ಬ್ರೇಕಿಂಗ್ ನ್ಯೂಸ್
20-09-21 12:46 pm Mangaluru Correspondent ಕರಾವಳಿ
ಮುಡಿಪು, ಸೆ.20: ರಸ್ತೆ ಬದಿಯ ಮನೆಯಂಗಳದಲ್ಲಿ ಆಟವಾಡುತ್ತಿದ್ದ ಬಾಲಕನೊಬ್ಬ ಧಿಡೀರ್ ಆಗಿ ರಸ್ತೆ ದಾಟಿ ಓಡುತ್ತಿದ್ದ ವೇಳೆ ಕಾರಿನಡಿಗೆ ಬಿದ್ದರೂ ಪವಾಡ ಸದೃಶ ಸಣ್ಣಪುಟ್ಟ ಗಾಯಗಳೊಂದಿಗೆ ಪಾರಾದ ಘಟನೆ ಮುಡಿಪು ಬಳಿಯ ಇರಾದಲ್ಲಿ ನಡೆದಿದೆ.
ಇರಾ ಸೈಟ್ ಬಸ್ ಸ್ಟಾಪ್ ಬಳಿಯ ಮೈಸೂರು ಮೂಲದ ಇಂಜಿನಿಯರ್ ಶಿವಾನಂದ್ ಪುತ್ರ ಮನೋಜ್ (12)ಎಂಬಾತನೇ ಅಪಘಾತದಲ್ಲಿ ಕಾರಿನಡಿಗೆ ಬಿದ್ದು ಅಪಾಯದಿಂದ ಪಾರಾದ ಬಾಲಕ. ಮನೋಜ್ ತನ್ನ ಮನೆ ಅಂಗಳದಿಂದ ದಿಢೀರ್ ಆಗಿ ರಸ್ತೆಗಿಳಿದು ದಾಟಲೆಂದು ಓಡಿದ್ದು ಇನ್ನೊಂದು ಬದಿಯಿಂದ ಬರುತ್ತಿದ್ದ ಆಲ್ಟೋ ಕಾರು ಡಿಕ್ಕಿಯಾಗಿದೆ. ಆದರೆ, ಕಾರು ಚಾಲಕ ದಿಢೀರ್ ಆಗಿ ಬಾಲಕ ಅಡ್ಡ ಬಂದಿದ್ದರಿಂದ ಗಲಿಬಿಲಿಯಾಗಿ ತಪ್ಪಿಸಲು ಯತ್ನಿಸಿದ್ದಾನೆ. ಆದರೆ ಅಷ್ಟರಲ್ಲಿ ಕಾರು ಡಿಕ್ಕಿಯಾಗಿ ಬಾಲಕ ಅಡಿಗೆ ಬಿದ್ದಿದ್ದು ರಸ್ತೆ ಬದಿಯ ಪೊದೆಯ ಮೂಲಕ ಆತನ ಮೇಲಿಂದಲೇ ಕಾರು ಹರಿದಿದೆ.


ಅದೃಷ್ಟ ಇದ್ದರೆ ಸಾವನ್ನೂ ಗೆಲ್ಲಬಹುದು ಎನ್ನುವಂತೆ, ಬಾಲಕ ಪೊದೆಯ ಎಡೆಗೆ ಬಿದ್ದ ಕಾರಣ ಪವಾಡ ಸದೃಶ ಅಪಾಯದಿಂದ ಪಾರಾಗಿದ್ದಾನೆ. ಘಟನೆಯಿಂದ ಬಾಲಕ ಮನೋಜ್ ಎಡ ಕಾಲಿಗೆ ಪೆಟ್ಟು ಬಿದ್ದಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.
ರಸ್ತೆ ಬದಿ ಮನೆಗಳಿರುವ ಪೋಷಕರು ತಮ್ಮ ಮಕ್ಕಳ ಬಗ್ಗೆ ನಿಗಾ ವಹಿಸಬೇಕಿದ್ದು , ಮಕ್ಕಳು ಆಡುವಾಗ, ರಸ್ತೆ ದಾಟುವ ವೇಳೆ ಜಾಗರೂಕರಾಗಿರಬೇಕಿದೆ.
Video:
Mangalore Car hits 12-year- old-boy in Mudipu sustain injury accident recorded in CCTV. The boy who was supposed to be dead has miraculously escape
17-09-26 04:13 pm
HK News Staffer
ಚಿತ್ರರಂಗದ ಸಾರ್ವಕಾಲಿಕ ಶ್ರೇಷ್ಠ ನಟ ಅನಂತನಾಗ್ ಗೆ '...
16-09-26 10:40 pm
Tulu Language, Shivraj Tangadagi: ತುಳುವಿಗೆ 2ನ...
16-09-26 01:51 pm
Pradeep Eshwar, Pratap Simha: ಪೊಲೀಸ್ ಠಾಣೆಗೆ...
15-09-26 09:13 pm
Imran Pasha, Pratap Simha: ನಿನ್ನಂತಹ ಒಂದು ಲಕ್...
15-09-26 04:46 pm
13-09-26 09:00 pm
HK News
80s ಫೋಟೋ ಟ್ರೆಂಡ್ಗೆ ಮಾರುಹೋಗಿದ್ದೀರಾ? ಹುಷಾರ್ ;...
12-09-26 01:10 pm
ಕಾಶ್ಮೀರಿ ಪಂಡಿತರಿಗೆ ಮತ್ತೆ ಬೆದರಿಕೆ ; ಉದ್ಯೋಗ ಬಿಟ...
10-09-26 01:23 pm
ನೇಪಾಳ ಪ್ರವಾಹ ; ಹತ್ತು ದಿನಗಳ ಬಳಿಕ ಜಲವಿದ್ಯುತ್ ಸು...
05-09-26 11:55 am
ಮುಂದಿನ ಒಂದು ವರ್ಷದಲ್ಲಿ ಒಂದು ಸಾವಿರ ವಿದ್ಯಾಭಾರತಿ...
04-09-26 08:14 pm
18-09-26 11:30 am
HK News Staffer
SDPI Protest, CM DK Shivakumar, Mangalore: ರಹ...
18-09-26 10:35 am
Mangalore, Karnataka Cabinet Meeting, DK Shiv...
18-09-26 09:49 am
ಕಸ್ತೂರಿ ರಂಗನ್ ವರದಿ ; 43 ಗ್ರಾಮಗಳ ಆತಂಕ ನಿವಾರಣೆಗ...
17-09-26 08:48 pm
Mangalore, DK Shivakumar, Coastal Karnataka,...
17-09-26 08:02 pm
17-09-26 02:22 pm
HK News Staffer
Bangalore Murder, Crime: ಪ್ರೀತಿಸಿ ಮದುವೆಯಾಗಿದ್...
17-09-26 01:56 pm
Bangalore kidnap, Crime: ಬೆಂಗಳೂರಿನಲ್ಲಿ ಶಾಕ್...
17-09-26 12:35 pm
Manglore Cyber crime, Stock Market: ಷೇರು ಮಾರ್...
17-09-26 11:45 am
ಬೆಳ್ತಂಗಡಿ; ಗೃಹಪ್ರವೇಶಕ್ಕೆ ಹೋದಾಗ ಮನೆಗೆ ಕನ್ನ, ₹1...
16-09-26 11:18 am