ಬ್ರೇಕಿಂಗ್ ನ್ಯೂಸ್
18-10-21 02:53 pm Mangaluru Correspondent ಕರಾವಳಿ
ಪುತ್ತೂರು, ಅ.18: ವೃದ್ಧ ದಂಪತಿ ತಮ್ಮ ಮನೆಯಲ್ಲೇ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಪುತ್ತೂರು ತಾಲೂಕಿನ ಬಡಗನ್ನೂರು ಗ್ರಾಮದಲ್ಲಿ ನಡೆದಿದೆ.
ಸುಬ್ರಹ್ಮಣ್ಯ ಭಟ್ಟ (84) ಮತ್ತು ಅವರ ಪತ್ನಿ ಶಾರದಾ (78) ಮೃತರು. ಇವರು ಬಡಗನ್ನೂರು ಗ್ರಾಮದ ಪಾದೆಕರ್ಯ ಎಂಬಲ್ಲಿ ಮಕ್ಕಳ ಜೊತೆ ಕೃಷಿ ಮಾಡಿಕೊಂಡು ವಾಸವಿದ್ದರು. ಮೇಲಂತಸ್ತು ಹೊಂದಿರುವ ಮನೆಯಲ್ಲಿ ಮೇಲ್ಗಡೆ ಮಗ ಮತ್ತು ಆತನ ಪತ್ನಿ ಇದ್ದರೆ, ಕೆಳಗಡೆ ಕೋಣೆಯಲ್ಲಿ ವೃದ್ಧ ದಂಪತಿ ಮಲಗುತ್ತಿದ್ದರು. ನಿನ್ನೆ ರಾತ್ರಿ ಅದೇ ರೀತಿ ಕೆಳಗಡೆ ಕೋಣೆಯಲ್ಲಿ ಮಲಗಿದ್ದವರು ಇಂದು ಬೆಳಗ್ಗಿನ ಹೊತ್ತಿಗೆ ಫ್ಯಾನಿಗೆ ನೇಣು ಬಿಗಿದ ಸ್ಥಿತಿಯಲ್ಲಿ ಕಂಡುಬಂದಿದ್ದಾರೆ.
ಈ ಬಗ್ಗೆ ಮೃತರ ಮಗ ಪುತ್ತೂರು ಗ್ರಾಮಾಂತರ ಠಾಣೆಯಲ್ಲಿ ದೂರು ನೀಡಿದ್ದು ತಂದೆ, ತಾಯಿಗೆ ವಯೋಸಹಜ ಕಾಯಿಲೆ ಇತ್ತು. ಅಲ್ಲದೆ, ಸಕ್ಕರೆ ಕಾಯಿಲೆಯೂ ಇತ್ತು. ಬಳಲುತ್ತಿದ್ದ ಕಾರಣ ಮನನೊಂದು ನೇಣು ಬಿಗಿದುಕೊಂಡು ಸಾವಿಗೆ ಶರಣಾಗಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ. ಬೆಳಗ್ಗೆ 6 ಗಂಟೆಗೆ ಪತ್ನಿ ಎದ್ದು ನೋಡಿದಾಗ ಕೆಳಗಿನ ಅಕ್ಕಪಕ್ಕದ ಕೋಣೆಯಲ್ಲಿ ಇಬ್ಬರೂ ಪ್ರತ್ಯೇಕವಾಗಿ ನೇಣು ಹಾಕ್ಕೊಂಡಿದ್ದರು. ಈ ಸಾವಿನಲ್ಲಿ ಬೇರೆ ಯಾವುದೇ ಸಂಶಯವಿಲ್ಲ ಎಂದು ದೂರಿನಲ್ಲಿ ಹೇಳಿದ್ದಾರೆ.
ಆದರೆ, ಸ್ಥಳೀಯವಾಗಿ ಗೌರವ ಹೊಂದಿದ್ದ ವೃದ್ಧ ದಂಪತಿ ಇಳಿ ವಯಸ್ಸಿನಲ್ಲಿ ಈ ರೀತಿ ಸಾವಿಗೆ ಶರಣಾಗಿದ್ದು ಪರಿಸರದಲ್ಲಿ ಅಚ್ಚರಿ ಮೂಡಿಸಿದೆ.
Puttur Elderly Couple commit Suicide due to health issues.
17-09-26 04:13 pm
HK News Staffer
ಚಿತ್ರರಂಗದ ಸಾರ್ವಕಾಲಿಕ ಶ್ರೇಷ್ಠ ನಟ ಅನಂತನಾಗ್ ಗೆ '...
16-09-26 10:40 pm
Tulu Language, Shivraj Tangadagi: ತುಳುವಿಗೆ 2ನ...
16-09-26 01:51 pm
Pradeep Eshwar, Pratap Simha: ಪೊಲೀಸ್ ಠಾಣೆಗೆ...
15-09-26 09:13 pm
Imran Pasha, Pratap Simha: ನಿನ್ನಂತಹ ಒಂದು ಲಕ್...
15-09-26 04:46 pm
13-09-26 09:00 pm
HK News
80s ಫೋಟೋ ಟ್ರೆಂಡ್ಗೆ ಮಾರುಹೋಗಿದ್ದೀರಾ? ಹುಷಾರ್ ;...
12-09-26 01:10 pm
ಕಾಶ್ಮೀರಿ ಪಂಡಿತರಿಗೆ ಮತ್ತೆ ಬೆದರಿಕೆ ; ಉದ್ಯೋಗ ಬಿಟ...
10-09-26 01:23 pm
ನೇಪಾಳ ಪ್ರವಾಹ ; ಹತ್ತು ದಿನಗಳ ಬಳಿಕ ಜಲವಿದ್ಯುತ್ ಸು...
05-09-26 11:55 am
ಮುಂದಿನ ಒಂದು ವರ್ಷದಲ್ಲಿ ಒಂದು ಸಾವಿರ ವಿದ್ಯಾಭಾರತಿ...
04-09-26 08:14 pm
18-09-26 11:30 am
HK News Staffer
SDPI Protest, CM DK Shivakumar, Mangalore: ರಹ...
18-09-26 10:35 am
Mangalore, Karnataka Cabinet Meeting, DK Shiv...
18-09-26 09:49 am
ಕಸ್ತೂರಿ ರಂಗನ್ ವರದಿ ; 43 ಗ್ರಾಮಗಳ ಆತಂಕ ನಿವಾರಣೆಗ...
17-09-26 08:48 pm
Mangalore, DK Shivakumar, Coastal Karnataka,...
17-09-26 08:02 pm
17-09-26 02:22 pm
HK News Staffer
Bangalore Murder, Crime: ಪ್ರೀತಿಸಿ ಮದುವೆಯಾಗಿದ್...
17-09-26 01:56 pm
Bangalore kidnap, Crime: ಬೆಂಗಳೂರಿನಲ್ಲಿ ಶಾಕ್...
17-09-26 12:35 pm
Manglore Cyber crime, Stock Market: ಷೇರು ಮಾರ್...
17-09-26 11:45 am
ಬೆಳ್ತಂಗಡಿ; ಗೃಹಪ್ರವೇಶಕ್ಕೆ ಹೋದಾಗ ಮನೆಗೆ ಕನ್ನ, ₹1...
16-09-26 11:18 am