ಬ್ರೇಕಿಂಗ್ ನ್ಯೂಸ್
15-12-21 07:12 pm HK Desk news ಕರಾವಳಿ
ಪುತ್ತೂರು, ಡಿ.15: ಪುತ್ತೂರು ಪೇಟೆಯ ಹಾರಾಡಿ ಸರಕಾರಿ ಶಾಲೆಯಲ್ಲಿ ಪ್ರಭಾರ ಮುಖ್ಯ ಶಿಕ್ಷಕಿಯಾಗಿದ್ದ ಪ್ರಿಯಾ ಕುಮಾರಿ(38) ಎರಡು ದಿನಗಳ ಹಿಂದೆ ತನ್ನ ಮನೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದು, ಕೃತ್ಯಕ್ಕೆ ತಾಲೂಕು ಶಿಕ್ಷಣಾಧಿಕಾರಿಯ ಕಿರುಕುಳವೇ ಕಾರಣ ಎನ್ನುವ ಮಾತು ಸಾರ್ವಜನಿಕ ವಲಯದಲ್ಲಿ ಕೇಳಿಬಂದಿದೆ.
ಪ್ರಿಯಾ ತುಂಬ ಮೃದು ಮತ್ತು ಸೂಕ್ಷ್ಮ ಸ್ವಭಾವದ ಶಿಕ್ಷಕಿಯಾಗಿದ್ದು ಇತ್ತೀಚೆಗೆ ಶಾಲೆಗೆ ಬಂದಿದ್ದ ತಾಲೂಕು ಶಿಕ್ಷಣಾಧಿಕಾರಿ ಇತರೇ ಶಿಕ್ಷಕರ ಮುಂದೆ ಅವಮಾನಿಸುವ ರೀತಿ ಮಾತನಾಡಿದ್ದರು ಎನ್ನಲಾಗಿದೆ. ಈ ಹಿಂದೆ ಹಾರಾಡಿ ಶಾಲೆಯಲ್ಲಿ ಮುಖ್ಯ ಶಿಕ್ಷಕನಾಗಿದ್ದ ವ್ಯಕ್ತಿಯನ್ನು ಅವ್ಯವಹಾರದ ಆರೋಪದಲ್ಲಿ ಅಮಾನತುಗೊಳಿಸಲಾಗಿತ್ತು. ಅದೇ ವಿಚಾರವನ್ನು ಮುಂದಿಟ್ಟು ನಿಮ್ಮನ್ನು ಕೂಡ ಡಿಬಾರ್ ಮಾಡುತ್ತೇನೆ ಎಂದು ಅಧಿಕಾರಿ ಧಮಕಿ ಹಾಕಿದ್ದರಂತೆ.
ಘಟನೆಯ ಬಳಿಕ ತೀವ್ರ ನೊಂದಿದ್ದ ಶಿಕ್ಷಕಿ ಪ್ರಿಯಾ ಅವರು ತನಗೆ ಮುಖ್ಯ ಶಿಕ್ಷಕಿಯ ಹುದ್ದೆಯೇ ಬೇಡವೆಂದು ಬೇರೆ ಶಾಲೆಗೆ ವರ್ಗಾವಣೆ ಕೇಳಿದ್ದರು. ಪುತ್ತೂರು ತಾಲೂಕಿನ ಅರಿಯಡ್ಕ ಶಾಲೆಗೆ ವರ್ಗಾವಣೆಯೂ ಆಗಿತ್ತು. ಆದರೆ, ವರ್ಗಾವಣೆ ಆದೇಶ ಸಕಾಲದಲ್ಲಿ ಬರದೇ ಇದ್ದುದರಿಂದ ಮತ್ತೆ ಮಾನಸಿಕ ಕಿರುಕುಳ ಅನುಭವಿಸಿದ್ದರು. ತಾನೇನು ತಪ್ಪು ಮಾಡಿಲ್ಲ.. ನನಗ್ಯಾಕೆ ಹೀಗೆ ಮಾಡುತ್ತಿದ್ದಾರೆ ಎಂದು ತೀವ್ರ ನೊಂದುಕೊಂಡು ಪ್ರಿಯಾ ಈ ಬಗ್ಗೆ ಇತರೇ ಶಿಕ್ಷಕರಲ್ಲಿ ಹೇಳಿಕೊಂಡಿದ್ದರು. ಇದೇ ವಿಚಾರದಲ್ಲಿ ಆನಂತರವೂ ಕಿರುಕುಳ ಆಗಿತ್ತಾ ಅನ್ನುವ ಬಗ್ಗೆ ತಿಳಿದಿಲ್ಲ.

ಇದಲ್ಲದೆ, ಅದೇ ಶಾಲೆಯ ಇನ್ನೊಬ್ಬ ಶಿಕ್ಷಕಿಯೊಬ್ಬರ ಜೊತೆ ಶಿಕ್ಷಣಾಧಿಕಾರಿ ಹತ್ತಿರದ ಸಂಬಂಧ ಇಟ್ಟುಕೊಂಡಿದ್ದಾರೆ ಅನ್ನುವ ಆರೋಪಗಳಿವೆ. ಆದರೆ, ಯಾವ ವಿಚಾರದಲ್ಲಿ ಶಿಕ್ಷಕಿ ಪ್ರಿಯಾ ಅವರನ್ನು ಟಾರ್ಗೆಟ್ ಮಾಡಲಾಗಿತ್ತು ಅನ್ನೋದು ತಿಳಿದುಬಂದಿಲ್ಲ. ಪ್ರಿಯಾ ಅವರ ಗಂಡ ಎಕ್ಸ್ ಮಿಲಿಟರಿಯಾಗಿದ್ದು, ವಿಟ್ಲದಲ್ಲಿ ಖಾಸಗಿ ಕಂಪನಿಯಲ್ಲಿ ಕೆಲಸದಲ್ಲಿದ್ದಾರೆ. ವಿಟ್ಲದ ಸಿಪಿಸಿಆರ್ ಐ ಬಳಿ ಬಾಡಿಗೆ ಮನೆಯಲ್ಲಿ ವಾಸವಿದ್ದರು. ತೀವ್ರ ಜಿಗುಪ್ಸೆಗೆ ಒಳಗಾಗಿದ್ದ ಪ್ರಿಯಾ ಅವರು ಸೋಮವಾರ ಬೆಳಗ್ಗೆ ಮನೆಯಲ್ಲಿ ಗಂಡ ಸ್ನಾನ ಮಾಡುತ್ತಿದ್ದಾಗ, ತನ್ನ ಕೋಣೆಯಲ್ಲಿ ನೇಣು ಬಿಗಿದುಕೊಂಡಿದ್ದಾರೆ. ಸ್ನಾನ ಮುಗಿಸಿ ಬಂದ ಪತಿ ರಮೇಶ್, ಕೂಡಲೇ ಅವರನ್ನು ಮಂಗಳೂರಿನ ಆಸ್ಪತ್ರೆಗೆ ಸೇರಿಸಿದ್ದರು. ಆದರೆ, ಅದಾಗಲೇ ಚಿಂತಾಜನಕ ಸ್ಥಿತಿಯಲ್ಲಿದ್ದ ಪ್ರಿಯಾ ಮಂಗಳವಾರ ಸಂಜೆ ಕೊನೆಯುಸಿರು ಎಳೆದಿದ್ದಾರೆ.
ಬಿಇಓ ಕಿರುಕುಳದ ಬಗ್ಗೆ ಶಿಕ್ಷಕಿ ಪ್ರಿಯಾ ಅವರಲ್ಲಿ ಪೊಲೀಸ್ ದೂರು ನೀಡುವಂತೆ ಶಿಕ್ಷಕರ ಸಂಘದ ಸದಸ್ಯರು ಸೇರಿದಂತೆ ಕುಟುಂಬಸ್ಥರು ಕೂಡ ಸಲಹೆ ಮಾಡಿದ್ದರು. ಆದರೆ, ಪೊಲೀಸ್ ದೂರು ನೀಡುವುದರಿಂದ ತನ್ನ ಉದ್ಯೋಗಕ್ಕೆ ತೊಂದರೆಯಾಗಬಹುದು. ಮೇಲಧಿಕಾರಿ ಆಗಿರುವುದರಿಂದ ಇನ್ನಷ್ಟು ಕಿರುಕುಳ ಆಗಬಹುದು ಎಂದು ಪ್ರಿಯಾ ದೂರು ಕೊಡದೆ ದೂರ ಉಳಿದಿದ್ದರು. ಬಿಇಓ ಕಿರುಕುಳದ ಬಗ್ಗೆ ಬಂಟ್ವಾಳ ಪೊಲೀಸರಿಗೂ ಮಾಹಿತಿ ನೀಡಲಾಗಿತ್ತು.
Puttur 38 year old teacher headmistress of school dies by suicide, BEO humiliation reason for suicide. Priya Kumari (38) who was in-charge headmistress of Haradi school here, died by suicide. Priya had tried to end her life on Monday December 13 morning by hanging herself at her home near Vittal by hanging herself. She had been taken to a private hospital in the city in serious condition.
23-06-26 05:58 pm
HK News Staffer
ಅಡ್ಡ ಮತದಾನ; ಧರ್ಮಸ್ಥಳದಲ್ಲಿ ಶಾಸಕರು ಬಂದು ಆಣೆ ಮಾಡ...
22-06-26 08:18 pm
ವಿಧಾನ ಪರಿಷತ್ ಚುನಾವಣೆಗೂ ಮುನ್ನ ರಹಸ್ಯ ಸಭೆ ; ಬಿಜೆ...
22-06-26 03:44 pm
ಆಸ್ಪತ್ರೆ ಸಿಬ್ಬಂದಿ ಸ್ಪಂದಿಸದಿದ್ದರೆ ಚಿಂತೆ ಬೇಡ ;...
22-06-26 12:51 pm
Cross Voting Row, Vijayendra: ಅಡ್ಡ ಮತದಾನ ; ಧರ...
21-06-26 02:18 pm
24-06-26 01:51 pm
HK News Staffer
ಮಾಹಿತಿ ಹಕ್ಕು ನಿಯಮಗಳಿಗೆ ಮಹಾರಾಷ್ಟ್ರ ಸರ್ಕಾರ ತಿದ್...
23-06-26 10:47 pm
ಟಿಎಂಸಿಯಲ್ಲಿ ರಾಜಕೀಯ ಭೂಕಂಪ ; ಮಮತಾ ಬ್ಯಾನರ್ಜಿ ಅಧ...
23-06-26 12:21 pm
ಕತಾರ್ ಕೈಗಾರಿಕಾ ಪ್ರದೇಶದಲ್ಲಿ ಭಾರೀ ಸ್ಫೋಟ ; 54 ಜನ...
22-06-26 12:55 pm
ಮರಳು ಮಾಫಿಯಾ ಅಟ್ಟಹಾಸಕ್ಕೆ ಬಿಜೆಪಿ ನಾಯಕ ಸಜೀವ ದಹನ;...
18-06-26 07:17 pm
23-06-26 06:02 pm
HK News Staffer
ಬಸ್ ಚಲಿಸುತ್ತಿದ್ದಾಗಲೇ ಬಿಪಿ ಲೋ ಆಗಿ ಕುಸಿದ ಚಾಲಕ !...
23-06-26 03:18 pm
ಮುಸ್ಲಿಮರಿಗೆ ಸಚಿವ ಸ್ಥಾನ ; ಕಾಂಗ್ರೆಸಿಗೆ ಓಟ್ ಹಾಕದ...
23-06-26 11:49 am
ಉಡುಪಿ ಕೋರ್ಟ್ಗೆ ಇ-ಮೇಲ್ ಮೂಲಕ ಬಾಂಬ್ ಬೆದರಿಕೆ; ಕೆ...
22-06-26 05:23 pm
Dr Kakkillaya News: ಕೊರಾನಾ ಮಾಸ್ಕ್ ಹಾಕಿಲ್ಲವೆಂದ...
21-06-26 08:59 pm
24-06-26 02:25 pm
HK News Staffer
Suhas Shetty, Mangalore, NIA: ಸುಹಾಸ್ ಶೆಟ್ಟಿ ಹ...
23-06-26 02:15 pm
ಮಗಳಿಗೆ ಬುದ್ಧಿ ಹೇಳಿದ್ದೇ ತಪ್ಪಾಯ್ತಾ ? ಲಿವ್-ಇನ್...
23-06-26 12:57 pm
ಅಕ್ರಮ ಪೊಲೀಸ್ ಕ್ಲಿಯರೆನ್ಸ್ ; ಮೂರೇ ದಿನದಲ್ಲಿ ಸಿಸಿ...
22-06-26 10:21 pm
ಉಡುಪಿಯಲ್ಲಿ ಮಕ್ಕಳಿಲ್ಲದ ದಂಪತಿಗೆ ಮಗು ಮಾರಾಟ; ವೈದ್...
22-06-26 08:01 pm