ಬ್ರೇಕಿಂಗ್ ನ್ಯೂಸ್
14-08-21 04:13 pm Mangaluru Correspondent ಕರಾವಳಿ
ಮಂಗಳೂರು, ಆಗಸ್ಟ್ 14: ಉಳ್ಳಾಲದಲ್ಲಿ ಮಾಜಿ ಶಾಸಕ ಇದಿನಬ್ಬ ಕುಟುಂಬಸ್ಥರು ಭಯೋತ್ಪಾದಕರ ಜೊತೆ ನಂಟು ಹೊಂದಿರುವುದು ತನಿಖೆಯಲ್ಲಿ ಸಾಬೀತಾಗಿದೆ. ಇದಿನಬ್ಬರ ಮೊಮ್ಮಗಳು ಮತ್ತು ಆಕೆಯ ಗಂಡ ಸಿರಿಯಾಕ್ಕೆ ಹೋಗಿ ಮೃತಪಟ್ಟಿದ್ದಾಗಿ ತನಿಖೆಯಲ್ಲಿ ತಿಳಿದುಬಂದಿದೆ. ಈಗ ಅದೇ ಕುಟುಂಬದ ಮತ್ತೊಬ್ಬ ವ್ಯಕ್ತಿಯನ್ನು ಎನ್ಐಎ ಅಧಿಕಾರಿಗಳು ಬಂಧಿಸಿದ್ದಾರೆ. ಆದರೆ, ಅಲ್ಲಿನ ಶಾಸಕ ಖಾದರ್ ಮಾತ್ರ ಈ ಬಗ್ಗೆ ಬಜರಂಗದಳ ಪ್ರತಿಭಟನೆ ಮಾಡಬಾರದು ಎನ್ನುತ್ತಿದ್ದಾರೆ. ಬಜರಂಗದಳ ಪ್ರತಿಭಟನೆ ಮಾಡಬಾರದು ಎನ್ನಲು ಉಳ್ಳಾಲ ಏನು ಪಾಕಿಸ್ತಾನದಲ್ಲಿ ಇದೆಯೇ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಸುದರ್ಶನ್ ಮೂಡುಬಿದ್ರೆ ಪ್ರಶ್ನಿಸಿದ್ದಾರೆ.
ನಗರದ ಅಟಲ್ ಸೇವಾ ಕೇಂದ್ರದಲ್ಲಿ ಸುದ್ದಿಗೋಷ್ಟಿ ನಡೆಸಿದ ಸುದರ್ಶನ್, ಎನ್ಐಎ ತನಿಖೆಯ ಬಗ್ಗೆ ಗೊಂದಲದ ಹೇಳಿಕೆ ಬೇಡ ಎಂಬ ಮಾಜಿ ಸಚಿವ ಯು.ಟಿ ಖಾದರ್ ಹೇಳಿಕೆಯನ್ನು ದಕ್ಷಿಣ ಕನ್ನಡ ಜಿಲ್ಲಾ ಬಿಜೆಪಿ ಖಂಡಿಸುತ್ತದೆ ಎಂದು ಹೇಳಿದರು.


ಕಾಂಗ್ರೆಸಿನ ಮಾಜಿ ಶಾಸಕರ ಮನೆಯಲ್ಲಿ ನಡೆದ ಲವ್ ಜಿಹಾದ್ ಹಾಗೂ ಉಗ್ರರ ಜೊತೆಗಿನ ಸಂಬಂಧದ ವಿಚಾರವನ್ನ ಖಂಡಿಸಿ ಬಜರಂಗದಳ ಕಾರ್ಯಕರ್ತರು ಪ್ರತಿಭಟನೆಯನ್ನು ನಡೆಸಿದ್ದರು. ಅದನ್ನು ಜಿಲ್ಲಾ ಬಿಜೆಪಿ ಸಮರ್ಥಿಸುತ್ತದೆ. ಇದಿನಬ್ಬರ ಮನೆಯಲ್ಲಿ ನಡೆದ ಮತಾಂತರ ವಿಚಾರವನ್ನು ಕೇಳಲು ನೀವು ಯಾರು ಎಂದು ನಮಗೆ ಪ್ರಶ್ನೆ ಮಾಡಿದ್ದಾರೆ. ದೇಶದ ಯಾವುದೇ ಭಾಗದಲ್ಲಿ ಲವ್ ಜಿಹಾದ್, ಮತಾಂತರ, ಉಗ್ರ ಕೃತ್ಯ ನಡೆದರೂ ನಾವು ಪ್ರಶ್ನೆ ಮಾಡುತ್ತೇವೆ. ಖಂಡನೆ ಮಾಡುತ್ತೇವೆ. ಅದನ್ನ ಪ್ರಶ್ನೆ ಮಾಡೋಕೆ ನೀವ್ಯಾರು ಅಂತ ಶಾಸಕ ಯು.ಟಿ ಖಾದರ್ ಅವರನ್ನು ಸುದರ್ಶನ್ ಮೂಡಬಿದ್ರೆ ಪ್ರಶ್ನೆ ಮಾಡಿದರು.
ಇದು ಇಂದು ನಿನ್ನೆಯ ಹೋರಾಟವಲ್ಲ. ಕಳೆದ ಏಳು ದಶಕಗಳಿಂದ ಲವ್ ಜಿಹಾದ್, ಗೋಹತ್ಯೆ, ಮತಾಂತರ ಇವೆಲ್ಲದರ ವಿರುದ್ಧ ಹೋರಾಟ ಮಾಡುತ್ತ ಬರಲಾಗಿದೆ. ಯು.ಟಿ ಖಾದರ್ ಅವರು ಬಾಲಿಶವಾದ ಹೇಳಿಕೆಯನ್ನು ನೀಡಿದ್ದಾರೆ. ಇದಿನಬ್ಬರ ಮೊಮ್ಮಗಳು ಮತ್ತು ಅವಳ ಗಂಡ ಐಸಿಸಿಗೆ ಸೇರಿದ್ದು ದಾಖಲೆ ಮೂಲಕ ಸಾಬೀತಾಗಿದೆ. ಇದಿನಬ್ಬರ ಕುಟುಂಬಕ್ಕೆ ಭಯೋತ್ಪಾದಕರ ನಂಟಿದೆ, ಲವ್ ಜಿಹಾದ್ ನಂಟಿದೆ ಎಂಬುದು ಸಾಬೀತಾಗಿದೆ. ಉಳ್ಳಾಲದಲ್ಲಿ ಹೊರಗಿನವರು ಬಂದು ಪ್ರತಿಭಟನೆ ಮಾಡಿದ್ದಾರೆ ಅಂತ ಯುಟಿ ಖಾದರ್ ಹೇಳುವುದಕ್ಕೆ ಉಳ್ಳಾಲ ಏನೂ ಪಾಕಿಸ್ತಾನದಲ್ಲಿ ಇರೋದಲ್ಲ. ಅದು ನಮ್ಮಲ್ಲೇ ಇದೆ ಎಂದು ತಿರುಗೇಟು ನೀಡಿದರು.
Video:
Former MLA Idinabbas house raid by NIA in ullal proves ISIS link of family slams Sudarshan Moodbidri. Also he slammed Khader who shouted at VHP for protesting near Deepthi Marlas house.
23-06-26 05:58 pm
HK News Staffer
ಅಡ್ಡ ಮತದಾನ; ಧರ್ಮಸ್ಥಳದಲ್ಲಿ ಶಾಸಕರು ಬಂದು ಆಣೆ ಮಾಡ...
22-06-26 08:18 pm
ವಿಧಾನ ಪರಿಷತ್ ಚುನಾವಣೆಗೂ ಮುನ್ನ ರಹಸ್ಯ ಸಭೆ ; ಬಿಜೆ...
22-06-26 03:44 pm
ಆಸ್ಪತ್ರೆ ಸಿಬ್ಬಂದಿ ಸ್ಪಂದಿಸದಿದ್ದರೆ ಚಿಂತೆ ಬೇಡ ;...
22-06-26 12:51 pm
Cross Voting Row, Vijayendra: ಅಡ್ಡ ಮತದಾನ ; ಧರ...
21-06-26 02:18 pm
23-06-26 12:21 pm
HK News Staffer
ಕತಾರ್ ಕೈಗಾರಿಕಾ ಪ್ರದೇಶದಲ್ಲಿ ಭಾರೀ ಸ್ಫೋಟ ; 54 ಜನ...
22-06-26 12:55 pm
ಮರಳು ಮಾಫಿಯಾ ಅಟ್ಟಹಾಸಕ್ಕೆ ಬಿಜೆಪಿ ನಾಯಕ ಸಜೀವ ದಹನ;...
18-06-26 07:17 pm
ಮೋದಿ ನೋಡಲು ಶಾಂತ, ಒಳ್ಳೇ ವ್ಯಕ್ತಿಯಂತೆ ಕಾಣ್ತಾರೆ.....
18-06-26 01:23 pm
ಹೊರ್ಮುಜ್ ಬಿಕ್ಕಟ್ಟು; ಒಮಾನ್ ಕರಾವಳಿಯಲ್ಲಿ ಮತ್ತೊಂದ...
15-06-26 11:18 am
23-06-26 06:02 pm
HK News Staffer
ಬಸ್ ಚಲಿಸುತ್ತಿದ್ದಾಗಲೇ ಬಿಪಿ ಲೋ ಆಗಿ ಕುಸಿದ ಚಾಲಕ !...
23-06-26 03:18 pm
ಮುಸ್ಲಿಮರಿಗೆ ಸಚಿವ ಸ್ಥಾನ ; ಕಾಂಗ್ರೆಸಿಗೆ ಓಟ್ ಹಾಕದ...
23-06-26 11:49 am
ಉಡುಪಿ ಕೋರ್ಟ್ಗೆ ಇ-ಮೇಲ್ ಮೂಲಕ ಬಾಂಬ್ ಬೆದರಿಕೆ; ಕೆ...
22-06-26 05:23 pm
Dr Kakkillaya News: ಕೊರಾನಾ ಮಾಸ್ಕ್ ಹಾಕಿಲ್ಲವೆಂದ...
21-06-26 08:59 pm
23-06-26 02:15 pm
HK News Staffer
ಮಗಳಿಗೆ ಬುದ್ಧಿ ಹೇಳಿದ್ದೇ ತಪ್ಪಾಯ್ತಾ ? ಲಿವ್-ಇನ್...
23-06-26 12:57 pm
ಅಕ್ರಮ ಪೊಲೀಸ್ ಕ್ಲಿಯರೆನ್ಸ್ ; ಮೂರೇ ದಿನದಲ್ಲಿ ಸಿಸಿ...
22-06-26 10:21 pm
ಉಡುಪಿಯಲ್ಲಿ ಮಕ್ಕಳಿಲ್ಲದ ದಂಪತಿಗೆ ಮಗು ಮಾರಾಟ; ವೈದ್...
22-06-26 08:01 pm
ಹಂದಿ ಜ್ವರಕ್ಕೆ ಕಾರವಾರದ ವ್ಯಕ್ತಿ ಮಂಗಳೂರಿನಲ್ಲಿ ಬಲ...
22-06-26 07:58 pm