ಬ್ರೇಕಿಂಗ್ ನ್ಯೂಸ್
19-06-26 08:30 pm HK News Staffer ಕ್ರೈಂ
ಬೆಂಗಳೂರು, ಜೂನ್ 19: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಮೊಬೈಲ್ ಕಳವು ಪ್ರಕರಣಗಳು ಹೆಚ್ಚುತ್ತಿರುವ ನಡುವೆಯೇ ವಿಚಿತ್ರ ಘಟನೆಯೊಂದು ನಡೆದಿದೆ. ಪಾದಚಾರಿಯೊಬ್ಬರ ಮೊಬೈಲ್ ಕಸಿದು ಪರಾರಿಯಾಗುತ್ತಿದ್ದ ಕಳ್ಳನೊಬ್ಬ ಕೆಲವೇ ಕ್ಷಣಗಳಲ್ಲಿ ಫುಟ್‌ಪಾತ್ ಮೇಲೆಯೇ ಕುಸಿದು ಬಿದ್ದು ಮೃತಪಟ್ಟಿರುವ ಘಟನೆ ಹಲಸೂರು ಗೇಟ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಕಬ್ಬನ್‌ಪೇಟೆಯ 14ನೇ ಕ್ರಾಸ್‌ನಲ್ಲಿ ಜೂನ್ 16ರಂದು ಸಂಜೆ ವೇಳೆ ಈ ಘಟನೆ ನಡೆದಿದೆ. ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ವ್ಯಕ್ತಿಯನ್ನು ಬೈಕ್‌ನಲ್ಲಿ ಹಿಂಬಾಲಿಸಿಕೊಂಡು ಬಂದ ಇಬ್ಬರು ಖದೀಮರು ಮೊಬೈಲ್ ಕಸಿದು ಪರಾರಿಯಾಗಲು ಯತ್ನಿಸಿದ್ದಾರೆ.
ಮೊಬೈಲ್ ಕಳೆದುಕೊಂಡ ವ್ಯಕ್ತಿ ತಕ್ಷಣವೇ “ಕಳ್ಳ... ಕಳ್ಳ...” ಎಂದು ಕೂಗಿಕೊಂಡಿದ್ದು, ಅದೇ ವೇಳೆ ರಸ್ತೆಯಲ್ಲಿ ಸಾಗುತ್ತಿದ್ದ ಕಾರ್ಮಿಕನೊಬ್ಬ ಸಮಯಪ್ರಜ್ಞೆ ಮೆರೆದಿದ್ದಾನೆ. ಗಾಡಿಯಲ್ಲಿದ್ದ ಮೂಟೆಯನ್ನು ಆರೋಪಿಗಳತ್ತ ಎಸೆದು ತಡೆಯಲು ಯತ್ನಿಸಿದ್ದರಿಂದ ಬೈಕ್‌ನಲ್ಲಿದ್ದ ಇಬ್ಬರೂ ಸಮತೋಲನ ಕಳೆದುಕೊಂಡಿದ್ದಾರೆ.
ಮೊಬೈಲ್ ಬಿಟ್ಟು ಓಡಿದ ಕಳ್ಳರು
ಬೈಕ್‌ನಿಂದ ಕೆಳಗೆ ಬಿದ್ದ ಆರೋಪಿಗಳು ಕದ್ದ ಮೊಬೈಲ್ ಬಿಟ್ಟು ಅಲ್ಲಿಂದ ಕಾಲ್ನಡಿಗೆಯಲ್ಲೇ ಪರಾರಿಯಾಗಲು ಯತ್ನಿಸಿದ್ದಾರೆ. ಈ ದೃಶ್ಯ ಸಂಪೂರ್ಣವಾಗಿ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ಓಡುತ್ತಿದ್ದಾಗಲೇ ಕುಸಿದು ಬಿದ್ದು ಸಾವು ;
ಮೊಬೈಲ್ ಕಸಿದುಕೊಂಡು ಓಡಿಹೋಗುತ್ತಿದ್ದ ಆರೋಪಿಗಳಲ್ಲಿ ಜುನೈದ್ ಎಂಬಾತ ಸ್ವಲ್ಪ ದೂರ ತೆರಳುತ್ತಿದ್ದಂತೆಯೇ ಫುಟ್‌ಪಾತ್ ಮೇಲೆ ಕುಸಿದು ಬಿದ್ದಿದ್ದಾನೆ. ಸ್ಥಳದಲ್ಲೇ ಆತನಿಗೆ ಪ್ರಜ್ಞೆ ತಪ್ಪಿದ್ದು, ಬಳಿಕ ಮೃತಪಟ್ಟಿರುವುದು ದೃಢಪಟ್ಟಿದೆ.
ಪ್ರಾಥಮಿಕ ಮಾಹಿತಿಯ ಪ್ರಕಾರ, ಜುನೈದ್‌ಗೆ ಮೊದಲೇ ಹೃದಯ ಸಂಬಂಧಿ ಸಮಸ್ಯೆ ಇದ್ದಿರಬಹುದು ಎನ್ನಲಾಗಿದ್ದು, ಓಡಾಟ ಮತ್ತು ಆತಂಕದ ನಡುವೆಯೇ ಹೃದಯಾಘಾತ ಸಂಭವಿಸಿರುವ ಸಾಧ್ಯತೆಯನ್ನು ಪೊಲೀಸರು ಪರಿಶೀಲಿಸುತ್ತಿದ್ದಾರೆ.
ಮತ್ತೋರ್ವ ಆರೋಪಿ ವಶಕ್ಕೆ ;
ಘಟನೆಯ ಬಳಿಕ ಮತ್ತೋರ್ವ ಆರೋಪಿ ಅರ್ಬಾಜ್‌ನನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಈ ಸಂಬಂಧ ಹಲಸೂರು ಗೇಟ್ ಪೊಲೀಸ್ ಠಾಣೆಯಲ್ಲಿ ಅಸಹಜ ಸಾವು ಪ್ರಕರಣ ದಾಖಲಾಗಿದ್ದು, ಮರಣದ ನಿಖರ ಕಾರಣ ತಿಳಿಯಲು ಮರಣೋತ್ತರ ಪರೀಕ್ಷೆಯ ವರದಿಗಾಗಿ ಪೊಲೀಸರು ಕಾಯುತ್ತಿದ್ದಾರೆ.
07-08-26 10:42 pm
HK News Desk
ಕಾಂಗ್ರೆಸಿನಲ್ಲಿ ತಣ್ಣಗಾಗದ ಸಂಪುಟ ಕಿಚ್ಚು ; ಅತೃಪ್ತ...
07-08-26 04:18 pm
ತಂದೆಯನ್ನು ವೃದ್ಧಾಶ್ರಮಕ್ಕೆ ಸೇರಿಸಿ ಸಾವಿಗೂ ಬಾರದ ಪ...
06-08-26 03:49 pm
ಕಲಬುರಗಿಯಲ್ಲಿ SIR ಪರಿಷ್ಕರಣೆ ಶಾಕ್ ; 5.36 ಲಕ್ಷ...
06-08-26 02:19 pm
'ಮಂತ್ರಿ ಸ್ಥಾನಕ್ಕೆ ಕೋಟಿ ಕೋಟಿ ಡೀಲ್?' ಮಾಜಿ ಸಚಿವರ...
05-08-26 10:56 pm
05-08-26 08:36 pm
HK News Staffer
ಜಾನ್ಸನ್ & ಜಾನ್ಸನ್ ಬೇಬಿ ಪೌಡರ್ ನಿಂದ ಕ್ಯಾನ್ಸರ್ ಆ...
01-08-26 05:17 pm
ಕೆಲವರ ಪ್ರಭಾವಕ್ಕೊಳಗಾಗಿ ಪ್ರಧಾನಿ ಬಗ್ಗೆ ಕೆಟ್ಟ ಮಾತ...
01-08-26 02:48 pm
ದೇಶದ ಅತ್ಯಂತ ಶ್ರೀಮಂತ ಮುಖ್ಯಮಂತ್ರಿ ಡಿ.ಕೆ. ಶಿವಕುಮ...
31-07-26 01:26 pm
ಕಾಕ್ರೋಚ್ ಗೆ ಉಚಿತ ಕಾನೂನು ನೆರವು ; 1 ಕೋಟಿ ರೂ. ದೇ...
28-07-26 11:56 am
08-08-26 12:17 pm
HK News Staffer
‘ಪರಿವರ್ತನಾ ಪರಿಸರವಾದ’ ಸಿದ್ಧಾಂತದಡಿ ಭಟ್ಕಳದಲ್ಲಿ ಹ...
08-08-26 12:13 pm
ಹೆಬ್ರಿ ; ಭಾರೀ ಗಾಳಿ ಮಳೆಗೆ ಕಾರಿನ ಮೇಲೆ ಮುರಿದು ಬಿ...
07-08-26 10:13 pm
ವಿದ್ಯುತ್ ಆಘಾತದಿಂದ ಮೃತಪಟ್ಟ ಲೈನ್ಮೆನ್ ಜಮೀರ್ ಮನೆ...
07-08-26 09:26 pm
BC Road Accident, Mangalore: ಬಿಸಿ ರೋಡ್ ಬಳಿ ಟಿ...
06-08-26 11:03 pm
09-08-26 04:47 pm
HK News Staffer
ಪಾಕ್ ಗೂಢಚಾರಿಣಿ ಮಹಿಳೆಯ ಹನಿಟ್ರ್ಯಾಪ್ ; ರಹಸ್ಯ ಮಾಹ...
09-08-26 04:07 pm
ಡೇವಿಡ್ ಡಿಸೋಜಾ ಹತ್ಯೆ ಪ್ರಕರಣ ; ಶಾರ್ಪ್ ಶೂಟರ್ ರಾಜ...
09-08-26 03:34 pm
ಇನ್ಸ್ಟಾಗ್ರಾಂನಲ್ಲಿ ವರ್ಕ್ ಫ್ರಮ್ ಹೋಮ್ ಹೆಸರಲ್ಲಿ...
09-08-26 12:56 pm
ರೇಣುಕಾಸ್ವಾಮಿ ಗಂಭೀರವಾಗಿ ಗಾಯಗೊಂಡಿದ್ದರೂ ದರ್ಶನ್ ಹ...
09-08-26 12:03 pm