ಬ್ರೇಕಿಂಗ್ ನ್ಯೂಸ್
14-11-21 10:35 pm Mangaluru Correspondent ಕರಾವಳಿ
ಮಂಗಳೂರು, ನ.14: ಇತ್ತೀಚೆಗೆ ನಗರದ ಬಳ್ಳಾಲ್ ಬಾಗ್ ನಲ್ಲಿ ನಡೆದಿದ್ದ ಪೊಲೀಸರ ಮೇಲೆ ಹಲ್ಲೆ, ಎರಡು ಸಂಘಟನೆಗಳ ಕಾರ್ಯಕರ್ತರ ನಡುವಿನ ದಾಂಧಲೆ ಕೃತ್ಯ ಈಗ ಹಿಂದು – ಮುಸ್ಲಿಂ ದ್ವೇಷಕ್ಕೆ ತಿರುಗುವಂತಾಗಿದೆ. ಘಟನೆಯಲ್ಲಿ ಕುದ್ರೋಳಿಯ ಮುಸ್ಲಿಂ ಯುವಕರು ಬಿರುವೆರ್ ಕುಡ್ಲದ ಸಂಘಟನೆ ಪರವಾಗಿ ಬಂದು ಬಳ್ಳಾಲ್ ಬಾಗ್ ನಲ್ಲಿ ಹಿಂದುಗಳ ಮೇಲೆ ಹಲ್ಲೆ ನಡೆಸಿದ್ದಾರೆ ಎನ್ನುವುದು ಹಿಂದು ಸಂಘಟನೆಗಳ ಆರೋಪ.
ಹೀಗಾಗಿ ಹಲ್ಲೆ ಕೃತ್ಯವನ್ನು ಖಂಡಿಸಿ ಹಿಂದು ಸಂಘಟನೆಗಳ ವತಿಯಿಂದ ಭಾನುವಾರ ಸಂಜೆ ಬಳ್ಳಾಲ್ ಬಾಗ್ ಸರ್ಕಲ್ ನಲ್ಲಿ ಪ್ರತಿಭಟನಾ ಕಾರ್ಯಕ್ರಮ ನಡೆಸಲಾಗಿದೆ. ಪ್ರತಿಭಟನಾ ಕಾರ್ಯಕ್ರಮದಲ್ಲಿ ಮಾತನಾಡಿದ ವಿಶ್ವ ಹಿಂದು ಪರಿಷತ್ ವಿಭಾಗ ಕಾರ್ಯದರ್ಶಿ ಶರಣ್ ಪಂಪ್ವೆಲ್, ನೇರವಾಗಿ ಬಿರುವೆರ್ ಕುಡ್ಲ ಸಂಘಟನೆಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಹಲ್ಲೆ ಕೃತ್ಯದಲ್ಲಿ ಕುದ್ರೋಳಿಯ ಮುಸ್ಲಿಂ ಯುವಕರು ಪಾಲ್ಗೊಂಡಿದ್ದಾರೆ. ಕಳೆದ ಬಾರಿ ಪಿಎಫ್ಐ ಪರವಾಗಿ ಕಮಿಷನರ್ ಕಚೇರಿ ಮುಂದೆ ಪ್ರತಿಭಟನೆ ನಡೆಸಿ, ಪೊಲೀಸರಿಗೆ ಮುತ್ತಿಗೆ ಹಾಕಲು ಯತ್ನಿಸಿದ ಘಟನೆಯಲ್ಲಿ ಪಾಲ್ಗೊಂಡಿದ್ದವರು ಈ ಹಲ್ಲೆ ಕೃತ್ಯದಲ್ಲಿ ಭಾಗಿಯಾಗಿದ್ದಾರೆ. ಇಂಥ ಮತೀಯ ಸಂಘಟನೆಗಳ ಯುವಕರನ್ನು ಇಟ್ಟುಕೊಂಡು ಬಿರುವೆರ್ ಕುಡ್ಲ ಮಂಗಳೂರಿನಲ್ಲಿ ಏನು ಮಾಡಲು ಹೊರಟಿದೆ ಎಂದು ಶರಣ್ ಪಂಪ್ವೆಲ್ ಪ್ರಶ್ನೆ ಮಾಡಿದ್ದಾರೆ.
ಈ ಘಟನೆ ಬಗ್ಗೆ ಪೊಲೀಸ್ ಆಯುಕ್ತರು ಅವರೊಳಗಿನ ವೈಯಕ್ತಿಕ ದ್ವೇಷ ಎಂದು ಹೇಳಿದ್ದಾರೆ. ವೈಯಕ್ತಿಕ ದ್ವೇಷ ಆಗಿದ್ದರೆ, ಸಂಘಟನೆಗಳ ನಾಯಕರೇ ಬಂದು ಮಾತನಾಡಿಕೊಂಡು ಪರಿಹಾರ ಮಾಡಿಕೊಳ್ಳಲಿ. ಅದು ಬಿಟ್ಟು ಮುಸ್ಲಿಂ ಯುವಕರನ್ನು ಕಳಿಸಿಕೊಟ್ಟು ಹಿಂದು ಯುವಕರ ಮೇಲೆ ಕೈಮಾಡಿಸಿದ್ದಾರೆ. ಬಿರುವೆರ್ ಕುಡ್ಲ ಒಂದು ಜಾತಿ ಹೆಸರಲ್ಲಿ ಬಂದಿರುವ ಸಂಘಟನೆ. ಶಾರದೋತ್ಸವ, ಹುಲಿ ನೃತ್ಯ, ನವರಾತ್ರಿ ಕಾರ್ಯಕ್ರಮಗಳಲ್ಲಿ ಉತ್ತಮ ಕಾರ್ಯ ನಡೆಸಿದ್ದಾರೆ. ಹಾಗೆಂದು ಸಮಾಜವಿರೋಧಿ, ದೇಶದ್ರೋಹಿ ಯುವಕರನ್ನು ತಮ್ಮಲ್ಲಿ ಇಟ್ಟುಕೊಂಡು ಸಂಘಟನೆ ನಡೆಸುವುದು ಎಷ್ಟು ಸರಿ ಎಂದು ಯೋಚನೆ ಮಾಡಿಕೊಳ್ಳಿ. ನಿಮ್ಮ ಸಂಘಟನೆಯ ಬಗ್ಗೆ ದ್ವೇಷ ಇಲ್ಲ. ಜಾತಿಯ ಹೆಸರಿನಲ್ಲಿ ಸಂಘಟನೆ ನಡೆಸುತ್ತೀರಿ. ನೀವು ಸಂಘಟನೆ ಹೆಸರಲ್ಲಿ ಹಲ್ಲೆ ನಡೆಸಿದ್ದರೆ, ಹಲ್ಲೆಗೊಳಗಾದವರಲ್ಲಿ ಬಿಲ್ಲವರಿದ್ದರು, ಇತರ ಜಾತಿಯವರು ಇದ್ದರು. ಎಲ್ಲರೂ ಹಿಂದುಗಳೇ ಆಗಿದ್ದರು ಅನ್ನುವುದನ್ನು ಗಮನಿಸಿ.
ಆದರೆ ನೀವು ಮುಸ್ಲಿಮರ ಮೂಲಕ ಹಿಂದುಗಳಿಗೆ ಹಲ್ಲೆ ನಡೆಸಿದ್ದೀರಿ. ನೀವು ಹಿಂದು ವಿರೋಧಿ ಕೆಲಸ ಮಾಡಬೇಡಿ. ಹಿಂದುತ್ವ ಬಿಟ್ಟು ನೀವು ಸಂಘಟನೆ ಮಾಡಬೇಡಿ. ಹೀಗೆ ಮಾಡಿದರೆ ನಿಮಗೆ ಭವಿಷ್ಯದಲ್ಲಿ ಕಾರ್ಯಕರ್ತರು ಸಿಗಲಿಕ್ಕಿಲ್ಲ. ಮುಸ್ಲಿಮರಿಗೆ ತಮ್ಮ ಇಸ್ಲಾಮ್ ಮಾತ್ರ ಪವಿತ್ರ. ಉಳಿದೆಲ್ಲವೂ ನಗಣ್ಯ. ಹಾಗಾಗಿ ಅವರು ಯಾವುದೇ ಸಂಘಟನೆಯಲ್ಲಿ ಸೇರಿಕೊಂಡು ಯಾವ ಕೃತ್ಯ ನಡೆಸುವುದಕ್ಕೂ ಹೇಸಲ್ಲ. ನಾವು ಈ ಬಳ್ಳಾಲ್ ಬಾಗ್ ಪರಿಸರದಲ್ಲಿ ಮುಸ್ಲಿಮರ ಯಾವುದೇ ಕೃತ್ಯಗಳಿಗೆ ಆಸ್ಪದ ಕೊಡುವುದಿಲ್ಲ. ಈ ಕೃತ್ಯವನ್ನು ಖಂಡಿಸುತ್ತೇವೆ. ಕೃತ್ಯದಲ್ಲಿ ಇನ್ನೂ ಯಾರೆಲ್ಲ ಇದ್ದಾರೆ, ಎಲ್ಲರನ್ನೂ ಬಂಧಿಸಿ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಶರಣ್ ಪಂಪ್ವೆಲ್ ಆಗ್ರಹಿಸಿದ್ದಾರೆ.
ಬಳ್ಳಾಲ್ ಬಾಗ್ ನಲ್ಲಿ ಎರಡು ತಂಡಗಳ ಬೀದಿಕಾಳಗ ; ಬರ್ಕೆ ಪೊಲೀಸರ ಮೇಲೂ ಹಲ್ಲೆ ! ಏಳು ಮಂದಿ ಪೊಲೀಸ್ ವಶಕ್ಕೆ
Mangalore Biruver Kudla supporting Muslims is intolerable slams VHP Sharan pumpwell.
04-07-25 10:44 pm
HK News Desk
Heart attack news, Karnataka: ರಾಜ್ಯದಲ್ಲಿ ಹೃದಯ...
04-07-25 10:18 pm
ಮದುವೆಯಾಗದೇ ಅವಳಿ ಮಕ್ಕಳಿಗೆ ಜನ್ಮ ನೀಡಲಿದ್ದಾರೆ ನಟಿ...
04-07-25 06:52 pm
Corruption, SP Srinath Joshi, Lokayukta: ಹಣಕ್...
04-07-25 05:29 pm
ASP Bharamani, CM Siddaramaiah, Police: ಎಎಸ್...
03-07-25 05:24 pm
02-07-25 11:05 pm
HK News Desk
Adult Film Star Kylie Page Death: ನೀಲಿ ಚಿತ್ರ...
02-07-25 05:31 pm
ಹೈದ್ರಾಬಾದಿನಲ್ಲಿ ಸಿಗಾಚಿ ಇಂಡಸ್ಟ್ರೀಸ್ ಫಾರ್ಮಾ ಫ್ಯ...
01-07-25 08:57 pm
ಸುಟ್ಟರೂ ಬುದ್ಧಿ ಕಲಿಯದ ಪಾಕಿಸ್ತಾನ ; ಆಪರೇಶನ್ ಸಿಂಧ...
29-06-25 11:13 am
IPS Officer Parag Jain: ಭಾರತದ ಗುಪ್ತಚರ ಸಂಸ್ಥೆ...
28-06-25 10:14 pm
05-07-25 05:16 pm
Mangalore Correspondent
Ivan Dsouza, Mangaluru: ಮಂಗಳೂರು ಬ್ರಾಂಡ್ ನೇಮ್,...
05-07-25 04:19 pm
MLA Vedavyas Kamath: ಸೌತ್ ಕೆನರಾ ಬ್ರಿಟಿಷರ ಹೆಸರ...
05-07-25 02:32 pm
Hindu Jagarana Vedike, Moodbidri, Obscene vid...
05-07-25 12:56 pm
Mangalore FIR, Dharmasthala, Criminal Activit...
04-07-25 10:54 pm
05-07-25 11:04 pm
HK News Desk
Puttur News, Girl Pregnant, Father Arrest: ಸಹ...
05-07-25 09:06 pm
Puttur, Pregnant, Arrest, Jagannivasa Rao: ಸಹ...
05-07-25 01:20 pm
Bangalore Murder, Crime, Wife: ಲಕ್ಷ ಲಕ್ಷ ಸಂಬಳ...
04-07-25 08:56 pm
Praveen Nettaru, NIA Arrest, Abdul Rahiman; ಪ...
04-07-25 06:21 pm