ಬ್ರೇಕಿಂಗ್ ನ್ಯೂಸ್
27-09-21 08:06 pm Mangaluru Correspondent ಕರಾವಳಿ
ಮಂಗಳೂರು, ಸೆ.27: ಕೆಎಸ್ಸಾರ್ಟಿಸಿ ಡಿಪೋದಲ್ಲಿ ಚಾಲಕನಾಗಿ ಕರ್ತವ್ಯದಲ್ಲಿದ್ದು ಆರು ತಿಂಗಳ ಹಿಂದೆ ಅಮಾನತುಗೊಂಡಿದ್ದ ಬಾಗಲಕೋಟ ಜಿಲ್ಲೆಯ ಮೂಲದ ವ್ಯಕ್ತಿಯೊಬ್ಬ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
15 ವರ್ಷಗಳಿಂದ ಮಂಗಳೂರು ಡಿಪೋದಲ್ಲಿ ಚಾಲಕ ವೃತ್ತಿಯಲ್ಲಿದ್ದ ಲಿಂಗಪ್ಪ(49) ಸಾವನ್ನಪ್ಪಿದ ವ್ಯಕ್ತಿ. ಹಿರಿಯಾಧಿಕಾರಿಗಳ ಜೊತೆ ದುರ್ನಡತೆ ತೋರಿದ ಆರೋಪದಲ್ಲಿ ಆತನನ್ನು ಕಳೆದ ಮಾರ್ಚ್ ನಲ್ಲಿ ಕೆಲಸದಿಂದ ಅಮಾನತು ಮಾಡಲಾಗಿತ್ತು. ಆನಂತರ, ಈ ಬಗ್ಗೆ ಇಲಾಖಾ ತನಿಖೆ ನಡೆಸಲಾಗುತ್ತಿತ್ತು. ಆರು ತಿಂಗಳಲ್ಲಿ ತನಿಖೆ ಪೂರ್ತಿಯಾಗಿದ್ದು, ಇನ್ನೊಂದು ವಾರದಲ್ಲಿ ಮತ್ತೆ ಕೆಲಸಕ್ಕೆ ಸೇರಬೇಕಾದ ಸಂದರ್ಭದಲ್ಲೇ ಸಾವಿಗೆ ಶರಣಾಗಿದ್ದಾನೆ.

ಮೂಲತಃ ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲೂಕಿನ ನಿವಾಸಿ ಲಿಂಗಪ್ಪ ಮಂಗಳೂರು ನಗರದ ಕುಂಟಿಕಾನದಲ್ಲಿ ಬಾಡಿಗೆ ಕೊಠಡಿಯಲ್ಲಿ ವಾಸವಿದ್ದ. ತೀವ್ರ ಕುಡಿತದ ಚಟ ಹೊಂದಿದ್ದರಿಂದ ವೃತ್ತಿಯಲ್ಲಿದ್ದಾಗಲೂ ಮೇಲಧಿಕಾರಿಗಳ ಸೂಚನೆ ಪಾಲಿಸುತ್ತಿರಲಿಲ್ಲ ಎನ್ನುವ ಆರೋಪಗಳಿದ್ದವು. ಕಳೆದ ಬಾರಿ, ಬಸ್ಸನ್ನು ಡಿಪೋಗೆ ತಲುಪಿಸು ಎಂದು ಡಿಪೋ ಮ್ಯಾನೇಜರ್ ಸೂಚನೆ ನೀಡಿದರೂ, ಅದನ್ನು ಕೇಳಿರಲಿಲ್ಲ. ಅದೇ ನೆಪ ಇಟ್ಟುಕೊಂಡು ಡಿಪೋ ಅಧಿಕಾರಿ ಲಿಂಗಪ್ಪನನ್ನು ಕೆಲಸದಿಂದ ಅಮಾನತುಗೊಳಿಸಿದ್ದರು.
ಆದರೆ, ಮೇಲಧಿಕಾರಿಗಳ ಕಿರುಕುಳ ಕಾರಣದಿಂದಲೇ ಲಿಂಗಪ್ಪ ಆತ್ಮಹತ್ಯೆಗೆ ಶರಣಾಗಿದ್ದಾನೆ ಎಂದು ಆತನ ಕುಟುಂಬಸ್ಥರು ಆರೋಪ ಮಾಡಿದ್ದಾರೆ. ಈ ಬಗ್ಗೆ ಕೆಎಸ್ಸಾರ್ಟಿಸಿ ಮಂಗಳೂರು ವಿಭಾಗದ ಡೀಸಿ ಅರುಣ್ ಬಳಿ ಕೇಳಿದರೆ, ಆತನಿಗೆ ಫ್ಯಾಮಿಲಿ ಪ್ರಾಬ್ಲಂ ಇತ್ತು. ಕರ್ತವ್ಯದಿಂದ ಸಸ್ಪೆಂಡ್ ಆಗಿದ್ದರೂ, ರಿವೋಕ್ ಮಾಡಿಸಲು ಯತ್ನ ನಡೆದಿತ್ತು. ಇನ್ನೊಂದು ವಾರದಲ್ಲಿ ಕರ್ತವ್ಯಕ್ಕೆ ಮರಳಬಹುದಿತ್ತು. ಆದರೆ, ಅಷ್ಟರಲ್ಲೇ ದುರಂತ ತಂದುಕೊಂಡಿದ್ದಾನೆ. ಯಾಕಾಗಿ ಸಾವಿಗೆ ಶರಣಾಗಿದ್ದಾನೆಂದು ಪೊಲೀಸರು ತನಿಖೆ ನಡೆಸಲಿದ್ದಾರೆ ಎಂದು ಹೇಳಿದ್ದಾರೆ.
Suspended KSRTC driver commits suicide at his residence in Mangalore family allege torture of officers. The deceased has been identified as Lingappa (49). He was working in Mangalore depo since 15 years. It is said that he was suspended because he was addicted to alcohol during duty hours.
23-06-26 05:58 pm
HK News Staffer
ಅಡ್ಡ ಮತದಾನ; ಧರ್ಮಸ್ಥಳದಲ್ಲಿ ಶಾಸಕರು ಬಂದು ಆಣೆ ಮಾಡ...
22-06-26 08:18 pm
ವಿಧಾನ ಪರಿಷತ್ ಚುನಾವಣೆಗೂ ಮುನ್ನ ರಹಸ್ಯ ಸಭೆ ; ಬಿಜೆ...
22-06-26 03:44 pm
ಆಸ್ಪತ್ರೆ ಸಿಬ್ಬಂದಿ ಸ್ಪಂದಿಸದಿದ್ದರೆ ಚಿಂತೆ ಬೇಡ ;...
22-06-26 12:51 pm
Cross Voting Row, Vijayendra: ಅಡ್ಡ ಮತದಾನ ; ಧರ...
21-06-26 02:18 pm
23-06-26 10:47 pm
HK News Staffer
ಟಿಎಂಸಿಯಲ್ಲಿ ರಾಜಕೀಯ ಭೂಕಂಪ ; ಮಮತಾ ಬ್ಯಾನರ್ಜಿ ಅಧ...
23-06-26 12:21 pm
ಕತಾರ್ ಕೈಗಾರಿಕಾ ಪ್ರದೇಶದಲ್ಲಿ ಭಾರೀ ಸ್ಫೋಟ ; 54 ಜನ...
22-06-26 12:55 pm
ಮರಳು ಮಾಫಿಯಾ ಅಟ್ಟಹಾಸಕ್ಕೆ ಬಿಜೆಪಿ ನಾಯಕ ಸಜೀವ ದಹನ;...
18-06-26 07:17 pm
ಮೋದಿ ನೋಡಲು ಶಾಂತ, ಒಳ್ಳೇ ವ್ಯಕ್ತಿಯಂತೆ ಕಾಣ್ತಾರೆ.....
18-06-26 01:23 pm
23-06-26 06:02 pm
HK News Staffer
ಬಸ್ ಚಲಿಸುತ್ತಿದ್ದಾಗಲೇ ಬಿಪಿ ಲೋ ಆಗಿ ಕುಸಿದ ಚಾಲಕ !...
23-06-26 03:18 pm
ಮುಸ್ಲಿಮರಿಗೆ ಸಚಿವ ಸ್ಥಾನ ; ಕಾಂಗ್ರೆಸಿಗೆ ಓಟ್ ಹಾಕದ...
23-06-26 11:49 am
ಉಡುಪಿ ಕೋರ್ಟ್ಗೆ ಇ-ಮೇಲ್ ಮೂಲಕ ಬಾಂಬ್ ಬೆದರಿಕೆ; ಕೆ...
22-06-26 05:23 pm
Dr Kakkillaya News: ಕೊರಾನಾ ಮಾಸ್ಕ್ ಹಾಕಿಲ್ಲವೆಂದ...
21-06-26 08:59 pm
23-06-26 02:15 pm
HK News Staffer
ಮಗಳಿಗೆ ಬುದ್ಧಿ ಹೇಳಿದ್ದೇ ತಪ್ಪಾಯ್ತಾ ? ಲಿವ್-ಇನ್...
23-06-26 12:57 pm
ಅಕ್ರಮ ಪೊಲೀಸ್ ಕ್ಲಿಯರೆನ್ಸ್ ; ಮೂರೇ ದಿನದಲ್ಲಿ ಸಿಸಿ...
22-06-26 10:21 pm
ಉಡುಪಿಯಲ್ಲಿ ಮಕ್ಕಳಿಲ್ಲದ ದಂಪತಿಗೆ ಮಗು ಮಾರಾಟ; ವೈದ್...
22-06-26 08:01 pm
ಹಂದಿ ಜ್ವರಕ್ಕೆ ಕಾರವಾರದ ವ್ಯಕ್ತಿ ಮಂಗಳೂರಿನಲ್ಲಿ ಬಲ...
22-06-26 07:58 pm