ಬ್ರೇಕಿಂಗ್ ನ್ಯೂಸ್
29-09-21 11:50 am Mangaluru Correspondent ಕರಾವಳಿ
ಮಂಗಳೂರು, ಸೆ.29: ಮಂಗಳೂರಿನ ಜನ ಕಾರು ಪ್ರಿಯರು ಅಂದರೆ ಅತಿಶಯೋಕ್ತಿಯಲ್ಲ. ಕರ್ನಾಟಕದಲ್ಲಂತೂ ಲಕ್ಸುರಿ ಕಾರು ಕೊಳ್ಳುವವರ ಪೈಕಿ ಮಂಗಳೂರಿನ ಮಂದಿಯೇ ಮೊದಲ ಪಂಕ್ತಿಯಲ್ಲಿದ್ದಾರೆ. ಆದರೆ, ಲಕ್ಸುರಿ ಕಾರುಗಳೇ ಆಗಿದ್ದರೂ ಕರಾವಳಿಯ ವಾತಾವರಣದಲ್ಲಿ ಉಪ್ಪಿನಂಶ ಇರುವುದರಿಂದ ಕಾರುಗಳಿಗೆ ತುಕ್ಕು ಹಿಡಿಯುವುದು ಸಾಮಾನ್ಯ. ಇದಕ್ಕಾಗಿಯೇ ತುಕ್ಕು ಹಿಡಿಯದ, ಸ್ಕ್ರಾಚ್ ಆಗದೇ ಇರುವ ರೀತಿ ಕಾರುಗಳಿಗೆ ಗಾರ್ಡ್ ಹಾಕಿಸಲು ಟೋಪಾಝ್ ಬ್ರಾಂಡ್ ಹೆಸರಿನಲ್ಲಿ ಮಂಗಳೂರಿನಲ್ಲಿ ಮೊದಲ ಬಾರಿಗೆ ಡಿಟೈಲಿಂಗ್ ಸ್ಟುಡಿಯೋ ಓಪನ್ ಆಗಿದೆ.
ಮಂಗಳೂರು ನಗರದ ಫಳ್ನೀರ್ ನಲ್ಲಿ ಟೋಪಾಝ್ ಸ್ಟುಡಿಯೋ ಆರಂಭಗೊಂಡಿದ್ದು, ಕರಾವಳಿಯ ಮಟ್ಟಿಗೆ ಕಾರುಗಳಿಗೆ ಆಧುನಿಕ ಟಚ್ ಕೊಡುವ ಮೊದಲ ಶೋರೂಂ ಇದಾಗಿದೆ. ಗಾಜಿನಂತೆ ಮಿನುಗುವ ಆಧುನಿಕ ಮಾದರಿಯ ಕಾರುಗಳೆಲ್ಲ ಮಂಗಳೂರಿನಲ್ಲಿ ರಸ್ತೆಗಿಳಿದಿವೆ. ಇವುಗಳಿಗೆ ರಸ್ಟ್ ಹಿಡಿಯದಂತೆ ಮತ್ತು ಹೊರಮೈಗೆ ಯಾವುದೇ ಸ್ಕ್ರಾಚ್ ಆಗದಂತೆ ಮುಂಜಾಗ್ರತೆ ವಹಿಸಲು ಮಿನುಗುವ ಕೋಟಿಂಗ್ ನೀಡಲು ಟೋಪಾಝ್ ಸ್ಟುಡಿಯೋ ತಯಾರಾಗಿದೆ.











ಏನಿದು ಸಿರಾಮಿಕ್ ಕೋಟಿಂಗ್ ಸ್ಪೆಷಲ್ ?
ನಾವು ಯಾವುದೇ ಬ್ರಾಂಡಿನ ಮೊಬೈಲ್ ಖರೀದಿಸಿದರೂ, ಅದಕ್ಕೊಂದು ಸ್ಕ್ರೀನ್ ಗಾರ್ಡ್ ಹಾಕಿಸ್ತೀವಿ.. ಅದೇ ರೀತಿ, ಯಾವುದೇ ಬ್ರಾಂಡಿನ ಕಾರುಗಳಿಗೂ ಹೊರಗೆ ಮತ್ತು ಒಳಮೈಗೆ ಟೋಪಾಝ್ ಸ್ಟುಡಿಯೋದಲ್ಲಿ ಸಿರಾಮಿಕ್ ಕೋಟಿಂಗ್ ಮಾಡಿದಲ್ಲಿ ತುಕ್ಕು ಹಿಡಿಯಲ್ಲ. ಅಷ್ಟೇ ಅಲ್ಲಾ, ಹೊರಭಾಗಕ್ಕೆ ಸ್ಕ್ರಾಚ್ ಕೂಡ ಆಗೋದಿಲ್ಲ. ಆಧುನಿಕ ಜಗತ್ತಿನಲ್ಲಿ ಕಾರುಗಳಿಗೆ ಪೈಂಟ್ ಪ್ರೊಟೆಕ್ಷನ್ ಫಿಲ್ಮ್ ಮತ್ತು ಸೆರಾಮಿಕ್ ಕೋಟಿಂಗ್ ಅನ್ನುವುದು ಅತ್ಯಂತ ಸ್ಪೆಷಲ್ ಆಗಿರೋ ಕೋಟಿಂಗ್ ವ್ಯವಸ್ಥೆ. ದೂರದ ಲಂಡನ್ನಲ್ಲಿ ಟೋಪಾಝ್ ಬ್ರಾಂಡಿನ ಕೋಟಿಂಗ್ ವ್ಯವಸ್ಥೆ ಇದ್ದು ಭಾರತದಲ್ಲಿ ಮೊದಲ ಬಾರಿಗೆ ಮಂಗಳೂರಿನಲ್ಲಿ ಅದೇ ಮಾದರಿಯ ಕೋಟಿಂಗ್ ಬ್ರಾಂಡ್ ಆರಂಭಿಸಲಾಗಿದೆ. ಸಾಮಾನ್ಯ ಕಾರುಗಳನ್ನೂ ಲಕ್ಸುರಿಯಾಗಿ ಕಾಣಿಸುವ ರೀತಿ ಈ ಕೋಟಿಂಗಲ್ಲಿ ಮಾಡಲಾಗುತ್ತದೆ.
ಪೈಂಟ್ ಪ್ರೊಟೆಕ್ಷನ್ ಫಿಲ್ಮ್ ಅಥವಾ ಸಿರಾಮಿಕ್ ಕೋಟಿಂಗನ್ನು ಒಮ್ಮೆ ಮಾಡಿದರೆ, ಆನಂತರ ಒಳ್ಳೆಯದಾಗಿ ನೋಡಿಕೊಂಡರೆ ಅದು ಪರ್ಮನೆಂಟ್ ವ್ಯವಸ್ಥೆ. ಅದಕ್ಕಾಗಿಯೇ ಕಂಪನಿ ವತಿಯಿಂದ ಪೈಂಟ್ ಪ್ರೊಟೆಕ್ಷನ್ ಫಿಲ್ಮ್(ಪಿಪಿಎಫ್) ಅಳವಡಿಸಿದಲ್ಲಿ 5 ವರ್ಷದ ವಾರಂಟಿಯನ್ನು ನೀಡಲಾಗುತ್ತದೆ. ಅಷ್ಟೇ ಅಲ್ಲ, ಸಿರಾಮಿಕ್ ಕೋಟಿಂಗ್ ಮಾಡಿದ್ದಕ್ಕೂ ಕಂಪನಿಯಿಂದ ಎರಡು ವರ್ಷದ ವಾರಂಟಿ ಕೊಡಲಾಗುತ್ತದೆ. ಕಾರಿಗೆ ಒಮ್ಮೆ ಕೋಟಿಂಗ್ ಮಾಡಿದಲ್ಲಿ ಪರ್ಮನೆಂಟ್ ಆಗಿ ಈ ಕೋಟಿಂಗ್ ಇರಲಿದ್ದು, ಗಾರ್ಡ್ ರೀತಿ ಕೆಲಸ ಮಾಡುತ್ತದೆ. ಈ ರೀತಿಯ ಕೋಟಿಂಗ್ ವ್ಯವಸ್ಥೆ ಬೇರೆ ಕಡೆ ಇದ್ದರೂ, ನ್ಯಾನೋ ಟೆಕ್ನಾಲಜಿ ಅಳವಡಿಸಿದ ಸಿರಾಮಿಕ್ ಕೋಟಿಂಗ್ ಮಂಗಳೂರಿನಲ್ಲಿ ಟೋಪಾಝ್ ನಲ್ಲಿ ಮಾತ್ರ ಇದೆ.








ಅದರಲ್ಲೂ ಲಕ್ಸುರಿ ಕಾರುಗಳಾದ ಫೆರಾರಿ, ಬೆಂಟ್ಲೀ, ಮರ್ಸಿಡಿಸ್, ಬಿಎಂಡಬ್ಲ್ಯು, ಆಸ್ಟಿನ್ ಮಾರ್ಟಿನ್, ಜಾಗ್ವಾರ್ ರೀತಿಯ ಕೋಟಿ ಬೆಲೆಯ ಕಾರುಗಳನ್ನು ಸಿರಾಮಿಕ್ ಕೋಟಿಂಗ್ ಮೂಲಕ ಚಿನ್ನದಂತೆ ಹೊಳೆಯುವಂತೆ ಮಾಡಲಾಗುತ್ತದೆ. ಇದರ ವಿಶೇಷತೆ ಏನಂದ್ರೆ, ಈ ಕೋಟಿಂಗ್ ಮಾಡಿದರೆ ಕಾರಿನ ಹೊರಮೈಯಲ್ಲಿ ನೀರು ನಿಲ್ಲುವುದಿಲ್ಲ. ಹಕ್ಕಿ ಹಿಕ್ಕೆ ಹಾಕಿದರೂ, ಕಾರಿಗೆ ಹತ್ತಿಕೊಳ್ಳುವುದಿಲ್ಲ. ಬೇರೆ ಏನಾದ್ರೂ ಸಣ್ಣ ವಸ್ತುಗಳು ತಾಗಿ ಸ್ಕ್ರಾಚ್ ಆಗುವ ಸಂಭವ ಇದ್ದರೂ ಅದನ್ನು ಅತ್ಯಂತ ನೈಸ್ ಆಗಿರುವ ಈ ಪರದೆ ತಡೆಯುತ್ತದೆ. ಅಕಸ್ಮಾತ್ ದಪ್ಪಗಿನ ಸ್ಕ್ರಾಚ್ ಬಿದ್ದರೂ ಈ ಕೋಟಿಂಗ್ ಮೂಲಕ ಅದನ್ನು ಇಲ್ಲವಾಗಿಸಲು ಸಾಧ್ಯವಿದೆ. ಇದಲ್ಲದೆ, ಈ ಕೋಟಿಂಗ್ ಹಾಕಿದ್ದರೆ, ನೀವು ಕಾರನ್ನು ಧೂಳು, ಕೆಸರು ಇರುವ ಜಾಗಕ್ಕೆ ಒಯ್ದರೂ ಧೂಳು ಹತ್ತಿಕೊಳ್ಳಲ್ಲ. ಹೀಗಾಗಿ ಕಾರನ್ನು ಆಗಾಗ ವಾಶ್ ಮಾಡಬೇಕು ಅನ್ನುವ ಅಗತ್ಯವೂ ಇರುವುದಿಲ್ಲ. ಮೇಂಟೆನೆನ್ಸ್ ವೆಚ್ಚವೂ ಕಡಿಮೆಯಾಗುತ್ತದೆ.
ಟೋಪಾಝ್ ಬ್ರಾಂಡ್ ವಿದೇಶದ್ದೇ ಆಗಿದ್ದರೂ, ಮಂಗಳೂರಿನಲ್ಲಿ ಭಾರತದ್ದೇ ಬ್ರಾಂಡ್ ಆಗಿಸ್ಕೊಂಡು ಸರಕಾರದಿಂದ ಅಧಿಕೃತ ಲೈಸನ್ಸ್ ಪಡೆದು ಹೊಸ ಶೋರೂಂ ಆರಂಭಿಸಲಾಗಿದೆ. ಫಳ್ನೀರ್ ನಲ್ಲಿ ಸೈಂಟ್ ಮೇರೀಸ್ ಸ್ಕೂಲ್ ಮುಂಭಾಗದಲ್ಲಿ ಟೋಪಾಝ್ ಸ್ಟುಡಿಯೋ ಆರಂಭಗೊಂಡಿದ್ದು, ಸೆ.26ರಂದು ಅದ್ಧೂರಿಯಾಗಿ ಉದ್ಘಾಟನೆಗೊಂಡಿದೆ. ಸಮಾರಂಭದಲ್ಲಿ ಮಾಜಿ ಶಾಸಕ ಮೊಯ್ದೀನ್ ಬಾವಾ, ಗ್ರೇಸ್ ಮಿನಿಸ್ಟ್ರಿ ಫೌಂಡರ್ ಡಾ.ಆಂಡ್ರಿ ರಿಚರ್ಡ್, ರಾಜೀವ ಗಾಂಧಿ ವಿವಿಯ ಸೆನೆಟ್ ಮೆಂಬರ್ ಡಾ.ಇಫ್ತಿಕಾರ್ ಆಲಿ, ಡೆಲ್ಟಾ ಇನ್ ಫ್ರಾಲಜಿಸ್ಟಿಕ್ಸ್ ಸಂಸ್ಥೆಯ ಎಂಡಿ ಎ.ಮೊಯ್ದೀನ್, ಮ್ಯಾಂಗ್ಲೂರ್ ಲೈನ್ ಅಂಡ್ ಮೆರೈನ್ ಸಂಸ್ಥೆಯ ಎಂಡಿ ಮುಮ್ತಾಜ್ ಆಲಿ ಮತ್ತಿತರರು ಇದ್ದರು. ಅಂದಹಾಗೆ, ಗ್ರಾಹಕರು ಬುಕ್ಕಿಂಗ್ ಮಾಡಲು (8951284777) ಸಂಪರ್ಕಿಸಬಹುದು.
TOPAZ Detailing Studio:
Jyothi Villa, St.Mary’s High School
Falnir, Mangaluru – 575001
Timings : 9am – 7pm
For Booking Contact : 8951284777
Topaz car elite detailing studio is now in Mangalore book your appointment for Auto detailing, Car waxing, Clay bar treatment, Engine detailing, Exhaust tip polishing, Full body wash, Headlight polishing.
06-02-26 12:30 pm
Bangalore Correspondent
ಭವಿಷ್ಯ ಹೇಳುವ ನೆಪದಲ್ಲಿ ಬೇಟೆ? ರೀಲ್ಸ್ ರಾಣಿಯ ಹಿಂದ...
05-02-26 05:52 pm
ಗದಗದಲ್ಲಿ ಭೀಕರ ರಸ್ತೆ ಅಪಘಾತ ; ಕ್ರೂಸರ್ - ಕ್ಯಾಂಟರ...
05-02-26 03:11 pm
ಹಿಂದಿ ಲ್ಯಾಂಡ್ ಉತ್ತರ ಭಾರತೀಯರು ಮಾತ್ರ ನೈಜ ಇಂಡಿಯನ...
05-02-26 01:15 pm
ಸರ್ಕಾರಿ ಆಸ್ಪತ್ರೆಯಲ್ಲೇ ಔಷಧಿ ಕೊರತೆ ; ಅನುದಾನ ಇಲ್...
05-02-26 10:37 am
06-02-26 10:58 pm
HK News Desk
ಕೊರಿಯನ್ ವೆಬ್ ಸಿರೀಸ್ ವ್ಯಸನ, ತಂದೆಯ ಎರಡು ಕೋಟಿ ಸಾ...
06-02-26 08:47 pm
SBI ಬ್ಯಾಂಕ್ ಕಿತಾಪತಿ ; 2 ಕೋಟಿ ಮೌಲ್ಯದ ಚಿನ್ನ–ಬೆಳ...
06-02-26 08:17 pm
ನೇಪಾಳದ ಗಡಿಯಲ್ಲಿ ಮದುವೆ ದಿಬ್ಬಣ ಕರೆದೊಯ್ಯುತ್ತಿದ್ದ...
06-02-26 07:04 pm
ಮೇಘಾಲಯದಲ್ಲಿ ಕರಾಳ ದುರಂತ ; 'ಅಕ್ರಮ' ಕಲ್ಲಿದ್ದಲು ಗ...
06-02-26 09:54 am
06-02-26 10:56 pm
Mangalore Correspondent
ಡಿಕೆಶಿ ಸಿಎಂ ಆಗಿಯೇ ಪುತ್ತೂರು ಕಾಂಗ್ರೆಸ್ ಕಚೇರಿ ಉದ...
06-02-26 10:42 pm
Veerendra Heggade, Dharmasthala: ಶಿವರಾತ್ರಿಗೆ...
06-02-26 09:01 pm
D k Shivakumar, Mangalore: "ಯತೀಂದ್ರ ಅವರೇ ನಮ್ಮ...
06-02-26 03:09 pm
ನಿರ್ಲಕ್ಷ್ಯದಿಂದ ಹೆದ್ದಾರಿಗೆ ಬೈಕ್ ನುಗ್ಗಿಸಿದ ತ್ರಿ...
06-02-26 01:55 pm
06-02-26 06:36 pm
HK News Desk
ಹುಬ್ಬಳ್ಳಿಯ ಆಟೋ ಚಾಲಕನ ಖಾತೆಯಲ್ಲಿ ಕೋಟ್ಯಂತರ ಹಣದ ವ...
06-02-26 01:36 pm
Manjeshwar Double Murder: ಮಂಜೇಶ್ವರ ; ಪತ್ನಿ ಮೇ...
03-02-26 01:05 pm
ಪೋಲೆಂಡಿನಲ್ಲಿ ಉದ್ಯೋಗ ವೀಸಾ ; 4.50 ಲಕ್ಷ ಹಣ ಪಡೆದು...
03-02-26 11:31 am
ಬೆಂಗಳೂರಿನಲ್ಲಿ ಪೈಶಾಚಿಕ ಕೃತ್ಯ ; 65 ವರ್ಷದ ವೃದ್ಧ...
02-02-26 10:37 pm