ಬ್ರೇಕಿಂಗ್ ನ್ಯೂಸ್
17-08-21 06:08 pm Mangaluru Correspondent ಕರಾವಳಿ
ಉಳ್ಳಾಲ, ಆ.17: ಅಪ್ರತಿಮ ದೇಶಭಕ್ತ ವೀರ ಸಾವರ್ಕರ್ ಅವರ ಬಗ್ಗೆಯೇ ತಿಳಿಯದ ಎಸ್ ಡಿಪಿಐ ಕಾರ್ಯಕರ್ತರು ತಾಲಿಬಾನಲ್ಲಿ ಇದ್ದಾರೆಯೇ..? ಭಾರತದಲ್ಲಿದ್ದು ಸಾವರ್ಕರ್ ಬಗ್ಗೆ ತಿಳಿಯದವರು ಇಲ್ಲಿ ಇರಬಾರದು. ಮತಾಂಧ ಭಾವನೆ ಇಟ್ಟುಕೊಂಡು ಸ್ವಾತಂತ್ರ್ಯ ರಥವನ್ನ ತಡೆಯುವ ಸಂಘಟನೆಗಳು ನಿಷೇಧ ಆಗಬೇಕು. ಎಸ್ ಡಿಪಿಐ ಮತ್ತು ಪಿಎಫ್ಐಗಳು ನಿಷೇಧ ಆಗಲೇಬೇಕೆಂದು ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಸಂತೋಷ್ ರೈ ಬೋಳಿಯಾರ್ ಆಗ್ರಹಿಸಿದ್ದಾರೆ.
ಕುತ್ತಾರಿನ ಖಾಸಗಿ ಸಭಾಂಗಣದಲ್ಲಿ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದರು. ಪುತ್ತೂರಿನ ಕಬಕದಲ್ಲಿ ಪಂಚಾಯತ್ ವತಿಯಿಂದ ನಡೆದ ಸ್ವಾತಂತ್ರ್ಯ ರಥ ಯಾತ್ರೆಯನ್ನು SDPI ಕಾರ್ಯಕರ್ತರು ತಡೆದು ಅಶಾಂತಿ ಉಂಟುಮಾಡಿದ್ದು ಖಂಡನೀಯ. ವೀರ ಸಾವರ್ಕರ್ ಒಬ್ಬ ಅಪ್ರತಿಮ ದೇಶಭಕ್ತನಾಗಿದ್ದು ದೇಶಕ್ಕಾಗಿ ಜೈಲು ವಾಸ ಅನುಭವಿಸಿದ್ದವರು. ದೇಶಕ್ಕಾಗಿ ಕಾಳಪಾನಿಯ ಶಿಕ್ಷೆಗೆ ಒಳಗಾದವರು. ಆದರೆ ಮತಾಂಧತೆಯನ್ನು ತುಂಬಿಕೊಂಡ ಎಸ್ ಡಿಪಿಐ ಕಾರ್ಯಕರ್ತರು ಸಾವರ್ಕರ್ ಫೋಟೊ ತೆಗೆದು ಟಿಪ್ಪು ಚಿತ್ರ ಹಾಕುವಂತೆ ಸ್ವಾತಂತ್ರ್ಯ ರಥಕ್ಕೆ ಅಡ್ಡಿಪಡಿಸಿದ್ದು ದೇಶ ದ್ರೋಹದ ಕೆಲಸವಾಗಿದ್ದು ಇವರ ವಿರುದ್ಧ ಪೊಲೀಸ್ ಇಲಾಖೆಯು ಕಠಿಣ ಕ್ರಮ ಕೈಗೊಳ್ಳಬೇಕು. ಈ ರೀತಿಯ ದೇಶದ್ರೋಹಿ ಕೆಲಸ ಮಾಡುವ ಸಂಘಟನೆಗಳನ್ನು ನಿಷೇಧಿಸುವಂತೆ ಆಗ್ರಹಿಸಿದರು. ಜಿಲ್ಲೆಯಲ್ಲಿ ಪಂಚಾಯತ್ ಚುನಾವಣೆಗಳಲ್ಲಿ ನಾಲ್ಕೈದು ಸೀಟು ಗೆದ್ದು ಬೀಗುತ್ತಿರುವ SDPI ನ ಕಾರ್ಯಕರ್ತರು ತಾವು ತಾಲಿಬಾನಿನಲ್ಲಿ ಇದ್ದೇವೆ ಎಂದು ಭಾವಿಸಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಈ ರೀತಿಯ ದೇಶದ್ರೋಹಿ ಕೃತ್ಯ ಕರಾವಳಿಯಲ್ಲಿ ಹೆಚ್ಚುತ್ತಿರುವ ಕಾರಣ, ಮಂಗಳೂರಿನಲ್ಲಿ ಎನ್ಐಎ ಕಚೇರಿ ಆರಂಭಿಸುವ ಅಗತ್ಯವಿದ್ದು ಕೇಂದ್ರ ಹಾಗೂ ರಾಜ್ಯ ಗೃಹ ಸಚಿವರಿಗೆ ಪತ್ರ ಬರೆದಿದ್ದೇವೆ. ಕೇಂದ್ರ ಗೃಹ ಸಚಿವ ಅಮಿತ್ ಶಾ, ರಕ್ಷಣಾ ಸಚಿವ ರಾಜನಾಥ್ ಸಿಂಗ್, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ರಾಜ್ಯ ಗೃಹ ಸಚಿವ ಆರಗ ಜ್ಞಾನೇಂದ್ರ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲು ಅವರ ಒತ್ತಡದಿಂದಾಗಿ ಮಂಗಳೂರಿನಲ್ಲಿ ಎನ್ಐಎ ಕಾರ್ಯಾಲಯ ಆರಂಭಿಸುವ ಯೋಜನೆ ಇದ್ದು ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ ಎಂಬ ಮಾಹಿತಿ ಸಿಕ್ಕಿದೆ. ಅವೆಲ್ಲದ್ದಕ್ಕೂ ಜಿಲ್ಲೆಯ ಜನಪ್ರತಿನಿಧಿಗಳ ಸಹಕಾರ ಬಯಸುತ್ತಿದ್ದೇವೆ ಎಂದು ಹೇಳಿದರು.
ಎನ್ ಐ ಎ ಕಚೇರಿ ಮಂಗಳೂರು ಕ್ಷೇತ್ರದಲ್ಲಿಯೇ ಯಾಕೆ ಬೇಕೆಂದರೆ ತೊಕ್ಕೊಟ್ಟು ಸಮೀಪದ ಚೆಂಬುಗುಡ್ಡೆಯಲ್ಲಿಯೇ ಭಟ್ಕಳದ ಉಗ್ರ ಅವಿತಿದ್ದ. ಈಗ ಉಳ್ಳಾಲದ ಮನೆಯೊಂದರಲ್ಲಿ ಶಂಕಿತನೊಬ್ಬ ಎನ್ ಐ ಎ ವಶವಾಗಿದ್ದಾನೆ. ದಿವಂಗತ ಶಾಸಕ ಇದಿನಬ್ಬರ ಮರಿ ಮೊಮ್ಮಗಳು, ಮೊಮ್ಮಗ, ಮತ್ತೊಬ್ಬ ಮೊಮ್ಮಗ ಹಾಗೂ ಆತನ ಪತ್ನಿ ಕೂಡ ಸಿರಿಯಾದ ನಂಟು ಹೊಂದಿರುವುದು ಸಾಬೀತಾಗಿದೆ. ಆದರೂ ಕ್ಷೇತ್ರದ ಶಾಸಕ ಯು.ಟಿ.ಖಾದರ್ ಮಾತ್ರ ಇಲ್ಲಿಗೆ ಎನ್ಐಎ ಕಚೇರಿ ಅಗತ್ಯ ಇಲ್ಲವೇನೋ ಎನ್ನುವ ರೀತಿ ಇಲ್ಲಿ ಗಂಭೀರ ಬೆಳವಣಿಗೆ ಆಗುತ್ತಿದ್ದರೂ ಅದನ್ನು ಖಂಡಿಸಲೂ ಹೋಗದೆ ಸಮ್ಮನೆ ಕುಳಿತಿದ್ದಾರೆ. ಇದು ಖಾದರ್ ಬಗ್ಗೆಯೇ ಸಂಶಯ ಮೂಡಿಸುತ್ತಿದೆ ಎಂದು ಹೇಳಿದರು.
ಬಿಜೆಪಿ ಮಂಗಳೂರು ಮಂಡಲ ಅಧ್ಯಕ್ಷ ಚಂದ್ರಹಾಸ್ ಪಂಡಿತ್ ಹೌಸ್, ಕ್ಷೇತ್ರ ಪ್ರಧಾನ ಕಾರ್ಯದರ್ಶಿ ನವೀನ್ ಪಾದಲ್ಪಾಡಿ, ಹೇಮಂತ್ ಶೆಟ್ಟಿ ದೇರಳಕಟ್ಟೆ ಹಾಗೂ ಉಪಾಧ್ಯಕ್ಷ ಯಶವಂತ್ ಅಮೀನ್ ಉಪಸ್ಥಿತರಿದ್ದರು.
ಸ್ವಾತಂತ್ರ್ಯ ರಥಕ್ಕೆ ಎಸ್ ಡಿಪಿಐ ಕಾರ್ಯಕರ್ತರ ತಡೆ ; ಸಾವರ್ಕರ್ ಫೋಟೊ ಬದಲು ಟಿಪ್ಪು ಫೋಟೊ ಹಾಕಲು ಒತ್ತಡ !
ಸ್ವಾತಂತ್ರ್ಯ ರಥಕ್ಕೆ ಎಸ್ಡಿಪಿಐ ತಡೆ ; ಮೂವರು ಆರೋಪಿಗಳ ಬಂಧಿಸಿದ ಪುತ್ತೂರು ಪೊಲೀಸರು
ತಾಲಿಬಾನಿ ಸಂಸ್ಕೃತಿ ನಡೆಯಲು ಬಿಡಲ್ಲ ; ಸಚಿವ ಕೋಟ, ಆರೋಪಿಗಳನ್ನು ಬಂಧಿಸದಿದ್ದರೆ ಪ್ರತಿಭಟನೆ ಎಚ್ಚರಿಕೆ ನೀಡಿದ ಶಾಸಕ
Ullal Santhosh Rai Boliyar slams SDPI over Kadaba Savarkar photo row says SDPI belong to Taliban. Enraged over the photo of Veer Savarkar along with other freedom fighters on Swatantrya ratha, an Independence Day rally vehicle in Kabaka, the SDPI workers allegedly tried to disrupt Independence Day celebrations, at Kabaka Gram Panchayat premises.
23-06-26 05:58 pm
HK News Staffer
ಅಡ್ಡ ಮತದಾನ; ಧರ್ಮಸ್ಥಳದಲ್ಲಿ ಶಾಸಕರು ಬಂದು ಆಣೆ ಮಾಡ...
22-06-26 08:18 pm
ವಿಧಾನ ಪರಿಷತ್ ಚುನಾವಣೆಗೂ ಮುನ್ನ ರಹಸ್ಯ ಸಭೆ ; ಬಿಜೆ...
22-06-26 03:44 pm
ಆಸ್ಪತ್ರೆ ಸಿಬ್ಬಂದಿ ಸ್ಪಂದಿಸದಿದ್ದರೆ ಚಿಂತೆ ಬೇಡ ;...
22-06-26 12:51 pm
Cross Voting Row, Vijayendra: ಅಡ್ಡ ಮತದಾನ ; ಧರ...
21-06-26 02:18 pm
23-06-26 12:21 pm
HK News Staffer
ಕತಾರ್ ಕೈಗಾರಿಕಾ ಪ್ರದೇಶದಲ್ಲಿ ಭಾರೀ ಸ್ಫೋಟ ; 54 ಜನ...
22-06-26 12:55 pm
ಮರಳು ಮಾಫಿಯಾ ಅಟ್ಟಹಾಸಕ್ಕೆ ಬಿಜೆಪಿ ನಾಯಕ ಸಜೀವ ದಹನ;...
18-06-26 07:17 pm
ಮೋದಿ ನೋಡಲು ಶಾಂತ, ಒಳ್ಳೇ ವ್ಯಕ್ತಿಯಂತೆ ಕಾಣ್ತಾರೆ.....
18-06-26 01:23 pm
ಹೊರ್ಮುಜ್ ಬಿಕ್ಕಟ್ಟು; ಒಮಾನ್ ಕರಾವಳಿಯಲ್ಲಿ ಮತ್ತೊಂದ...
15-06-26 11:18 am
23-06-26 06:02 pm
HK News Staffer
ಬಸ್ ಚಲಿಸುತ್ತಿದ್ದಾಗಲೇ ಬಿಪಿ ಲೋ ಆಗಿ ಕುಸಿದ ಚಾಲಕ !...
23-06-26 03:18 pm
ಮುಸ್ಲಿಮರಿಗೆ ಸಚಿವ ಸ್ಥಾನ ; ಕಾಂಗ್ರೆಸಿಗೆ ಓಟ್ ಹಾಕದ...
23-06-26 11:49 am
ಉಡುಪಿ ಕೋರ್ಟ್ಗೆ ಇ-ಮೇಲ್ ಮೂಲಕ ಬಾಂಬ್ ಬೆದರಿಕೆ; ಕೆ...
22-06-26 05:23 pm
Dr Kakkillaya News: ಕೊರಾನಾ ಮಾಸ್ಕ್ ಹಾಕಿಲ್ಲವೆಂದ...
21-06-26 08:59 pm
23-06-26 02:15 pm
HK News Staffer
ಮಗಳಿಗೆ ಬುದ್ಧಿ ಹೇಳಿದ್ದೇ ತಪ್ಪಾಯ್ತಾ ? ಲಿವ್-ಇನ್...
23-06-26 12:57 pm
ಅಕ್ರಮ ಪೊಲೀಸ್ ಕ್ಲಿಯರೆನ್ಸ್ ; ಮೂರೇ ದಿನದಲ್ಲಿ ಸಿಸಿ...
22-06-26 10:21 pm
ಉಡುಪಿಯಲ್ಲಿ ಮಕ್ಕಳಿಲ್ಲದ ದಂಪತಿಗೆ ಮಗು ಮಾರಾಟ; ವೈದ್...
22-06-26 08:01 pm
ಹಂದಿ ಜ್ವರಕ್ಕೆ ಕಾರವಾರದ ವ್ಯಕ್ತಿ ಮಂಗಳೂರಿನಲ್ಲಿ ಬಲ...
22-06-26 07:58 pm