ಬ್ರೇಕಿಂಗ್ ನ್ಯೂಸ್
21-11-21 10:11 pm Mangaluru Correspondent ಕರಾವಳಿ
ಮಂಗಳೂರು, ನ.21: ಕಿಡ್ನಿ ವೈಫಲ್ಯಕ್ಕೊಳಗಾಗಿ ಚಿಕಿತ್ಸೆಯಲ್ಲಿದ್ದ ಸಿಐಎಸ್ಎಫ್ ಡಾಗ್ ಸ್ಕ್ವಾಡಿನಲ್ಲಿ ಸದಸ್ಯಳಾಗಿದ್ದ ಬಾಂಬ್ ಪತ್ತೆ ದಳದ ಶ್ವಾನ ಇಂದು ಸಂಜೆ ಕಿಡ್ನಿ ವೈಫಲ್ಯದಿಂದ ಮೃತಪಟ್ಟಿದ್ದು ಸಿಐಎಸ್ಎಫ್ ಕಚೇರಿಯ ಹಳೆ ಏರ್ಪೋರ್ಟ್ ಆವರಣದಲ್ಲಿ ಗೌರವಯುತ ಅಂತ್ಯಕ್ರಿಯೆ ನಡೆಸಲಾಯಿತು.
ಲ್ಯಾಬ್ರಡಾರ್ ತಳಿಗೆ ಸೇರಿದ ಲೀನಾ ಹೆಸರಿನ ಈ ನಾಯಿಗೆ 8 ವರ್ಷ 9 ತಿಂಗಳಾಗಿತ್ತು. ಇದೇ ವರ್ಷ 2021ರ ಫೆ.5ರಂದು ನಾಯಿಗೆ ಅಝೋಟೆಮಿಕ್ ಕ್ರಾನಿಕ್ ಎನ್ನುವ ಕಿಡ್ನಿ ಸಂಬಂಧೀ ರೋಗ ಇರುವುದು ಕಂಡುಬಂದಿತ್ತು. ಬಳಿಕ ರೋಗದ ಗಂಭೀರತೆ ಬಗ್ಗೆ ವರದಿ ನೀಡಿದ್ದ ವೈದ್ಯರು ಅದನ್ನು ಏರ್ಪೋರ್ಟ್ ಸೇವೆಯಿಂದ ಮುಕ್ತಗೊಳಿಸಿ, ಚಿಕಿತ್ಸೆ ನೀಡಲು ಸೂಚಿಸಿದ್ದರು. ಅದರಂತೆ, ಕಳೆದ ಜೂನ್ 1ರಂದು ಅದನ್ನು ಸೇವೆಯಿಂದ ಮುಕ್ತಗೊಳಿಸಿ, ಆ ಜಾಗಕ್ಕೆ ಬದಲಿ ನುರಿತ ಶ್ವಾನವನ್ನು ತರಲಾಗಿತ್ತು. ರಾಂಚಿ ಡಿಟಿಎಸ್ ಕೇಂದ್ರದಲ್ಲಿ ಸ್ಫೋಟಕ ಪತ್ತೆ ಬಗ್ಗೆ 11ನೇ ಬ್ಯಾಚಿನಲ್ಲಿ ತರಬೇತಿ ಪಡೆದಿದ್ದ ಶ್ವಾನವನ್ನು ತಂದು, ಲೀನಾ ಜಾಗ ತುಂಬಲಾಗಿತ್ತು.



ಈ ನಡುವೆ, ಏರ್ಪೋರ್ಟ್ ಅಥಾರಿಟಿ ವತಿಯಿಂದ ಶ್ವಾನಕ್ಕೆ ಚಿಕಿತ್ಸೆ ಮತ್ತು ಸೂಕ್ತ ಆಹಾರವನ್ನು ನೀಡಲಾಗುತ್ತಿತ್ತು. ಪಶು ವೈದ್ಯರು ನಿಗಾ ಇಟ್ಟು ಚಿಕಿತ್ಸೆ ನೀಡುತ್ತಿದ್ದರು. ಆದರೆ, ನವೆಂಬರ್ 16ರಿಂದ ಶ್ವಾನ ಆಹಾರ ಸ್ವೀಕರಿಸುತ್ತಿರಲಿಲ್ಲ. ಚಿಕಿತ್ಸೆಗೂ ಸ್ಪಂದನೆ ನೀಡುತ್ತಿರಲಿಲ್ಲ. ಹೀಗಾಗಿ ಗ್ಲುಕೋಸ್ ನೀಡಿ ನಿಗಾ ವಹಿಸಲಾಗಿತ್ತು. ಇಂದು ಸಂಜೆ ನಾಲ್ಕು ಗಂಟೆಗೆ ಶ್ವಾನ ಚಿಕಿತ್ಸೆಗೆ ಸ್ಪಂದಿಸದೆ ಸಾವು ಕಂಡಿದೆ. ಸಿಐಎಸ್ಎಫ್ ವಿಭಾಗದ ಡಾಗ್ ಸ್ಕ್ವಾಡ್ ತಂಡ, ಹಳೆ ಏರ್ಪೋರ್ಟ್ ಆವರಣದಲ್ಲಿ ಸಕಲ ಗೌರವದೊಂದಿಗೆ ಅಂತ್ಯಕ್ರಿಯೆ ನೆರವೇರಿಸಿದೆ.
2020ರ ಜನವರಿ 20ರಂದು ಆದಿತ್ಯ ರಾವ್ ಎಂಬಾತ ಏರ್ಪೋರ್ಟ್ ಆವರಣದಲ್ಲಿ ಬಾಂಬ್ ಇಟ್ಟ ಸಂದರ್ಭದಲ್ಲಿ ಇದೇ ಶ್ವಾನ ಬಾಂಬ್ ಅನ್ನು ಪತ್ತೆ ಮಾಡಿತ್ತು. ಎರಡು ದಿನಗಳ ಬಳಿಕ ಆದಿತ್ಯ ರಾವ್ ಬೆಂಗಳೂರಿಗೆ ತೆರಳಿ, ಕಮಿಷನರ್ ಕಚೇರಿಯಲ್ಲಿ ಪೊಲೀಸರಿಗೆ ಶರಣಾಗಿದ್ದ. ಪ್ರಕರಣ ದೇಶದಲ್ಲಿ ಭಾರೀ ಸಂಚಲನ ಮೂಡಿಸಿತ್ತು.
Mangalore Airport Squad Dog Lina dies of Kidney Disease, officers pay tribute. Lina and joined 11th batch basic explosive course at DTS Ranchi. The last rite ceremony of dog Lina has been carried out as per procedure at unit line of ASG Mangalore.
17-09-26 04:13 pm
HK News Staffer
ಚಿತ್ರರಂಗದ ಸಾರ್ವಕಾಲಿಕ ಶ್ರೇಷ್ಠ ನಟ ಅನಂತನಾಗ್ ಗೆ '...
16-09-26 10:40 pm
Tulu Language, Shivraj Tangadagi: ತುಳುವಿಗೆ 2ನ...
16-09-26 01:51 pm
Pradeep Eshwar, Pratap Simha: ಪೊಲೀಸ್ ಠಾಣೆಗೆ...
15-09-26 09:13 pm
Imran Pasha, Pratap Simha: ನಿನ್ನಂತಹ ಒಂದು ಲಕ್...
15-09-26 04:46 pm
13-09-26 09:00 pm
HK News
80s ಫೋಟೋ ಟ್ರೆಂಡ್ಗೆ ಮಾರುಹೋಗಿದ್ದೀರಾ? ಹುಷಾರ್ ;...
12-09-26 01:10 pm
ಕಾಶ್ಮೀರಿ ಪಂಡಿತರಿಗೆ ಮತ್ತೆ ಬೆದರಿಕೆ ; ಉದ್ಯೋಗ ಬಿಟ...
10-09-26 01:23 pm
ನೇಪಾಳ ಪ್ರವಾಹ ; ಹತ್ತು ದಿನಗಳ ಬಳಿಕ ಜಲವಿದ್ಯುತ್ ಸು...
05-09-26 11:55 am
ಮುಂದಿನ ಒಂದು ವರ್ಷದಲ್ಲಿ ಒಂದು ಸಾವಿರ ವಿದ್ಯಾಭಾರತಿ...
04-09-26 08:14 pm
18-09-26 06:08 pm
HK News Staffer
Tulu second official language: ತುಳುನಾಡಿನ ದಶಕಗ...
18-09-26 04:46 pm
Dk Shivakumar, Mangalore, social media: ಸೋಶಿಯ...
18-09-26 04:11 pm
CM Dk Shivakumar, Mangalore: ಕದ್ರಿ ದೇವಸ್ಥಾನದಲ...
18-09-26 03:39 pm
Mangalore Jail Jammer, Lawyers Protest, CM, M...
18-09-26 11:30 am
17-09-26 02:22 pm
HK News Staffer
Bangalore Murder, Crime: ಪ್ರೀತಿಸಿ ಮದುವೆಯಾಗಿದ್...
17-09-26 01:56 pm
Bangalore kidnap, Crime: ಬೆಂಗಳೂರಿನಲ್ಲಿ ಶಾಕ್...
17-09-26 12:35 pm
Manglore Cyber crime, Stock Market: ಷೇರು ಮಾರ್...
17-09-26 11:45 am
ಬೆಳ್ತಂಗಡಿ; ಗೃಹಪ್ರವೇಶಕ್ಕೆ ಹೋದಾಗ ಮನೆಗೆ ಕನ್ನ, ₹1...
16-09-26 11:18 am