್ಮ ಕಾರ್ಯಕರ್ತ ವಿದ್ಯಾರ್ಥಿಗಳು ಕೇಸರಿ ಶಾಲು ಹಾಕುತ್ತಾರೆ. ಇದರಿಂದ ಸಾಮರಸ್ಯಕ್ಕೆ ಧಕ್ಕೆಯಾದರೆ ನಾವು ಹೊಣೆಯಲ್ಲ ಎಂದು ಹಿಂದು ಜಾಗರಣ ವೇದಿಕೆ ಪ್ರಮುಖ ಪ್ರಕಾಶ್ ಕುಕ್ಕೆಹಳ್ಳಿ ಹೇಳಿದ್ದಾರೆ.
Hijab row now SPARKS in Kundapur Government college after 27 students enter campus with Hijab as counter boys also wear kesari shawl and later MLA Srinivas Halady and had enter the college and hold peace meeting. Another hijab row broke out at Bhadravati in Karnataka’s Shivamogga district on Wednesday, February 2. Students of Sir MV Government college protested against certain students wearing hijabs in the classroom.
07-02-26 05:09 pm
HK News Desk
ಸಿದ್ದರಾಮಯ್ಯರೇ ಐದು ವರ್ಷ ಸಿಎಂ ; ಪುತ್ರ ಯತೀಂದ್ರ ಪ...
07-02-26 02:58 pm
Sanjana Bus Fire Accident, Nelamangala: ಮತ್ತೊ...
06-02-26 12:30 pm
ಭವಿಷ್ಯ ಹೇಳುವ ನೆಪದಲ್ಲಿ ಬೇಟೆ? ರೀಲ್ಸ್ ರಾಣಿಯ ಹಿಂದ...
05-02-26 05:52 pm
ಗದಗದಲ್ಲಿ ಭೀಕರ ರಸ್ತೆ ಅಪಘಾತ ; ಕ್ರೂಸರ್ - ಕ್ಯಾಂಟರ...
05-02-26 03:11 pm
07-02-26 10:53 pm
HK News Desk
ಕಣ್ಣೆದುರೇ ನಡೆದ ಅಚ್ಚರಿ ; 1 ಲಕ್ಷ ರೂ. ಮೌಲ್ಯದ ಚಿನ...
06-02-26 10:58 pm
ಕೊರಿಯನ್ ವೆಬ್ ಸಿರೀಸ್ ವ್ಯಸನ, ತಂದೆಯ ಎರಡು ಕೋಟಿ ಸಾ...
06-02-26 08:47 pm
SBI ಬ್ಯಾಂಕ್ ಕಿತಾಪತಿ ; 2 ಕೋಟಿ ಮೌಲ್ಯದ ಚಿನ್ನ–ಬೆಳ...
06-02-26 08:17 pm
ನೇಪಾಳದ ಗಡಿಯಲ್ಲಿ ಮದುವೆ ದಿಬ್ಬಣ ಕರೆದೊಯ್ಯುತ್ತಿದ್ದ...
06-02-26 07:04 pm
07-02-26 12:55 pm
HK staffer
DK Shivakumar, Puttur: ಪಕ್ಷ ಏನು ಹೇಳುತ್ತೋ ಅದೇ...
07-02-26 11:53 am
ಬಿಜೆಪಿಯವರು ತಿಪ್ಪರಲಾಗ ಹೊಡೆದ್ರೂ ಅಧಿಕಾರಕ್ಕೆ ಬರಲ್...
06-02-26 10:56 pm
ಡಿಕೆಶಿ ಸಿಎಂ ಆಗಿಯೇ ಪುತ್ತೂರು ಕಾಂಗ್ರೆಸ್ ಕಚೇರಿ ಉದ...
06-02-26 10:42 pm
Veerendra Heggade, Dharmasthala: ಶಿವರಾತ್ರಿಗೆ...
06-02-26 09:01 pm
07-02-26 10:48 pm
HK News Desk
ಡಿಜಿಟಲ್ ಅರೆಸ್ಟ್ ; ಮಹಿಳೆಗೆ 15 ನಿಮಿಷದಲ್ಲಿ 50 ಲಕ...
07-02-26 10:07 pm
ಪುತ್ತೂರಿನಲ್ಲಿ ಒಂದು ಕ್ವಿಂಟಾಲ್ ಗಾಂಜಾ ವಶಕ್ಕೆ ; ಪ...
07-02-26 08:14 pm
Shivamogga Conversion: ಶಿಕ್ಷಕಿಯಾದ ಬಳಿಕ ಪತ್ನಿ...
07-02-26 06:44 pm
Bangalore Cat Kidnap: ಬೆಂಗಳೂರಿನಲ್ಲಿ ಠಾಣೆ ಮೆಟ್...
07-02-26 05:21 pm