ಬ್ರೇಕಿಂಗ್ ನ್ಯೂಸ್
17-08-21 07:26 pm Mangaluru Correspondent ಕರಾವಳಿ
ಮಂಗಳೂರು, ಆಗಸ್ಟ್ 17: ಸ್ವಾತಂತ್ರ್ಯ ರಥವನ್ನು ತಡೆದು ದೇಶದ್ರೋಹಿ ಕೃತ್ಯ ಎಸಗಿದ ಎಸ್ಡಿಪಿಐ ಮತ್ತು ಪಿಎಫ್ಐ ಸಂಘಟನೆಗಳನ್ನು ದೇಶದಲ್ಲಿ ನಿಷೇಧಿಸಬೇಕು. ಈಗಾಗ್ಲೇ ಇವೆರಡು ಸಂಘಟನೆಗಳ ಪಾತ್ರ ದೇಶದ್ರೋಹಿ ಕೃತ್ಯಗಳಲ್ಲಿ ಸಾಬೀತಾಗಿದೆ. ಈ ಬಗ್ಗೆ ನಾವು ರಾಜ್ಯದ ಗೃಹ ಸಚಿವರಿಗೆ ಒತ್ತಾಯ ಮಾಡಿದ್ದೇವೆ. ಸದ್ಯದಲ್ಲೇ ಮುಖ್ಯಮಂತ್ರಿಗಳನ್ನೂ ಭೇಟಿ ಮಾಡುತ್ತೇವೆ ಎಂದು ಮಂಗಳೂರು ಉತ್ತರ ಶಾಸಕ ಭರತ್ ಶೆಟ್ಟಿ ಹೇಳಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಟಿ ನಡೆಸಿದ ಭರತ್ ಶೆಟ್ಟಿ, ಪಿಎಫ್ಐ ಮತ್ತು ಎಸ್ಡಿಪಿಐ ಸಂಘಟನೆಗಳ ಬಗ್ಗೆ ಆರೋಪ ಕೇಳಿಬರುವುದು, ದೇಶದ್ರೋಹಿ ಕೃತ್ಯಗಳನ್ನು ಎಸಗುತ್ತಿರುವುದು ಇದು ಮೊದಲೇನಲ್ಲ. ಸಾಕಷ್ಟು ಬಾರಿ ಈ ರೀತಿಯ ಕೃತ್ಯಗಳನ್ನು ನಡೆಸಿದೆ. ಇದಕ್ಕಾಗಿ ನಾವು ಈ ರೀತಿಯ ಸಂಘಟನೆಗಳನ್ನು ಮಟ್ಟ ಹಾಕಬೇಕೆಂದು ಒತ್ತಾಯಿಸುತ್ತಲೇ ಬಂದಿದ್ದೇವೆ. ಆದರೆ, ನಮ್ಮ ಸರಕಾರ ಏನೂ ಹಾಗೇ ಕುಳಿತಿಲ್ಲ. ಅದರ ಬಗ್ಗೆ ನಿಶ್ಚಿತ ಸಾಕ್ಷಿ, ದಾಖಲೆಗಳನ್ನು ಕಲೆಹಾಕುತ್ತಿದೆ. ಅದನ್ನು ಯಾವ ರೀತಿ ಮಟ್ಟ ಹಾಕಬೇಕೆಂದು ಗೊತ್ತಿದೆ. ಗೃಹ ಸಚಿವರಲ್ಲಿ ಮಾತನಾಡಿದ್ದೇವೆ. ಈ ಬಗ್ಗೆ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರನ್ನೂ ಭೇಟಿಯಾಗಿ ಆಗ್ರಹ ಮಾಡಲಿದ್ದೇವೆ ಎಂದು ಹೇಳಿದರು.
ಮಾಜಿ ಸಚಿವ ಯುಟಿ ಖಾದರ್ ಕೂಡ ಸಾವರ್ಕರ್ ಬಗ್ಗೆ ಹಗುರವಾಗಿ ಮಾತನಾಡಿದ್ದಾರೆ. ಇವರೆಲ್ಲ ಇತಿಹಾಸ ಪುಸ್ತಕ ಓದಲಿ. ಸಾವರ್ಕರ್ ಯಾರು, ಅವರ ಕೊಡುಗೆ ಏನು ಎಂಬ ಬಗ್ಗೆ ತಿಳಿದುಕೊಳ್ಳಲಿ. ಎರಡು ಬಾರಿ ಕಾಳಪಾನಿ ಶಿಕ್ಷೆಗೆ ಒಳಗಾಗಿದ್ದು ಯಾಕೆಂದು ತಿಳಿಯಲಿ. ಕಾಂಗ್ರೆಸ್ ಇತರ ನಾಯಕರು ಕೂಡ ಇದರ ಬಗ್ಗೆ ಮಾತಾಡುತ್ತಿಲ್ಲ. ಕನಿಷ್ಠ ತನಿಖೆ ಆಗಬೇಕೆಂದೂ ಹೇಳುತ್ತಿಲ್ಲ. ಇವರಿಗೆ ಎಸ್ಡಿಪಿಐ ಬಗ್ಗೆ ಒಳಗೊಳಗೇ ಮಮಕಾರ ಇದೆ. ಹಾಗಾಗಿ ಮಾತಾಡುತ್ತಿಲ್ಲ ಎಂದು ಹೇಳಿದರು.
ಜನರಿಗೆ ಈ ಬಗ್ಗೆ ವಿಷಯ ತಿಳಿಯಬೇಕೆಂಬ ನೆಲೆಯಲ್ಲಿ ಮಾತಾಡುತ್ತಿದ್ದೇವೆ. ಸರಕಾರ ಈ ಬಗ್ಗೆ ಏನು ಮಾಡಬೇಕೋ ಅದನ್ನು ಮಾಡುತ್ತಿದೆ. ಕಾಂಗ್ರೆಸ್ ನಾಯಕರು ಇದರ ಬಗ್ಗೆ ಚಕಾರ ಎತ್ತದೆ ಇರುವುದು ಸಂಶಯಕ್ಕೆ ಕಾರಣವಾಗಿದೆ. ಈಗಾಗ್ಲೇ ಅಫ್ಘಾನಿಸ್ತಾನದಲ್ಲಿ ಏನಾಗಿದೆ, ಏನಾಗುತ್ತಿದೆ ಎಂಬುದು ಗೊತ್ತಿದೆ. ತಾಲಿಬಾನ್ ಗಳ ರೀತಿಯ ಮನಸ್ಥಿತಿ ಇರುವವರ ಬಗ್ಗೆ ನಾವು ಎಚ್ಚರ ಇರಬೇಕಾಗಿದೆ ಎಂದು ಭರತ್ ಶೆಟ್ಟಿ ಹೇಳಿದರು.
ಪಿಎಫ್ಐ, ಎಸ್ಡಿಪಿಐಯನ್ನು ಯಾಕೆ ನಿಷೇಧ ಮಾಡಿಲ್ಲ. ನಿಮ್ಮದೇ ಸರಕಾರ ಇದೆಯಲ್ಲಾ ಎಂಬ ಪ್ರಶ್ನೆಗೆ, ನಿಷೇಧ ಮಾಡಬೇಕೆಂಬ ಆಗ್ರಹ ದೇಶಾದ್ಯಂತ ಇದೆ. ಇದರ ಬಗ್ಗೆ ಬಿಜೆಪಿ ಸರಕಾರ ಸಾಕಷ್ಟು ಕೆಲಸ ಮಾಡಿದೆ, ಮಾಡುತ್ತಿದೆ. ಸೂಕ್ತ ದಾಖಲೆಗಳ ಅಗತ್ಯವಿದೆ. ಅದರ ಸಂಗ್ರಹ ನಡೆಯುತ್ತಿದೆ. ಸೂಕ್ತ ಸಂದರ್ಭದಲ್ಲಿ ಸರಕಾರ ಸೂಕ್ತ ನಿರ್ಧಾರ ತೆಗೆದುಕೊಳ್ಳಲಿದೆ ಎಂದರು.
ಸ್ವಾತಂತ್ರ್ಯ ರಥಕ್ಕೆ ಎಸ್ ಡಿಪಿಐ ಕಾರ್ಯಕರ್ತರ ತಡೆ ; ಸಾವರ್ಕರ್ ಫೋಟೊ ಬದಲು ಟಿಪ್ಪು ಫೋಟೊ ಹಾಕಲು ಒತ್ತಡ !
ಸ್ವಾತಂತ್ರ್ಯ ರಥಕ್ಕೆ ಎಸ್ಡಿಪಿಐ ತಡೆ ; ಮೂವರು ಆರೋಪಿಗಳ ಬಂಧಿಸಿದ ಪುತ್ತೂರು ಪೊಲೀಸರು
ತಾಲಿಬಾನಿ ಸಂಸ್ಕೃತಿ ನಡೆಯಲು ಬಿಡಲ್ಲ ; ಸಚಿವ ಕೋಟ, ಆರೋಪಿಗಳನ್ನು ಬಂಧಿಸದಿದ್ದರೆ ಪ್ರತಿಭಟನೆ ಎಚ್ಚರಿಕೆ ನೀಡಿದ ಶಾಸಕ
MLA Bharath Shetty in Mangalore slammed SDPI over Savarkar photo row in Kadaba Puttur, says they must know about kalapani punishment. SDPI and PFI should be banned in India he added.
30-04-25 05:08 pm
Bangalore Correspondent
R Ahsok, Cm Siddaramaiah, Pak: ಕಾಂಗ್ರೆಸ್ನವರಿ...
29-04-25 10:45 pm
CM Siddaramaiah, Belagavi, BJP Suresh Kumar:...
29-04-25 09:51 pm
Protest Kalaburagi, islamabad Locality: ಕಲಬುರ...
29-04-25 09:20 pm
Kudupu Murder, Mob attack, Parameshwar: ಕುಡುಪ...
29-04-25 04:28 pm
30-04-25 06:59 pm
HK News Desk
India Pakistan War: ಭಾರತೀಯ ಸೇನಾಪಡೆಗೆ ಪರಮಾಧಿಕಾ...
30-04-25 03:14 pm
Pakistan, No-fly zone islamabad: ಭಾರತದ ಪ್ರತೀಕ...
30-04-25 02:13 pm
ಮೋದಿ 'ಗಾಯಬ್' ಎಂದು ಕಾಂಗ್ರೆಸ್ ಪೋಸ್ಟ್ ; ಕಾಂಗ್ರೆಸ...
29-04-25 03:45 pm
'ನನಗೆ ಪಾಕಿಸ್ತಾನದಲ್ಲಿ ಯಾರೂ ಇಲ್ಲ, ದಯವಿಟ್ಟು ಉಳಿಸ...
28-04-25 06:52 pm
30-04-25 11:26 pm
Mangalore Correspondent
Kudupu Murder Case, SDPI, Ravindra Nayak: ಗುಂ...
30-04-25 11:07 pm
Nidhi Land Developers, Mangalore, Sky Garden:...
30-04-25 08:29 pm
Mangalore, Dinesh Gundurao, Kudupu Murder: ಕು...
30-04-25 04:06 pm
ಗುಂಪು ಥಳಿತಕ್ಕೆ ಸಾವು ಪ್ರಕರಣ ; ಕೇರಳ ಮೂಲದ ಯುವಕನೆ...
30-04-25 11:26 am
30-04-25 04:09 pm
Mangalore Correspondent
Mangalore Mudipu Murder, Mob, Police, Crime:...
29-04-25 09:59 pm
Kudupu Murder, Mangalore Crime, Police: ಕುಡುಪ...
29-04-25 02:53 pm
Belthagady, Blackmail, Mangalore crime: ಬೆಳ್ತ...
28-04-25 11:39 am
Shootout Bakrebail, Mangalore Crime: ಬಾಕ್ರಬೈಲ...
28-04-25 11:24 am