ಬ್ರೇಕಿಂಗ್ ನ್ಯೂಸ್
12-08-21 11:45 pm Bengaluru Correspondent ಕರಾವಳಿ
ಬೆಂಗಳೂರು, ಆಗಸ್ಟ್ 12: ಕೊರೊನಾ ಮೂರನೇ ಅಲೆಯಲ್ಲಿ ಮಕ್ಕಳಿಗೆ ಸೋಂಕು ಎದುರಾಗಲಿದೆ ಎಂದು ತಜ್ಞರು ಎಚ್ಚರಿಕೆ ನೀಡಿರುವಾಗಲೇ ಬೆಂಗಳೂರಿನಲ್ಲಿ ಮಕ್ಕಳಲ್ಲಿ ಸೋಂಕು ಕಾಣಿಸಿಕೊಂಡಿದ್ದು ಪತ್ತೆಯಾಗಿದೆ. ಕಳೆದ ಹತ್ತು ದಿನಗಳಲ್ಲಿ ಬೆಂಗಳೂರು ನಗರ ಭಾಗದಲ್ಲಿ 499 ಕ್ಕೂ ಹೆಚ್ಚು ಮಕ್ಕಳಿಗೆ ಸೋಂಕು ತಗಲಿರುವುದನ್ನು ಆರೋಗ್ಯ ಇಲಾಖೆ ಅಧಿಕಾರಿಗಳು ಪತ್ತೆ ಮಾಡಿದ್ದಾರೆ.
ಆರೋಗ್ಯ ಇಲಾಖೆಯ ಹೆಲ್ತ್ ಬುಲೆಟಿನ್ ಪ್ರಕಾರ, 9 ವರ್ಷದ ಒಳಗಿನ 88 ಮಕ್ಕಳು ಆಗಸ್ಟ್ 1ರಿಂದ 10 ರ ನಡುವೆ ಸೋಂಕಿಗೆ ಒಳಗಾಗಿದ್ದಾರೆ. 10 ರಿಂದ 19 ವರ್ಷದೊಳಗಿನ 305 ಮಕ್ಕಳು ಕೊರೊನಾ ಪಾಸಿಟಿವ್ ಆಗಿದ್ದಾರೆ. ವರದಿಯಾದ 499 ಪ್ರಕರಣಗಳ ಪೈಕಿ 263 ಕಳೆದ 5 ದಿನಗಳಲ್ಲಿ ಕಂಡುಬಂದಿದೆ. ಈ ಪೈಕಿ 88 ಪ್ರಕರಣಗಳು 9 ವರ್ಷದ ಒಳಗಿನದ್ದು ಮತ್ತು 175 ಪ್ರಕರಣಗಳು 10 ರಿಂದ 19 ವರ್ಷದ ಒಳಗಿನ ಮಕ್ಕಳದ್ದಿದೆ.
ಇದು ಮೂರನೇ ಅಲೆಯ ಮುನ್ಸೂಚನೆ ಎನ್ನಲಾಗುತ್ತಿದ್ದು ಈಗಾಗ್ಲೇ ಈ ಬಗ್ಗೆ ಆರೋಗ್ಯ ಇಲಾಖೆಯಿಂದ ಎಚ್ಚರಿಕೆ ವಹಿಸಲಾಗಿದೆ. ಆರೋಗ್ಯ ಇಲಾಖೆ ಮಾಹಿತಿ ಪ್ರಕಾರ, ಕಳೆದ ಕೆಲವು ವಾರಗಳಲ್ಲಿ ಮಕ್ಕಳಿಗೆ ಸೋಂಕು ತಗಲುತ್ತಿರುವುದು ದುಪ್ಪಟ್ಟು ಆಗುತ್ತಿರುವುದು ಕಂಡುಬಂದಿದೆ. ಹೆತ್ತವರು ಸ್ವತಃ ಎರಡು ಡೋಸ್ ಲಸಿಕೆ ಪಡೆಯುವುದರ ಜೊತೆಗೆ ಮಕ್ಕಳನ್ನು ಜನರ ಗುಂಪಿನಿಂದ ದೂರ ಇಡುವುದನ್ನು ಮಾಡಬೇಕಾಗಿದೆ. ರಾಜ್ಯದಲ್ಲಿ ದಿನಕ್ಕೆ 1500 ಕ್ಕೂ ಹೆಚ್ಚು ಪ್ರಕರಣಗಳು ಸದ್ಯಕ್ಕೆ ವರದಿಯಾಗುತ್ತಿದೆ.
ಈವರೆಗೆ 15,919 ಮಂದಿ ರಾಜ್ಯದಲ್ಲಿ ಕೊರೊನಾ ಸೋಂಕಿಗೆ ಸಾವು ಕಂಡಿದ್ದಾರೆ. ಇದರಲ್ಲಿ ಒಂಬತ್ತು ವರ್ಷದ ಒಳಗಿನ ಮಕ್ಕಳು 19 ಮಂದಿ ಇದ್ದಾರೆ. 10 ರಿಂದ 19 ವರ್ಷದ ಒಳಗಿನ 26 ಮಂದಿ ಮಕ್ಕಳು ಇದ್ದಾರೆ. 20 ರಿಂದ 30 ವರ್ಷದ ಒಳಗಿನ 279 ಮಂದಿ ಸಾವು ಕಂಡಿದ್ದಾಗಿ ಆರೋಗ್ಯ ಇಲಾಖೆಯ ಅಂಕಿ ಅಂಶಗಳು ಹೇಳುತ್ತವೆ.
More than 300 children below the age of 19 years have tested positive for Covid-19 in the past six days in Bengaluru, putting the city on alert. This is one of the highest number of cases among children reported in Karnataka so far.
17-09-26 04:13 pm
HK News Staffer
ಚಿತ್ರರಂಗದ ಸಾರ್ವಕಾಲಿಕ ಶ್ರೇಷ್ಠ ನಟ ಅನಂತನಾಗ್ ಗೆ '...
16-09-26 10:40 pm
Tulu Language, Shivraj Tangadagi: ತುಳುವಿಗೆ 2ನ...
16-09-26 01:51 pm
Pradeep Eshwar, Pratap Simha: ಪೊಲೀಸ್ ಠಾಣೆಗೆ...
15-09-26 09:13 pm
Imran Pasha, Pratap Simha: ನಿನ್ನಂತಹ ಒಂದು ಲಕ್...
15-09-26 04:46 pm
13-09-26 09:00 pm
HK News
80s ಫೋಟೋ ಟ್ರೆಂಡ್ಗೆ ಮಾರುಹೋಗಿದ್ದೀರಾ? ಹುಷಾರ್ ;...
12-09-26 01:10 pm
ಕಾಶ್ಮೀರಿ ಪಂಡಿತರಿಗೆ ಮತ್ತೆ ಬೆದರಿಕೆ ; ಉದ್ಯೋಗ ಬಿಟ...
10-09-26 01:23 pm
ನೇಪಾಳ ಪ್ರವಾಹ ; ಹತ್ತು ದಿನಗಳ ಬಳಿಕ ಜಲವಿದ್ಯುತ್ ಸು...
05-09-26 11:55 am
ಮುಂದಿನ ಒಂದು ವರ್ಷದಲ್ಲಿ ಒಂದು ಸಾವಿರ ವಿದ್ಯಾಭಾರತಿ...
04-09-26 08:14 pm
17-09-26 08:48 pm
HK News Staffer
Mangalore, DK Shivakumar, Coastal Karnataka,...
17-09-26 08:02 pm
Mangalore, Yathindra Siddaramaiah, Umar Khali...
17-09-26 06:29 pm
ಸಚಿವ ಸಂಪುಟ ಸಭೆಗೆ ಕ್ಷಣಗಣನೆ ; ಪಡೀಲ್ ಜಿಲ್ಲಾಧಿಕಾರ...
17-09-26 05:12 pm
ಗಣೇಶ ವಿಸರ್ಜನಾ ಮೆರವಣಿಗೆ ವೇಳೆ ಮಸೀದಿ, ಮದರಸಾ ಮೇಲೆ...
17-09-26 09:41 am
17-09-26 02:22 pm
HK News Staffer
Bangalore Murder, Crime: ಪ್ರೀತಿಸಿ ಮದುವೆಯಾಗಿದ್...
17-09-26 01:56 pm
Bangalore kidnap, Crime: ಬೆಂಗಳೂರಿನಲ್ಲಿ ಶಾಕ್...
17-09-26 12:35 pm
Manglore Cyber crime, Stock Market: ಷೇರು ಮಾರ್...
17-09-26 11:45 am
ಬೆಳ್ತಂಗಡಿ; ಗೃಹಪ್ರವೇಶಕ್ಕೆ ಹೋದಾಗ ಮನೆಗೆ ಕನ್ನ, ₹1...
16-09-26 11:18 am