ಬ್ರೇಕಿಂಗ್ ನ್ಯೂಸ್
19-08-21 11:39 am Mangaluru Correspondent ಕರಾವಳಿ
ಮಂಗಳೂರು, ಆಗಸ್ಟ್ 19: ಅಫ್ಘಾನಿಸ್ತಾನ ತಾಲಿಬಾನ್ ಉಗ್ರರ ಕೈವಶವಾಗುತ್ತಿದ್ದಂತೆ ಅಲ್ಲಿರುವ ಸಾವಿರಾರು ಭಾರತೀಯರನ್ನು ವಾಯುಪಡೆ ಮೂಲಕ ಏರ್ ಲಿಫ್ಟ್ ಮಾಡಲಾಗುತ್ತಿದೆ. ಈ ನಡುವೆ, ಉಳ್ಳಾಲದ ಉಳಿಯ ನಿವಾಸಿಯೊಬ್ಬರು ಅಫ್ಘಾನಿಸ್ತಾನದಿಂದ ಸುರಕ್ಷಿತವಾಗಿ ಮರಳಿ ಬಂದಿದ್ದಾರೆ.
ಮೆಲ್ವಿನ್ ಮೊಂತೇರೋ ವಾಯುಪಡೆ ವಿಮಾನದಲ್ಲಿ ಮರಳಿ ತಾಯ್ನಾಡಿಗೆ ಬಂದಿದ್ದಾರೆ. ಮೆಲ್ವಿನ್ ಕಾಬೂಲ್ ನಲ್ಲಿರುವ ನ್ಯಾಟೋ ಪಡೆಯ ಮಿಲಿಟರಿ ಬೇಸ್ ಕ್ಯಾಂಪ್ ಆಸ್ಪತ್ರೆಯಲ್ಲಿ ಇಲೆಕ್ಟ್ರಿಕಲ್ ಮೆಂಟೇನೆನ್ಸ್ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದರು. ಮೊನ್ನೆ ಕಾಬೂಲನ್ನು ಉಗ್ರರು ಮುತ್ತಿಕೊಂಡಿದ್ದಾರೆ ಎಂಬ ಸುದ್ದಿ ಹಬ್ಬುತ್ತಿದ್ದಂತೆ ಜನರು ಏರ್ಪೋರ್ಟ್ ಬಳಿ ಸೇರಿದ್ದರು. ಅಲ್ಲಿನ ನಿವಾಸಿಗಳೆಲ್ಲ ಏರ್ಪೋರ್ಟ್ ಒಳಗೆ ಸೇರಿದ್ದರಿಂದ ವಿಮಾನಗಳು ಇಳಿಯಲಾಗದೆ ಬರಲು ಕಷ್ಟವಾಗಿತ್ತು. ಆದರೂ ನಮ್ಮ ಸಂಸ್ಥೆಯವರು ಸಿಬಂದಿಯನ್ನು ಭಾರತಕ್ಕೆ ಏರ್ ಲಿಫ್ಟ್ ಮಾಡಲು ಪ್ರಯತ್ನಿಸುತ್ತಿದ್ದರು ಎಂದು ತಿಳಿಸಿದ್ದಾರೆ.
ಈ ನಡುವೆ, ಭಾರತೀಯ ರಾಯಭಾರ ಕಚೇರಿಯಲ್ಲಿದ್ದ ಸಿಬಂದಿಯನ್ನು ಕರೆತರಲು ವಾಯುಸೇನೆಯ ವಿಮಾನದಲ್ಲಿ ನಮ್ಮ ಸಂಸ್ಥೆಯ ಏಳು ಮಂದಿ ಸೇರಿ ಒಟ್ಟು 160 ಮಂದಿಯನ್ನು ಮಂಗಳವಾರ ಬೆಳಗ್ಗೆ ಕರೆತಂದಿದ್ದಾರೆ. ಗುಜರಾತ್ ನಲ್ಲಿರುವ ಏರ್ ಬೇಸ್ ಕ್ಯಾಂಪ್ ಗೆ ತಂದು ಬಿಟ್ಟಿದ್ದರು. ಅಲ್ಲಿಂದ ಬೆಂಗಳೂರು ಮೂಲಕ ಸುರಕ್ಷಿತವಾಗಿ ಮನೆಗೆ ಮರಳಿದ್ದಾಗಿ ಮೆಲ್ವಿನ್ ಹೇಳಿದ್ದಾರೆ. ಇವರು ಇತ್ತೀಚೆಗಷ್ಟೇ ಪತ್ನಿಗೆ ಕೊರೊನಾ ತಗಲಿದೆ ಎಂದು ಊರಿಗೆ ಬಂದು ಹೋಗಿದ್ದರಂತೆ.



ಮೆಲ್ವಿನ್ ಮೊಂತೇರೊ ಅವರ ತಮ್ಮ ಡಮ್ಸಿ ಮೊಂತೇರೋ ಕೂಡ ಅಫ್ಘಾನಿಸ್ತಾನದಲ್ಲಿದ್ದು ಅಲ್ಲಿ ಏಸಿ ಮೆಕ್ಯಾನಿಕ್ ಆಗಿದ್ದಾರೆ. ಅವರನ್ನು ಕಾಬೂಲ್ ಏರ್ಪೋರ್ಟ್ ನಿಂದ ಕತಾರ್ ಗೆ ಏರ್ ಲಿಫ್ಟ್ ಮಾಡಲಾಗಿದೆ ಎನ್ನುವ ಮಾಹಿತಿ ದೊರಕಿದೆ ಎಂದು ಮೆಲ್ವಿನ್ ತಿಳಿಸಿದ್ದಾರೆ. ಡಮ್ಸಿ ಎರಡು ದಿನಗಳಿಂದ ಏರ್ಪೋರ್ಟ್ ನಲ್ಲಿ ವಿಮಾನಕ್ಕಾಗಿ ಕಾಯುತ್ತಿದ್ದರು. ನೇರ ವಿಮಾನ ಸಿಗದೆ ಕತಾರ್ ಗೆ ತೆರಳಿದ್ದಾರೆ ಎನ್ನಲಾಗುತ್ತಿದೆ.
ಕಾಬೂಲಿನಲ್ಲಿರುವ ಮಿಲಿಟರಿ ವಾಯುನೆಲೆ ಆಗಸ್ಟ್ 31ರ ವರೆಗೆ ಸುರಕ್ಷಿತ ಎನ್ನಲಾಗುತ್ತಿದೆ. ಅಲ್ಲಿ ವರೆಗೂ ಜಾಗ ಖಾಲಿ ಮಾಡಲು ತಾಲಿಬಾನ್ ಸಂಘಟನೆ ಗಡುವು ನೀಡಿದೆ. ಸ್ಥಳೀಯರು ಸೇರಿದಂತೆ, ಹಲವು ದೇಶಗಳ ನಿವಾಸಿಗಳು ಅಲ್ಲಿ ಆಶ್ರಯ ಪಡೆದಿದ್ದಾರೆ. ಬೇರೆ ಬೇರೆ ಕಡೆಗಳಿಂದ ಬರುವ ವಿಮಾನಗಳಲ್ಲಿ ತಮ್ಮ ದೇಶಗಳಿಗೆ ತೆರಳುತ್ತಿದ್ದಾರೆ. ಗುಂಪು ಗುಂಪಾಗಿ ಜನರು ಅಲ್ಲಿಗೆ ಆಗಮಿಸುತ್ತಿದ್ದು, ಇನ್ನೆರಡು ದಿನದಲ್ಲಿ ಅಲ್ಲಿ ಆಹಾರ ಸಮಸ್ಯೆ ಎದುರಾಗುವ ಸಾಧ್ಯತೆ ಇದೆ ಎಂದು ಮೆಲ್ವಿನ್ ಹೇಳಿದ್ದಾರೆ.
Mangalore Ullal Man Melwin stranded in Afghanistan reaches home town safely shares experience. Melwin was working in the air base of Afghan says the Tailbans didn't invade the air base that's how we were safe.
28-03-26 08:39 pm
HK News Staffer
ಆಸ್ತಿ ಕಲಹ ; ಮೂವರು ಪುಟ್ಟ ಮಕ್ಕಳೊಂದಿಗೆ ಬಾವಿಗೆ ಹಾ...
28-03-26 02:54 pm
ಭಾರತದಲ್ಲಿ ಮತ್ತೆ ಲಾಕ್ಡೌನ್ ; ಜಾಲತಾಣದಲ್ಲಿ ಟ್ರೆಂ...
27-03-26 04:49 pm
ಶಾರ್ಟ್ ಕಟ್ ದಾರಿಯೆಂದು ತುಂಗಭದ್ರಾ ನದಿಗೆ ನುಗ್ಗಿಸಿ...
27-03-26 04:04 pm
ನಡುರಸ್ತೆಯಲ್ಲೇ ಪತ್ನಿಯ ಕತ್ತು ಕತ್ತರಿಸಿ ಭೀಕರ ಕೊಲೆ...
27-03-26 03:52 pm
28-03-26 04:06 pm
HK News Staffer
ನೇಪಾಳದಲ್ಲಿ ಝೆನ್ ಝೀ ಕ್ರಾಂತಿ ನಿಗ್ರಹಿಸಲು ಮುಂದಾಗಿ...
28-03-26 02:58 pm
ಟ್ರಂಪ್ ದಿಢೀರ್ ರಾಜಕೀಯ ಹೆಜ್ಜೆ ; ಯುದ್ಧ ಗಡುವು ಹತ್...
27-03-26 04:07 pm
ಗಲ್ಫ್ ಯುದ್ಧದ ಪರಿಣಾಮ ಊಹಿಸುವುದು ಕಷ್ಟ, ಕೋವಿಡ್ನಂ...
27-03-26 12:11 pm
ಅಮೆರಿಕ ಷರತ್ತಿಗೆ ಪಟ್ಟು ಬಿಡದ ಇರಾನ್ ; ಗಲ್ಫ್ ದೇಶಗ...
26-03-26 09:44 pm
28-03-26 09:08 pm
HK News Staffer
ಮಂಗಳೂರು ವಿವಿಯಿಂದ ಶಿಕ್ಷಣ ಪ್ರೇಮಿ ಹರೇಕಳ ಹಾಜಬ್ಬ,...
27-03-26 03:38 pm
ಇನಾಯತ್ ಆಲಿ ನೇತೃತ್ವದಲ್ಲಿ ಏ.4ರಂದು ಗುರುಪುರ ಜೋಡುಕ...
26-03-26 10:51 pm
ಮಂಗಳೂರು ಸಿಟಿ ಪೊಲೀಸರ ಹೆಸರಲ್ಲೇ ನಕಲಿ ವೆಬ್ಸೈಟ್ !...
26-03-26 10:29 pm
ನವ ಮಂಗಳೂರು ಬಂದರು ಸ್ಥಾಪನೆಗೊಂಡ ಬಳಿಕ 40 ಸಾವಿರ ಹಡ...
26-03-26 07:19 pm
28-03-26 07:21 pm
HK News Staffer
ಕೋರ್ಟ್, ಶಾಲೆಗಳಿಗೆ ಬಾಂಬ್ ಬೆದರಿಕೆ ; ಮೈಸೂರಿನಲ್ಲೇ...
28-03-26 06:13 pm
ಹಣ ದುರ್ಬಳಕೆ ಆರೋಪದ ಒತ್ತಡಕ್ಕೆ ಮಹಿಳಾ ಸಹಕಾರ ಸಂಘದ...
28-03-26 02:56 pm
Tablet Arif Murder, Mangalore: ಜಾನ್ ಅಬ್ರಹಾಂ ಮ...
27-03-26 10:02 pm
ಲ್ಯಾಂಬೋರ್ಗಿನಿ ಕಾರು ಡ್ರಿಫ್ಟಿಂಗ್ ; ಶೋಕಿ ಮಾಡಿ ತಗ...
27-03-26 09:34 pm