ಬ್ರೇಕಿಂಗ್ ನ್ಯೂಸ್
16-11-21 10:19 pm Mangaluru Correspondent ಕರಾವಳಿ
ಮಂಗಳೂರು, ನ.16: ತಾನೊಂದು ಬಗೆದರೆ, ವಿಧಿಯೊಂದು ಬಗೆಯುವುದಂತೆ. ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಿಂದ ಸ್ಥಳೀಯಾಡಳಿತ ಕ್ಷೇತ್ರದಿಂದ ವಿಧಾನ ಪರಿಷತ್ತಿಗೆ ನಡೆಯುವ ಚುನಾವಣೆ ಈ ಬಾರಿ ಯಾರೂ ಊಹಿಸದ ರೀತಿಯ ಕುತೂಹಲಕ್ಕೆ ಕಾರಣವಾಗಲಿದೆ. ಈಗಾಗ್ಲೇ ಸಹಕಾರಿ ಧುರೀಣ, ಎಸ್ಸಿಡಿಸಿಸಿ ಬ್ಯಾಂಕ್ ಅಧ್ಯಕ್ಷ ರಾಜೇಂದ್ರ ಕುಮಾರ್ ಸ್ಪರ್ಧಾ ಕಣಕ್ಕಿಳಿಯುವುದು ಖಾತ್ರಿಯಾಗಿದ್ದರೆ, ಇತ್ತ ತೀವ್ರ ಸಂಚಲನಕ್ಕೀಡಾಗಿದ್ದ ಕಾಂಗ್ರೆಸಿನಲ್ಲಿ ಠಕ್ಕರ್ ಕೊಡುವ ತಂತ್ರಗಾರಿಕೆ ನಡೆದಿದೆ.
ಕಾಂಗ್ರೆಸ್ ಕಡೆಯಿಂದಲೂ ಪ್ರಭಾವಿ ಉಮೇದುವಾರನ ಕಣಕ್ಕಿಳಿಸಲು ತಯಾರಿ ನಡೆದಿದೆ. ಪ್ರತಾಪಚಂದ್ರ ಶೆಟ್ಟಿಯಿಂದ ತೆರವಾಗುವ ಸ್ಥಾನಕ್ಕೆ ಕಾಂಗ್ರೆಸಿನಿಂದ ಮಂಜುನಾಥ ಭಂಡಾರಿ, ಕೃಪಾ ಅಮರ್ ಆಳ್ವ ಹೆಸರು ಪ್ರಬಲವಾಗಿ ಕೇಳಿಬಂದಿತ್ತು. ಆದರೆ, ಕೊನೆಕ್ಷಣದಲ್ಲಿ ಕುಂದಾಪುರ ಮೂಲದ ಪ್ರಭಾವಿ ಗುತ್ತಿಗೆದಾರ, ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಆಪ್ತ ಯು.ಬಿ. ಶೆಟ್ಟಿ ಅವರನ್ನು ಕಣಕ್ಕಿಳಿಸಲು ತಯಾರಿ ನಡೆದಿದೆ ಎನ್ನುವ ಮಾಹಿತಿ ಲಭಿಸಿದೆ. ಪ್ರತಾಪಚಂದ್ರ ಶೆಟ್ಟಿಯ ಸ್ಥಾನಕ್ಕೆ ಸುಲಭದಲ್ಲಿ ಸೀಟು ಭರ್ತಿಗೊಳಿಸಲು ಮಂಜುನಾಥ ಭಂಡಾರಿ ತಯಾರಿ ನಡೆಸಿದ್ದರು. ಇದಕ್ಕಾಗಿ ಎರಡು ತಿಂಗಳ ಮೊದಲೇ ಸಿದ್ಧತೆಯಲ್ಲಿಯೂ ತೊಡಗಿದ್ದರು. ಆದರೆ ಉಡುಪಿ ಬಿಜೆಪಿ ತಮ್ಮಲ್ಲಿದ್ದ ಕೋಟಾವನ್ನು ಕಳೆದುಕೊಳ್ಳಲು ತಯಾರಿಲ್ಲ. ಹಣಕಾಸಿನಲ್ಲಿ ಪ್ರಭಾವಿಯಾಗಿರುವ ಯು.ಬಿ. ಶೆಟ್ಟಿ ಹೆಸರನ್ನು ತೇಲಿಬಿಟ್ಟಿದ್ದು ಮಂಜುನಾಥ ಭಂಡಾರಿ ಹೆಸರು ಕೈಜಾರುವ ಸಾಧ್ಯತೆ ಕಂಡುಬಂದಿದೆ.
ವಾರದ ಹಿಂದೆ ದಿಢೀರ್ ಆಗಿ ರಾಜೇಂದ್ರ ಕುಮಾರ್ ಪಕ್ಷೇತರ ಸ್ಪರ್ಧಿಸುವ ಸೂಚನೆ ನೀಡಿದ್ದು ಕಾಂಗ್ರೆಸ್, ಬಿಜೆಪಿಯಲ್ಲಿ ನಡುಕ ಸೃಷ್ಟಿಸಿತ್ತು. ಯಾಕಂದ್ರೆ, ಎರಡು ಸ್ಥಾನಕ್ಕೆ ನಡೆಯುವ ಚುನಾವಣೆಯಲ್ಲಿ ಹಿಂದಿನಿಂದಲೂ ಬಿಜೆಪಿ ಮತ್ತು ಕಾಂಗ್ರೆಸ್ ಮಧ್ಯೆ ನೇರ ಸ್ಪರ್ಧೆ ಇತ್ತು. ಈ ಬಾರಿಯೂ ಬಿಜೆಪಿಯಿಂದ ಇಬ್ಬರು ಕಣಕ್ಕಿಳಿದರೂ, ಕಾಂಗ್ರೆಸ್ ಮತ್ತು ಬಿಜೆಪಿಯಿಂದ ಒಬ್ಬೊಬ್ಬರು ಗೆಲ್ಲುವುದು ಸುಲಭ ಎನ್ನುವ ಲೆಕ್ಕಾಚಾರ ಇತ್ತು. ಬಿಜೆಪಿಯಲ್ಲಿ ಅಂದಾಜು 3600 ಮತಗಳಿದ್ದು ಹೆಚ್ಚುವರಿಯಾಗಿ 1400 ಮತಗಳಿವೆ. ಕಾಂಗ್ರೆಸಿನಲ್ಲಿ ಒಂದು ಸ್ಥಾನ ಗೆಲ್ಲಬಹುದಾದಷ್ಟು 2200 ಮತಗಳಿದ್ದು, ಎರಡೂ ಕಡೆಯಿಂದ ಒಬ್ಬರು ಗೆಲ್ಲುವುದಕ್ಕೆ ಅಡ್ಡಿ ಇರಲಿಲ್ಲ.
ಆದರೆ, ಚುನಾವಣೆ ಘೋಷಣೆಯಾಗುತ್ತಲೇ ಸ್ಪರ್ಧಾ ಕಣ ಬದಲಾಗಿದ್ದು ರಾಜೇಂದ್ರ ಕುಮಾರ್ ಸ್ಪರ್ಧೆ ಎರಡೂ ಕಡೆಯ ಮತಗಳನ್ನು ವಿಭಜಿಸಲಿದೆ ಎಂದೇ ಭಾವಿಸಲಾಗುತ್ತಿದೆ. ರಾಜೇಂದ್ರ ಕುಮಾರ್ ದಿಢೀರ್ ಆಗಿ ಚುನಾವಣಾ ಕಣಕ್ಕಿಳಿದಿರುವುದರ ಹಿಂದೆ ಬಿಜೆಪಿ ಪ್ರಭಾವಿ ನಾಯಕರು ಕೆಲಸ ಮಾಡಿದ್ದಾರೆ ಎನ್ನುವ ಗುಮಾನಿಯೂ ಎದ್ದಿದೆ. ಬಿಜೆಪಿಯಲ್ಲಿ ಹೆಚ್ಚುವರಿ ಉಳಿಯುವ 1400 ಮತಗಳು ಅದರ ಜೊತೆಗೆ ಒಂದಷ್ಟು ಕಾಂಗ್ರೆಸ್ ಮತಗಳನ್ನು ಸೆಳೆದರೆ ಗೆಲುವು ಸುಲಭ ಎನ್ನುವುದನ್ನು ಕಿವಿ ಊದಿದ್ದಾರೆ ಎನ್ನಲಾಗುತ್ತಿದೆ. ಬಿಜೆಪಿಯಿಂದ ಈ ಹಿಂದೆ ಇಬ್ಬರನ್ನು ಕಣಕ್ಕಿಳಿಸುವುದು ಎಂದು ಹೇಳಲಾಗುತ್ತಿದ್ದರೂ, ಒಬ್ಬರನ್ನು ಮಾತ್ರ ಕಣಕ್ಕಿಳಿಸಿ ರಾಜೇಂದ್ರ ಕುಮಾರ್ ಗೆ ಬೆಂಬಲ ನೀಡುವುದೆಂಬ ಲೆಕ್ಕಾಚಾರ ಕೆಲವರಲ್ಲಿದೆ.
ಆದರೆ, ಬಿಜೆಪಿ ಒಳಗೆ ಈಗಾಗಲೇ ಇಬ್ಬರು ಕಣಕ್ಕಿಳಿಯುವ ಬಗ್ಗೆ ಸಿದ್ಧತೆ ನಡೆದಿದೆ. ಮೊದಲ ಅಭ್ಯರ್ಥಿಯಾಗಿ ಕೋಟ ಶ್ರೀನಿವಾಸ ಪೂಜಾರಿ ಅವರೇ ಕಣಕ್ಕಿಳಿಯಲಿದ್ದಾರೆ. ತಮ್ಮ ಆರು ವರ್ಷಗಳ ಅವಧಿ ಮುಗಿಯಲಿದ್ದು, ಅದೇ ಸ್ಥಾನಕ್ಕೆ ನಡೆಯುವ ಚುನಾವಣೆಯಲ್ಲಿ ಅವರೇ ಮತ್ತೆ ಸ್ಪರ್ಧೆ ನಡೆಸುವ ಸಾಧ್ಯತೆ ಹೆಚ್ಚಿದೆ. ಕಳೆದ ಎರಡು ಅವಧಿಯಲ್ಲಿ ಪರಿಷತ್ ಚುನಾವಣೆ ಗೆದ್ದಿರುವ ಕೋಟ ಶ್ರೀನಿವಾಸ ಪೂಜಾರಿ ಹಾಲಿ ಸಚಿವರು ಮತ್ತು ವಿಧಾನ ಪರಿಷತ್ತಿನಲ್ಲಿ ಸಭಾ ನಾಯಕರೂ ಆಗಿದ್ದಾರೆ. ಪಂಚಾಯತ್ ರಾಜ್ ವ್ಯವಸ್ಥೆ ಬಗ್ಗೆ ಆಳ ಅನುಭವ ಹೊಂದಿರುವ ಮತ್ತು ಪರಿಷತ್ತಿನಲ್ಲಿ ಹಿರಿಯ ನಾಯಕರ ಅಗತ್ಯ ಹೊಂದಿರುವ ಹಿನ್ನೆಲೆಯಲ್ಲಿ ಅವರನ್ನು ಉಳಿಸಿಕೊಳ್ಳುವ ಚಿಂತನೆ ಪಕ್ಷದ ನಾಯಕರಲ್ಲಿದೆ.
ಸೋತರೂ, ಗೆದ್ದರೂ ಎರಡು ಸ್ಥಾನ ಇರುವ ಕಡೆ ಬಿಜೆಪಿಯಿಂದ ಎರಡನೇ ಅಭ್ಯರ್ಥಿಯನ್ನು ಇಳಿಸಬೇಕು ಎಂಬ ಚಿಂತನೆ ರಾಜ್ಯ ಬಿಜೆಪಿಯಲ್ಲಿದೆ. ಈಗಾಗ್ಲೇ ಎರಡನೇ ಅಭ್ಯರ್ಥಿಯಾಗಿ ಕಣಕ್ಕಿಳಿಯಲು ಮೂವರು ಭಾರೀ ಕಸರತ್ತು ನಡೆಸುತ್ತಿದ್ದಾರೆ. ಉಡುಪಿ ಜಿಲ್ಲೆಯ ಹಿರಿಯ ನಾಯಕ ಉದಯಕುಮಾರ್ ಶೆಟ್ಟಿ, ಮಂಗಳೂರಿನ ಮಾಜಿ ಎಂಎಲ್ಸಿ ಮೋನಪ್ಪ ಭಂಡಾರಿ ಮತ್ತು ವಿಕಾಸ್ ಪುತ್ತೂರು ಸ್ಪರ್ಧಾ ಕಣಕ್ಕಿಳಿಯುವ ಬಗ್ಗೆ ಲಾಬಿ ನಡೆಸುತ್ತಿದ್ದಾರೆ. ಈ ಮೂವರಲ್ಲಿ ಒಬ್ಬರನ್ನು ಕಣಕ್ಕಿಳಿಸಬೇಕೆಂದು ರಾಜ್ಯ ಬಿಜೆಪಿ ಚಿಂತನೆ ಇದ್ದರೂ, ಕೆಲವು ಪ್ರಭಾವಿಗಳು ಎರಡನೇ ಅಭ್ಯರ್ಥಿ ಕಣಕ್ಕಿಳಿಸದೇ ರಾಜೇಂದ್ರ ಕುಮಾರ್ ಪರ ನಿಲ್ಲಲು ಒಲವು ಹೊಂದಿದ್ದಾರೆ.
ಸ್ಪರ್ಧಾ ಕಣದಲ್ಲಿ ಹಣದ ಹೊಳೆ ಸಾಧ್ಯತೆ
ರಾಜೇಂದ್ರ ಕುಮಾರ್ ಮತ್ತು ಕುಂದಾಪುರದ ಯು.ಬಿ.ಶೆಟ್ಟಿ ಸ್ಪರ್ಧಾ ಕಣಕ್ಕಿಳಿದರೆ, ಕರಾವಳಿಯ ಪರಿಷತ್ ಚುನಾವಣೆ ಈ ಬಾರಿ ತೀವ್ರ ಪೈಪೋಟಿಗೆ ಕಾರಣವಾಗಲಿದೆ. ಪರಿಷತ್ ಸ್ಥಾನ ಗೆಲ್ಲಲು ಕೇವಲ 2200 ಮತಗಳಷ್ಟೇ ಬೇಕಾಗುವುದರಿಂದ ಇದನ್ನು ಖರೀದಿ ಮಾಡಲು ಹಣ ಸುರಿಯಲಿದ್ದಾರೆ ಎಂಬ ಮಾತುಗಳು ಹರಿದಾಡುತ್ತಿವೆ. ನ.23 ನಾಮಪತ್ರ ಸಲ್ಲಿಕೆಗೆ ಕೊನೆ ದಿನವಾಗಿದ್ದು, ಅದಕ್ಕೂ ಮುನ್ನ ಪರಿಷತ್ ಕಣದ ಚಿತ್ರಣ ಲಭಿಸಲಿದೆ. ಇಬ್ಬರು ಪ್ರಭಾವಿಗಳ ಸ್ಪರ್ಧೆಯಿಂದಾಗಿ ದಕ್ಷಿಣ ಕನ್ನಡ ಜಿಲ್ಲೆಯ ಸ್ಪರ್ಧಾ ಕಣ ತೀವ್ರ ಸಂಚಲನ ಸೃಷ್ಟಿಸಲಿದೆ. ಅಷ್ಟೇ ಅಲ್ಲ, ಇವರಿಬ್ಬರ ಭರಾಟೆಯಲ್ಲಿ ಸರಳ ಜೀವಿ ಕೋಟ ಶ್ರೀನಿವಾಸ ಪೂಜಾರಿ ಸ್ಪರ್ಧೆ ಗೌಣವಾದರೂ ಅಚ್ಚರಿಯಿಲ್ಲ.
ಪರಿಷತ್ ಚುನಾವಣೆ ; ಸಹಕಾರಿ ಧುರೀಣ ರಾಜೇಂದ್ರ ಕುಮಾರ್ ಪಕ್ಷೇತರ ಸ್ಪರ್ಧೆಗೆ ಒಲವು, ಕಾಂಗ್ರೆಸ್, ಬಿಜೆಪಿಯಲ್ಲಿ ಸಂಚಲನ !
Cooperative sector expert M.N. Rajendra Kumar who is contesting the elections to the State Legislative Council from the local authorities constituencies has got a tough competitor as Congress plans to get DK Shivakumar close Aide U B Sheety against him into the field to contest.
24-04-25 10:13 pm
HK News Desk
Terror Attack, Bharat Bhushan wife: "ಸಣ್ಣ ಮಗು...
24-04-25 06:39 pm
Kalaburagi Accident: ಕಲಬುರಗಿ; ನಾಯಿಯ ಪ್ರಾಣ ಕಾಪ...
24-04-25 04:56 pm
CM Siddaramaiah, DK Shivakumar, Threat Mail:...
23-04-25 10:49 pm
Cm Siddaramaiah, Pahalgam Attack: ಉಗ್ರರ ದಾಳಿಯ...
23-04-25 08:04 pm
24-04-25 09:00 pm
HK News Desk
ಭಯೋತ್ಪಾದನೆ ಕ್ಯಾನ್ಸರ್ ಇದ್ದಂತೆ, ಇಸ್ಲಾಮಿಗೆ ವಿರುದ...
24-04-25 04:59 pm
Pahalgam terror attack: ಉಗ್ರರು ಕನಸಿನಲ್ಲೂ ಊಹಿಸ...
24-04-25 04:21 pm
Robert Vadra, Pahalgam terror attack: ಸರ್ಕಾರ...
24-04-25 01:58 pm
India Pak News: ಭಾರತ- ಪಾಕ್ ಸಂಬಂಧಕ್ಕೆ ಬ್ರೇಕ್ ;...
24-04-25 12:46 pm
24-04-25 11:08 pm
Mangalore Correspondent
Pahalgam terror attack, udupi Vishwaprasanna...
23-04-25 10:23 pm
ಜಾತ್ಯತೀತರು ಉಗ್ರರಿಗೆ ಧರ್ಮ ಇಲ್ಲ ಎನ್ನುತ್ತಿದ್ದರು,...
23-04-25 09:45 pm
Terror Attack, Mangalore Mp, Brijesh Chowta:...
23-04-25 09:36 pm
Bearys Group, Bearys Turning Point mall, Dera...
23-04-25 09:23 pm
24-04-25 12:58 pm
Mangaluru Correspondent
Ullal Gang Rape, Mangalore, Police: ಗ್ಯಾಂಗ್ ರ...
23-04-25 01:03 pm
Shivamogga man killed in Pahalgam attack: ಕಾಶ...
22-04-25 07:37 pm
IPS Om Prakash Murder, Update: ನಿವೃತ್ತ ಡಿಜಿಪಿ...
22-04-25 03:26 pm
Om Prakash IPS Murder, Wife arrest: ನಿವೃತ್ತ ಡ...
21-04-25 01:03 pm