ಬ್ರೇಕಿಂಗ್ ನ್ಯೂಸ್
31-08-21 12:47 pm Mangaluru Correspondent ಕರಾವಳಿ
ಮಂಗಳೂರು, ಆಗಸ್ಟ್ 31: ಶ್ರೀಲಂಕಾ ಮೂಲದ 13 ಮಂದಿ ಶಂಕಿತ ಉಗ್ರರು ಭಾರತದ ಕರಾವಳಿಗೆ ಒಳನುಗ್ಗಿದ್ದು ಗೃಹ ಇಲಾಖೆಯಿಂದ ಹೈಎಲರ್ಟ್ ಘೋಷಣೆ ಮಾಡಲಾಗಿದೆ.
ಉತ್ತರ ಶ್ರೀಲಂಕಾದ ಪೆಸಲಾಯಿ ಮತ್ತು ಮನ್ನಾರ್ ಎನ್ನುವ ಪ್ರದೇಶದಿಂದ ಮೂರು ತಂಡಗಳಾಗಿ ಒಟ್ಟು 13 ಮಂದಿ ತಮಿಳುನಾಡು ಮತ್ತು ಕೇರಳ ಕರಾವಳಿಗೆ ಬಂದಿದ್ದಾರೆ ಎನ್ನುವ ಮಾಹಿತಿಯಿದೆ. ಆದರೆ, ಶಂಕಿತರು ಭಾರತದ ಯಾವ ಪ್ರದೇಶದ ಮೂಲಕ ಒಳನುಸುಳುತ್ತಾರೆ ಎನ್ನುವುದರ ಬಗ್ಗೆ ತನಿಖಾ ತಂಡಗಳು ನಿಗಾ ಇಟ್ಟಿವೆ. ಹೀಗಾಗಿ ಕೇಂದ್ರ ಗೃಹ ಇಲಾಖೆಯಿಂದ ಭಾರತದ ಪೂರ್ವ ಮತ್ತು ಪಶ್ಚಿಮ ಕರಾವಳಿಯಲ್ಲಿ ಹೈ ಎಲರ್ಟ್ ಇರುವಂತೆ ಸೂಚನೆ ನೀಡಲಾಗಿದೆ.
ಶಂಕಿತ 13 ಮಂದಿ ಪಾಕಿಸ್ಥಾನಕ್ಕೆ ತೆರಳುವ ಉದ್ದೇಶದಿಂದ ಬಂದಿದ್ದಾರೆ ಎನ್ನಲಾಗುತ್ತಿದೆ. ಇದಕ್ಕಾಗಿ ಶ್ರೀಲಂಕಾದಿಂದ ಬೋಟ್ ಗಳಲ್ಲಿ ಬಂದಿದ್ದು, ತಮಿಳುನಾಡು ಕರಾವಳಿಗೆ ಬಂದು ಅಲ್ಲಿಂದ ರಸ್ತೆ ಮೂಲಕ ಕೇರಳ ಅಥವಾ ಕರ್ನಾಟಕಕ್ಕೆ ಬರಲು ಪ್ಲಾನ್ ಹಾಕಿದ್ದಾರೆ. ಇಲ್ಲಿಂದ ಮತ್ತೆ ಸಮುದ್ರ ಮಾರ್ಗದಲ್ಲಿ ಅಂತಾರಾಷ್ಟ್ರೀಯ ಜಲರೇಖೆಯ ವರೆಗೆ ಮೀನುಗಾರಿಕಾ ಬೋಟ್ ಗಳಲ್ಲಿ ಸಾಗಿ ಅಲ್ಲಿಂದ ಪಾಕಿಸ್ಥಾನಿ ಬೋಟ್ ಗಳಲ್ಲಿ ತೆರಳಲಿದ್ದಾರೆ ಎನ್ನಲಾಗುತ್ತಿದೆ.
ಅಂತಾರಾಷ್ಟ್ರೀಯ ಜಲರೇಖೆಯಲ್ಲಿ ಪಾಕಿಸ್ಥಾನಿ ಮೀನುಗಾರರು ಬರುತ್ತಿದ್ದು ಮೀನುಗಾರಿಕೆ ನೆಪದಲ್ಲಿ ಭಾರತದ ಕರಾವಳಿಯಿಂದ ಸಾಗುವ ತಮಿಳು ಕಾರ್ಮಿಕರ ಸೋಗಿನ ಶಂಕಿತರು ಪಾಕಿಸ್ಥಾನಿ ಬೋಟ್ ಸೇರುತ್ತಾರೆ. ಈ ರೀತಿಯ ರಹದಾರಿಯನ್ನು ಉಗ್ರರು ಕಂಡುಕೊಂಡಿದ್ದು, ಇದೀಗ 13 ಮಂದಿ ಲಂಕಾ ಮೂಲದ ಶಂಕಿತರು ಭಾರತದ ಕರಾವಳಿಗೆ ಬಂದಿರುವುದು ಆತಂಕ ಮೂಡಿಸಿದೆ. ಇದಕ್ಕಾಗಿ ಕೋಸ್ಟ್ ಗಾರ್ಡ್ ಮತ್ತು ಆಂತರಿಕ ಗುಪ್ತಚರ ಇಲಾಖೆಯನ್ನು ಕೇಂದ್ರ ಇಂಟೆಲಿಜೆನ್ಸಿಯಿಂದ ಎಲರ್ಟ್ ಮಾಡಲಾಗಿದೆ. ಹೀಗೆ ಬಂದಿರುವ ಶಂಕಿತ ಉಗ್ರರು ಪಾಕಿಸ್ಥಾನಕ್ಕೆ ತೆರಳುತ್ತಾರೆಯೇ ಅಥವಾ ಕೇರಳ, ಕರ್ನಾಟಕದ ಕರಾವಳಿ ಸ್ಲೀಪರ್ ಸೆಲ್ ಗಳಲ್ಲಿ ಉಳಿದುಕೊಳ್ಳುತ್ತಾರೆಯೇ ಎನ್ನುವ ಆತಂಕವೂ ಇದೆ.
2019ರಲ್ಲಿ ಕೊಲಂಬೋದಲ್ಲಿ ಸರಣಿ ಸ್ಫೋಟ !
ಶ್ರೀಲಂಕಾ ರಾಜಧಾನಿ ಕೊಲಂಬೋದಲ್ಲಿ 2019ರ ಎಪ್ರಿಲ್ 21ರ ಈಸ್ಟರ್ ಸಂಡೇಯಂದು ಒಂದೇ ದಿನ ಎಂಟು ಕಡೆ ಆತ್ಮಹತ್ಯಾ ಬಾಂಬ್ ದಾಳಿ ನಡೆದಿತ್ತು. ಮೂರು ಚರ್ಚ್ ಹಾಗೂ ಹಲವಾರು ಲಕ್ಸುರಿ ಹೊಟೇಲ್ ಮುಂದುಗಡೆ ಸರಣಿ ಬಾಂಬ್ ಸ್ಫೋಟ ಆಗಿತ್ತು. ಈಸ್ಟರ್ ಸಂಡೇ ಆಗಿದ್ದರಿಂದ ಚರ್ಚ್ ಗಳಲ್ಲಿ ಭಾರೀ ಸಂಖ್ಯೆಯಲ್ಲಿ ಜನರು ಸೇರಿದ್ದರು. ಘಟನೆಯಲ್ಲಿ ಭಾರತದ ಹನ್ನೊಂದು ಮಂದಿ ಸೇರಿ 274 ಜನರು ಸತ್ತಿದ್ದರು. ಭಯೋತ್ಪಾದಕ ಕೃತ್ಯವನ್ನು ಸಿರಿಯಾ ಮೂಲದ ಐಸಿಸ್ ಜೊತೆಗೆ ಲಿಂಕ್ ಹೊಂದಿರುವ ಶ್ರೀಲಂಕಾದ ತೀವ್ರವಾದಿ ಮುಸ್ಲಿಮ್ ಸಂಘಟನೆ ನೇಶನಲ್ ತೌಹೀದ್ ಜಮಾತ್ ಮಾಡಿತ್ತು ಎನ್ನುವ ಸುದ್ದಿ ಹರಡಿತ್ತು. ಸರಣಿ ಬಾಂಬ್ ಬ್ಲಾಸ್ಟ್ ಘಟನೆಯ ನಂತರ ಶ್ರೀಲಂಕಾದ ತನಿಖಾ ತಂಡ ಭಾರತದ ಗುಪ್ತಚರ ಏಜನ್ಸಿಗಳ ಜೊತೆ ಸೇರಿ ತನಿಖೆಯನ್ನು ನಡೆಸಿದ್ದು 100ಕ್ಕೂ ಹೆಚ್ಚು ಮಂದಿಯನ್ನು ಬಂಧಿಸಿತ್ತು. ಅಲ್ಲದೆ, ಮುಸ್ಲಿಂ ತೀವ್ರವಾದಿ ಗುಂಪುಗಳ ಬಗ್ಗೆ ಕಟ್ಟೆಚ್ಚರ ವಹಿಸಿತ್ತು.
A group of 13 Sri Lanka Terrorists have said to be entered India as of which Kerala and Karnataka coastal security are on high alert patrolling. The said 13 are to said to sail to Pakistan. The coast guard police are now on search.
23-04-25 10:49 pm
Bangalore Correspondent
Cm Siddaramaiah, Pahalgam Attack: ಉಗ್ರರ ದಾಳಿಯ...
23-04-25 08:04 pm
Karnataka, D K Shivakumar, Pahalgam: ಕಾಶ್ಮೀರ...
23-04-25 06:54 pm
Pahalgam Terror Attack, Bharath Bhushan: ಪಹಲ್...
23-04-25 02:51 pm
Harish Poonja, Speaker U T Khader: ಸ್ಪೀಕರ್ ಧರ...
23-04-25 01:06 pm
23-04-25 09:25 pm
HK News Desk
ಪಹಲ್ಗಾಮ್ ಭಯೋತ್ಪಾದಕ ದಾಳಿಯ ಮಾಸ್ಟರ್ ಮೈಂಡ್ ಲಷ್ಕರ್...
23-04-25 05:16 pm
Pahalgam terror attack Live: ಜಮ್ಮು ಕಾಶ್ಮೀರದಲ್...
22-04-25 10:33 pm
Rahul Gandhi, BJP : ಅಮೆರಿಕದಲ್ಲಿ ನಿಂತು ಭಾರತದ ಚ...
22-04-25 07:13 pm
Next Pope: ರೋಮನ್ ಕ್ಯಾಥೋಲಿಕ್ ಚರ್ಚ್ನ 266ನೇ ಪೋಪ...
21-04-25 07:46 pm
23-04-25 10:23 pm
Udupi Correspondent
ಜಾತ್ಯತೀತರು ಉಗ್ರರಿಗೆ ಧರ್ಮ ಇಲ್ಲ ಎನ್ನುತ್ತಿದ್ದರು,...
23-04-25 09:45 pm
Terror Attack, Mangalore Mp, Brijesh Chowta:...
23-04-25 09:36 pm
Bearys Group, Bearys Turning Point mall, Dera...
23-04-25 09:23 pm
ವಿನೂತನ ಒಳ ಮೀಸಲಾತಿ ನೀತಿ ಪ್ರಕಟಿಸಲು ಒತ್ತಾಯ ; ಬೀದ...
21-04-25 10:32 pm
23-04-25 01:03 pm
Mangalore Correspondent
Shivamogga man killed in Pahalgam attack: ಕಾಶ...
22-04-25 07:37 pm
IPS Om Prakash Murder, Update: ನಿವೃತ್ತ ಡಿಜಿಪಿ...
22-04-25 03:26 pm
Om Prakash IPS Murder, Wife arrest: ನಿವೃತ್ತ ಡ...
21-04-25 01:03 pm
Karnataka DGP Om Prakash Murder, wife: ನಿವೃತ್...
20-04-25 10:52 pm