ಬ್ರೇಕಿಂಗ್ ನ್ಯೂಸ್
26-09-21 04:53 pm Mangaluru Correspondent ಕರಾವಳಿ
ಮಂಗಳೂರು, ಸೆ.26: ಒಂದೂವರೆ ವರ್ಷದ ಕೊರೊನಾ ಲಾಕ್ಡೌನ್, ಆತಂಕದ ಬಳಿಕ ಜನರು ಸಹಜ ಜೀವನದತ್ತ ತೆರೆದುಕೊಂಡಿದ್ದಾರೆ. ಹೊಟೇಲು, ರೆಸಾರ್ಟ್, ಪ್ರವಾಸಿ ತಾಣಗಳು ಪ್ರವಾಸಿಗರಿಗೆ ತೆರೆದುಕೊಂಡಿದ್ದು, ಜನರು ಮತ್ತೆ ಹಿಂದಿನ ರೀತಿಯಲ್ಲೇ ಓಡಾಡಲು ಆರಂಭಿಸಿದ್ದಾರೆ. ಇದೇ ಹಿನ್ನೆಲೆಯಲ್ಲಿ ಪುಣೆಯ ಪ್ರವಾಸಿಗರು ಖಾಸಗಿ ಜೆಟ್ ವಿಮಾನದಲ್ಲಿ ಮಂಗಳೂರಿಗೆ ಬಂದಿದ್ದು, ಇಲ್ಲಿನ ದೇವಸ್ಥಾನ, ಪ್ರವಾಸಿ ತಾಣಗಳತ್ತ ಹೆಜ್ಜೆ ಹಾಕಿದ್ದಾರೆ.
ಪುಣೆಯಿಂದ ಬಂದ 16 ಮಂದಿಯಿದ್ದ ಆರು ಕುಟುಂಬಗಳ ಸದಸ್ಯರು ಮಂಗಳೂರು ಏರ್ಪೋರ್ಟ್ ನಲ್ಲಿ ಜೆಟ್ ವಿಮಾನವನ್ನು ಇಳಿಸಿದ್ದಾರೆ. ಆನಂತರ, ಅಲ್ಲಿಂದ ಬೇರೆ ವಾಹನಗಳನ್ನು ಬುಕ್ ಮಾಡಿದ್ದು, ಮೂಡುಬಿದ್ರೆ ಸಾವಿರ ಕಂಬದ ಬಸದಿ, ಕಟೀಲು, ಕುಕ್ಕೆ ಸುಬ್ರಹ್ಮಣ್ಯ, ಧರ್ಮಸ್ಥಳ ಹೀಗೆ ಪುಣ್ಯಕ್ಷೇತ್ರಗಳು ಮತ್ತು ಪ್ರವಾಸಿ ತಾಣಗಳಿಗೆ ತೆರಳಲಿದ್ದಾರೆ. ಸೋಮವಾರ ಈ ತಂಡವು ರಸ್ತೆ ಮಾರ್ಗದಲ್ಲೇ ಮಡಿಕೇರಿಗೆ ತೆರಳಲಿದ್ದು, ಅಲ್ಲಿನ ಪ್ರವಾಸಿ ತಾಣಗಳ ವೀಕ್ಷಣೆ ನಡೆಸಲಿದೆ.
ಜೆಟ್ ವಿಮಾನದಲ್ಲಿ ಬಂದ ತಂಡವನ್ನು ದಕ್ಷಿಣ ಕನ್ನಡ ಜಿಲ್ಲಾ ಪ್ರವಾಸೋದ್ಯಮ ಇಲಾಖೆಯ ಅಧಿಕಾರಿಗಳು ಮತ್ತು ರೆಡ್ ಕ್ರಾಸ್ ಸದಸ್ಯರು ಬರಮಾಡಿಕೊಂಡಿದ್ದಾರೆ. ಪಣಂಬೂರು ಅಭಿವೃದ್ಧಿ ಪ್ರಾಧಿಕಾರದ ಮಾಜಿ ಸಿಇಓ ಯತೀಶ್ ಬೈಕಂಪಾಡಿ, ಪ್ರವಾಸಿಗರನ್ನು ಸ್ವಾಗತಿಸಿದ್ದು ವಿವಿಧ ಕಡೆಗಳಿಗೆ ಒಯ್ಯಲು ವ್ಯವಸ್ಥೆ ಮಾಡಿದ್ದಾರೆ.
ಖಾಸಗಿ ಜೆಟ್ ವಿಮಾನದಲ್ಲಿ ಪ್ರವಾಸಿಗರು ಬರುವುದು ಇದೇ ಮೊದಲಲ್ಲ. ಶ್ರೀಮಂತ ಕುಟುಂಬಸ್ಥರು ವಿಮಾನವನ್ನೇ ಬುಕ್ ಮಾಡಿಕೊಂಡು ಬರುವುದು ಹಿಂದಿನಿಂದಲೂ ಇದೆ. ಈಗ ಕಳೆದ ಎರಡು ವರ್ಷಗಳಲ್ಲಿ ಪೂರ್ತಿ ಬಂದ್ ಆಗಿತ್ತು. ಈಗ ಪ್ರವಾಸೋದ್ಯಮ ಮತ್ತೆ ತೆರೆದುಕೊಳ್ಳುತ್ತಿದ್ದು, ಪ್ರವಾಸಿಗರು ಕೂಡ ಹಿಂದಿನ ರೀತಿಯಲ್ಲೇ ಓಡಾಟಕ್ಕೆ ಶುರು ಮಾಡಿದ್ದಾರೆ. ಬಂದ್ ಆಗಿದ್ದ ಪ್ರವಾಸೋದ್ಯಮ ಮತ್ತೆ ಚಿಗುರುತ್ತಿದೆ ಎಂದು ಯತೀಶ್ ಬೈಕಂಪಾಡಿ ಪ್ರತಿಕ್ರಿಯಿಸಿದ್ದಾರೆ.
ಮಂಗಳೂರು ಏರ್ಪೋರ್ಟಿಗೆ ಆಬಳಿಕ ತಮಿಳುನಾಡಿನ ಮಧುರೈನಿಂದ ಮತ್ತೊಂದು ಖಾಸಗಿ ವಿಮಾನ ಬಂದಿದ್ದು, ನಾಲ್ಕು ಜನ ಅದರಿಂದ ಇಳಿದು ಕೊಲ್ಲೂರಿನತ್ತ ಪ್ರಯಾಣಿಸಿದ್ದಾರೆ. ಸಣ್ಣ ರೀತಿಯ ಖಾಸಗಿ ವಿಮಾನಗಳಲ್ಲಿ ಪ್ರವಾಸಿಗರು ಬರುತ್ತಿರುವುದು ಸಾಮಾನ್ಯ. ಅದರ ಬಗ್ಗೆ ಹೆಚ್ಚು ಪ್ರಚಾರ ಇಲ್ಲ ಅಷ್ಟೇ ಎಂದು ಯತೀಶ್ ಬೈಕಂಪಾಡಿ ಹೇಳಿದ್ದಾರೆ.
13 individuals of a family in Pune arrived at Mangaluru airport in a private jet for a visit to various tourism spots in the district. The jet arrived at around 11.30 am, and officials of the tourism department welcomed the tourists. It is learnt that the tourists will visit Savirakambada (Thousand Pillar) Basadi in Moodbidri, and temples at Karkala, Kateel, Bappanadu, Dharamasthala, Kukke Subramanya. They will travel to Madikeri on Monday September 27.
23-04-25 10:49 pm
Bangalore Correspondent
Cm Siddaramaiah, Pahalgam Attack: ಉಗ್ರರ ದಾಳಿಯ...
23-04-25 08:04 pm
Karnataka, D K Shivakumar, Pahalgam: ಕಾಶ್ಮೀರ...
23-04-25 06:54 pm
Pahalgam Terror Attack, Bharath Bhushan: ಪಹಲ್...
23-04-25 02:51 pm
Harish Poonja, Speaker U T Khader: ಸ್ಪೀಕರ್ ಧರ...
23-04-25 01:06 pm
24-04-25 01:58 pm
HK News Desk
India Pak News: ಭಾರತ- ಪಾಕ್ ಸಂಬಂಧಕ್ಕೆ ಬ್ರೇಕ್ ;...
24-04-25 12:46 pm
Pahalgam terror attack, Pakistani terrorists:...
23-04-25 09:25 pm
ಪಹಲ್ಗಾಮ್ ಭಯೋತ್ಪಾದಕ ದಾಳಿಯ ಮಾಸ್ಟರ್ ಮೈಂಡ್ ಲಷ್ಕರ್...
23-04-25 05:16 pm
Pahalgam terror attack Live: ಜಮ್ಮು ಕಾಶ್ಮೀರದಲ್...
22-04-25 10:33 pm
23-04-25 10:23 pm
Udupi Correspondent
ಜಾತ್ಯತೀತರು ಉಗ್ರರಿಗೆ ಧರ್ಮ ಇಲ್ಲ ಎನ್ನುತ್ತಿದ್ದರು,...
23-04-25 09:45 pm
Terror Attack, Mangalore Mp, Brijesh Chowta:...
23-04-25 09:36 pm
Bearys Group, Bearys Turning Point mall, Dera...
23-04-25 09:23 pm
ವಿನೂತನ ಒಳ ಮೀಸಲಾತಿ ನೀತಿ ಪ್ರಕಟಿಸಲು ಒತ್ತಾಯ ; ಬೀದ...
21-04-25 10:32 pm
24-04-25 12:58 pm
Mangaluru Correspondent
Ullal Gang Rape, Mangalore, Police: ಗ್ಯಾಂಗ್ ರ...
23-04-25 01:03 pm
Shivamogga man killed in Pahalgam attack: ಕಾಶ...
22-04-25 07:37 pm
IPS Om Prakash Murder, Update: ನಿವೃತ್ತ ಡಿಜಿಪಿ...
22-04-25 03:26 pm
Om Prakash IPS Murder, Wife arrest: ನಿವೃತ್ತ ಡ...
21-04-25 01:03 pm