ಬ್ರೇಕಿಂಗ್ ನ್ಯೂಸ್
10-11-21 06:05 pm Headline Karnataka News Network ಕರಾವಳಿ
ಮಂಗಳೂರು, ನ.10: ಮೂಲ್ಕಿ ಠಾಣೆ ವ್ಯಾಪ್ತಿಯ ಹಳೆಯಂಗಡಿ ಪೇಟೆಯಲ್ಲಿ ಮೀನು ಮಾರಾಟ ವಿಚಾರದ ಜಟಾಪಟಿ ಈಗ ಹಿಂದು- ಮುಸ್ಲಿಂ ದ್ವೇಷಕ್ಕೆ ಕಾರಣವಾಗಿದೆ. ಕಳೆದ ಒಂದು ತಿಂಗಳಿಂದ ಜಟಾಪಟಿ ನಡೆಯುತ್ತಿದ್ದು, ಈಗ ಪೊಲೀಸರೇ ಬಂದು ಮೀನು ಮಾರಾಟಕ್ಕೆ ಸೆಕ್ಯುರಿಟಿ ನಿಲ್ಲುವ ಸ್ಥಿತಿ ಎದುರಾಗಿದೆ.
ಹಳೆಯಂಗಡಿ ಜಂಕ್ಷನ್ನಲ್ಲೇ ಮೀನು ಮಾರುಕಟ್ಟೆ ಸಂಕೀರ್ಣ ಇತ್ತು. ಆದರೆ, ಮಾರುಕಟ್ಟೆ ಕಟ್ಟಡ ಅಜೀರ್ಣಾವಸ್ಥೆಯಲ್ಲಿದ್ದ ಕಾರಣ ತಿಂಗಳ ಹಿಂದೆ ಅದನ್ನು ಪಂಚಾಯತ್ ವತಿಯಿಂದ ನೆಲಸಮ ಮಾಡಲಾಗಿತ್ತು. ಬದಲಿಗೆ, ಹೊಸ ಕಟ್ಟಡವನ್ನು ಶೀಘ್ರದಲ್ಲೇ ಮಾಡಿಕೊಡುವುದಾಗಿ ಹೇಳಿದ್ದರು. ಅಲ್ಲಿ ಮೀನು ಮಾರುತ್ತಿದ್ದವರಿಗೆ ತಾತ್ಕಾಲಿಕ ನೆಲೆಯಲ್ಲಿ ಹಳೆಯಂಗಡಿ ಬಸ್ ನಿಲ್ದಾಣದ ಬಳಿಯಲ್ಲೇ ವ್ಯವಸ್ಥೆ ಮಾಡಲಾಗಿತ್ತು.
ಆದರೆ ಯಾವುದೇ ಶೆಡ್ ನಿರ್ಮಿಸದೆ ಹೊರಭಾಗದಲ್ಲಿಯೇ ಮೊಗವೀರ ಮಹಿಳೆಯರು ಮೀನು ಮಾರಾಟ ಮಾಡುತ್ತಿದ್ದರು. ಇದೇ ವೇಳೆ, ಮುಸ್ಲಿಮ್ ಸಮುದಾಯದ ಯುವಕರು ಕೂಡ ಹಳೆಯಂಗಡಿ ಪೇಟೆಯಲ್ಲಿ ಅಲ್ಲಲ್ಲಿ ಗಾಡಿ ನಿಲ್ಲಿಸಿ, ಮೀನು ಮಾರಾಟಕ್ಕೆ ಇಳಿದಿದ್ದರು. ಇದೇ ವಿಚಾರ ಮೀನುಗಾರ ಮಹಿಳೆಯರು ಮತ್ತು ಮುಸ್ಲಿಮ್ ಯುವಕರ ನಡುವೆ ಜಟಾಪಟಿಗೆ ಕಾರಣವಾಗಿದ್ದು, ಮುಸ್ಲಿಂ ಯುವಕರು ಇಲ್ಲಿ ಬಂದು ಮೀನು ಮಾರಾಟ ಮಾಡಬಾರದು ಎಂದು ಮಹಿಳೆಯರು ತಗಾದೆ ಎತ್ತಿದ್ದಾರೆ. ಆದರೆ, ಯುವಕರು ಮಹಿಳೆಯರ ವಿರೋಧವನ್ನು ಲೆಕ್ಕಿಸಿಲ್ಲ. ನಾನು ಮೀನು ಮಾರಬಾರದು ಎಂದು ನೀವು ಹೇಗೆ ಹೇಳುತ್ತೀರಿ ಎಂದು ಮರು ಪ್ರಶ್ನೆ ಹಾಕಿದ್ದಾರೆ.
ಈ ಬಗ್ಗೆ ಮೂಲ್ಕಿ ಪೊಲೀಸ್ ಠಾಣೆ ಮತ್ತು ಹಳೆಯಂಗಡಿ ಪಂಚಾಯತಿಗೂ ದೂರು ನೀಡಲಾಗಿದೆ. ಅಧಿಕಾರಿಗಳು ಬಂದು ಎರಡೂ ಕಡೆಯ ಮೀನುಗಾರರಿಗೆ ಜೋರು ಮಾಡಿದ್ದಾರೆ. ಆದರೆ, ಮುಸ್ಲಿಂ ಯುವಕರು ತಮ್ಮನ್ನು ಮೀನು ಮಾರಬಾರದೆಂದು ಹೇಳಲು ನಿಮಗೆ ರೈಟ್ ಇಲ್ಲವೆಂದು ಪೊಲೀಸರ ಬಳಿಯೂ ರಂಪ ತೆಗೆದಿದ್ದಾರೆ. ಹೀಗಾಗಿ ಎರಡೂ ಕೋಮಿನ ನಡುವೆ ಮೀನು ಮಾರಾಟದ ವಿಚಾರ ವೈಷಮ್ಯಕ್ಕೆ ಕಾರಣವಾಗಿದೆ.
ಇದಲ್ಲದೆ, ಹಳೆಯಂಗಡಿ ಹಳೆ ಮಾರುಕಟ್ಟೆಯಲ್ಲಿ ಹಿಂದೆ ಇದ್ದ ಕೋಳಿ ಅಂಗಡಿಗಳೂ ಬಂದ್ ಆಗಿವೆ. ಆನಂತರ ಪರಿಸರದ ಇತರೇ ಅಂಗಡಿಗಳು, ಮನೆಗಳಲ್ಲಿಯೇ ಕೋಳಿಯನ್ನು ಮಾಂಸ ಮಾಡಿ ಮಾರಾಟ ಮಾಡುತ್ತಿದ್ದಾರೆ. ಪಂಚಾಯತ್ ಲೈಸನ್ಸ್ ಇಲ್ಲದೆ ಮನೆಯಲ್ಲಿಯೇ ಕೋಳಿ ಮಾಂಸ ಮಾಡುವುದು, ಮಾರಾಟ ಮಾಡುವಂತಿಲ್ಲ. ಹಾಗಿದ್ದರೂ, ಈ ಬಗ್ಗೆ ಪಂಚಾಯತ್ ಅಧಿಕಾರಿಗಳು ಕ್ರಮ ಕೈಗೊಂಡಿಲ್ಲ ಎನ್ನುವ ದೂರನ್ನು ಸ್ಥಳೀಯರು ತಿಳಿಸಿದ್ದಾರೆ.
ಇದಲ್ಲದೆ, ಹಳೆಯಂಗಡಿ ಪೇಟೆಯಲ್ಲಿ ಪಂಚಾಯತ್ ಪರವಾನಗಿ ಇಲ್ಲದೆ ಕೋಳಿ ಅಂಗಡಿಗಳನ್ನು ನಡೆಸಲಾಗುತ್ತಿದೆ ಎಂಬ ಆರೋಪವನ್ನೂ ಸ್ಥಳೀಯರು ಮಾಡಿದ್ದಾರೆ. ಕೋಳಿ ಮಾಂಸದ ಅಂಗಡಿ ನಡೆಸಲು ಸ್ಥಳೀಯ ಪಂಚಾಯತ್ ಪರವಾನಗಿ ಅಗತ್ಯವಿರುತ್ತದೆ. ಇದನ್ನು ಪಡೆಯದೆ ಕೆಲವರು ತಾತ್ಕಾಲಿಕ ವ್ಯವಸ್ಥೆಯಲ್ಲಿ ಕೋಳಿ ವ್ಯಾಪಾರ ನಡೆಸುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿದೆ.
Mangalore Haleangadi dispute erupts between Fishermen over selling Fish between Inter religion faith. People allege illegal shops being opened at Houses.
24-04-25 10:13 pm
HK News Desk
Terror Attack, Bharat Bhushan wife: "ಸಣ್ಣ ಮಗು...
24-04-25 06:39 pm
Kalaburagi Accident: ಕಲಬುರಗಿ; ನಾಯಿಯ ಪ್ರಾಣ ಕಾಪ...
24-04-25 04:56 pm
CM Siddaramaiah, DK Shivakumar, Threat Mail:...
23-04-25 10:49 pm
Cm Siddaramaiah, Pahalgam Attack: ಉಗ್ರರ ದಾಳಿಯ...
23-04-25 08:04 pm
24-04-25 09:00 pm
HK News Desk
ಭಯೋತ್ಪಾದನೆ ಕ್ಯಾನ್ಸರ್ ಇದ್ದಂತೆ, ಇಸ್ಲಾಮಿಗೆ ವಿರುದ...
24-04-25 04:59 pm
Pahalgam terror attack: ಉಗ್ರರು ಕನಸಿನಲ್ಲೂ ಊಹಿಸ...
24-04-25 04:21 pm
Robert Vadra, Pahalgam terror attack: ಸರ್ಕಾರ...
24-04-25 01:58 pm
India Pak News: ಭಾರತ- ಪಾಕ್ ಸಂಬಂಧಕ್ಕೆ ಬ್ರೇಕ್ ;...
24-04-25 12:46 pm
24-04-25 11:08 pm
Mangalore Correspondent
Pahalgam terror attack, udupi Vishwaprasanna...
23-04-25 10:23 pm
ಜಾತ್ಯತೀತರು ಉಗ್ರರಿಗೆ ಧರ್ಮ ಇಲ್ಲ ಎನ್ನುತ್ತಿದ್ದರು,...
23-04-25 09:45 pm
Terror Attack, Mangalore Mp, Brijesh Chowta:...
23-04-25 09:36 pm
Bearys Group, Bearys Turning Point mall, Dera...
23-04-25 09:23 pm
24-04-25 12:58 pm
Mangaluru Correspondent
Ullal Gang Rape, Mangalore, Police: ಗ್ಯಾಂಗ್ ರ...
23-04-25 01:03 pm
Shivamogga man killed in Pahalgam attack: ಕಾಶ...
22-04-25 07:37 pm
IPS Om Prakash Murder, Update: ನಿವೃತ್ತ ಡಿಜಿಪಿ...
22-04-25 03:26 pm
Om Prakash IPS Murder, Wife arrest: ನಿವೃತ್ತ ಡ...
21-04-25 01:03 pm