ಬ್ರೇಕಿಂಗ್ ನ್ಯೂಸ್
01-09-21 10:42 pm Mangaluru correspondent ಕರಾವಳಿ
ಬಂಟ್ವಾಳ, ಸೆ.1: ಬಂಟ್ವಾಳ ತಾಲೂಕಿನ ಮೇಗಿನ ಕುರಿಯಾಳದಲ್ಲಿ ಪ್ರಾಚ್ಯಸಂಚಯ ಸಂಶೋಧನ ಕೇಂದ್ರ- ಉಡುಪಿ,(ಎನ್.ಟಿ.ಸಿ.-ಎ.ಒ.ಎಂ-ನ ಅಂಗಸಂಸ್ಥೆ) ಇದರ ಅಧ್ಯಯನ ನಿರ್ದೇಶಕ ಪ್ರೊ.ಎಸ್.ಎ.ಕೃಷ್ಣಯ್ಯ ಅವರು ಇತ್ತೀಚೆಗೆ ಪತ್ತೆ ಮಾಡಿದ ಶಾಸನವನ್ನು ಇತಿಹಾಸ ಮತ್ತು ಪುರಾತತ್ವ ಸಂಶೋಧನಾರ್ಥಿ ಶ್ರುತೇಶ್ ಆಚಾರ್ಯ ಮೂಡುಬೆಳ್ಳೆ ಅವರು ಓದಿ ಅರ್ಥೈಸಿದ್ದಾರೆ.
ಗ್ರಾನೈಟ್ (ಕಣ)ಶಿಲೆಯಲ್ಲಿ ಕೊರೆಯಲ್ಪಟ್ಟ ಈ ಶಾಸನವು ಕನ್ನಡ ಲಿಪಿ ಮತ್ತು ಭಾಷೆಯಲ್ಲಿದ್ದು 25 ಸಾಲುಗಳನ್ನು ಹೊಂದಿದೆ. ಶಾಸನವು 178 ಸೆಂ.ಮೀ ಎತ್ತರ ಮತ್ತು 78 ಸೆಂ.ಮೀ ಅಳತೆಯನ್ನು ಹೊಂದಿರುತ್ತದೆ. ಶಕವರುಷ 1286 ನೇ ಕ್ರೋಧಿ ಸಂವತ್ಸರದ ಮೇಷ ಮಾಸ 13 (ಕ್ರಿ.ಶ 1364 ಎಪ್ರಿಲ್ 27 - ಶುಕ್ರವಾರ) ಲು ಪಾಂಡೇಶ್ವರ ದೇವರು ಹಾಗೂ ದೇವರಾಜಮ(ಯ)ತಿ ಶ್ರೀಪಾದಂಗಳ ಸಮ್ಮುಖದಲ್ಲಿ ಮಿತ್ತ ಕೂರ್ಯ್ಯಳ ಮತ್ತು ಚಿಳ್ತ ಕೂರ್ಯ್ಯಳ (ಪ್ರಸ್ತುತ ಮೇಗಿನ ಕುರಿಯಾಳ ಮತ್ತು ತಿರ್ತ ಕುರಿಯಾಳ) ವಾಸಿಗಳು ಅಕ್ಕಿ ಮುಡಿ ಮತ್ತು ಗದ್ಯಾಣಗಳನ್ನು ಪಾಂಡೇಶ್ವರ ದೇವರಿಗೆ ಮಂಗಳೂರು ರಾಜ್ಯಪಾಲ ಮಾದರಸ ಒಡೆಯನ (ಕ್ರಿ.ಶ. 1364) ಮೂಲಕ ದಾನ ಮಾಡಿದ ಉಲ್ಲೇಖ ಈ ಶಾಸನದಲ್ಲಿದೆ.
ಮಿತ್ತ ಕೂರ್ಯ್ಯಲದ ರಾಜು ಎಂಬಳಿಯ ವಂಜುಕಡಿತಲೆಯನ ತಮ್ಮ ಹಲಯಬರ, ಆರ್ಯ ಬಳಿಯ ಕೊರತಿ ಸೆಟ್ಟಿತಿಯ ತಮ್ಮ ಬಂಕಿಯಣ, ಬಡಲೆ ಮಾಳಗೌಡರ ಭೂಮಿಯಿಂದ ಹಾಗೂ ಚಿಳ್ತ ಕೂರ್ಯ್ಯಲದ ಪುಂಣ್ಯಂ ಕುಂದಯ ಸಂಬು ಮತ್ತನವರ ಭೂಮಿಯಿಂದ ಅರಸನಿಗೆ ಪ್ರತಿ ವರ್ಷ 34 ಗದ್ಯಾಣಗಳು ಮತ್ತು 30 ಮುಡಿ ಭತ್ತವನ್ನು ಪಾಂಡೇಶ್ವರ ದೇವರ ರಕ್ಷೋಭೋಗವಾಗಿ ಮಾದರಸ ಒಡೆಯರ ಮೂಲಕವಾಗಿ ನೀಡಿದ ಉಲ್ಲೇಖವಿದೆ. ಈ ಧರ್ಮಕ್ಕೆ ಯಾರೊಬ್ಬರು ತಪ್ಪಿದರೆ ಅರಸನಿಗೆ 1000 ಗದ್ಯಾಣವನ್ನು ತೆರಬೇಕೆಂದು ತಿಳಿಸಲಾಗಿದೆ.
ಶಾಸನದ ಕೊನೆಯಲ್ಲಿ ಶಾಪಾಶಯ ವಾಕ್ಯವಿದ್ದು, ಕೊನೆಯಲ್ಲಿ ಈ ಶಾಸನವನ್ನು ಬರೆದವ ಅಲುಪಭೋವ (?) ಎಂಬ ಉಲ್ಲೇಖವಿದೆ.
ಕ್ಷೇತ್ರಕಾರ್ಯ ಶೋಧನೆಯ ಸಂದರ್ಭದಲ್ಲಿ ತುಳು ಅಕಾಡೆಮಿಯ ಅಧ್ಯಕ್ಷ ದಯಾನಂದ ಕತ್ತಲಸಾರ್, ಗಣೇಶ್ ಆಚಾರ್ಯ, ಸದಾಶಿವ ಆಚಾರ್ಯ, ಗುರುವಪ್ಪ ಪೂಜಾರಿ, ಕಿಶನ್ ಕುಮಾರ್ ಮೂಡುಬೆಳ್ಳೆ ಅವರು ಸಹಕಾರ ನೀಡಿರುತ್ತಾರೆ.
13th century Monument of Pandeshwara has been found in kuriyala bantwal.
01-05-25 01:08 pm
HK News Desk
MA Saleem, DGP-IGP, Prashanth Thakur, Police:...
30-04-25 05:08 pm
R Ahsok, Cm Siddaramaiah, Pak: ಕಾಂಗ್ರೆಸ್ನವರಿ...
29-04-25 10:45 pm
CM Siddaramaiah, Belagavi, BJP Suresh Kumar:...
29-04-25 09:51 pm
Protest Kalaburagi, islamabad Locality: ಕಲಬುರ...
29-04-25 09:20 pm
30-04-25 06:59 pm
HK News Desk
India Pakistan War: ಭಾರತೀಯ ಸೇನಾಪಡೆಗೆ ಪರಮಾಧಿಕಾ...
30-04-25 03:14 pm
Pakistan, No-fly zone islamabad: ಭಾರತದ ಪ್ರತೀಕ...
30-04-25 02:13 pm
ಮೋದಿ 'ಗಾಯಬ್' ಎಂದು ಕಾಂಗ್ರೆಸ್ ಪೋಸ್ಟ್ ; ಕಾಂಗ್ರೆಸ...
29-04-25 03:45 pm
'ನನಗೆ ಪಾಕಿಸ್ತಾನದಲ್ಲಿ ಯಾರೂ ಇಲ್ಲ, ದಯವಿಟ್ಟು ಉಳಿಸ...
28-04-25 06:52 pm
01-05-25 12:23 pm
Mangalore Correspondent
Congress Harish Kumar, Kudupu Murder case, Ma...
30-04-25 11:26 pm
Kudupu Murder Case, SDPI, Ravindra Nayak: ಗುಂ...
30-04-25 11:07 pm
Nidhi Land Developers, Mangalore, Sky Garden:...
30-04-25 08:29 pm
Mangalore, Dinesh Gundurao, Kudupu Murder: ಕು...
30-04-25 04:06 pm
30-04-25 04:09 pm
Mangalore Correspondent
Mangalore Mudipu Murder, Mob, Police, Crime:...
29-04-25 09:59 pm
Kudupu Murder, Mangalore Crime, Police: ಕುಡುಪ...
29-04-25 02:53 pm
Belthagady, Blackmail, Mangalore crime: ಬೆಳ್ತ...
28-04-25 11:39 am
Shootout Bakrebail, Mangalore Crime: ಬಾಕ್ರಬೈಲ...
28-04-25 11:24 am