ಬ್ರೇಕಿಂಗ್ ನ್ಯೂಸ್
01-01-22 10:27 pm Mangalore Correspondent ಕರಾವಳಿ
Photo credits : Headline Karnataka
ಮಂಗಳೂರು, ಜ.1 : ಎರಡು ಮಕ್ಕಳ ತಾಯಿಯೊಬ್ಬಳು ಪಕ್ಕದ ಮನೆಯಾತನ ಜೊತೆ ಪ್ರೇಮ ಸಂಬಂಧ ಇರಿಸಿಕೊಂಡು ಅದೇ ಅಕ್ರಮ ಸಂಬಂಧಕ್ಕೆ ಕಟ್ಟುಬಿದ್ದು ಸಾವಿಗೆ ಶರಣಾದ ಘಟನೆ ನಗರದಲ್ಲಿ ನಡೆದಿದೆ.
ತೊಕ್ಕೊಟ್ಟಿನ ಕುತ್ತಾರು ಬಳಿಯ ಮುನ್ನೂರು ಗ್ರಾಮದ ಸುಬಾಷ್ ನಗರ ನಿವಾಸಿ ಭಾರತಿ (36) ಮಂಗಳೂರಿನ ಬಂದರಿನ ಲಾಡ್ಜ್ ಒಂದರಲ್ಲಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಡಿ.29ರಂದು ಮಹಿಳೆ ನಾಪತ್ತೆಯಾಗಿದ್ದು, ಈ ಬಗ್ಗೆ ಆಕೆಯ ಗಂಡ ಉಳ್ಳಾಲ ಪೊಲೀಸರಿಗೆ ದೂರು ನೀಡಿದ್ದರು. ಬಳಿಕ ತಪಾಸಣೆ ನಡೆಸಿದಾಗ ಪಕ್ಕದ ಮನೆಯ ಸಂದೀಪ್ ಎಂಬಾತನೂ ನಾಪತ್ತೆಯಾಗಿದ್ದ.
ಮರುದಿನ ಸಂದೀಪ್ ತನ್ನ ಮನೆಗೆ ಮರಳಿದ್ದು, ಮಹಿಳೆಯ ಬಗ್ಗೆ ಪೊಲೀಸರು ಪ್ರಶ್ನೆ ಮಾಡಿದಾಗ ಬಂದರಿನ ಲಾಡ್ಜ್ ಹೆಸರು ಹೇಳಿದ್ದ. ಪೊಲೀಸರು ಅಲ್ಲಿಗೆ ತೆರಳಿ ನೋಡಿದಾಗ, ಮಹಿಳೆ ಕೊಠಡಿಯಲ್ಲಿ ವಿಷ ಕುಡಿದು ಮೃತಪಟ್ಟಿರುವುದು ಕಂಡುಬಂದಿತ್ತು. ಮಹಿಳೆ ಮತ್ತು ಸಂದೀಪ್ ನಡುವೆ ಅಕ್ರಮ ಸಂಬಂಧ ಇತ್ತು ಎನ್ನಲಾಗುತ್ತಿದ್ದು, ಇದೇ ನೆಪದಲ್ಲಿ ಆಕೆ ತನ್ನನ್ನು ಮದುವೆಯಾಗಲು ಒತ್ತಾಯಿಸಿ ನಿರಾಕರಿಸಿದ್ದಕ್ಕೆ ಸಾವಿಗೆ ಶರಣಾಗಿದ್ದಾಳೆ ಎನ್ನಲಾಗುತ್ತಿದೆ.
ಸಂದೀಪ್ ಗೆ ಬೇರೆ ಮದುವೆಯಾಗಿದ್ದು, ತಿಂಗಳ ಹಿಂದಷ್ಟೇ ಮಗುವಾಗಿ ಇತ್ತೀಚೆಗೆ ತನ್ನ ಮನೆಯಲ್ಲಿ ತೊಟ್ಟಿಲು ಹಾಕುವ ಕಾರ್ಯವೂ ನಡೆದಿತ್ತು. ಇವರಿಬ್ಬರ ಮನೆಯೂ ಹತ್ತಿರದಲ್ಲೇ ಇದ್ದು ಪೊಲೀಸರು ಆತ್ಮಹತ್ಯೆಗೆ ಪ್ರಚೋದನೆ ಹೆಸರಲ್ಲಿ ಕೇಸು ದಾಖಲಿಸಿ ಆರೋಪಿ ಸಂದೀಪ್ (39) ನನ್ನು ಬಂಧಿಸಿದ್ದಾರೆ. ಮೃತ ಮಹಿಳೆಗೆ ಇಬ್ಬರು ಗಂಡು ಮಕ್ಕಳಿದ್ದು, ಮಕ್ಕಳು ಮತ್ತು ಗಂಡನನ್ನು ಬಿಟ್ಟು ಸಾವಿಗೆ ಶರಣಾಗಿದ್ದಾಳೆ.
ಮೃತ ಮಹಿಳೆಯ ಗಂಡ ಮತ್ತು ಸಂದೀಪ್ ಗೆಳೆಯರಾಗಿದ್ದು, ಒಡನಾಟ ಇರಿಸಿಕೊಂಡಿದ್ದರು. ಸಂದೀಪ್ ಕುತ್ತಾರು ಕೊರಗಜ್ಜನ ಕಟ್ಟೆಯ ಬಳಿ ಫ್ಯಾಬ್ರಿಕೇಶನ್ ಅಂಗಡಿ ನಡೆಸುತ್ತಿದ್ದ. ಗಂಡನ ಪರಿಚಯದಲ್ಲಿ ಮನೆಗೆ ಬರುತ್ತಿದ್ದ ಸಂದೀಪ್ ಮತ್ತು ಮಹಿಳೆಯ ನಡುವೆ ಹತ್ತಿರದ ಸಂಬಂಧ ಬೆಳೆದಿತ್ತು. ಇದೇ ಸಂಬಂಧ ಈಗ ಮಹಿಳೆಯ ಸಾವಿಗೆ ಕಾರಣವಾದರೆ, ಸಂದೀಪ್ ನನ್ನು ಜೈಲು ಕಂಬಿ ಎಣಿಸುವಂತೆ ಮಾಡಿದೆ.
Mangalore illicit affair 36 year old woman from Kuthar who was missing since 29th December has been found in a lodge at Bunder where she has committed suicide. The deceased is a mother of two.
17-09-26 04:13 pm
HK News Staffer
ಚಿತ್ರರಂಗದ ಸಾರ್ವಕಾಲಿಕ ಶ್ರೇಷ್ಠ ನಟ ಅನಂತನಾಗ್ ಗೆ '...
16-09-26 10:40 pm
Tulu Language, Shivraj Tangadagi: ತುಳುವಿಗೆ 2ನ...
16-09-26 01:51 pm
Pradeep Eshwar, Pratap Simha: ಪೊಲೀಸ್ ಠಾಣೆಗೆ...
15-09-26 09:13 pm
Imran Pasha, Pratap Simha: ನಿನ್ನಂತಹ ಒಂದು ಲಕ್...
15-09-26 04:46 pm
13-09-26 09:00 pm
HK News
80s ಫೋಟೋ ಟ್ರೆಂಡ್ಗೆ ಮಾರುಹೋಗಿದ್ದೀರಾ? ಹುಷಾರ್ ;...
12-09-26 01:10 pm
ಕಾಶ್ಮೀರಿ ಪಂಡಿತರಿಗೆ ಮತ್ತೆ ಬೆದರಿಕೆ ; ಉದ್ಯೋಗ ಬಿಟ...
10-09-26 01:23 pm
ನೇಪಾಳ ಪ್ರವಾಹ ; ಹತ್ತು ದಿನಗಳ ಬಳಿಕ ಜಲವಿದ್ಯುತ್ ಸು...
05-09-26 11:55 am
ಮುಂದಿನ ಒಂದು ವರ್ಷದಲ್ಲಿ ಒಂದು ಸಾವಿರ ವಿದ್ಯಾಭಾರತಿ...
04-09-26 08:14 pm
18-09-26 07:30 pm
HK News Staffer
Puttur Medical College, Dakshina Kannada, Man...
18-09-26 06:08 pm
Tulu second official language: ತುಳುನಾಡಿನ ದಶಕಗ...
18-09-26 04:46 pm
Dk Shivakumar, Mangalore, social media: ಸೋಶಿಯ...
18-09-26 04:11 pm
CM Dk Shivakumar, Mangalore: ಕದ್ರಿ ದೇವಸ್ಥಾನದಲ...
18-09-26 03:39 pm
17-09-26 02:22 pm
HK News Staffer
Bangalore Murder, Crime: ಪ್ರೀತಿಸಿ ಮದುವೆಯಾಗಿದ್...
17-09-26 01:56 pm
Bangalore kidnap, Crime: ಬೆಂಗಳೂರಿನಲ್ಲಿ ಶಾಕ್...
17-09-26 12:35 pm
Manglore Cyber crime, Stock Market: ಷೇರು ಮಾರ್...
17-09-26 11:45 am
ಬೆಳ್ತಂಗಡಿ; ಗೃಹಪ್ರವೇಶಕ್ಕೆ ಹೋದಾಗ ಮನೆಗೆ ಕನ್ನ, ₹1...
16-09-26 11:18 am