ಬ್ರೇಕಿಂಗ್ ನ್ಯೂಸ್
01-10-21 10:36 pm Mangaluru Correspondent ಕರಾವಳಿ
ಮಂಗಳೂರು, ಅ.1ಕಂಬಳದ ಉಳಿವು ಮತ್ತು ಸಂರಕ್ಷಣೆಯ ನಿಟ್ಟಿನಲ್ಲಿ ಅವಿಭಜಿತ ಕಂಬಳ ಸಮಿತಿ ಮಹತ್ವದ ಹೆಜ್ಜೆ ಇಟ್ಟಿದೆ. ಕಂಬಳದ ಓಟ, ಕೋಣಗಳ ಆರೈಕೆ, ಒಟ್ಟು ಕ್ರೀಡೆಯ ಬಗ್ಗೆ ಸಂಪೂರ್ಣ ತರಬೇತಿ ನೀಡುವ ಸಲುವಾಗಿ ಆಸಕ್ತ ಯುವಕರಿಗೆ ಉಚಿತ ತರಬೇತಿಯನ್ನು ಆಯೋಜಿಸಿದ್ದು, ಇಂದು ಮೂಡುಬಿದ್ರೆಯ ಕಡಲಕೆರೆಯಲ್ಲಿ ಅಧಿಕೃತ ಉದ್ಘಾಟನೆಗೊಂಡಿದೆ.
ಇದಕ್ಕಾಗಿ ಕಂಬಳ ಸಂರಕ್ಷಣೆ, ನಿರ್ವಹಣೆ ಮತ್ತು ತರಬೇತಿ ಅಕಾಡೆಮಿ ಎಂಬ ಸಂಸ್ಥೆಯನ್ನು ಸ್ಥಾಪಿಸಲಾಗಿದ್ದು ಈ ಬಾರಿ ಮೊದಲ ಸೀಸನಲ್ಲಿ 33 ಮಂದಿಗೆ ತರಬೇತಿ ನೀಡಲು ಸಂಸ್ಥೆ ಮುಂದಾಗಿದೆ. ನುರಿತ ತಜ್ಞರು, ಹಿರಿಯ ಕಂಬಳ ಓಟಗಾರರಿಂದ ಉಚಿತ ತರಬೇತಿ ಮತ್ತು ವಸತಿಯನ್ನು ಒದಗಿಸಲಾಗಿದೆ. 15 ದಿನಗಳ ತರಬೇತಿ ಇದಾಗಿದ್ದು, ದಕ್ಷಿಣ ಕನ್ನಡ, ಉಡುಪಿ ಮತ್ತು ಕಾಸರಗೋಡು ಜಿಲ್ಲೆಯ 18ರಿಂದ 25 ವರ್ಷದ ಒಳಗಿನ 33 ಮಂದಿಯನ್ನು ಆಯ್ಕೆ ಮಾಡಲಾಗಿದೆ.
ತರಬೇತಿಯಲ್ಲಿ ಕೇವಲ ಓಟಕ್ಕೆ ಮಾತ್ರವಲ್ಲದೆ, ಕಂಬಳ ಸ್ಪರ್ಧೆಯ ಎಲ್ಲ ವಿಚಾರದಲ್ಲಿಯೂ ತರಬೇತು ನೀಡಲಾಗುವುದು. ಕೋಣಗಳ ಸಾಕಣೆ, ಅವುಗಳನ್ನು ಸ್ನಾನ ಮಾಡಿಸುವುದು, ಬೆತ್ತ ಕಟ್ಟುವುದು, ನೊಗ ಕಟ್ಟುವುದು, ಓಡಿಸುವುದು, ಆರು ವಿಭಾಗದಲ್ಲಿ ಕೋಣಗಳನ್ನು ರೆಡಿ ಮಾಡಿಸುವುದು, ವಿವಿಧ ವಿಭಾಗಗಳಲ್ಲಿ ಕೋಣಗಳನ್ನು ಓಡಿಸುವ ಕ್ರಮ ಹೀಗೆ ಕಂಬಳದ ಎಲ್ಲ ವಿಚಾರಗಳನ್ನೂ ಹೇಳಿಕೊಡಲಾಗುವುದು. ಆದರೆ, ಇಲ್ಲಿ ತರಬೇತು ಕೊಡಿಸುವುದು ಕೇವಲ ಬೇಸಿಕ್ ಮಾತ್ರ. 15 ದಿನಗಳಲ್ಲಿ ಅದಕ್ಕಿಂತ ಹೆಚ್ಚಿನದನ್ನು ಮಾಡಲಾಗುವುದಿಲ್ಲ. ಆನಂತರ ಸ್ವತಃ ತಮ್ಮಲ್ಲಿಯೇ ಕೋಣಗಳ ಜೊತೆ ಕಂಬಳದಲ್ಲಿ ಅಭ್ಯಾಸ ಮುಂದುವರಿಸಬೇಕಿದೆ ಎಂದು ಆಧುನಿಕ ಕಂಬಳದ ನಿರ್ಮಾತೃ ಗುಣಪಾಲ ಕಡಂಬ ಹೇಳಿದ್ದಾರೆ.
ತರಬೇತಿ ಅವಧಿಯಲ್ಲಿ ದಿನವೂ ಬೆಳಗ್ಗೆ 6ಕ್ಕೆ ಎದ್ದು ಯೋಗಾಸನ, ಆಬಳಿಕ ಆಳ್ವಾಸ್ ಕಾಲೇಜಿನ ದೈಹಿಕ ಶಿಕ್ಷಕರಿಂದ ಶಾರೀರಿಕ ವ್ಯಾಯಾಮ, ಕೋಣಗಳನ್ನು ಸ್ನಾನ ಮಾಡಿಸುವುದು, ಆನಂತರ ಓಡಿಸುವುದು, ಉಪಾಹಾರ, ಹೀಗೆ ವಿವಿಧ ವಿಚಾರಗಳಿರುತ್ತವೆ. ಆರಂಭದಲ್ಲಿ ಈ ಉಚಿತ ತರಬೇತಿ ಪಡೆಯಲು 219 ಮಂದಿ ಆಗಮಿಸಿದ್ದರು. ಅದರಲ್ಲಿ ಕಂಬಳದ ಬಗೆಗಿನ ಆಸಕ್ತಿ, ಕೃಷಿ ಹಿನ್ನೆಲೆ, ಕೃಷಿ ಬಗ್ಗೆ ಒಲವು ಹೊಂದಿರುವುದು, ದೈಹಿಕ ಕ್ಷಮತೆ ಆಧರಿಸಿ 87 ಮಂದಿಯನ್ನು ಸೆಲೆಕ್ಟ್ ಮಾಡಲಾಗಿತ್ತು. ಅದರಲ್ಲಿ ಮಿತಿಗೊಳಿಸಿ 33 ಮಂದಿಯನ್ನು ತರಬೇತಿಗೆ ಆಯ್ಕೆ ಮಾಡಲಾಗಿದೆ.
ತರಬೇತಿ ಅಂದರೆ, ಉಚಿತವಾಗಿ ಸಿಗುತ್ತಿದೆ ಅಂದ ಟೈಂಪಾಸ್ ಮಾಡೋಕೆ ಬರೋದಲ್ಲ. ಕಂಬಳಕ್ಕಾಗಿ ತಮ್ಮನ್ನು ಅರ್ಪಿಸಿಕೊಳ್ಳುವ ಗುರಿ ಇಟ್ಟುಕೊಂಡಿರಬೇಕು. ಅಂಥವರನ್ನೇ ಆಯ್ದುಕೊಂಡು ತರಬೇತಿ ನೀಡಲಾಗುತ್ತಿದೆ. ಇದಕ್ಕಾಗಿ ಸರಕಾರದಿಂದ ಯಾವುದೇ ನೆರವು ಪಡೆದಿಲ್ಲ. ಮುಂದಿನ ತಲೆಮಾರಿಗೂ ಕಂಬಳ ಉಳಿಯಬೇಕೆಂಬ ಸದುದ್ದೇಶದಿಂದ ವಿಶೇಷ ತರಬೇತಿ ಕಾರ್ಯಾಗಾರವನ್ನು ಆಯೋಜನೆ ಮಾಡಲಾಗಿದೆ. ಈ ಬಾರಿ ಯುವತಿಯರು ಕೂಡ ತರಬೇತಿ ಪಡೆಯಲು ಆಸಕ್ತರಾಗಿದ್ದರು. ಐದು ಕುಟುಂಬಗಳು ತಮ್ಮ ಯುವತಿಯರನ್ನು ಕಳಿಸಿಕೊಡಲು ತಯಾರಾಗಿದ್ದವು. ಅವರಿಗಾಗಿ ಮುಂದಿನ ಅವಧಿಯಲ್ಲಿ ಪ್ರತ್ಯೇಕ ತರಬೇತಿ ಶಿಬಿರ ಏರ್ಪಡಿಸಲಾಗುವುದು ಎಂದು ಗುಣಪಾಲ ಕಡಂಬ ತಿಳಿಸಿದ್ದಾರೆ.
ಈ ಬಾರಿಯ ಕಂಬಳ ಸೀಸನಲ್ಲಿ ವಿಶೇಷವಾಗಿ ಯುವತಿಯರನ್ನು ಕೋಣಗಳ ಓಟಕ್ಕೆ ಇಳಿಸಲಾಗುವುದು. ಆದರೆ, ಯುವತಿಯರ ಪ್ರದರ್ಶನ ಪ್ರಾಯೋಗಿಕ ಮಾತ್ರ ಇರಲಿದೆ. ಪುರುಷ ಪ್ರಧಾನ ಕಂಬಳದಲ್ಲಿ ಮಹಿಳೆಯರ ಪ್ರಾತಿನಿಧ್ಯವನ್ನು ತೋರಿಸುವ ಗುರಿಯಿದೆ. ಮುಂದಿನ ದಿನಗಳಲ್ಲಿ ಯುವತಿಯರು ಕೂಡ ಓಟಗಾರ್ತಿಯರಾಗಿ ಮಿಂಚಬೇಕೆಂಬ ಹಂಬಲ ಇದೆ ಎಂದರು.
Moodbidri New touch for Kambala in Mangalore, Academy trains 33 youths for race.A detailed report has been submitted to the state government on ways and means to reform Kambala. Some of recommendations contained therein are to give the form of festival for the Kambala in order to turn it into a cultural attraction of the coast for the tourists, formation of separate authority, instituting a buffalo breed conservation centre, training centre etc. The report also contains the recommendation that the state and central governments together have to sanction a grant of ten crore rupees for the same.
24-04-25 04:56 pm
HK News Desk
CM Siddaramaiah, DK Shivakumar, Threat Mail:...
23-04-25 10:49 pm
Cm Siddaramaiah, Pahalgam Attack: ಉಗ್ರರ ದಾಳಿಯ...
23-04-25 08:04 pm
Karnataka, D K Shivakumar, Pahalgam: ಕಾಶ್ಮೀರ...
23-04-25 06:54 pm
Pahalgam Terror Attack, Bharath Bhushan: ಪಹಲ್...
23-04-25 02:51 pm
24-04-25 04:59 pm
HK News Desk
Pahalgam terror attack: ಉಗ್ರರು ಕನಸಿನಲ್ಲೂ ಊಹಿಸ...
24-04-25 04:21 pm
Robert Vadra, Pahalgam terror attack: ಸರ್ಕಾರ...
24-04-25 01:58 pm
India Pak News: ಭಾರತ- ಪಾಕ್ ಸಂಬಂಧಕ್ಕೆ ಬ್ರೇಕ್ ;...
24-04-25 12:46 pm
Pahalgam terror attack, Pakistani terrorists:...
23-04-25 09:25 pm
23-04-25 10:23 pm
Udupi Correspondent
ಜಾತ್ಯತೀತರು ಉಗ್ರರಿಗೆ ಧರ್ಮ ಇಲ್ಲ ಎನ್ನುತ್ತಿದ್ದರು,...
23-04-25 09:45 pm
Terror Attack, Mangalore Mp, Brijesh Chowta:...
23-04-25 09:36 pm
Bearys Group, Bearys Turning Point mall, Dera...
23-04-25 09:23 pm
ವಿನೂತನ ಒಳ ಮೀಸಲಾತಿ ನೀತಿ ಪ್ರಕಟಿಸಲು ಒತ್ತಾಯ ; ಬೀದ...
21-04-25 10:32 pm
24-04-25 12:58 pm
Mangaluru Correspondent
Ullal Gang Rape, Mangalore, Police: ಗ್ಯಾಂಗ್ ರ...
23-04-25 01:03 pm
Shivamogga man killed in Pahalgam attack: ಕಾಶ...
22-04-25 07:37 pm
IPS Om Prakash Murder, Update: ನಿವೃತ್ತ ಡಿಜಿಪಿ...
22-04-25 03:26 pm
Om Prakash IPS Murder, Wife arrest: ನಿವೃತ್ತ ಡ...
21-04-25 01:03 pm