ಬ್ರೇಕಿಂಗ್ ನ್ಯೂಸ್
19-07-21 11:06 pm Mangaluru Correspondent ಕರಾವಳಿ
ಉಳ್ಳಾಲ, ಜು.19: ಕಾಂಗ್ರೆಸ್ ಆಡಳಿತದಲ್ಲಿ ಕಾಶ್ಮೀರದಿಂದ ಹಿಡಿದು ಉಳ್ಳಾಲದ ವರೆಗೂ ಭಯೋತ್ಪಾದನೆ ಹಬ್ಬಿತ್ತು. ಕಾಂಗ್ರೆಸ್ ಅಧಿಕಾರದಲ್ಲಿದ್ರೂ ಇಲ್ಲದಿದ್ದರೂ ಅದು ದೇಶಕ್ಕೆ ಅಪಾಯಕಾರಿ ಎಂದು ವಿಧಾನ ಪರಿಷತ್ ಸದಸ್ಯ ಪ್ರತಾಸಿಂಹ ನಾಯಕ್ ಕುಹಕವಾಡಿದ್ದಾರೆ.
ಅಂಬಿಕಾ ರೋಡಿನ ಗಟ್ಟಿ ಸಮಾಜ ಭವನದಲ್ಲಿ ಇಂದು ನಡೆದ ಭಾರತೀಯ ಜನತಾ ಪಾರ್ಟಿಯ ಮಂಗಳೂರು ಮಂಡಲ ವಿಶೇಷ ಕಾರ್ಯಕಾರಿಣಿ ಸಭೆಯನ್ನು ಅವರು ಉದ್ಘಾಟಿಸಿ ಮಾತನಾಡಿದರು.


ಕಾಂಗ್ರೆಸ್ ಪಕ್ಷ ಕೇಂದ್ರದಲ್ಲಿ ಅಧಿಕಾರದಲ್ಲಿದ್ದಾಗ ಕಾಶ್ಮೀರದಿಂದ ಉಳ್ಳಾಲದ ವರೆಗೂ ಭಯೋತ್ಪಾದನೆ ಹಬ್ಬಿತ್ತು. ಕಳೆದ ಏಳು ವರುಷದಲ್ಲಿ ಕೇಂದ್ರದಲ್ಲಿ ಬಿಜೆಪಿ ಸರಕಾರ ಅಧಿಕಾರಕ್ಕೆ ಬಂದ ನಂತರ ಭಯೋತ್ಪಾದನೆಯನ್ನು ನಿಗ್ರಹಿಸಲಾಗಿದೆ. ಅಲ್ಲದೆ ವೈರಿಗಳ ನೆಲಕ್ಕೆ ನುಗ್ಗಿ ಹೊಡೆಯಲು ಸೈನಿಕರಿಗೆ ತಾಕತ್ತು ಬಂದಿದೆ. ಕಾಂಗ್ರೆಸ್ ಮಾತ್ರ ಎಲ್ಲದಕ್ಕೂ ಸಾಕ್ಷಿ ಕೇಳಿ ಭಾರತೀಯ ಸೈನಿಕರ ಆತ್ಮ ಸ್ಥೈರ್ಯವನ್ನು ಪ್ರಶ್ನಿಸೋ ಕಾರ್ಯ ನಡೆಸಿದೆ. ಕೋವಿಡ್ ಲಸಿಕೆಯ ಕುರಿತೇ ಕಾಂಗ್ರೆಸ್ ಗೊಂದಲ ಅಪಪ್ರಚಾರ ಮೂಡಿಸಿ ಲಸಿಕೆ ತಗೊಂಡರೆ ಮಕ್ಕಳೇ ಆಗಲ್ಲ ಎಂದಿತ್ತು. ಇದೀಗ ಅಂತಹ ಗೊಂದಲ ಸೃಷ್ಟಿಸಿದವರೇ ತಮ್ಮ ಮನೆಗೆ ಲಸಿಕೆ ತರಿಸಿ ಹಾಕುತ್ತಿದ್ದು ಅದಕ್ಕೆ ಉಳ್ಳಾಲದವರೂ ಹೊರತಾಗಿಲ್ಲ ಎಂದರು.
ಸತತ ಸೋಲಿನಿಂದ ಕಾಂಗ್ರೆಸ್ ನೀರಿನಿಂದ ಹೊರಬಿದ್ದ ಮೀನಿನಂತಾಗಿರುವುದು ಸ್ಪಷ್ಟ. ಎಷ್ಟೋ ರಾಜ್ಯಗಳಲ್ಲಿ ತನ್ನ ಅಸ್ತಿತ್ವವನ್ನೇ ಕಳಕೊಂಡು ಹತಾಶರಾದ ಕಾಂಗ್ರೆಸಿಗರು ಬಿಜೆಪಿ ವಿರುದ್ದ ಇಲ್ಲ ಸಲ್ಲದ ಮಿಥ್ಯಾರೋಪಗಳನ್ನು ಮಾಡುವುದರಲ್ಲೇ ತಲ್ಲೀಣರಾಗಿದ್ದಾರೆಂದರು.
ಮುಂಬರುವ ತಾ.ಪಂ, ಜಿಲ್ಲಾ ಪಂ, ವಿಧಾನ ಪರಿಷತ್ ಚುನಾವಣೆಗೆ ಕಾರ್ಯಕರ್ತರು ಸನ್ನದ್ಧರಾಗಿ ಎಂದು ಕರೆ ನೀಡಿದರು. ಸಭೆಯಲ್ಲಿ ಅಗಲಿದ ಬಿಜೆಪಿ ಕಾರ್ಯಕರ್ತರಿಗೆ ಸಾಮೂಹಿಕ ಶ್ರದ್ಧಾಂಜಲಿ ಅರ್ಪಿಸಲಾಯಿತು.
ಅಂತರ್ಜಲ ವೃದ್ಧಿಗಾಗಿ ಸಾಮೂಹಿಕ ಸಂಕಲ್ಪವನ್ನೂ ತೊಡಲಾಯಿತು. ಬಿಜೆಪಿ ಜಿಲ್ಲಾ ಸಹಪ್ರಭಾರಿ ರಾಜೇಶ್ ಕಾವೇರಿ, ಜಿಲ್ಲಾ ಉಪಾಧ್ಯಕ್ಷರುಗಳಾದ ಈಶ್ವರ್ ಕಟೀಲು,ಕಸ್ತೂರಿ ಪಂಜ, ಕ್ಷೇತ್ರಾಧ್ಯಕ್ಷ ಚಂದ್ರಹಾಸ್ ಪಂಡಿತ್ ಹೌಸ್ ಮೊದಲಾದವರು ಇದ್ದರು.
Congress Party is dangerous even if it excis or not slams BJP Prathap Simha Nayak in ullal
17-09-26 04:13 pm
HK News Staffer
ಚಿತ್ರರಂಗದ ಸಾರ್ವಕಾಲಿಕ ಶ್ರೇಷ್ಠ ನಟ ಅನಂತನಾಗ್ ಗೆ '...
16-09-26 10:40 pm
Tulu Language, Shivraj Tangadagi: ತುಳುವಿಗೆ 2ನ...
16-09-26 01:51 pm
Pradeep Eshwar, Pratap Simha: ಪೊಲೀಸ್ ಠಾಣೆಗೆ...
15-09-26 09:13 pm
Imran Pasha, Pratap Simha: ನಿನ್ನಂತಹ ಒಂದು ಲಕ್...
15-09-26 04:46 pm
13-09-26 09:00 pm
HK News
80s ಫೋಟೋ ಟ್ರೆಂಡ್ಗೆ ಮಾರುಹೋಗಿದ್ದೀರಾ? ಹುಷಾರ್ ;...
12-09-26 01:10 pm
ಕಾಶ್ಮೀರಿ ಪಂಡಿತರಿಗೆ ಮತ್ತೆ ಬೆದರಿಕೆ ; ಉದ್ಯೋಗ ಬಿಟ...
10-09-26 01:23 pm
ನೇಪಾಳ ಪ್ರವಾಹ ; ಹತ್ತು ದಿನಗಳ ಬಳಿಕ ಜಲವಿದ್ಯುತ್ ಸು...
05-09-26 11:55 am
ಮುಂದಿನ ಒಂದು ವರ್ಷದಲ್ಲಿ ಒಂದು ಸಾವಿರ ವಿದ್ಯಾಭಾರತಿ...
04-09-26 08:14 pm
17-09-26 08:48 pm
HK News Staffer
Mangalore, DK Shivakumar, Coastal Karnataka,...
17-09-26 08:02 pm
Mangalore, Yathindra Siddaramaiah, Umar Khali...
17-09-26 06:29 pm
ಸಚಿವ ಸಂಪುಟ ಸಭೆಗೆ ಕ್ಷಣಗಣನೆ ; ಪಡೀಲ್ ಜಿಲ್ಲಾಧಿಕಾರ...
17-09-26 05:12 pm
ಗಣೇಶ ವಿಸರ್ಜನಾ ಮೆರವಣಿಗೆ ವೇಳೆ ಮಸೀದಿ, ಮದರಸಾ ಮೇಲೆ...
17-09-26 09:41 am
17-09-26 02:22 pm
HK News Staffer
Bangalore Murder, Crime: ಪ್ರೀತಿಸಿ ಮದುವೆಯಾಗಿದ್...
17-09-26 01:56 pm
Bangalore kidnap, Crime: ಬೆಂಗಳೂರಿನಲ್ಲಿ ಶಾಕ್...
17-09-26 12:35 pm
Manglore Cyber crime, Stock Market: ಷೇರು ಮಾರ್...
17-09-26 11:45 am
ಬೆಳ್ತಂಗಡಿ; ಗೃಹಪ್ರವೇಶಕ್ಕೆ ಹೋದಾಗ ಮನೆಗೆ ಕನ್ನ, ₹1...
16-09-26 11:18 am