ಬ್ರೇಕಿಂಗ್ ನ್ಯೂಸ್
26-01-22 10:19 pm HK Desk news ಕರಾವಳಿ
ಉಡುಪಿ, ಜ.26 : ಕಳೆದ ಒಂದು ತಿಂಗಳಿನಿಂದ ತೀವ್ರ ವಿವಾದಕ್ಕೆ ಕಾರಣವಾಗಿರುವ ಸರಕಾರಿ ಹೆಣ್ಮಕ್ಕಳ ಕಾಲೇಜಿನ ಹಿಜಾಬ್ ಪ್ರಕರಣ ಸಂಬಂಧಿಸಿ ಸಮಸ್ಯೆ ಇತ್ಯರ್ಥಕ್ಕಾಗಿ ರಾಜ್ಯ ಸರಕಾರ ತಜ್ಞರ ಸಮಿತಿಯನ್ನು ನೇಮಕ ಮಾಡಿದೆ. ಆದರೆ ತಜ್ಞರು ವರದಿ ನೀಡುವ ತನಕ ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ಮತ್ತು ಈಗಿರುವ ಸಮವಸ್ತ್ರವನ್ನೇ ಧರಿಸಿ ಬರುವಂತೆ ಸೂಚನೆ ನೀಡಲಾಗಿದೆ.
ಉಡುಪಿ ನಗರದ ಸರಕಾರಿ ಹೆಣ್ಮಕ್ಕಳ ಪ್ರಥಮ ದರ್ಜೆ ಕಾಲೇಜಿನಲ್ಲಿ ಕಳೆದ ಡಿ.27ರ ಬಳಿಕ ಈ ವಿವಾದ ಕಾಣಿಸಿಕೊಂಡಿದ್ದು, ಎಂಟು ಮಂದಿ ಮುಸ್ಲಿಂ ವಿದ್ಯಾರ್ಥಿನಿಯರು ತಮಗೆ ಹಿಜಾಬ್ ಧರಿಸಲು ಅವಕಾಶ ನೀಡಬೇಕೆಂದು ಹೇಳಿ ಪಟ್ಟು ಹಿಡಿದಿದ್ದರು. ತರಗತಿಗೆ ಅವಕಾಶ ನೀಡದೇ ಇದ್ದುದರಿಂದ ವಿದ್ಯಾರ್ಥಿನಿಯರು ಹೊರಗೆ ನಿಂತು ಪ್ರತಿಭಟನೆ ನಡೆಸಿದ್ದು ಭಾರೀ ಸುದ್ದಿಗೆ ಗ್ರಾಸವಾಗಿತ್ತು. ಈ ಬಗ್ಗೆ ಶಿಕ್ಷಣ ಇಲಾಖೆಯ ಮುಖ್ಯ ಕಾರ್ಯದರ್ಶಿ ಆದೇಶ ಹೊರಡಿಸಿದ್ದು, ಸುಪ್ರೀಂ ಕೋರ್ಟ್ ಮತ್ತು ಹೈಕೋರ್ಟ್ ವಿವಿಧ ಸಂದರ್ಭಗಳಲ್ಲಿ ಶಿಕ್ಷಣ ಸಂಸ್ಥೆಗಳ ಸಮವಸ್ತ್ರ ಮತ್ತು ಧಾರ್ಮಿಕ ಹಕ್ಕಿನ ವಿಚಾರದಲ್ಲಿ ನೀಡಿರುವ ತೀರ್ಪನ್ನು ಆಧರಿಸಿ ತಜ್ಞರು ವರದಿ ನೀಡಲಿದ್ದಾರೆ ಎಂದಿದ್ದಾರೆ.
ತೀವ್ರ ವಿವಾದಕ್ಕೆ ಕಾರಣವಾಗಿದ್ದ ಕಾಲೇಜಿನಲ್ಲಿ ಆರು ಮಂದಿ ವಿದ್ಯಾರ್ಥಿನಿಯರಿಗೆ ಕೊರೊನಾ ಪಾಸಿಟಿವ್ ಆಗಿದ್ದರಿಂದ ಒಂದು ವಾರ ಕಾಲ ಕಾಲೇಜನ್ನು ಬಂದ್ ಮಾಡಲಾಗಿತ್ತು. ವಾರ ಕಾಲದ ರಜೆಯ ಬಳಿಕ ಜನವರಿ 27ರಂದು ಮತ್ತೆ ಕಾಲೇಜು ಆರಂಭಗೊಳ್ಳಲಿದ್ದು, ವಿದ್ಯಾರ್ಥಿಗಳು ಕಾಲೇಜಿನ ಸಮವಸ್ತ್ರ ಧರಿಸಿ ತರಗತಿಗೆ ಹಾಜರಾಗುವಂತೆ ಆದೇಶದಲ್ಲಿ ತಿಳಿಸಲಾಗಿದೆ. ಆದರೆ, ಹಿಜಾಬ್ ಧಾರಣೆಗಾಗಿ ಪ್ರತಿಭಟನೆ ನಡೆಸಿದವರು ಈ ಬಗ್ಗೆ ಯಾವ ನಿರ್ಧಾರಕ್ಕೆ ಬರುತ್ತಾರೆ ಅನ್ನುವುದು ಗೊತ್ತಿಲ್ಲ. ವಾರ ಕಾಲದ ರಜೆಯ ಕಾರಣ ಹಿಜಾಬ್ ವಿವಾದದ ಬಿಸಿ ಸ್ವಲ್ಪ ತಣ್ಣಗಾಗಿತ್ತು.
ಆನ್ಲೈನ್ ತರಗತಿಗೆ ಅವಕಾಶ
ಇದೇ ವೇಳೆ, ಕಾಲೇಜಿನ ಅಭಿವೃದ್ಧಿ ಸಮಿತಿಯ ಅಧ್ಯಕ್ಷರೂ ಆಗಿರುವ ಶಾಸಕ ರಘುಪತಿ ಭಟ್, ತರಗತಿಯಿಂದ ಹೊರಗುಳಿಯುವ ವಿದ್ಯಾರ್ಥಿಗಳಿಗೆ ಆನ್ಲೈನ್ ಪಾಠ ಕೇಳಲು ಅವಕಾಶ ನೀಡುತ್ತೇವೆ. ಆನ್ಲೈನ್ ತರಗತಿಗೆ ಹಾಜರಾಗಿ ಅವರು ಪರೀಕ್ಷೆ ಬರೆಯಬಹುದು. ಅಲ್ಲದೆ, ಈವರೆಗೆ ಕಡಿತವಾಗಿರುವ ಹಾಜರಿಯನ್ನು ನೀಡಲಾಗುವುದು ಎಂದಿದ್ದಾರೆ. ಕಾಲೇಜಿನಲ್ಲಿ ಹಲವು ವರ್ಷಗಳಿಂದ ಸಮವಸ್ತ್ರ ಧಾರಣೆಯ ಪಾಲನೆ ಇದೆ. ಇದರಲ್ಲಿ ಹಿಜಾಬ್ ಧಾರಣೆಗೆ ಅವಕಾಶ ಕೊಟ್ಟಿಲ್ಲ ಎಂದು ಶಾಸಕ ರಘುಪತಿ ಭಟ್ ಹಿಜಾಬ್ ನಿಷೇಧವನ್ನು ಸಮರ್ಥಿಸಿಕೊಂಡಿದ್ದಾರೆ.
ಇದೇ ವೇಳೆ, ಕಾಲೇಜಿನ ಪ್ರಾಂಶುಪಾಲರಿಗೆ ಶಿಕ್ಷಣ ಇಲಾಖೆಯ ಮುಖ್ಯ ಕಾರ್ಯದರ್ಶಿಯಿಂದ ಆದೇಶ ಪತ್ರ ಬಂದಿದ್ದು, ಸಮಸ್ಯೆ ಇತ್ಯರ್ಥಕ್ಕಾಗಿ ತಜ್ಞರ ಸಮಿತಿಯನ್ನು ನೇಮಿಸಲಾಗಿದೆ. ಅವರು ವರದಿ ನೀಡುವ ವರೆಗೂ ಯಥಾಸ್ಥಿತಿ ಪಾಲಿಸುವಂತೆ ಸೂಚನೆ ನೀಡಿದ್ದಾರೆ. ಹಿಜಾಬ್ ವಿಚಾರದಲ್ಲಿ ವಿವಾದ ಎದ್ದಿರುವುದು ಇದು ಮೊದಲೇನಲ್ಲ. ಹಲವು ಸಂದರ್ಭಗಳಲ್ಲಿ ಹಲವು ಕಡೆಗಳಲ್ಲಿ ಈ ರೀತಿಯ ಬೆಳವಣಿಗೆ ಆಗಿದೆ. ಸರಕಾರಿ ಕಾಲೇಜಿನಲ್ಲಿ ಸಮವಸ್ತ್ರ ಕಡ್ಡಾಯ ಇಲ್ಲ. ಈ ಬಗ್ಗೆ ತಜ್ಞರು ನೀಡುವ ವರದಿ ಆಧರಿಸಿ ರಾಜ್ಯದಲ್ಲಿ ಏಕರೂಪದ ಆದೇಶ ನೀಡಲಾಗುವುದು ಎಂದು ತಿಳಿಸಿದ್ದಾರೆ.
ಮುಸ್ಲಿಂ ವಿದ್ಯಾರ್ಥಿನಿಯರು ಹಿಜಾಬ್ ಧಾರಣೆ ಮಾಡುವುದು ನಮ್ಮ ಮೂಲಭೂತ ಹಕ್ಕು. ಅದನ್ನು ಪಾಲಿಸಲು ಅವಕಾಶ ನೀಡಬೇಕು ಎಂದಿದ್ದರೆ, ಇದೇ ವೇಳೆ ಬಲಪಂಥೀಯ ಸಂಘಟನೆಗಳು ಇದಕ್ಕೆ ಅವಕಾಶ ನೀಡಬಾರದು ಎಂದು ಒತ್ತಾಯ ಮಾಡಿದೆ. ಈಗ ಹಿಜಾಬ್ ಕೇಳುತ್ತಾರೆ, ಮುಂದೆ ನಮಾಜ್ ಮಾಡಬೇಕು ಎಂದು ಕೇಳಿದರೆ ಏನು ಮಾಡುತ್ತೀರಿ ಎಂದು ಸರಕಾರವನ್ನು ಪ್ರಶ್ನೆ ಮಾಡಿದೆ. ಹೀಗಾಗಿ ರಾಜ್ಯ ಬಿಜೆಪಿ ಸರಕಾರ ಹಿಜಾಬ್ ವಿವಾದದ ಬಗ್ಗೆ ಯಾವ ರೀತಿಯ ತೀರ್ಪು ನೀಡುತ್ತೆ ಅನ್ನುವುದು ಕುತೂಹಲದ ಸಂಗತಿ.
The Karnataka government on Tuesday, January 25, set up an expert committee to resolve the hijab row in Udupi, and said that all students of the Women's Government Pre-University College in Udupi must adhere to the uniform rule till the committee decides on the issue. The college is at the centre of controversy after eight students staged a protest after they were barred from wearing hijab in the classroom by the college, who said it is not part of the uniform. The Karnataka government has now said that the status quo will continue — all students must wear the college uniform — till the issue is discussed by the expert committee.
29-04-25 10:45 pm
Bangalore Correspondent
CM Siddaramaiah, Belagavi, BJP Suresh Kumar:...
29-04-25 09:51 pm
Protest Kalaburagi, islamabad Locality: ಕಲಬುರ...
29-04-25 09:20 pm
Kudupu Murder, Mob attack, Parameshwar: ಕುಡುಪ...
29-04-25 04:28 pm
Praveen Nettaru, Mohsin Shukur, Karwar Police...
29-04-25 01:04 pm
29-04-25 03:45 pm
HK News Desk
'ನನಗೆ ಪಾಕಿಸ್ತಾನದಲ್ಲಿ ಯಾರೂ ಇಲ್ಲ, ದಯವಿಟ್ಟು ಉಳಿಸ...
28-04-25 06:52 pm
ಪಾಕಿಸ್ತಾನದ ಶಾಂತಿ ಸಮಿತಿ ಕಚೇರಿ ಎದುರೇ ಬಾಂಬ್ ಸ್ಫೋ...
28-04-25 05:53 pm
ಪಾಕ್ ವಿರುದ್ಧ ಯುದ್ದಕ್ಕೆ ಕರೆ ನೀಡಿದ ಕಾಶ್ಮೀರ್ ಸಿಎ...
27-04-25 08:42 pm
Pak, Website Hacked, Indian Army : ಅಲ್ಲಾ ನಮ್ಮ...
27-04-25 07:38 pm
29-04-25 11:00 pm
Mangalore Correspondent
Mangalore, Ullal Nethravathi Bridge: ಉಳ್ಳಾಲ ನ...
29-04-25 05:45 pm
Mangalore, Dr Kalladka Bhat: ಹೆಣ್ಣು ಮಕ್ಕಳು ವ್...
29-04-25 12:40 pm
Vadiraj, Mangalore, B R Ambedkar: ಕಾಂಗ್ರೆಸ್ ಸ...
29-04-25 11:53 am
Highland Hospital Mangalore, FIR, Anti Nation...
29-04-25 11:38 am
29-04-25 09:59 pm
Mangalore Correspondent
Kudupu Murder, Mangalore Crime, Police: ಕುಡುಪ...
29-04-25 02:53 pm
Belthagady, Blackmail, Mangalore crime: ಬೆಳ್ತ...
28-04-25 11:39 am
Shootout Bakrebail, Mangalore Crime: ಬಾಕ್ರಬೈಲ...
28-04-25 11:24 am
Mangalore crime, Murder, Kudupu: ಕುಡುಪು ಬಳಿಯಲ...
27-04-25 10:59 pm