ಬ್ರೇಕಿಂಗ್ ನ್ಯೂಸ್
14-12-21 11:20 pm HK Desk news ಕರಾವಳಿ
ಪುತ್ತೂರು, ಡಿ.14 : ಉಪ್ಪಿನಂಗಡಿ ಠಾಣೆಯ ಮುಂಭಾಗದಲ್ಲಿ ಪಿಎಫ್ಐ ಮತ್ತು ಎಸ್ ಡಿಪಿಐ ಕಾರ್ಯಕರ್ತರು ಪ್ರತಿಭಟನೆ ನೆಪದಲ್ಲಿ ಹೈಡ್ರಾಮಾ ನಡೆಸಿದ್ದು ಪೊಲೀಸರು ಲಾಠಿಚಾರ್ಜ್ ನಡೆಸಿದ್ದಾರೆ.
ಮೀನು ಮಾರುತ್ತಿದ್ದ ಹಿಂದು ಸಂಘಟನೆಯ ಯುವಕರಿಬ್ಬರ ಮೇಲಿನ ಹಲ್ಲೆ ಘಟನೆಗೆ ಸಂಬಂಧಿಸಿ ಉಪ್ಪಿನಂಗಡಿ ಪೊಲೀಸರು ಮೂವರನ್ನು ವಶಕ್ಕೆ ಪಡೆದಿದ್ದರು. ಇದನ್ನು ವಿರೋಧಿಸಿ ಪಿಎಫ್ಐ ಮತ್ತು ಎಸ್ಡಿಪಿಐ ಕಾರ್ಯಕರ್ತರು ಉಪ್ಪಿನಂಗಡಿ ಠಾಣೆಯ ಮುಂದೆ ಪ್ರತಿಭಟನೆ ನಡೆಸಿದ್ದರು. ಬೆಳಗ್ಗಿನಿಂದ ಸಂಜೆಯ ವರೆಗೂ ಪ್ರತಿಭಟನಾ ಧರಣಿ ನಡೆಸಿದ್ದು ಇದರ ಮಧ್ಯದಲ್ಲಿ ಸಂಜೆ ಸ್ಥಳೀಯ ಮಸೀದಿಯಿಂದ ಆಜಾನ್ ಕೇಳಿದೊಡನೆ ಸ್ಥಳದಲ್ಲೇ ನಮಾಜ್ ಮಾಡಲು ಕಾರ್ಯಕರ್ತರು ತಯಾರಿ ನಡೆಸಿದ್ದಾರೆ. ಕುಳಿತುಕೊಳ್ಳಲು ಹಾಕಿದ್ದ ಟರ್ಪಾಲಿನಲ್ಲೇ ನಮಾಜ್ ಮಾಡಲು ಯತ್ನಿಸಿದ್ದು ಇದಕ್ಕೆ ಸ್ಥಳೀಯರು ವಿರೋಧ ವ್ಯಕ್ತಪಡಿಸಿದ್ದಾರೆ.


ಸ್ಥಳದಲ್ಲಿ ಹಿಂದು ಸಂಘಟನೆಯ ಕಾರ್ಯಕರ್ತರು ಕೂಡ ಸೇರಿದ್ದು ವಿರೋಧಿ ಘೋಷಣೆ ಕೂಗಿದ್ದಾರೆ. ಯಾವುದೇ ಕಾರಣಕ್ಕೂ ಸ್ಥಳದಲ್ಲಿ ನಮಾಜ್ ಮಾಡಲು ಅವಕಾಶ ನೀಡಬಾರದೆಂದು ಧಿಕ್ಕಾರ ಕೂಗಿದ್ದಾರೆ. ಭಾರೀ ಸಂಖ್ಯೆಯಲ್ಲಿ ಸೇರಿದ್ದ ಪೊಲೀಸರು ಬಳಿಕ ಮಧ್ಯಪ್ರವೇಶಿಸಿ ಹಾಕಿದ್ದ ಟರ್ಪಾಲನ್ನು ಎಳೆದು ನಮಾಜ್ ಮಾಡದಂತೆ ತಡೆದಿದ್ದಾರೆ.


ಆದರೂ ಸ್ಥಳದಿಂದ ಕದಲದೆ ಪಿಎಫ್ಐ ಕಾರ್ಯಕರ್ತರು ಧರಣಿ ಮುಂದುವರಿಸಿದ್ದಾರೆ. ಕತ್ತಲು ಕವಿದರೂ, ಪ್ರತಿಭಟನಾ ಧರಣಿ ಮುಂದುವರಿದಿದ್ದು ಈ ವೇಳೆ ಪೊಲೀಸರು ಮೈಕ್ ನಲ್ಲಿ ಕೂಗಿ ಜನರು ಸ್ಥಳ ಬಿಟ್ಟು ಹೋಗುವಂತೆ ಸೂಚನೆ ನೀಡಿದ್ದಾರೆ. ಆದರೆ ಕಾರ್ಯಕರ್ತರು ಪ್ರತಿಭಟನೆ ಮುಂದುವರಿಸಿರುವಾಗಲೇ ಸ್ಥಳದಲ್ಲಿ ಬಿಗುವಿನ ವಾತಾವರಣ ನೆಲೆಸಿದ್ದಲ್ಲದೆ, ಕಲ್ಲು ತೂರಾಟ ನಡೆದಿದೆ. ಎರಡು ಗುಂಪುಗಳ ನಡುವೆ ಕಲ್ಲು ತೂರಾಟ ನಡೆದಿದ್ದು ಗುಂಪನ್ನು ಚದುರಿಸಲು ಪೊಲೀಸರು ಲಾಠಿ ಎತ್ತಿದ್ದಾರೆ. ಕಲ್ಲು ತೂರಿ ಬರುತ್ತಿದ್ದಾಗಲೇ ಪೊಲೀಸರು ಸಿಕ್ಕ ಸಿಕ್ಕಲ್ಲಿ ಲಾಠಿ ಚಾರ್ಜ್ ನಡೆಸುತ್ತಾ ಜನರನ್ನು ಬೆನ್ನಟ್ಟಿದ್ದಾರೆ. ಈ ವೇಳೆ, ಉದ್ರಿಕ್ತರು ದಿಕ್ಕಾಪಾಲಾಗಿ ಓಡಿದ್ದು ಕತ್ತಲಲ್ಲಿ ಕಲ್ಲಿನೇಟು ಬಿದ್ದು ಗಾಯಗೊಂಡಿದ್ದಾರೆ. ಹಲವರು ಕಲ್ಲು ತೂರಾಟದಿಂದ ಗಾಯಗೊಂಡಿದ್ದಾರೆ. ಅಲ್ಲದೆ, ಪೊಲೀಸರು ಕೂಡ ಕಲ್ಲಿನೇಟು ಬಿದ್ದು ಗಾಯಗೊಂಡಿದ್ದಾರೆ.


ಉಪ್ಪಿನಂಗಡಿ ಪೇಟೆಯ ಹಳೆಗೇಟ್ ನಲ್ಲಿ ವಾರದ ಹಿಂದೆ ಉಂಟಾಗಿದ್ದ ಸಂಘರ್ಷದ ವಾತಾವರಣ ಈಗ ಕೋಮು ದ್ವೇಷಕ್ಕೆ ತಿರುಗಿದ್ದು ಉದ್ವಿಗ್ನ ಸ್ಥಿತಿ ಏರ್ಪಟ್ಟಿದೆ. ಸಂಘರ್ಷ ಹಿನ್ನೆಲೆಯಲ್ಲಿ ಉಪ್ಪಿನಂಗಡಿ ಠಾಣೆ ವ್ಯಾಪ್ತಿಯಲ್ಲಿ 144 ಸೆಕ್ಷನ್ ಜಾರಿ ಮಾಡಲಾಗಿದೆ. ಸ್ಥಳದಲ್ಲಿ ಹೆಚ್ಚುವರಿ ಪೊಲೀಸರನ್ನು ನಿಯೋಜನೆ ಮಾಡಲಾಗಿದೆ. ಎರಡೂ ಕಡೆಗಳಿಂದ ಸೇರಿದ್ದ ಗುಂಪನ್ನು ಕೂಡಲೇ ಚದುರುವಂತೆ ಪೊಲೀಸರು ಹಲವು ಬಾರಿ ತಿಳಿಹೇಳಿದ್ದಾರೆ. ಬಂಟ್ವಾಳ ಸರ್ಕಲ್ ಇನ್ ಸ್ಪೆಕ್ಟರ್ ನಾಗರಾಜ್ ಕೂಡ ಸ್ಥಳಕ್ಕಾಗಮಿಸಿ, ಜನರನ್ನು ಚದುರುವಂತೆ ಮನವಿ ಮಾಡಿದ್ದಾರೆ. ಉಪ್ಪಿನಂಗಡಿ ಠಾಣೆಯ ಮುಂದೆ ಸಾವಿರಕ್ಕೂ ಹೆಚ್ಚು ಜನ ಸೇರಿದ್ದು ಮುತ್ತಿಗೆ ರೀತಿಯಲ್ಲಿ ಸೇರಿದ್ದರು. ಇದೇ ವೇಳೆ, ಕಲ್ಲು ತೂರಾಟ ನಡೆದಿದ್ದು ಪೊಲೀಸರು ಲಾಠಿ ಬೀಸಿದ್ದಾರೆ.
ಸ್ಥಳಕ್ಕೆ ಬಂದೋಬಸ್ತ್ ತೆರಳಿದ್ದ ಬಂಟ್ವಾಳ ನಗರ ಠಾಣೆ ಎಸ್ಐ ಪ್ರಸನ್ನ ಮೇಲೆ ಚೂರಿ ಇರಿತ ಆಗಿದ್ದು ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಎಸ್ಐ ಉಮೇಶ್, ಮಹಿಳಾ ಎಸ್ಐ ಸೇರಿದಂತೆ ಹಲವು ಪೊಲೀಸರಿಗೆ ಕಲ್ಲಿನೇಟು ಬಿದ್ದು ಗಾಯಗೊಂಡಿದ್ದಾರೆ.
Tense moment created at Uppinangady in Mangalore PFI try to perform Namaz near Police station Lati Charged. 144 section has been imposed in Uppinanagdy. PFI was protesting since morning for the release of their members who were arrested in Stabbing case.
12-11-25 11:10 pm
Bangalore Correspondent
ಧರ್ಮಸ್ಥಳ ಶವ ಹೂತ ಪ್ರಕರಣದಲ್ಲಿ ಎಸ್ಐಟಿ ತನಿಖೆಯ ತಡ...
12-11-25 11:06 pm
ಯಾರೂ ಗೂಟ ಹೊಡೆದು ಇರಕ್ಕಾಗಲ್ಲ, ಬಿಹಾರ ಚುನಾವಣೆ ಟೈಮ...
12-11-25 09:03 pm
ವಿಮಾನ ನಿಲ್ದಾಣದಲ್ಲಿ ನಮಾಜ್ ; ಅವರು ಎಲ್ಲಾದ್ರೂ ಶ್ರ...
10-11-25 07:17 pm
54 ಹೆಕ್ಟೇರ್ ಅರಣ್ಯ ನಾಶ ಭೀತಿ ; ಶರಾವತಿ ಪಂಪ್ಡ್ ಸ್...
10-11-25 02:58 pm
12-11-25 02:54 pm
HK News Desk
ದೆಹಲಿ ಘಟನೆ, ಆತ್ಮಹತ್ಯಾ ಬಾಂಬರ್ ಆಗಿರಲಿಲ್ಲ, ಆಕಸ್ಮ...
11-11-25 10:56 pm
Mangaluru Kasaragod Highway: ಮಂಗಳೂರು- ಕಾಸರಗೋಡ...
11-11-25 10:20 pm
ಕೆಂಪುಕೋಟೆ ಕಾರು ಬ್ಲಾಸ್ಟ್ ಪ್ರಕರಣ ; ಜೈಶ್ ಉಗ್ರರ ಲ...
11-11-25 03:28 pm
ಐ-20 ಕಾರು ಕೆಂಪುಕೋಟೆ ಸಿಗ್ನಲ್ ನಲ್ಲಿದ್ದಾಗ ಬ್ಲಾಸ್...
10-11-25 11:07 pm
12-11-25 06:56 pm
Mangalore Correspondent
Ullal Dargah Committee: ಉಳ್ಳಾಲ ದರ್ಗಾ ಕಮಿಟಿಯಲ್...
11-11-25 10:42 pm
Bomb blast in New Delhi, High Alert in Dakshi...
11-11-25 10:15 pm
Bhagvati Prem Ship, Mangalore: ಸುರತ್ಕಲ್ ; ಮರಳ...
08-11-25 08:31 pm
ಬೆಂಗಳೂರು- ಮಂಗಳೂರು ಹೈಸ್ಪೀಡ್ ಕಾರಿಡಾರ್ ; ಶಿರಾಡ...
07-11-25 10:58 pm
12-11-25 12:32 pm
Mangalore Correspondent
ಬೆಳ್ತಂಗಡಿ ಶ್ರೀರಾಮ ಕ್ರೆಡಿಟ್ ಸೊಸೈಟಿಯಲ್ಲಿ ಭಾರೀ ಅ...
11-11-25 06:33 pm
Fraud Dream Deal Mangalore, KSRTC: ತಿಂಗಳಿಗೆ ಒ...
09-11-25 10:27 pm
ಬಹುಕೋಟಿ ವಂಚಕ ರೋಷನ್ ಸಲ್ದಾನಗೆ ಸೇರಿದ 2.85 ಕೋಟಿ ಮ...
09-11-25 03:50 pm
ಕೋಮುದ್ವೇಷದ ಕೊಲೆ ; ಪ್ರತೀಕಾರಕ್ಕೆ ಪ್ರಚೋದಿಸಿ ಇನ್...
08-11-25 11:15 pm