ಬ್ರೇಕಿಂಗ್ ನ್ಯೂಸ್
23-08-21 03:24 pm Mangaluru Correspondent ಕರಾವಳಿ
ಉಳ್ಳಾಲ, ಆ.23: ಕರ್ನಾಟಕ ಸರ್ಕಾರ ಗಡಿ ಬಂದ್ ಮಾಡಿರುವುದನ್ನು ವಿರೋಧಿಸಿ ಕೇರಳ ಸಿಪಿಐಎಂ ಮಂಜೇಶ್ವರ ಏರಿಯಾ ಸಮಿತಿ ವತಿಯಿಂದ ತಲಪಾಡಿ ಗಡಿಯಲ್ಲಿ ಸೋಮವಾರ ಪ್ರತಿಭಟನೆ ನಡೆಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಉದುಮ ಶಾಸಕ ಸಿ.ಎಚ್.ಕುಞಂಬು, ಕೊರೋನಾ ಹೆಸರಿನಲ್ಲಿ ಕರ್ನಾಟಕ ಬಿಜೆಪಿ ಸರ್ಕಾರ ಗಡಿ ಬಂದ್ ಮಾಡಿ ಗಡಿನಾಡ ಕೇರಳಿಗರಿಗೆ ತೊಂದರೆ ಮಾಡುತ್ತಿದೆ. ಕರ್ನಾಟಕ ಮುಖ್ಯಮಂತ್ರಿ ಬೊಮ್ಮಾಯಿ , ಮಂಗಳೂರು ಸಂಸದ ನಳಿನ್ ಕುಮಾರ್ ಕಟೀಲ್ ಚುನಾವಣೆ ಸಂದರ್ಭದಲ್ಲಿ ಕೇರಳ ಭೇಟಿ ನೀಡಿ ಗಡಿನಾಡಿನ ಕೇರಳಿಗರಿಗೆ ಪೂರ್ಣ ಬೆಂಬಲ, ಸಹಕಾರ ತಮ್ಮಿಂದ ಇದೆ ಎಂದು ಹೇಳಿದ್ದರು.
ಆದರೆ ಅವರು ಹೇಳಿದ ಮಾತುಗಳನ್ನು ಉಳಿಸಲು ಅವರಿಗೆ ಆಗಲಿಲ್ಲ. ಕೇರಳದಲ್ಲಿ ಬಿಜೆಪಿ ಖಾತೆ ತೆರೆಯಲು ಆಗಲಿಲ್ಲ ಎಂಬ ಕಾರಣದಿಂದ ಕೇರಳಿಗರಿಗೆ ತೊಂದರೆ ಕೊಡಲು ಹೊರಟಿದ್ದು ನ್ಯಾಯೋಚಿತವಲ್ಲ. ಪ್ರತಿ ವಿಚಾರಗಳಿಗೂ ಗಡಿಯಲ್ಲಿ ಹೋರಾಟ ಮಾಡುತ್ತಿದ್ದ ಕೇರಳ ಬಿಜೆಪಿಗರು ಈಗ ಮೌನ ಆಗಿದ್ದಾರೆ. ಭರವಸೆ ಮಾತು ನೀಡಿ ಅನ್ಯಾಯ ಮಾಡುವ ಕಟೀಲ್ ರಂತಹ ಸಂಸದರು ಆಡಳಿತ ನಡೆಸಲು ಯೋಗ್ಯರಲ್ಲ. ಗಡಿ ಬಂದ್ ಮಾಡುವ ಅಧಿಕಾರ ಕರ್ನಾಟಕ ಸರ್ಕಾರಕ್ಕೆ ಇಲ್ಲ. ಒಂದು ವೇಳೆ ಬಂದ್ ಮಾಡಲೇಬೇಕು ಎಂದಿದ್ದರೆ ಕೇಂದ್ರಕ್ಕೆ ಬಂದ್ ಮಾಡಬಹುದಲ್ಲವೇ ಎಂದು ಪ್ರಶ್ನಿಸಿದರು.




ಸಿಪಿಐಎಂ ಮುಖಂಡ ದಯಾನಂದ್, ಶಂಕರ್ ರೈ ಮಾಸ್ಟರ್ ಮಾತನಾಡಿದರು. ಸಿಪಿಐಎಂ ಮಂಜೇಶ್ವರ ಏರಿಯಾ ಮುಖಂಡ ಅರವಿಂದ ಅಧ್ಯಕ್ಷತೆ ವಹಿಸಿದ್ದರು. ವರ್ಕಾಡಿ ಪಂಚಾಯತ್ ಅಧ್ಯಕ್ಷೆ ಭಾರತಿ, ಪೈವಳಿಕೆ ಪಂಚಾಯಿತಿ ಅಧ್ಯಕ್ಷೆ ಜಯಂತಿ, ಬೂಬಾ ಡಿ., ಕಮಲಾಕ್ಷ, ನವೀನ್, ರವೀಂದ್ರ ಶೆಟ್ಟಿ, ಅಬ್ದುಲ್ ರಜಾಕ್, ಸುಬ್ಬಣ್ಣ ಆಳ್ವ, ಸಮಿತಿ ಸದಸ್ಯ ಅರವಿಂದ್ ಮೊದಲಾದವರು ಇದ್ದರು.
Talpady border issue CPIM protest blocking highway Demanding the Karnataka state govt to freely allow people of Kerala who has got one dose of vaccine.
17-09-26 04:13 pm
HK News Staffer
ಚಿತ್ರರಂಗದ ಸಾರ್ವಕಾಲಿಕ ಶ್ರೇಷ್ಠ ನಟ ಅನಂತನಾಗ್ ಗೆ '...
16-09-26 10:40 pm
Tulu Language, Shivraj Tangadagi: ತುಳುವಿಗೆ 2ನ...
16-09-26 01:51 pm
Pradeep Eshwar, Pratap Simha: ಪೊಲೀಸ್ ಠಾಣೆಗೆ...
15-09-26 09:13 pm
Imran Pasha, Pratap Simha: ನಿನ್ನಂತಹ ಒಂದು ಲಕ್...
15-09-26 04:46 pm
13-09-26 09:00 pm
HK News
80s ಫೋಟೋ ಟ್ರೆಂಡ್ಗೆ ಮಾರುಹೋಗಿದ್ದೀರಾ? ಹುಷಾರ್ ;...
12-09-26 01:10 pm
ಕಾಶ್ಮೀರಿ ಪಂಡಿತರಿಗೆ ಮತ್ತೆ ಬೆದರಿಕೆ ; ಉದ್ಯೋಗ ಬಿಟ...
10-09-26 01:23 pm
ನೇಪಾಳ ಪ್ರವಾಹ ; ಹತ್ತು ದಿನಗಳ ಬಳಿಕ ಜಲವಿದ್ಯುತ್ ಸು...
05-09-26 11:55 am
ಮುಂದಿನ ಒಂದು ವರ್ಷದಲ್ಲಿ ಒಂದು ಸಾವಿರ ವಿದ್ಯಾಭಾರತಿ...
04-09-26 08:14 pm
17-09-26 08:48 pm
HK News Staffer
Mangalore, DK Shivakumar, Coastal Karnataka,...
17-09-26 08:02 pm
Mangalore, Yathindra Siddaramaiah, Umar Khali...
17-09-26 06:29 pm
ಸಚಿವ ಸಂಪುಟ ಸಭೆಗೆ ಕ್ಷಣಗಣನೆ ; ಪಡೀಲ್ ಜಿಲ್ಲಾಧಿಕಾರ...
17-09-26 05:12 pm
ಗಣೇಶ ವಿಸರ್ಜನಾ ಮೆರವಣಿಗೆ ವೇಳೆ ಮಸೀದಿ, ಮದರಸಾ ಮೇಲೆ...
17-09-26 09:41 am
17-09-26 02:22 pm
HK News Staffer
Bangalore Murder, Crime: ಪ್ರೀತಿಸಿ ಮದುವೆಯಾಗಿದ್...
17-09-26 01:56 pm
Bangalore kidnap, Crime: ಬೆಂಗಳೂರಿನಲ್ಲಿ ಶಾಕ್...
17-09-26 12:35 pm
Manglore Cyber crime, Stock Market: ಷೇರು ಮಾರ್...
17-09-26 11:45 am
ಬೆಳ್ತಂಗಡಿ; ಗೃಹಪ್ರವೇಶಕ್ಕೆ ಹೋದಾಗ ಮನೆಗೆ ಕನ್ನ, ₹1...
16-09-26 11:18 am