ಬ್ರೇಕಿಂಗ್ ನ್ಯೂಸ್
08-01-22 02:56 pm Mangalore Correspondent ಕರಾವಳಿ
Photo credits : Headline Karnataka
ಮಂಗಳೂರು, ಜ.8 : ವಾರಾಂತ್ಯದ ಕರ್ಫ್ಯೂ ಹಿನ್ನೆಲೆಯಲ್ಲಿ ಮಂಗಳೂರಿನಲ್ಲಿ ಪೊಲೀಸರು ಬೀದಿಗೆ ಇಳಿದಿದ್ದರು. ಕರ್ಫ್ಯೂ ಇದ್ದರೂ, ಬಸ್ ಸಾರಿಗೆ, ಟ್ಯಾಕ್ಸಿ ವಾಹನಗಳಿಗೆ ಅವಕಾಶ ಇದ್ದುದರಿಂದ ಜನರ ಸಂಚಾರ ಮಾಮೂಲಿಯಾಗಿತ್ತು. ಆದರೆ ಪೊಲೀಸರು ವಾಹನಗಳನ್ನು ನಿಲ್ಲಿಸಿ ತಪಾಸಣೆಯಲ್ಲಿ ತೊಡಗಿದ್ದರು.
ಕದ್ರಿ ಠಾಣೆಯ ಮುಂಭಾಗದಲ್ಲಿ, ಲಾಲ್ ಬಾಗ್ ವೃತ್ತದ ಬಳಿ, ಹಂಪನಕಟ್ಟೆ ಕ್ಲಾಕ್ ಟವರ್ ಬಳಿ ಹೀಗೆ ಅಲ್ಲಲ್ಲಿ ಪೊಲೀಸರು ಬ್ಯಾರಿಕೇಡ್ ಹಾಕಿ ಪರಿಶೀಲನೆ ನಡೆಸಿದ್ದಾರೆ. ಬೆಳಗ್ಗಿನ ಹತ್ತು ಗಂಟೆ ವರೆಗೂ ಮಂಗಳೂರಿನಲ್ಲಿ ಪೊಲೀಸರು ತಪಾಸಣೆ ನಡೆಸುತ್ತಿದ್ದರು. ಆದರೆ ಅಗತ್ಯ ಸಾಮಗ್ರಿ ಖರೀದಿಗೆ ಅವಕಾಶ ಇದ್ದುದರಿಂದ ಜನರ ಓಡಾಟಕ್ಕೇನೂ ತೊಂದರೆ ಇರಲಿಲ್ಲ.



ದ್ವಿಚಕ್ರ ವಾಹನದಲ್ಲಿ ಇಬ್ಬರು ಹೋಗುತ್ತಿದ್ದರೆ, ನಿಲ್ಲಿಸಿ ತಪಾಸಣೆ ನಡೆಸುತ್ತಿದ್ದರು. ಎಲ್ಲಿಗೆ, ಯಾವ ಕಾರ್ಯಕ್ಕೆ ಹೋಗುತ್ತಿದ್ದೀರಿ ಎಂದು ಕೇಳುತ್ತಿದ್ದರು. ಸೂಕ್ತ ಉತ್ತರ ನೀಡಿದರೆ ಬಿಡುತ್ತಿದ್ದರು. ಕೆಲವರು ಮಾರ್ಕೆಟ್, ಮೀನು, ಮಾಂಸ ಇತ್ಯಾದಿ ಕಾರ್ಯಕ್ಕೆ ತೆರಳುತ್ತಿರುವುದಾಗಿ ಹೇಳುತ್ತಿದ್ದರು. ಆದಷ್ಟು ತಮ್ಮ ಮನೆಗಳ ಬಳಿಯಲ್ಲೇ ಅಂಗಡಿಗಳಿಗೆ ಸಾಮಾನುಗಳನ್ನು ಖರೀದಿಸಬೇಕು ಎಂದು ಸೂಚನೆ ನೀಡುತ್ತಿದ್ದರು. ಖಾಸಗಿ ಮತ್ತು ಸರಕಾರಿ ಬಸ್ ಇದ್ದರೂ, ಪ್ರಯಾಣಿಕರ ಸಂಖ್ಯೆ ತೀರಾ ವಿರಳವಾಗಿತ್ತು. ಸಿಟಿ ಬಸ್ ಗಳು ಖಾಲಿ ಖಾಲಿ ಓಡುತ್ತಿದ್ದವು.






ಮಂಗಳೂರು ನಗರ ಡಿಸಿಪಿ ಹರಿರಾಮ್ ಶಂಕರ್ ನೇತೃತ್ವದಲ್ಲಿ ಪೊಲೀಸರು ತಪಾಸಣೆ ಕಾರ್ಯ ನಡೆಸಲಾಗಿತ್ತು. ಹೊಟೇಲ್ ಫುಡ್ ಪಾರ್ಸೆಲ್, ತರಕಾರಿ, ಮೀನು ಮಾರುಕಟ್ಟೆಗೆ ಅವಕಾಶ ನೀಡಲಾಗಿತ್ತು. ಬೆಳಗ್ಗೆ ಹತ್ತು ಗಂಟೆಯ ಬಳಿಕ ಕೆಲವು ವಾಹನಗಳನ್ನು ವಶಕ್ಕೆ ಪಡೆದಿದ್ದಾರೆ. ಉಳಿದಂತೆ, ಖಾಸಗಿ ಕಚೇರಿಗಳನ್ನು ಸ್ವಯಂ ಆಗಿಯೇ ಬಂದ್ ಮಾಡಲಾಗಿತ್ತು. ಬಂಟ್ವಾಳ, ಪುತ್ತೂರು, ಬೆಳ್ತಂಗಡಿ ಪೇಟೆಗಳಲ್ಲೂ ಇದೇ ರೀತಿ ಪೊಲೀಸರು ತಪಾಸಣೆ ನಡೆಸಿದ್ದಾರೆ. ಆದರೆ, ಈ ಹಿಂದಿನ ರೀತಿ ಪೊಲೀಸರು ಲಾಠಿ ಬೀಸಿಲ್ಲ. ಲಾಠಿ ಹಿಡಿದು ತಪಾಸಣೆ ನಡೆಸಿ, ಸೂಚನೆ ನೀಡಿ ಕಳಿಸಿಕೊಡುತ್ತಿದ್ದರು. ಸೋಮವಾರ ಬೆಳಗ್ಗೆ 5 ಗಂಟೆ ವರೆಗೆ ವಾರಾಂತ್ಯದ ಕರ್ಫ್ಯೂ ಇರಲಿದೆ.
The definition of the Word ‘CURFEW’ in the dictionary means “a regulation requiring people to remain indoors between specified hours, typically at night or day-time. But the kind of ‘CURFEW’ that we are seeing in Dakshina Kannada/Mangaluru simply doesn’t match the definition. Then why even did our Netas, or officials from the District Administration or Mangaluru City Corporation come up with the term “WEEKEND CURFEW”, when 90-95% of the people in this district and Mangaluru don’t even UNDERSTAND what ‘Curfew’ or ‘Lockdown’ is?
17-09-26 04:13 pm
HK News Staffer
ಚಿತ್ರರಂಗದ ಸಾರ್ವಕಾಲಿಕ ಶ್ರೇಷ್ಠ ನಟ ಅನಂತನಾಗ್ ಗೆ '...
16-09-26 10:40 pm
Tulu Language, Shivraj Tangadagi: ತುಳುವಿಗೆ 2ನ...
16-09-26 01:51 pm
Pradeep Eshwar, Pratap Simha: ಪೊಲೀಸ್ ಠಾಣೆಗೆ...
15-09-26 09:13 pm
Imran Pasha, Pratap Simha: ನಿನ್ನಂತಹ ಒಂದು ಲಕ್...
15-09-26 04:46 pm
13-09-26 09:00 pm
HK News
80s ಫೋಟೋ ಟ್ರೆಂಡ್ಗೆ ಮಾರುಹೋಗಿದ್ದೀರಾ? ಹುಷಾರ್ ;...
12-09-26 01:10 pm
ಕಾಶ್ಮೀರಿ ಪಂಡಿತರಿಗೆ ಮತ್ತೆ ಬೆದರಿಕೆ ; ಉದ್ಯೋಗ ಬಿಟ...
10-09-26 01:23 pm
ನೇಪಾಳ ಪ್ರವಾಹ ; ಹತ್ತು ದಿನಗಳ ಬಳಿಕ ಜಲವಿದ್ಯುತ್ ಸು...
05-09-26 11:55 am
ಮುಂದಿನ ಒಂದು ವರ್ಷದಲ್ಲಿ ಒಂದು ಸಾವಿರ ವಿದ್ಯಾಭಾರತಿ...
04-09-26 08:14 pm
18-09-26 07:30 pm
HK News Staffer
Puttur Medical College, Dakshina Kannada, Man...
18-09-26 06:08 pm
Tulu second official language: ತುಳುನಾಡಿನ ದಶಕಗ...
18-09-26 04:46 pm
Dk Shivakumar, Mangalore, social media: ಸೋಶಿಯ...
18-09-26 04:11 pm
CM Dk Shivakumar, Mangalore: ಕದ್ರಿ ದೇವಸ್ಥಾನದಲ...
18-09-26 03:39 pm
17-09-26 02:22 pm
HK News Staffer
Bangalore Murder, Crime: ಪ್ರೀತಿಸಿ ಮದುವೆಯಾಗಿದ್...
17-09-26 01:56 pm
Bangalore kidnap, Crime: ಬೆಂಗಳೂರಿನಲ್ಲಿ ಶಾಕ್...
17-09-26 12:35 pm
Manglore Cyber crime, Stock Market: ಷೇರು ಮಾರ್...
17-09-26 11:45 am
ಬೆಳ್ತಂಗಡಿ; ಗೃಹಪ್ರವೇಶಕ್ಕೆ ಹೋದಾಗ ಮನೆಗೆ ಕನ್ನ, ₹1...
16-09-26 11:18 am