Mangalore, Yathindra Siddaramaiah, Umar Khalid, Karnataka Politics: ಉಮರ್ ಖಾಲಿದ್ ದೇಶದ್ರೋಹಿ ಎಂದು ಸಾಬೀತು ಆಗಿಲ್ಲ, ಬಿಜೆಪಿ ವಿರುದ್ಧ ಮಾತನಾಡಿದವರೆಲ್ಲ ದೇಶದ್ರೋಹಿ ಆಗಲ್ಲ! ಬಿಕೆ ಹರಿಪ್ರಸಾದ್ ಹೇಳಿಕೆಗೆ ಸಚಿವ ಯತೀಂದ್ರ ಸಮರ್ಥನೆ

17-09-26 06:29 pm       HK News Staffer   ಕರಾವಳಿ

2020ರ ದೆಹಲಿ ಗಲಭೆ ಪ್ರಕರಣದಲ್ಲಿ ಜೈಲುಪಾಲಾಗಿರುವ ಉಮರ್ ಖಾಲಿದ್ ಪರವಾಗಿ ಕೆಪಿಸಿಸಿ ಅಧ್ಯಕ್ಷ ಹರಿಪ್ರಸಾದ್ ಹೇಳಿಕೆ ನೀಡಿದ್ದನ್ನು ನಗರಾಭಿವೃದ್ಧಿ ಸಚಿವ ಯತೀಂದ್ರ ಸಿದ್ದರಾಮಯ್ಯ ಸಮರ್ಥಿಸಿಕೊಂಡಿದ್ದಾರೆ. ಉಮರ್ ಖಾಲಿದ್ ಆರೋಪಿ ಆಗಿರಬಹುದು, ದೇಶದ್ರೋಹಿ ಎಂದು ಸಾಬೀತು ಆಗಿಲ್ಲ. ಬಿಕೆ ಹರಿಪ್ರಸಾದ್ ಹಾಗು ಗೃಹ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದು ಸರಿಯಿದೆ. ಬಿಜೆಪಿಯವರು ಪ್ರಕರಣದ ವಿಚಾರಣೆ ಆಗದೇ ದೇಶದ್ರೋಹಿ ಎಂದು ಹೇಗೆ ಹೇಳುತ್ತಾರೆ? ಎಂದು ಪ್ರಶ್ನಿಸಿದ್ದಾರೆ.

ಮಂಗಳೂರು, ಸೆ.17 ʻ2020ರ ದೆಹಲಿ ಗಲಭೆ ಪ್ರಕರಣದಲ್ಲಿ ಜೈಲುಪಾಲಾಗಿರುವ ಉಮರ್ ಖಾಲಿದ್ ಪರವಾಗಿ ಕೆಪಿಸಿಸಿ ಅಧ್ಯಕ್ಷ ಹರಿಪ್ರಸಾದ್ ಹೇಳಿಕೆ ನೀಡಿದ್ದನ್ನು ನಗರಾಭಿವೃದ್ಧಿ ಸಚಿವ ಯತೀಂದ್ರ ಸಿದ್ದರಾಮಯ್ಯ ಸಮರ್ಥಿಸಿಕೊಂಡಿದ್ದಾರೆ. ಉಮರ್ ಖಾಲಿದ್ ಆರೋಪಿ ಆಗಿರಬಹುದು, ದೇಶದ್ರೋಹಿ ಎಂದು ಸಾಬೀತು ಆಗಿಲ್ಲ. ಬಿಕೆ ಹರಿಪ್ರಸಾದ್ ಹಾಗು ಗೃಹ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದು ಸರಿಯಿದೆ. ಬಿಜೆಪಿಯವರು ಪ್ರಕರಣದ ವಿಚಾರಣೆ ಆಗದೇ ದೇಶದ್ರೋಹಿ ಎಂದು ಹೇಗೆ ಹೇಳುತ್ತಾರೆ? ಎಂದು ಪ್ರಶ್ನಿಸಿದ್ದಾರೆ. 

ಉಮರ್ ಖಾಲಿದ್ ಗೆ ವಿಚಾರಣೆ ನಡೆಸದೆ ಜೈಲಿಗೆ ಹಾಕಿದ್ದಾರೆ. ಬಿಜೆಪಿ ವಿರುದ್ಧ ಮಾತನಾಡಿದವರೆಲ್ಲ ದೇಶದ್ರೋಹಿ ಆಗಲ್ಲ. ಬಿಜೆಪಿಯವರು ನಮ್ಮನ್ನೂ ದೇಶದ್ರೋಹಿ ಎನ್ನುತ್ತಾರೆ.‌ ಹಾಗಾಗಿ ನಮ್ಮ ಪಕ್ಷದ ಅಧ್ಯಕ್ಷರು, ಗೃಹ ಸಚಿವರು ಏನು ಹೇಳಿದ್ದಾರೋ ಅದು ಸರಿಯಾಗಿದೆ‌ ಎಂದು ಯತೀಂದ್ರ ಮಾಧ್ಯಮದ ಪ್ರಶ್ನೆಗೆ ಉತ್ತರಿಸಿದ್ದಾರೆ. 

ಮದ್ದೂರಿನಲ್ಲಿ ಗಣೇಶೋತ್ಸವಕ್ಕೆ ಮಸೀದಿ ಎದುರು ಪಟಾಕಿ ಸಿಡಿಸಿದ ವಿಚಾರದ ಪ್ರಶ್ನೆಗೆ, ಬಿಜೆಪಿಯವರಿಗೆ ದುರುದ್ದೇಶ ಇದೆ, ಎಲ್ಲಾ ಕಡೆ ಕೋಮುಗಲಭೆ ಮಾಡಿ ಅದರಿಂದ ರಾಜಕೀಯ ಲಾಭ ಪಡೆಯಬೇಕೆಂಬ ಹುನ್ನಾರ ಇದೆ.‌ ಕೋಮುಗಲಭೆ ನಡೆಸಲು ಪ್ರಚೋದನೆ ಮಾಡುತ್ತಿದ್ದಾರೆ. ಆದರೆ ಕರ್ನಾಟಕದಲ್ಲಿ ಬಾಲ ಬಿಚ್ಚೊದಕ್ಕೆ ನಾವು ಬಿಡೋದಿಲ್ಲ. ಕಠಿಣ ಕಾನೂನು ಕ್ರಮ ಕೈಗೊಳ್ಳುತ್ತೇವೆ.‌ ಅವರು ಏನು ಬೇಕಾದರೂ ಮಾಡಲಿ, ಆದರೆ ಕಾನೂನಿನಡಿಯಲ್ಲಿ ಮಾಡಲಿ ಎಂದು ಹೇಳಿದರು. 

ಕೋಮುಗಲಭೆ ಹಾಗು ಕೊಲೆ ಆರೋಪಿ ಭರತ್ ಕುಮ್ಡೆಲ್ ಗೆ ಜಾಮೀನು ಸಿಕ್ಕಿದೆ, ಪೊಲೀಸರ ವೈಫಲ್ಯವಲ್ಲವೇ ಎಂಬ ಪ್ರಶ್ನೆಗೆ, ಇದು ನಮ್ಮ ಸರಕಾರದ ವೈಫಲ್ಯವಲ್ಲ. ಜಾಮೀನು ಕಾನೂನಿನಡಿ ಸಿಕ್ಕಿರುತ್ತೆ. ನಮ್ಮ ಸರಕಾರ ಅಪರಾಧಿಗಳಿಗೆ ಕಠಿಣ ಶಿಕ್ಷೆ ಕೊಡಲು ಪ್ರಯತ್ನಪಡುತ್ತದೆ‌ ಎಂದರು.‌

ಸಚಿವ ಸಂಪುಟ ಸಭೆಯಲ್ಲಿ ಕರಾವಳಿ ಪ್ರವಾಸೋದ್ಯಮ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡುತ್ತೇವೆ. ಕರಾವಳಿ ಪ್ರವಾಸೋದ್ಯಮ ನೀತಿಯಡಿ ಹೆಚ್ಚಿನ ಕಾರ್ಯಕ್ರಮ ಹಾಕಿಕೊಂಡಿದ್ದೀವಿ. ಕರಾವಳಿ ಮತ್ತು ಮಲೆನಾಡು ಅಭಿವೃದ್ಧಿ ಪಡಿಸಲು ಹೊಸ ಪ್ರವಾಸೋದ್ಯಮ ನೀತಿ ತಂದಿದ್ದೇವೆ. ಹೆಚ್ಚು ಪ್ರವಾಸಿಗರು ಬಂದರೆ ಅಭಿವೃದ್ಧಿಯಾಗುತ್ತದೆ. ಆದರೆ ಪ್ರವಾಸೋದ್ಯಮ ಹೆಸರಲ್ಲಿ ಮಾದಕ ವಸ್ತುಗಳ ಬಳಕೆಗೆ ಅವಕಾಶ ಕೊಡೋದಿಲ್ಲ ಎಂದು ಹೇಳಿದರು.

Extensive preparations are underway for the Karnataka government’s Cabinet meeting, which will be held for the first time at the newly constructed Deputy Commissioner’s Office in Padil, Mangaluru. A separate mini hall is being readied on the second floor of the massive Deputy Commissioner’s Office complex for the meeting.