ಬ್ರೇಕಿಂಗ್ ನ್ಯೂಸ್
10-12-21 02:03 pm HK Desk news ಕರಾವಳಿ
ಮಂಗಳೂರು, ಡಿ.10 : ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯಿಂದ ವಿಧಾನ ಪರಿಷತ್ ದ್ವಿಸದಸ್ಯ ಸ್ಥಾನಕ್ಕೆ ಚುನಾವಣೆ ನಡೆದಿದ್ದು, ಎರಡೂ ಜಿಲ್ಲೆಗಳಲ್ಲಿ ಆಯಾ ಭಾಗದ ಸ್ಥಳೀಯಾಡಳಿತ ಕೇಂದ್ರಗಳಲ್ಲಿ ಬಿರುಸಿನ ಮತದಾನ ನಡೆದಿದೆ. ಮಂಗಳೂರಿನಲ್ಲಿ ಮಹಾನಗರ ಪಾಲಿಕೆಯ ಕಟ್ಟಡದಲ್ಲಿ ಎರಡು ಬೂತ್ ಗಳಲ್ಲಿ ಮತದಾನಕ್ಕೆ ವ್ಯವಸ್ಥೆ ಮಾಡಲಾಗಿತ್ತು. ಮಧ್ಯಾಹ್ನ ಒಂದು ಗಂಟೆ ಸುಮಾರಿಗೆ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯಲ್ಲಿ 97 ಶೇಕಡಾ ಮತದಾನ ಆಗಿದೆ.
ಮಹಾನಗರ ಪಾಲಿಕೆಯಲ್ಲಿ ಶಾಸಕರು, ಸಂಸದ ಮತ್ತು ಕಾರ್ಪೊರೇಟರುಗಳಿಗೆ ಮತದಾನದ ಅವಕಾಶ ನೀಡಲಾಗಿದ್ದರೆ, ಆಯಾ ಭಾಗದ ಶಾಸಕರು ಅಲ್ಲಿಯೇ ಪುರಸಭೆ, ನಗರಸಭೆಗಳಲ್ಲಿ ಮತದಾನಕ್ಕೆ ವ್ಯವಸ್ಥೆ ಮಾಡಲಾಗಿತ್ತು. ಮಂಗಳೂರು ಪಾಲಿಕೆಯಲ್ಲಿ ಶಾಸಕ ವೇದವ್ಯಾಸ ಕಾಮತ್, ಸಂಸದ ನಳಿನ್ ಕುಮಾರ್ ಬೆಳಗ್ಗೆಯೇ ಮತದಾನ ಮಾಡಿದ್ದಾರೆ. ಮಂಗಳೂರು ಕ್ಷೇತ್ರದ ಶಾಸಕ ಶಾಸಕ ಯು.ಟಿ.ಖಾದರ್ ಉಳ್ಳಾಲ ನಗರಸಭೆಯಲ್ಲಿ ಮತದಾನ ಮಾಡಿದ್ದಾರೆ.
ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯಲ್ಲಿ ಒಟ್ಟು 6040 ಮತದಾರರಿದ್ದು, 389 ಮತಗಟ್ಟೆಗಳನ್ನು ವ್ಯವಸ್ಥೆ ಮಾಡಲಾಗಿದೆ. ಬಿಜೆಪಿಯಿಂದ ಕೋಟ ಶ್ರೀನಿವಾಸ ಪೂಜಾರಿ ನಾಲ್ಕನೇ ಬಾರಿಗೆ ವಿಧಾನ ಪರಿಷತ್ ಸ್ಥಾನಕ್ಕೆ ಸ್ಪರ್ಧಿಸುತ್ತಿದ್ದಾರೆ. ಕಾಂಗ್ರೆಸ್ ನಲ್ಲಿ ಮಂಜುನಾಥ ಭಂಡಾರಿ ಮತ್ತು ಎಸ್ ಡಿಪಿಐ ಪಕ್ಷದಿಂದ ಶಾಫಿ ಬೆಳ್ಳಾರೆ ಸ್ಪರ್ಧಿಸುತ್ತಿದ್ದಾರೆ. ಕ್ಷೇತ್ರದಲ್ಲಿ ಎರಡು ಅಭ್ಯರ್ಥಿಗಳ ಆಯ್ಕೆ ನಡೆಯಲಿದ್ದು, ಸರಾಗವಾಗಿ ಬಿಜೆಪಿ ಮತ್ತು ಕಾಂಗ್ರೆಸ್ ಅಭ್ಯರ್ಥಿಗಳು ಗೆಲುವು ಸಾಧಿಸಲಿದ್ದಾರೆ. ನಾಮಪತ್ರ ಸಲ್ಲಿಸಿದ್ದ ಇತರ ಪಕ್ಷೇತರ ಸದಸ್ಯರು ಹಿಂಪಡೆದಿದ್ದು, ಇಬ್ಬರು ಪ್ರಮುಖ ಅಭ್ಯರ್ಥಿಗಳನ್ನು ಹೊರತುಪಡಿಸಿ ಎಸ್ ಡಿಪಿಐ ಅಭ್ಯರ್ಥಿ ಮಾತ್ರ ಕಣದಲ್ಲಿದ್ದರು.
ಅವಿರೋಧಕ್ಕೆ ತೊಡಕಾಯ್ತು ಒಬ್ಬರ ಸ್ಪರ್ಧೆ
ಎಸ್ ಡಿಪಿಐ ಅಭ್ಯರ್ಥಿಯ ಸ್ಪರ್ಧೆಯಿಂದಾಗಿ ಈ ಕ್ಷೇತ್ರದಲ್ಲಿ ಚುನಾವಣೆ ನಡೆಸಲಾಗಿದೆ. ಇಲ್ಲದೇ ಇರುತ್ತಿದ್ದರೆ, ನಿರಾಯಾಸವಾಗಿ ಅವಿರೋಧ ಆಯ್ಕೆ ನಡೆಯುತ್ತಿತ್ತು. ಚುನಾವಣೆ ನಡೆದರೂ, ಎಸ್ ಡಿಪಿಐ ಅಭ್ಯರ್ಥಿಯ ಸ್ಪರ್ಧೆ ಆಟಕ್ಕುಂಟು ಲೆಕ್ಕಕ್ಕಿಲ್ಲ ಎನ್ನುವಂತಿದೆ. ಹೀಗಾಗಿ ಇಂದಿನ ಚುನಾವಣೆ ನಾಮಕೇವಾಸ್ತೆ ಅಷ್ಟೇ ನಡೆದಿದೆ. ಯಾಕಂದ್ರೆ, ಎಸ್ ಡಿಪಿಐ ಪರ ಕೇವಲ 200 ಮತಗಳಿದ್ದು, ಸಹಜವಾಗಿ ಅತಿ ಹೆಚ್ಚು ಮತ ಪಡೆದ ಬಿಜೆಪಿ ಅಭ್ಯರ್ಥಿ ಮತ್ತು ಎರಡನೇ ಅತಿ ಹೆಚ್ಚು ಮತ ಪಡೆದ ಕಾಂಗ್ರೆಸ್ ಅಭ್ಯರ್ಥಿಯನ್ನು ಗೆದ್ದವರೆಂದು ಘೋಷಿಸಲಾಗುತ್ತದೆ. ಬಿಜೆಪಿ ಪರವಾಗಿ ಅಂದಾಜು 3500 ಮತಗಳಿದ್ದು, ಕಾಂಗ್ರೆಸ್ ಪರವಾಗಿ 1900 ಮತದಾರರಿದ್ದಾರೆ. 250ರಷ್ಟು ಪಕ್ಷೇತರ ಮತ್ತು ಕಮ್ಯುನಿಸ್ಟ್ ಸದಸ್ಯರಿದ್ದಾರೆ.
ಎಲ್ಲರಿಗೂ ಮತ ಹಾಕಲು ಅವಕಾಶ
ವಿಧಾನ ಪರಿಷತ್ತಿನಲ್ಲಿ ವಿಶೇಷ ಅಂದ್ರೆ, ಕಣದಲ್ಲಿರುವ ಎಲ್ಲರಿಗೂ ಮತಗಳನ್ನು ಹಾಕಲು ಅವಕಾಶ ಇರುತ್ತದೆ. ಆದರೆ, ಹೀಗೆ ಮತ ಹಾಕುವವರು ಒಂದನೇ ಪ್ರಾಶಸ್ತ್ಯ, ಎರಡನೇ ಪ್ರಾಶಸ್ತ್ಯ ಹೀಗೆ ಗುರುತಿಸಬೇಕಾಗುತ್ತದೆ. ಒಂದೇ ಮತವನ್ನೂ ಹಾಕುವುದಿದ್ದರೆ, ಆಯಾ ಅಭ್ಯರ್ಥಿಯ ಮುಂದೆ ಒಂದು ನಂಬರ್ ಅಥವಾ ರೋಮನ್ ಅಂಕೆಯಲ್ಲಿ ಗುರುತಿಸಬೇಕು. ಎರಡು, ಮೂರು ಅಭ್ಯರ್ಥಿಗಳಿಗೆ ಮತ ಹಾಕಿದರೂ, ಸ್ಪಷ್ಟವಾಗಿ ತಮ್ಮ ಪ್ರಾಶಸ್ತ್ಯವನ್ನು ನಮೂದಿಸದೇ ಇದ್ದರೆ ಅಂತಹ ಮತ ಅಸಿಂಧುವಾಗುತ್ತದೆ. ಸಾಮಾನ್ಯವಾಗಿ ಪ್ರಮುಖ ಪಕ್ಷಗಳು ತಮ್ಮ ಅಭ್ಯರ್ಥಿಗೆ ಮಾತ್ರ ಮತ ಹಾಕುವಂತೆ ಸೂಚನೆ ನೀಡಿರುತ್ತದೆ.
Polling has commenced today as part of the election process for the twin member Dakshina Kannada and Udupi local administrations constituency. MP Nalin Kumar Kateel, MLA Vedavyas Kamath, mayor Premananda Shetty and corporators cast their votes. Voting at Mangaluru City Corporation also was in progress. Social distancing guidelines were allegedly violated by all the voters at the polling center.
28-04-25 10:15 pm
HK News Desk
NIA Bangalore, Pahalgam Terror, Bharat Bhusha...
28-04-25 01:41 pm
CM Siddaramaiah, Janardhan Reddy, Pak War: ಸಿ...
27-04-25 09:22 pm
Pakistani Nationals Kalaburagi, Police Commis...
27-04-25 07:13 pm
Ex- ISRO chief, K Kasturirangan: ಎನ್ಇಪಿ ಶಿಕ್ಷ...
25-04-25 07:32 pm
28-04-25 06:52 pm
HK News Desk
ಪಾಕಿಸ್ತಾನದ ಶಾಂತಿ ಸಮಿತಿ ಕಚೇರಿ ಎದುರೇ ಬಾಂಬ್ ಸ್ಫೋ...
28-04-25 05:53 pm
ಪಾಕ್ ವಿರುದ್ಧ ಯುದ್ದಕ್ಕೆ ಕರೆ ನೀಡಿದ ಕಾಶ್ಮೀರ್ ಸಿಎ...
27-04-25 08:42 pm
Pak, Website Hacked, Indian Army : ಅಲ್ಲಾ ನಮ್ಮ...
27-04-25 07:38 pm
ಪಾಕ್ ಗಡಿಯಲ್ಲಿ ಯುದ್ಧ ಕಾರ್ಮೋಡ ; ಗಡಿ ಜಿಲ್ಲೆಗಳಲ್ಲ...
27-04-25 06:35 pm
28-04-25 11:41 am
Mangalore Correspondent
Mangalore, Terror Attack, Doctor Post: ಹೈಲ್ಯಾ...
27-04-25 11:09 pm
Murali krishna, puttur, FIR: ಪೆಟ್ರೋಲ್ ಪಂಪ್ ವ್...
27-04-25 06:25 pm
Vhp, Mangalore, Railway Exam, Janivara: ರೈಲ್ವ...
27-04-25 05:28 pm
Harish Poonja, U T Khader, Mangalore: ಹರೀಶ್ ಪ...
27-04-25 01:00 pm
28-04-25 11:39 am
Mangalore Correspondent
Shootout Bakrebail, Mangalore Crime: ಬಾಕ್ರಬೈಲ...
28-04-25 11:24 am
Mangalore crime, Murder, Kudupu: ಕುಡುಪು ಬಳಿಯಲ...
27-04-25 10:59 pm
Mangalore Crime, Sexual Harrasment: ಸರ್ಕಾರಿ ಸ...
24-04-25 12:58 pm
Ullal Gang Rape, Mangalore, Police: ಗ್ಯಾಂಗ್ ರ...
23-04-25 01:03 pm