ಬ್ರೇಕಿಂಗ್ ನ್ಯೂಸ್
25-01-22 03:46 pm HK Desk news ಕರಾವಳಿ
Photo credits : Headline Karnataka
ಉಡುಪಿ, ಜ.25 : ಸರಕಾರಿ ಕಾಲೇಜಿನಲ್ಲಿ ವಿವೇಕಾನಂದರ ಜಯಂತಿ ಆಚರಣೆ ವಿಚಾರದಲ್ಲಿ ವಿದ್ಯಾರ್ಥಿಗಳು ಮತ್ತು ಉಪನ್ಯಾಸಕರ ನಡುವೆ ಜಟಾಪಟಿ ಏರ್ಪಟ್ಟು ಪೊಲೀಸ್ ಠಾಣೆ ಮೆಟ್ಟಿಲೇರಿದ ಘಟನೆ ಉಡುಪಿಯಲ್ಲಿ ನಡೆದಿದೆ. ಬಾರ್ಕೂರಿನ ರುಕ್ಮಿಣಿ ಶೆಡ್ತಿ ಮೆಮೋರಿಯಲ್ ಪ್ರಥಮ ದರ್ಜೆ ಕಾಲೇಜಿನಲ್ಲಿ ಘಟನೆ ನಡೆದಿದ್ದು, ಕಾಲೇಜಿನ ವಿದ್ಯಾರ್ಥಿಗಳು ಉಪನ್ಯಾಸಕರ ವಿರುದ್ಧ ಕಾಲೇಜು ಪ್ರಾಂಶುಪಾಲರಿಗೆ ದೂರು ನೀಡಿದ್ದರೆ, ಒಬ್ಬ ಮಹಿಳಾ ಉಪನ್ಯಾಸಕಿ ಕಾಲೇಜಿನ ಪ್ರಾಂಶುಪಾಲ ಮತ್ತು ಇನ್ನೊಬ್ಬ ಉಪನ್ಯಾಸಕನ ವಿರುದ್ಧ ಪೊಲೀಸ್ ದೂರು ನೀಡಿದ್ದಾರೆ.
ಇತ್ತೀಚೆಗೆ ಜನವರಿ 12ರಂದು ಕಾಲೇಜಿನ ವಿದ್ಯಾರ್ಥಿಗಳು ಪ್ರಾಂಶುಪಾಲರ ಅನುಮತಿ ಪಡೆದು ಯೂತ್ ಡೇ ಹೆಸರಲ್ಲಿ ವಿವೇಕಾನಂದ ಜಯಂತಿ ಆಚರಣೆ ಹಮ್ಮಿಕೊಂಡಿದ್ದರು. ರಾಷ್ಟ್ರೀಯ ದಿನಾಚರಣೆಯನ್ನು ಎಲ್ಲ ಕಾಲೇಜುಗಳಲ್ಲಿ ನಡೆಸಬೇಕೆಂದಿದ್ದರೂ, ಕಾಲೇಜು ಪ್ರಾಂಶುಪಾಲ ರಮೇಶ್ ಆಚಾರ್ ಅದರ ಬಗ್ಗೆ ಅಸಡ್ಡೆ ವಹಿಸಿದ್ದರಿಂದ ಒಂದಷ್ಟು ವಿದ್ಯಾರ್ಥಿಗಳು ಸೇರಿಕೊಂಡು ಕಾರ್ಯಕ್ರಮ ಆಯೋಜಿಸಿದ್ದರು. ಕಾರ್ಯಕ್ರಮದಲ್ಲಿ ಇತಿಹಾಸ ವಿಭಾಗದ ಸಹಾಯಕ ಪ್ರಾಧ್ಯಾಪಕ ಅರುಣ್ ಕುಮಾರ್ ಭಾಷಣ ಮಾಡುವಂತೆ ವಿದ್ಯಾರ್ಥಿಗಳು ಕೇಳಿಕೊಂಡಿದ್ದರು.

ಅದರಂತೆ, 12ರಂದು ಬೆಳಗ್ಗೆ ಕಾರ್ಯಕ್ರಮ ನಡೆದಿದ್ದು, ಬಿಎ ಮತ್ತು ಬಿಕಾಂ ವಿಭಾಗದ 80ರಷ್ಟು ವಿದ್ಯಾರ್ಥಿಗಳು ಭಾಗವಹಿಸಿದ್ದರು. ಕಾಲೇಜು ಪ್ರಾಂಶುಪಾಲ ರಮೇಶ್ ಆಚಾರ್ ಅಧ್ಯಕ್ಷತೆಯಲ್ಲಿ ಕಾರ್ಯಕ್ರಮ ನಡೆದಿತ್ತು. ಅರುಣ್ ಕುಮಾರ್ ವಿವೇಕಾನಂದರ ಬಗ್ಗೆ ಭಾಷಣ ಮಾಡಿದ್ದರು. ಆದರೆ, ಕಾರ್ಯಕ್ರಮ ಮುಗಿಸಿ ತರಗತಿಗೆ ತೆರಳಿದ ಬಿಕಾಂ ವಿದ್ಯಾರ್ಥಿಗಳ ಮೇಲೆ ವಾಣಿಜ್ಯ ಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಅನ್ನಪೂರ್ಣ ಎಂಬವರು ಹಗೆ ಸಾಧಿಸಿದ್ದಾರೆ ಎನ್ನಲಾಗಿದೆ. ವಿದ್ಯಾರ್ಥಿಗಳನ್ನು ತರಗತಿಯಿಂದ ಹೊರಕ್ಕೆ ಕಳಿಸಿದ್ದು, ಮತ್ತೆ ತರಗತಿಗೆ ಬರಬೇಕಿದ್ದಲ್ಲಿ ಲೀವ್ ಲೆಟರ್ ತರುವಂತೆ ಕಳಿಸಿದ್ದರು. ಇದರಿಂದ ಬೇಸರಗೊಂಡ ತೃತೀಯ ಬಿಕಾಂ ವಿಭಾಗದ 31 ವಿದ್ಯಾರ್ಥಿಗಳು ಪ್ರಾಂಶುಪಾಲರಿಗೆ ದೂರು ನೀಡಿದ್ದರು.

ಇದೇ ವಿಚಾರದಲ್ಲಿ ಇತಿಹಾಸ ವಿಭಾಗದ ಅರುಣ್ ಕುಮಾರ್ ವಿರುದ್ಧವೂ ಅನ್ನಪೂರ್ಣ ಸೇರಿದಂತೆ ವಾಣಿಜ್ಯ ವಿಭಾಗದ ಇತರ ಸಿಬಂದಿ ಆಕ್ರೋಶ ತೋರಿದ್ದಾರೆ. ಅರುಣ್ ಕುಮಾರ್ ತರಗತಿಗೆ ತೆರಳುವಾಗ ಅಡ್ಡಗಟ್ಟಿ ನಿನ್ನನ್ನು ಹಾಗೇ ಬಿಡುವುದಿಲ್ಲ. ಏನು ಮಾಡುತ್ತೇನೆ ನೋಡುತ್ತಿರು ಎಂದು ಹೇಳಿ ಅನ್ನಪೂರ್ಣ ಮತ್ತು ಕಾರ್ತಿಕ್ ಪೈ ಎಂಬವರು ವಿಡಿಯೋ ಮಾಡಿದ್ದಾಗಿ ಅರುಣ್ ಹೇಳಿದ್ದಾರೆ. ಕಾಲೇಜಿನಲ್ಲಿ 45 ಮಂದಿ ಸಿಬಂದಿ ಇದ್ದರೂ ವಿವೇಕಾನಂದ ಜಯಂತಿಯಲ್ಲಿ ಇಬ್ಬರು- ಮೂವರನ್ನು ಬಿಟ್ಟರೆ ಬೇರೆ ಯಾರೂ ಪಾಲ್ಗೊಂಡಿರಲಿಲ್ಲ.

ಕಾರ್ಯಕ್ರಮದ ಬಳಿಕ ಕಾಲೇಜು ಸಿಬಂದಿಯ ನಡುವೆ ಒಂದು ರೀತಿಯ ಜಟಾಪಟಿ ನಡೆದಿದ್ದು, ಒಟ್ಟು ರಾದ್ಧಾಂತ ಆಗಿದ್ದರೂ ಪ್ರಾಂಶುಪಾಲರು ಈ ಬಗ್ಗೆ ಕ್ರಮ ಕೈಗೊಂಡಿರಲಿಲ್ಲ. ಈ ನಡುವೆ, ವಿವೇಕಾನಂದ ಜಯಂತಿಗೆ ವಿರೋಧಿಸಿದ್ದಾರೆ ಎನ್ನಲಾದ ಉಪನ್ಯಾಸಕಿ ಅನ್ನಪೂರ್ಣ ಕಾಲೇಜಿಗೆ 15 ದಿನ ರಜೆ ಹಾಕಿ ತೆರಳಿದ್ದರು. ಆದರೆ, ಇದೇ ವಿಚಾರದಲ್ಲಿ ಅರುಣ್ ಕುಮಾರ್, ಕಾಲೇಜು ಪ್ರಾಂಶುಪಾಲ ರಮೇಶ್ ಆಚಾರ್ ಮತ್ತು ಲೈಬ್ರೇರಿಯನ್ ವಿರುದ್ಧ ತನಗೆ ಮಾನಸಿಕ ಕಿರುಕುಳ ನೀಡುತ್ತಿದ್ದಾರೆಂದು ಆರೋಪಿಸಿ ಬ್ರಹ್ಮಾವರ ಠಾಣೆಗೆ ದೂರು ನೀಡಿದ್ದಾರೆ. ವಿವೇಕಾನಂದ ಜಯಂತಿ ಕಾರ್ಯಕ್ರಮದಲ್ಲಿ ಈ ಮೂವರು ಮಾತ್ರ ಪಾಲ್ಗೊಂಡಿದ್ದರು. ಅದೇ ಕಾರಣಕ್ಕೆ ಕಾರ್ಯಕ್ರಮದ ನೆಪದಲ್ಲಿ ತಮ್ಮ ವಿರುದ್ಧ ದೂರು ನೀಡಿದ್ದಾಗಿ ಅರುಣ್ ಕುಮಾರ್ ತಿಳಿಸಿದ್ದಾರೆ.
Vivekananda jayanti turns as issue in government college at udupi, case filed at police station. Students who participated in the function were punished by the college after which the case has now reached the police station.
24-06-26 05:55 pm
HK News Staffer
ಅಡ್ಡ ಮತದಾನ ; ರಾಜ್ಯ ನಾಯಕತ್ವದ ನಿರ್ಲಕ್ಷ್ಯವೇ ಕಾರಣ...
23-06-26 05:58 pm
ಅಡ್ಡ ಮತದಾನ; ಧರ್ಮಸ್ಥಳದಲ್ಲಿ ಶಾಸಕರು ಬಂದು ಆಣೆ ಮಾಡ...
22-06-26 08:18 pm
ವಿಧಾನ ಪರಿಷತ್ ಚುನಾವಣೆಗೂ ಮುನ್ನ ರಹಸ್ಯ ಸಭೆ ; ಬಿಜೆ...
22-06-26 03:44 pm
ಆಸ್ಪತ್ರೆ ಸಿಬ್ಬಂದಿ ಸ್ಪಂದಿಸದಿದ್ದರೆ ಚಿಂತೆ ಬೇಡ ;...
22-06-26 12:51 pm
24-06-26 01:51 pm
HK News Staffer
ಮಾಹಿತಿ ಹಕ್ಕು ನಿಯಮಗಳಿಗೆ ಮಹಾರಾಷ್ಟ್ರ ಸರ್ಕಾರ ತಿದ್...
23-06-26 10:47 pm
ಟಿಎಂಸಿಯಲ್ಲಿ ರಾಜಕೀಯ ಭೂಕಂಪ ; ಮಮತಾ ಬ್ಯಾನರ್ಜಿ ಅಧ...
23-06-26 12:21 pm
ಕತಾರ್ ಕೈಗಾರಿಕಾ ಪ್ರದೇಶದಲ್ಲಿ ಭಾರೀ ಸ್ಫೋಟ ; 54 ಜನ...
22-06-26 12:55 pm
ಮರಳು ಮಾಫಿಯಾ ಅಟ್ಟಹಾಸಕ್ಕೆ ಬಿಜೆಪಿ ನಾಯಕ ಸಜೀವ ದಹನ;...
18-06-26 07:17 pm
23-06-26 06:02 pm
HK News Staffer
ಬಸ್ ಚಲಿಸುತ್ತಿದ್ದಾಗಲೇ ಬಿಪಿ ಲೋ ಆಗಿ ಕುಸಿದ ಚಾಲಕ !...
23-06-26 03:18 pm
ಮುಸ್ಲಿಮರಿಗೆ ಸಚಿವ ಸ್ಥಾನ ; ಕಾಂಗ್ರೆಸಿಗೆ ಓಟ್ ಹಾಕದ...
23-06-26 11:49 am
ಉಡುಪಿ ಕೋರ್ಟ್ಗೆ ಇ-ಮೇಲ್ ಮೂಲಕ ಬಾಂಬ್ ಬೆದರಿಕೆ; ಕೆ...
22-06-26 05:23 pm
Dr Kakkillaya News: ಕೊರಾನಾ ಮಾಸ್ಕ್ ಹಾಕಿಲ್ಲವೆಂದ...
21-06-26 08:59 pm
24-06-26 09:28 pm
HK News Desk
30 ಲಕ್ಷ ಸಾಲ, ಲಿವ್-ಇನ್ ಸಂಬಂಧಕ್ಕೆ ಪೋಷಕರ ವಿರೋಧ ;...
24-06-26 08:53 pm
ರಾಮ ಮಂದಿರವನ್ನ ಸ್ಫೋಟಿಸಲು ಪ್ಲಾನ್ ಮಾಡಿದ್ವಿ ! ;...
24-06-26 07:53 pm
ಅಯೋಧ್ಯೆ ರಾಮ ಮಂದಿರ ಹೆಸರಲ್ಲಿ ದೇಣಿಗೆ ; 200 ಕೋಟಿ...
24-06-26 05:57 pm
Mangalore Minor student Suicide: ಅಪ್ರಾಪ್ತೆಗೆ...
24-06-26 02:25 pm