ಬ್ರೇಕಿಂಗ್ ನ್ಯೂಸ್
24-08-21 10:28 pm Mangaluru Correspondent ಕರಾವಳಿ
ಮಂಗಳೂರು, ಆಗಸ್ಟ್ 24: ಅಫ್ಘಾನಿಸ್ತಾನದ ಕಾಬೂಲ್ ಏರ್ಪೋರ್ಟ್ ಬಳಿಯಲ್ಲಿ ಅತಂತ್ರರಾಗಿ ಸಿಕ್ಕಿಬಿದ್ದಿದ್ದ ಸಿದ್ದಕಟ್ಟೆ ಮೂಲದ ಫಾದರ್ ಜೆರೋಮ್ ಸಿಕ್ವೇರಾ (52) ವಾಯುಪಡೆ ವಿಮಾನದಲ್ಲಿ ದೆಹಲಿಗೆ ಆಗಮಿಸಿದ್ದಾರೆ ಎಂಬ ಮಾಹಿತಿ ಲಭಿಸಿದೆ. ಎರಡು ದಿನಗಳ ಹಿಂದೆ ಅವರನ್ನು ಕತಾರ್ ಗೆ ಏರ್ ಲಿಫ್ಟ್ ಮಾಡಿ, ಅಲ್ಲಿಂದ ವಾಯುಪಡೆ ಕರೆತಂದಿದೆ ಎನ್ನಲಾಗುತ್ತಿದೆ.
ಜೆರೋಮ್ ಮಂಗಳೂರು ಮೂಲದವರಾದರೂ ಅವರ ಸೇವಾ ವ್ಯಾಪ್ತಿ ರಾಜಸ್ಥಾನ ಆಗಿರುವುದರಿಂದ ಈಗಲೇ ಊರಿಗೆ ಆಗಮಿಸುವ ಸಾಧ್ಯತೆ ಕಡಿಮೆ ಎನ್ನಲಾಗಿದೆ.
ವಾರದ ಹಿಂದೆ, ತಮ್ಮ ಆಪ್ತರಿಗೆ ವಾಯ್ಸ್ ಮೆಸೇಜ್ ಕಳುಹಿಸಿದ್ದ ಜೆರೋಮ್, ತನ್ನೆದುರಲ್ಲೇ ತಾಲಿಬಾನಿಗಳು ಅಟ್ಟಹಾಸ ಮೆರೆಯುತ್ತಿರುವ ಬಗ್ಗೆ ಮಾಹಿತಿ ಹಂಚಿಕೊಂಡಿದ್ದರು. ಈ ಮೆಸೇಜ್ ಫಾದರ್ ಜೆರೋಮ್ ಕೆಲಸ ಮಾಡುತ್ತಿರುವ ಜೆಸೂಟ್ ರೆಫ್ಯುಜಿ ಸರ್ವಿಸಸ್ ಸಂಘಟನೆಯ ಸದಸ್ಯರಿಗೆ ಲಭ್ಯವಾಗಿತ್ತು.

"ನಾನು ಬೆಳಗ್ಗೆ ಕಾಬೂಲ್ ಏರ್ಪೋರ್ಟ್ ಕಡೆಗೆ ಬರುತ್ತಿದ್ದೆ. ಆದರೆ, ಅಲ್ಲಿನ ಸ್ಥಿತಿ ನೋಡಿ ಭಯಭೀತಿ ಉಂಟುಮಾಡಿತ್ತು. ತಾಲಿಬಾನ್ ಉಗ್ರರು ಏರ್ಪೋರ್ಟ್ ಮತ್ತು ಅಲ್ಲಿಗೆ ಬರುವ ರಸ್ತೆಗಳನ್ನು ವಶಕ್ಕೆ ಪಡೆದು ಜನರನ್ನು ನಿಯಂತ್ರಣಕ್ಕೆ ತೆಗೆದುಕೊಳ್ಳುತ್ತಿದ್ದರು. ಸೇರಿದ್ದ ಸಾವಿರಾರು ಜನರು ಮತ್ತು ವಾಹನಗಳ ನಡುವೆ ನಾನು ನನ್ನ ಲಗ್ಗೇಜ್ ತಳ್ಳಿಕೊಂಡೇ ಮುಂದಕ್ಕೆ ಬಂದಿದ್ದೆ. ಆದರೆ ಸಾವಿರಾರು ಜನರು ಏರ್ಪೋರ್ಟ್ ಬಳಿಗೆ ನುಗ್ಗಿ ಬರುತ್ತಿದ್ದರು. ಕೊನೆಗೆ, ಹೇಗಾದ್ರೂ ಮಾಡಿ ಏರ್ಪೋರ್ಟ್ ಎರಡನೇ ಗೇಟ್ ಬಳಿಗೆ ಬಂದು ತಲುಪಿದ್ದೆ. ಅಷ್ಟರಲ್ಲಿ ತಾಲಿಬಾನಿಗಳು ಗಾಳಿಯಲ್ಲಿ ಗುಂಡು ಹಾರಿಸತೊಡಗಿದ್ದಾರೆ. ಜನರನ್ನು ತಮ್ಮ ನಿಯಂತ್ರಣಕ್ಕೆ ಪಡೆಯಲು ಪಿಸ್ತೂಲ್ ತೋರಿಸಿ ಹೆದರಿಸುತ್ತಿದ್ದರು. ನಾನು ಅಲ್ಲಿಗೆ ತಲುಪುವಾಗಲೇ ಸಾವಿರಾರು ಜನರು ಏರ್ಪೋರ್ಟ್ ಒಳಗಡೆ ನುಗ್ಗಿದ್ದರು. ಅದಕ್ಕೂ ಮೊದಲೇ ಏರ್ಪೋರ್ಟ್ ಸಿಬಂದಿ ತಮ್ಮ ಸ್ಥಾನ ಬಿಟ್ಟು ಓಡಿ ಹೋಗಿದ್ದರು. ಜನರು ಒಮ್ಮೆಲೇ ಅಲ್ಲಿ ನಿಂತಿದ್ದ ವಿಮಾನದತ್ತ ಓಡತೊಡಗಿದ್ದರು. ಯಾವುದೇ ಸೆಕ್ಯುರಿಟಿಯೂ ಇರಲಿಲ್ಲ. ಬೋರ್ಡಿಂಗ್ ಪಾಸ್ ಕೂಡ ಇರದೇ ವಿಮಾನ ಹತ್ತಲು ಆರಂಭಿಸಿದ್ದರು..."
ಹೀಗೆಂದು ಕಳೆದ ವಾರ ವೈರಲ್ ಆಗಿದ್ದ ವಿಮಾನದ ಮೇಲೇರಿ ಹತ್ತಿ ಕುಳಿತ ವಿಡಿಯೋ ಘಟನೆಯು ತನ್ನ ಕಣ್ಣೆದುರಲ್ಲೇ ನಡೆದಿತ್ತು ಎಂದು ವಾಯ್ಸ್ ಮೆಸೇಜ್ ನಲ್ಲಿ ಜೆರೋಮ್ ವಿವರಿಸಿದ್ದಾರೆ.
ಜೆಸೂಟ್ ರೆಫ್ಯುಜಿ ಸರ್ವಿಸಸ್ ಎನ್ನುವುದು ಅಂತಾರಾಷ್ಟ್ರೀಯ ಎನ್ ಜಿಓ ಸೇವಾ ಸಂಸ್ಥೆಯಾಗಿದ್ದು ಫಾ.ಜೆರೋಮ್ ಸಿಕ್ವೇರಾ ಕಾಬೂಲ್ ಘಟಕದ ಮುಖ್ಯಸ್ಥರಾಗಿ ನೇಮಕವಾಗಿದ್ದರು. ರಾಜಸ್ಥಾನದ ಜೆಮ್ಮೆಡ್ ಪುರದಲ್ಲಿ ನೆಲೆಸಿದ್ದ ಜೆರೋಮ್ ಕಳೆದ ಜನವರಿಯಲ್ಲಿ ಕಾಬೂಲಿಗೆ ತೆರಳಿದ್ದರು. ಆದರೆ, ಕಳೆದ ಒಂದು ವಾರದಿಂದ ಏರ್ಪೋರ್ಟ್ ಬಳಿ ಸಿಕ್ಕಿಬಿದ್ದಿದ್ದ ಜೆರೋಮ್ ವಿದೇಶಾಂಗ ಇಲಾಖೆಯ ಸಂಪರ್ಕದಲ್ಲಿದ್ದರು. ಅದರ ಜೊತೆಗೆ, ಕುಟುಂಬಸ್ಥರಿಗೂ ಫೋನ್ ಮಾಡಿ, ತಾನು ಸೇಫ್ ಆಗಿರುವ ಬಗ್ಗೆ ಹೇಳಿಕೊಂಡಿದ್ದರು. ಇದೀಗ ಜೆರೋಮ್ ದೆಹಲಿಗೆ ತಲುಪಿದ್ದಾರೆ ಎನ್ನುವ ಮಾಹಿತಿ ಲಭಿಸಿದೆ. ಅವರ ಜೊತೆಗಿದ್ದ ತೀರ್ಥಹಳ್ಳಿ ಮೂಲದ ಇನ್ನೊಬ್ಬ ಫಾದರ್ ಕುರಿತು ಮಾಹಿತಿಯಿಲ್ಲ.
A Jesuit priest, Fr Jerome Sequeira, a resident of Kallkuri from Siddakatte of Sangabettu village, who was stranded in strife-ridden Afghanistan, arrived at Delhi on Tuesday August 24. Fr Jerome is working as the head in-charge of Jesuit Refugee Services (JRS), an international NGO in Kabul.
10-11-25 07:17 pm
Bangalore Correspondent
54 ಹೆಕ್ಟೇರ್ ಅರಣ್ಯ ನಾಶ ಭೀತಿ ; ಶರಾವತಿ ಪಂಪ್ಡ್ ಸ್...
10-11-25 02:58 pm
'ನೋ ಚೇರ್ ಇನ್ ನವೆಂಬರ್' ಎಐ ವಿಡಿಯೋ ಹಂಚಿಕೊಂಡ ಬಿಜೆ...
10-11-25 01:23 pm
ಬೆಂಗಳೂರು ವಿಮಾನ ನಿಲ್ದಾಣದಲ್ಲಿ ನಮಾಜ್ ವಿಡಿಯೋ ವೈರಲ...
10-11-25 12:22 pm
ಮುಸ್ಲಿಂ, ಕ್ರೈಸ್ತರು ಆರೆಸ್ಸೆಸ್ ಶಾಖೆಗೆ ಬರಬಹುದಾ?...
09-11-25 06:53 pm
11-11-25 10:56 pm
HK News Desk
Mangaluru Kasaragod Highway: ಮಂಗಳೂರು- ಕಾಸರಗೋಡ...
11-11-25 10:20 pm
ಕೆಂಪುಕೋಟೆ ಕಾರು ಬ್ಲಾಸ್ಟ್ ಪ್ರಕರಣ ; ಜೈಶ್ ಉಗ್ರರ ಲ...
11-11-25 03:28 pm
ಐ-20 ಕಾರು ಕೆಂಪುಕೋಟೆ ಸಿಗ್ನಲ್ ನಲ್ಲಿದ್ದಾಗ ಬ್ಲಾಸ್...
10-11-25 11:07 pm
ದೆಹಲಿಯಲ್ಲಿ ಭಾರೀ ಬಾಂಬ್ ಸ್ಫೋಟ ; ಛಿದ್ರಗೊಂಡು ಚದುರ...
10-11-25 09:08 pm
11-11-25 10:42 pm
Mangalore Correspondent
Bomb blast in New Delhi, High Alert in Dakshi...
11-11-25 10:15 pm
Bhagvati Prem Ship, Mangalore: ಸುರತ್ಕಲ್ ; ಮರಳ...
08-11-25 08:31 pm
ಬೆಂಗಳೂರು- ಮಂಗಳೂರು ಹೈಸ್ಪೀಡ್ ಕಾರಿಡಾರ್ ; ಶಿರಾಡ...
07-11-25 10:58 pm
ಕುದ್ರೋಳಿ ಕ್ಷೇತ್ರ ಸ್ಥಾಪಿಸಿದ ಫೆ.21ರಂದು ನಾರಾಯಣ ಗ...
07-11-25 07:23 pm
11-11-25 06:33 pm
Mangalore Correspondent
Fraud Dream Deal Mangalore, KSRTC: ತಿಂಗಳಿಗೆ ಒ...
09-11-25 10:27 pm
ಬಹುಕೋಟಿ ವಂಚಕ ರೋಷನ್ ಸಲ್ದಾನಗೆ ಸೇರಿದ 2.85 ಕೋಟಿ ಮ...
09-11-25 03:50 pm
ಕೋಮುದ್ವೇಷದ ಕೊಲೆ ; ಪ್ರತೀಕಾರಕ್ಕೆ ಪ್ರಚೋದಿಸಿ ಇನ್...
08-11-25 11:15 pm
Digital Arrest Scam, Mangalore Online Fraud:...
08-11-25 04:08 pm