ಬ್ರೇಕಿಂಗ್ ನ್ಯೂಸ್
19-08-21 05:45 pm Richard, Mangaluru Correspondent ಕರಾವಳಿ
ಮಂಗಳೂರು, ಆಗಸ್ಟ್ 19: ಅಫ್ಘಾನಿಸ್ತಾನದಲ್ಲಿ ಮಂಗಳೂರು ಮೂಲದ ಸಿಸ್ಟರ್ ಒಬ್ಬರು ಸಿಕ್ಕಿಬಿದ್ದಿದ್ದಾರೆ. ಮೂರು ವರ್ಷಗಳ ಹಿಂದೆ ಸಿಸ್ಟರ್ ಆಗಿ ಬುದ್ಧಿಮಾಂದ್ಯ ಮಕ್ಕಳನ್ನು ನೋಡಿಕೊಳ್ಳಲು ತೆರಳಿದ್ದ 50 ವರ್ಷದ ಸಿಸ್ಟರ್ ಥೆರೆಸಾ ಕ್ರಾಸ್ತಾ ಕಾಬೂಲಿನಲ್ಲಿ ಸಿಕ್ಕಿಬಿದ್ದಿದ್ದು, ಮರಳಿ ಬರಲಾಗದೆ ಒದ್ದಾಡುತ್ತಿದ್ದಾರೆ.
ಸಿಸ್ಟರ್ ಥೆರೆಸಾ ಕ್ರಾಸ್ತಾ, ಮೂರು ವರ್ಷಗಳ ಹಿಂದೆ ಇಟಲಿ ಮೂಲದ ಎನ್ ಜಿಓ ಸಂಸ್ಥೆಯೊಂದರಲ್ಲಿ ಸಿಸ್ಟರ್ ಆಗಿ ಅಫ್ಘಾನಿಸ್ತಾನದ ರಾಜಧಾನಿ ಕಾಬೂಲಿಗೆ ತೆರಳಿದ್ದರು. ಮೂಲತಃ ಕಾಸರಗೋಡು ಜಿಲ್ಲೆಯ ಬೇಳ ನಿವಾಸಿಯಾಗಿರುವ ಥೆರೆಸಾ ಈ ಹಿಂದೆ ನೆಲ್ಯಾಡಿಯ ಕಾನ್ವೆಂಟ್ ಒಂದರಲ್ಲಿ ಸಿಸ್ಟರ್ ಆಗಿದ್ದರು. ಆನಂತರ ಜಪ್ಪು ನಲ್ಲಿರುವ ಪ್ರಶಾಂತ ನಿವಾಸ ಆಶ್ರಮದಲ್ಲಿ ಬುದ್ಧಿಮಾಂದ್ಯ ಮಕ್ಕಳನ್ನು ನೋಡಿಕೊಳ್ಳುವ ಕೆಲಸ ಮಾಡುತ್ತಿದ್ದರು.
ಮಂಗಳೂರಿನ ಸಿಸ್ಟರ್ ಆಫ್ ಚಾರಿಟಿಯಲ್ಲಿದ್ದ ಥೆರೆಸಾ ಅವರನ್ನು ಇಟಲಿಯ ಸೇವಾ ಸಂಸ್ಥೆಯು ಕರೆದ ಕಾರಣ ಮೂರು ವರ್ಷಗಳ ಹಿಂದೆ ಕಳಿಸಿಕೊಡಲಾಗಿತ್ತು. ಅವರಿಗೆ ಕಾಬೂಲಿನಲ್ಲಿ ಬುದ್ಧಿಮಾಂದ್ಯ ಮಕ್ಕಳನ್ನು ನೋಡಿಕೊಳ್ಳಲು ಜವಾಬ್ದಾರಿ ನೀಡಲಾಗಿತ್ತು. ಇತರ ಪಾಕಿಸ್ಥಾನಿ ಮೂಲದ ಸಿಸ್ಟರ್ ಗಳ ಜೊತೆ ಥೆರೆಸಾ ಅಲ್ಲಿದ್ದರು. ಆದರೆ, ಈಗ ತಾಲಿಬಾನಿಗಳು ಅಲ್ಲಿನ ಸರಕಾರವನ್ನು ಕಿತ್ತು ಅಧಿಕಾರಕ್ಕೇರುತ್ತಿದ್ದಂತೆ ಆತಂಕ ಮನೆಮಾಡಿದೆ.

ರಾಜಧಾನಿ ಕಾಬೂಲಿನ ಏರ್ಪೋರ್ಟ್ ಬಳಿಯಲ್ಲೇ ಸಿಸ್ಟರ್ ಥೆರೆಸಾ ಇದ್ದಾರೆ. ಆದರೆ, ಆಶ್ರಮದಿಂದ ಹೊರಗೆ ಬರುವಂತೆ ಇಲ್ಲ. ಹೊರಗೆ ಏನಾಗುತ್ತಿದೆ ಎಂದು ನೋಡುವುದಕ್ಕೂ ಸಾಧ್ಯವಾಗದ ಸ್ಥಿತಿಯಿದೆ. 30 ಜನ ಅನಾಥ ಬುದ್ಧಿಮಾಂದ್ಯ ಮಕ್ಕಳ ರಕ್ಷಣೆ ಮತ್ತು ಪಾಲನೆಯ ಹೊಣೆ ಹೊತ್ತಿರುವ ಸಿಸ್ಟರ್ ಅಲ್ಲಿಂದ ಹೇಗೆ ಬರುವುದು ಎನ್ನುವ ಚಿಂತೆಯಲ್ಲಿದ್ದಾರೆ. ಥೆರೆಸಾ ಇರುವ ಕಟ್ಟಡದ ಹೊರಭಾಗದಲ್ಲಿ ಮಿಲಿಟರಿ ಸೆಕ್ಯುರಿಟಿ ಇದ್ದಾರೆ. ಹೀಗಾಗಿ ಹೊರಗೆ ಹೋಗುವುದು ಸಾಧ್ಯವಿಲ್ಲ. ಸದ್ಯಕ್ಕೆ ಸುರಕ್ಷಿತವಾಗಿರುವುದಾಗಿ ಮಂಗಳೂರಿನ ಸಿಸ್ಟರ್ಸ್ ಆಫ್ ಚಾರಿಟಿಯ ಉಸ್ತುವಾರಿಗೆ ಥೆರೆಸಾ ತಿಳಿಸಿದ್ದಾರೆ. ಥೆರೆಸಾ ತಂಗಿಯರು ಕೂಡ ಮಂಗಳೂರಿನಲ್ಲಿ ಸಿಸ್ಟರ್ ಆಗಿದ್ದು ಸೇವಾ ಕಾರ್ಯ ನಡೆಸುತ್ತಿದ್ದಾರೆ.
Convent Sister Theresa Crasta from Sisters of Charity Mangaluru has been Stranded in Kabul Afghan. It is said that sister Theresa had left Mangaluru three years back and went to Kabul. She has been working under a NGO to look after Mentally challenged children. Theresa hails from Bela, Kasaragod. The sister of charity are now desperately seeking help from Govt of India.
17-09-26 04:13 pm
HK News Staffer
ಚಿತ್ರರಂಗದ ಸಾರ್ವಕಾಲಿಕ ಶ್ರೇಷ್ಠ ನಟ ಅನಂತನಾಗ್ ಗೆ '...
16-09-26 10:40 pm
Tulu Language, Shivraj Tangadagi: ತುಳುವಿಗೆ 2ನ...
16-09-26 01:51 pm
Pradeep Eshwar, Pratap Simha: ಪೊಲೀಸ್ ಠಾಣೆಗೆ...
15-09-26 09:13 pm
Imran Pasha, Pratap Simha: ನಿನ್ನಂತಹ ಒಂದು ಲಕ್...
15-09-26 04:46 pm
13-09-26 09:00 pm
HK News
80s ಫೋಟೋ ಟ್ರೆಂಡ್ಗೆ ಮಾರುಹೋಗಿದ್ದೀರಾ? ಹುಷಾರ್ ;...
12-09-26 01:10 pm
ಕಾಶ್ಮೀರಿ ಪಂಡಿತರಿಗೆ ಮತ್ತೆ ಬೆದರಿಕೆ ; ಉದ್ಯೋಗ ಬಿಟ...
10-09-26 01:23 pm
ನೇಪಾಳ ಪ್ರವಾಹ ; ಹತ್ತು ದಿನಗಳ ಬಳಿಕ ಜಲವಿದ್ಯುತ್ ಸು...
05-09-26 11:55 am
ಮುಂದಿನ ಒಂದು ವರ್ಷದಲ್ಲಿ ಒಂದು ಸಾವಿರ ವಿದ್ಯಾಭಾರತಿ...
04-09-26 08:14 pm
17-09-26 08:48 pm
HK News Staffer
Mangalore, DK Shivakumar, Coastal Karnataka,...
17-09-26 08:02 pm
Mangalore, Yathindra Siddaramaiah, Umar Khali...
17-09-26 06:29 pm
ಸಚಿವ ಸಂಪುಟ ಸಭೆಗೆ ಕ್ಷಣಗಣನೆ ; ಪಡೀಲ್ ಜಿಲ್ಲಾಧಿಕಾರ...
17-09-26 05:12 pm
ಗಣೇಶ ವಿಸರ್ಜನಾ ಮೆರವಣಿಗೆ ವೇಳೆ ಮಸೀದಿ, ಮದರಸಾ ಮೇಲೆ...
17-09-26 09:41 am
17-09-26 02:22 pm
HK News Staffer
Bangalore Murder, Crime: ಪ್ರೀತಿಸಿ ಮದುವೆಯಾಗಿದ್...
17-09-26 01:56 pm
Bangalore kidnap, Crime: ಬೆಂಗಳೂರಿನಲ್ಲಿ ಶಾಕ್...
17-09-26 12:35 pm
Manglore Cyber crime, Stock Market: ಷೇರು ಮಾರ್...
17-09-26 11:45 am
ಬೆಳ್ತಂಗಡಿ; ಗೃಹಪ್ರವೇಶಕ್ಕೆ ಹೋದಾಗ ಮನೆಗೆ ಕನ್ನ, ₹1...
16-09-26 11:18 am