ಬ್ರೇಕಿಂಗ್ ನ್ಯೂಸ್
10-10-21 06:11 pm Mangalore Reporter ಕರಾವಳಿ
ಉಳ್ಳಾಲ, ಅ.10: ನಮಗಿಂತಲೂ ಅಶಕ್ತರನ್ನ ಕಂಡಾಗ ನಾವೆಷ್ಟು ಶಕ್ತರೆಂಬುದು ಮನವರಿಕೆಯಾಗಿ ಅವರಿಗೆ ಸಹಾಯ ಮಾಡಲು ಪ್ರೇರಣೆ ಸಿಗುತ್ತದೆ ಎಂದು ಕೌನ್ ಬನೇಗಾ ಕರೋಡ್ ಪತಿ ಖ್ಯಾತಿಯ ವಿಶಿಷ್ಟ ಸಮಾಜ ಸೇವಕ ರವಿ ಕಟಪಾಡಿ ಹೇಳಿದರು.
ತೊಕ್ಕೊಟ್ಟಿನ ಕಾಪಿಕಾಡಿನಲ್ಲಿ ಶ್ರೀ ಸಾಯಿ ಪರಿವಾರ್ ಟ್ರಸ್ಟ್ ನೂತನ ಕಚೇರಿ ಹೊಂಬೆಳಕು ಉದ್ಘಾಟಿಸಿ ಅವರು ಮಾತನಾಡಿದರು.ವಿವಿಧ ವೇಷಗಳನ್ನ ಹಾಕಿ ಕೂಡಿದ ಹಣದಿಂದ ನಾನಿಂದು ಸಮಾಜದ ಬಡ ವರ್ಗದ ಜನರಿಗೆ ಸಹಾಯ ನೀಡಿದ್ದರೆ ಅದಕ್ಕೆ ನನ್ನ ಸ್ನೇಹಿತರು ಮತ್ತು ದಾನಿಗಳೇ ಪ್ರೇರಣೆಯಾಗಿದ್ದಾರೆ. ಆಡಂಬರದ ಬದುಕನ್ನ ಇಚ್ಛೆ ಪಡದೆ ನಮಗಿಂತ ಕೆಳಗಿನವರನ್ನು ನೋಡಿ ಬದುಕು ಸಾಗಿಸಿದರೆ ನಾವೆಷ್ಟು ಶ್ರೀಮಂತರೆಂದು ಅರಿವಾಗುತ್ತದೆ ಅನ್ನೋದು ನನ್ನ ತಂದೆ, ತಾಯಿ ನನಗೆ ಹೇಳಿಕೊಟ್ಟ ಪಾಠ. ಇನ್ನಷ್ಟು ಸಮಾಜದ ಬಡ, ಅಶಕ್ತರಿಗೆ ಸಹಾಯ ಮಾಡಲು ಮನಸ್ಸಿದೆ. ಅದಕ್ಕೆ ದಾನಿಗಳು, ಸ್ನೇಹಿತರ ಸಹಕಾರ ಅಗತ್ಯ. ನಾವು ಖರೀದಿಸುವ ವಸ್ತುಗಳಿಗೆ ಒಂದು ವರುಷದ ವ್ಯಾರಂಟಿ ಇರುತ್ತೆ. ಆದರೆ ಖರೀದಿದಾರನಿಗೆ ಮಾತ್ರ ಅಂತಹ ಯಾವುದೇ ವ್ಯಾರಂಟಿ ಇಲ್ಲ. ನಾವು ಸತ್ತ ನಂತರ ನಮ್ಮ ಅಂಗಾಂಗಗಳು ಬೇರೆಯವರಿಗಾದರೂ ಉಪಯೋಗಕ್ಕೆ ಬರಬೇಕೆಂಬ ದೃಷ್ಟಿಯಲ್ಲಿ ಅಂಗಾಗ ದಾನದ ಪ್ರೇರಣೆಯ ಅಭಿಯಾನದ ಯೋಜನೆ ರೂಪಿಸುವುದಾಗಿ ಹೇಳಿದರು.
ಕೊಂಡೆವೂರು ನಿತ್ಯಾನಂದ ಯೋಗಾಶ್ರಮದ ಯತಿವರ್ಯರಾದ ಯೋಗಾನಂದ ಸರಸ್ವತಿ ಸ್ವಾಮೀಜಿ ಆಶೀರ್ವಚನ ನೀಡಿ ದೀಪ ಉರಿಸಲು ಎಣ್ಣೆ ಇಲ್ಲದಿದ್ದರೂ ನೀರಿನಿಂದಲೇ ದೀಪ ಉರಿಸಿ ಪ್ರತಿಕೂಲ ವಾತಾವರಣವನ್ನ ಅನುಕೂಲವನ್ನಾಗಿಸಿದ ಸಾಯಿ ಬಾಬರ ಜೀವನ ಶೈಲಿಯನ್ನ ರೂಢಿಸಿಕೊಳ್ಳಬೇಕು. ಸಮಾಜ ಸೇವೆಯಲ್ಲಿ ಪೃಕೃತಿಯನ್ನ ಉಳಿಸೋ ಕೈಂಕರ್ಯವೂ ಒಳಗೊಂಡಿರಬೇಕು. ನಿಸ್ವಾರ್ಥ ಜೀವನಕ್ಕೆ ಕಟಪಾಡಿ ರವಿಯವರ ಜೀವನ ಆದರ್ಶಗಳಿಂದ ನಾವೆಲ್ಲರೂ ಪ್ರೇರಣೆ ಪಡೆಯಬೇಕು. ಎಲ್ಲರೂ ಸಮಾಜದಲ್ಲೊಂದು ವೇಷ ಹಾಕುವವರೇ ಆಗಿದ್ದಾರೆ. ಆದರೆ ರವಿ ಕಟಪಾಡಿಯವರು ಇನ್ನೋರ್ವರ ಕಷ್ಟ, ಕಾರ್ಪಣ್ಯಕ್ಕಾಗಿ ಹಲವು ವಿಧದ ವೇಷ ತೊಟ್ಟವರಾಗಿದ್ದು ಅವರಿಂದ ಬೆಳಗಿದ ಈ ಸಂಸ್ಥೆಯು ದೇಶ ಗುರುತಿಸುವಂತಾಗಲಿ ಎಂದು ಹಾರೈಸಿದರು.
ಕಾರ್ಯಕ್ರಮದಲ್ಲಿ ಕೊರೊನಾ ವಾರಿಯರ್ಸ್ ಗಳಾಗಿ ಸಮಾಜಕ್ಕೆ ಕೊಡುಗೆ ನೀಡಿದ ಬಜರಂಗ ದಳದ ಜಿಲ್ಲಾ ಸಂಚಾಲಕ ಪುನೀತ್ ಅತ್ತಾವರ, ಉಳ್ಳಾಲ ನಗರ ಸಂಚಾಲಕ ಅರ್ಜುನ್ ಮಾಡೂರು, ಹಿಂದೂ ಯುವಸೇನೆಯ ರಕ್ತನಿಧಿ ಸಂಚಾಲಕ ನಿಶಾಂತ್ ಶೆಟ್ಟಿ ಜಪ್ಪಿನಮೊಗರು, ಗುಣಕರ ಆಂಬುಲೆನ್ಸ್ ಚಾಲಕ ರಘುಚಂದ್ರ ಎಕ್ಕೂರು, ಸಮಾಜ ಸೇವಕಿ ಆರ್.ಜೆ ರಶ್ಮಿ ಅವರನ್ನು ಸನ್ಮಾನಿಸಲಾಯಿತು.
ಅನಾರೋಗ್ಯ ಪೀಡಿತ 5 ಕುಟುಂಬಗಳಿಗೆ ತಲಾ 10,000 ರೂಪಾಯಿ ಆರ್ಥಿಕ ನೆರವು, ಅಶಕ್ತರಿಗೆ ದಸರಾ ಆಹಾರ ಕಿಟ್ ವಿತರಿಸಲಾಯಿತು.ಕಾಪಿಕಾಡು ಶ್ರೀ ಉಮಾಮಹೇಶ್ವರಿ ಕ್ಷೇತ್ರದ ಆಡಳಿತ ಮೊಕ್ತೇಸರ ಎ.ಜೆ. ಶೇಖರ್ ಅಧ್ಯಕ್ಷತೆ ವಹಿಸಿದ್ದರು. ಉಳ್ಳಾಲ ಶ್ರೀ ಚೀರುಂಬಾ ಭಗವತೀ ಕ್ಷೇತ್ರದ ಅರ್ಚಕ ಮಂಜಪ್ಪ ಕಾರ್ನವರ್ , ರಾಜ್ಯ ಅಲೆಮಾರಿ, ಅರೆ ಅಲೆಮಾರಿ ಅಭಿವೃದ್ಧಿ ನಿಗಮದ ಅಧ್ಯಕ್ಷ ಕೆ.ರವೀಂದ್ರ ಶೆಟ್ಟಿ ಉಳಿದೊಟ್ಟು, ದಿ ಮೈಸೂರು ಎಲೆಕ್ಟ್ರಿಕಲ್ ಇಂಡಸ್ಟ್ರೀಸ್ ಲಿ.ಅಧ್ಯಕ್ಷ ಸಂತೋಷ್ ಕುಮಾರ್ ರೈ ಬೋಳಿಯಾರ್, ಕುಂಪಲ ಬಾಲಕೃಷ್ಣ ಮಂದಿರದ ಅಧ್ಯಕ್ಷ ಸತೀಶ್ ಕುಂಪಲ, ಹಿಂದು ಯುವಸೇನೆ ಕೇಂದ್ರೀಯ ಮಂಡಳಿಯ ಗೌರವಾಧ್ಯಕ್ಷ ಭಾಸ್ಕರಚಂದ್ರ ಶೆಟ್ಟಿ, ಸಮಾಜ ಸೇವಕ ಪ್ರವೀಣ್ ಶೆಟ್ಟಿ ಪಿಲಾರು ಮೇಗಿನಮನೆ, ಸಾಯಿ ಪರಿವಾರ್ ಟ್ರಸ್ಟ್ ನ ಗೌರವ ಸಲಹೆಗಾರರಾದ ಚಂದ್ರಹಾಸ್ ಪಂಡಿತ್ ಹೌಸ್, ಟ್ರಸ್ಟಿಗಳಾದ ಗಣೇಶ್ ಅಂಚನ್ , ಪುರುಷೋತ್ತಮ ಕಲ್ಲಾಪು ಹಾಗೂ ರಾಜೇಶ್ ಕಾಪಿಕಾಡ್ ಮೊದಲಾದವರು ಉಪಸ್ಥಿತರಿದ್ದರು.
ಸಮಾಜ ಸೇವಕಿ ಧನಲಕ್ಷ್ಮೀ ಗಟ್ಟಿ ಸ್ವಾಗತಿಸಿದರು. ಪ್ರವೀಣ್ ಎಸ್. ಕುಂಪಲ ಪ್ರಸ್ತಾವನೆಗೈದರು. ಕೃಷ್ಣ ಪೊಣ್ಣೆತ್ತೋಡು ಧನ್ಯವಾದಗೈದರು. ಡಾ.ಅರುಣ್ ಉಳ್ಳಾಲ್ ಕಾರ್ಯಕ್ರಮ ನಿರೂಪಿಸಿದರು.
Ravi kattappady said that we are planning an organ donation motivation campaign so that our organs can be used for someone else after we die.
24-04-25 06:39 pm
Bangalore Correspondent
Kalaburagi Accident: ಕಲಬುರಗಿ; ನಾಯಿಯ ಪ್ರಾಣ ಕಾಪ...
24-04-25 04:56 pm
CM Siddaramaiah, DK Shivakumar, Threat Mail:...
23-04-25 10:49 pm
Cm Siddaramaiah, Pahalgam Attack: ಉಗ್ರರ ದಾಳಿಯ...
23-04-25 08:04 pm
Karnataka, D K Shivakumar, Pahalgam: ಕಾಶ್ಮೀರ...
23-04-25 06:54 pm
24-04-25 04:59 pm
HK News Desk
Pahalgam terror attack: ಉಗ್ರರು ಕನಸಿನಲ್ಲೂ ಊಹಿಸ...
24-04-25 04:21 pm
Robert Vadra, Pahalgam terror attack: ಸರ್ಕಾರ...
24-04-25 01:58 pm
India Pak News: ಭಾರತ- ಪಾಕ್ ಸಂಬಂಧಕ್ಕೆ ಬ್ರೇಕ್ ;...
24-04-25 12:46 pm
Pahalgam terror attack, Pakistani terrorists:...
23-04-25 09:25 pm
23-04-25 10:23 pm
Udupi Correspondent
ಜಾತ್ಯತೀತರು ಉಗ್ರರಿಗೆ ಧರ್ಮ ಇಲ್ಲ ಎನ್ನುತ್ತಿದ್ದರು,...
23-04-25 09:45 pm
Terror Attack, Mangalore Mp, Brijesh Chowta:...
23-04-25 09:36 pm
Bearys Group, Bearys Turning Point mall, Dera...
23-04-25 09:23 pm
ವಿನೂತನ ಒಳ ಮೀಸಲಾತಿ ನೀತಿ ಪ್ರಕಟಿಸಲು ಒತ್ತಾಯ ; ಬೀದ...
21-04-25 10:32 pm
24-04-25 12:58 pm
Mangaluru Correspondent
Ullal Gang Rape, Mangalore, Police: ಗ್ಯಾಂಗ್ ರ...
23-04-25 01:03 pm
Shivamogga man killed in Pahalgam attack: ಕಾಶ...
22-04-25 07:37 pm
IPS Om Prakash Murder, Update: ನಿವೃತ್ತ ಡಿಜಿಪಿ...
22-04-25 03:26 pm
Om Prakash IPS Murder, Wife arrest: ನಿವೃತ್ತ ಡ...
21-04-25 01:03 pm