ಬ್ರೇಕಿಂಗ್ ನ್ಯೂಸ್
09-08-26 04:07 pm HK News Staffer ಕ್ರೈಂ
ನವದೆಹಲಿ, ಆ.8: ಪಾಕಿಸ್ತಾನಿ ಗೂಢಚರ ಮಹಿಳೆಯೊಬ್ಬಳ ಹನಿಟ್ರ್ಯಾಪ್ಗೆ ಬಿದ್ದ ಭಾರತೀಯ ವಾಯುಪಡೆಯ ವಿಂಗ್ ಕಮಾಂಡರ್ ಒಬ್ಬರು, ರಕ್ಷಣಾ ಪಡೆಗೆ ಸಂಬಂಧಿಸಿದ ರಹಸ್ಯ ಮಾಹಿತಿಯನ್ನು ಶತ್ರು ದೇಶಕ್ಕೆ ಹಂಚಿಕೊಂಡ ಘಟನೆ ನಡೆದಿದ್ದು ಅಧಿಕಾರಿಯನ್ನು ದೆಹಲಿ ಪೊಲೀಸರು ಚಾರ್ಜ್ ಶೀಟ್ ಸಲ್ಲಿಸಿದ್ದಾರೆ.
ವಾಯುಪಡೆ ದೂರಿನ ಆಧಾರದಲ್ಲಿ ದೆಹಲಿ ಪೊಲೀಸರು ಮೇ 30ರಂದು ಅಧಿಕಾರಿಯನ್ನು ಬಂಧಿಸಿದ್ದರು. ರಹಸ್ಯ ಮಾಹಿತಿ ಸೋರಿಕೆ ತಡೆ ಕಾಯ್ದೆಯಡಿ ಪ್ರಕರಣ ದಾಖಲಿಸಿದ್ದು, ತನಿಖೆ ಪೂರ್ಣಗೊಳಿಸಿ ಆರೋಪ ಪಟ್ಟಿ ಸಲ್ಲಿಸಿದ್ದಾರೆ. ಭಾರತೀಯ ರಕ್ಷಣಾ ಪಡೆಗಳ ಗುಪ್ತ ಮಾಹಿತಿ ಕಲೆಹಾಕಲು ಪಾಕಿಸ್ತಾನದ ಗುಪ್ತಚರ ಪಡೆಗಳು ರಹಸ್ಯ ಕಾರ್ಯಾಚರಣೆ ನಡೆಸಿರುವ ಸಾಧ್ಯತೆಯಿದೆ ಎಂದು ಪೊಲೀಸರು ಶಂಕಿಸಿದ್ದಾರೆ.
ಚಾಟ್, ವಿಡಿಯೋ ಕರೆಯಿಂದ ಬ್ಲಾಕ್ಮೇಲ್
ಪಶ್ಚಿಮ ಗಡಿ ಭಾಗದಲ್ಲಿ ಸೇವೆ ಸಲ್ಲಿಸುತ್ತಿದ್ದ ಈ ಅಧಿಕಾರಿ ತನ್ನ ವೈಯಕ್ತಿಕ ಜೀವನದಲ್ಲಿ ಸಮಸ್ಯೆಗಳನ್ನು ಎದುರಿಸುತ್ತಿದ್ದರು. ಇದನ್ನೇ ಲಾಭವಾಗಿಸಿಕೊಂಡ ಪಾಕ್ ಗೂಢಚಾರಿಣಿ ಸಾಮಾಜಿಕ ಜಾಲತಾಣದ ಮೂಲಕ ಸ್ನೇಹ ಬೆಳೆಸಿದ್ದಳು. ಆರಂಭದಲ್ಲಿ ಚಾಟಿಂಗ್ ಮೂಲಕ, ನಂತರ ವೀಡಿಯೊ ಕರೆಗಳು ಹಾಗೂ ಎನ್ ಕ್ರಿಪ್ಟ್ ಮಾಡಲಾದ ಮೆಸೇಜಿಂಗ್ ಆ್ಯಪ್ಗಳ ಮೂಲಕ ಅಧಿಕಾರಿಗೆ ಬಲೆ ಹೆಣೆದಿದ್ದಳು. ಸೇನಾ ಚಲನವಲನಗಳು ಮತ್ತು ಪಡೆಗಳ ನಿಯೋಜನೆಗೆ ಸಂಬಂಧಿಸಿದ ವಿವರಗಳು, ಫೋಟೊ, ವಿಡಿಯೋ, ಇತರ ಸೂಕ್ಷ್ಮ ಮಾಹಿತಿಯನ್ನು ಅಧಿಕಾರಿಯಿಂದ ಪಡೆದುಕೊಂಡಿದ್ದಳು ಎಂಬುದು ತನಿಖೆಯಲ್ಲಿ ಪತ್ತೆಯಾಗಿದೆ.
ಅಧಿಕಾರಿಯಿಂದ ರಹಸ್ಯ ಮಾಹಿತಿ ಪಡೆದುಕೊಂಡಿದ್ದಷ್ಟೇ ಅಲ್ಲದೆ, ಅವರ ಸಹೋದ್ಯೋಗಿಯ ಮೊಬೈಲ್ನಿಂದಲೂ ದತ್ತಾಂಶ ಕದಿಯುವ ಸಂಚು ರೂಪಿಸಲಾಗಿತ್ತು. ಅದಕ್ಕಾಗಿ ಸಹೋದ್ಯೋಗಿ ಮೊಬೈಲ್ನಲ್ಲಿ ಸಾಫ್ಟ್ ವೇರ್ ಆ್ಯಪ್ ಒಂದನ್ನು ಇನ್ಸ್ಟಾಲ್ ಮಾಡುವಂತೆ ಸೂಚಿಸಿದ್ದಳು. ಈ ಆ್ಯಪ್ ಮೂಲಕ ಮತ್ತೊಬ್ಬ ಅಧಿಕಾರಿಯ ಫೋನ್ನಲ್ಲಿದ್ದ ಡೇಟಾ, ಲೊಕೇಷನ್ ಮತ್ತು ಸಂವಹನ ಕದಿಯಲಾಗಿತ್ತು. ಮಹಿಳೆ ಪಾಕಿಸ್ತಾನಿ ಹ್ಯಾಂಡ್ಲರ್ಗಳ ಸೂಚನೆಯಂತೆ ಕೆಲಸ ಮಾಡುತ್ತಿದ್ದಳು ಎನ್ನಲಾಗಿದೆ.
ವಾಯುಪಡೆಯ ಕಣ್ಗಾವಲು
ಅಧಿಕಾರಿಯ ಸಂಶಯಾಸ್ಪದ ಚಟುವಟಿಕೆಗಳು ವಾಯುಪಡೆಯ ಆಂತರಿಕ ಗುಪ್ತಚರ ವಿಭಾಗದ ಇಲೆಕ್ಟ್ರಾನಿಕ್ ಕಣ್ಗಾವಲಿನಲ್ಲಿ ಸಿಕ್ಕಿಬಿದ್ದಿದ್ದವು. ತಕ್ಷಣವೇ ಕಾರ್ಯಪ್ರವೃತ್ತರಾದ ಅಧಿಕಾರಿಗಳು ಸಾಕ್ಷ್ಯ ಸಂಗ್ರಹಿಸಿ, ಕಾನೂನು ಕ್ರಮಕ್ಕಾಗಿ ದೆಹಲಿ ಸ್ಪೆಷಲ್ ಸೆಲ್ಗೆ ಒಪ್ಪಿಸಿದ್ದರು. ತನಿಖೆ ನಡೆಸಿದ ಪೊಲೀಸರು ಆತನನ್ನು ತಿಹಾರ್ ಜೈಲಿನಲ್ಲಿ ಹಾಕಿದ್ದಾರೆ.
07-08-26 10:42 pm
HK News Desk
ಕಾಂಗ್ರೆಸಿನಲ್ಲಿ ತಣ್ಣಗಾಗದ ಸಂಪುಟ ಕಿಚ್ಚು ; ಅತೃಪ್ತ...
07-08-26 04:18 pm
ತಂದೆಯನ್ನು ವೃದ್ಧಾಶ್ರಮಕ್ಕೆ ಸೇರಿಸಿ ಸಾವಿಗೂ ಬಾರದ ಪ...
06-08-26 03:49 pm
ಕಲಬುರಗಿಯಲ್ಲಿ SIR ಪರಿಷ್ಕರಣೆ ಶಾಕ್ ; 5.36 ಲಕ್ಷ...
06-08-26 02:19 pm
'ಮಂತ್ರಿ ಸ್ಥಾನಕ್ಕೆ ಕೋಟಿ ಕೋಟಿ ಡೀಲ್?' ಮಾಜಿ ಸಚಿವರ...
05-08-26 10:56 pm
05-08-26 08:36 pm
HK News Staffer
ಜಾನ್ಸನ್ & ಜಾನ್ಸನ್ ಬೇಬಿ ಪೌಡರ್ ನಿಂದ ಕ್ಯಾನ್ಸರ್ ಆ...
01-08-26 05:17 pm
ಕೆಲವರ ಪ್ರಭಾವಕ್ಕೊಳಗಾಗಿ ಪ್ರಧಾನಿ ಬಗ್ಗೆ ಕೆಟ್ಟ ಮಾತ...
01-08-26 02:48 pm
ದೇಶದ ಅತ್ಯಂತ ಶ್ರೀಮಂತ ಮುಖ್ಯಮಂತ್ರಿ ಡಿ.ಕೆ. ಶಿವಕುಮ...
31-07-26 01:26 pm
ಕಾಕ್ರೋಚ್ ಗೆ ಉಚಿತ ಕಾನೂನು ನೆರವು ; 1 ಕೋಟಿ ರೂ. ದೇ...
28-07-26 11:56 am
08-08-26 12:17 pm
HK News Staffer
‘ಪರಿವರ್ತನಾ ಪರಿಸರವಾದ’ ಸಿದ್ಧಾಂತದಡಿ ಭಟ್ಕಳದಲ್ಲಿ ಹ...
08-08-26 12:13 pm
ಹೆಬ್ರಿ ; ಭಾರೀ ಗಾಳಿ ಮಳೆಗೆ ಕಾರಿನ ಮೇಲೆ ಮುರಿದು ಬಿ...
07-08-26 10:13 pm
ವಿದ್ಯುತ್ ಆಘಾತದಿಂದ ಮೃತಪಟ್ಟ ಲೈನ್ಮೆನ್ ಜಮೀರ್ ಮನೆ...
07-08-26 09:26 pm
BC Road Accident, Mangalore: ಬಿಸಿ ರೋಡ್ ಬಳಿ ಟಿ...
06-08-26 11:03 pm
09-08-26 04:47 pm
HK News Staffer
ಪಾಕ್ ಗೂಢಚಾರಿಣಿ ಮಹಿಳೆಯ ಹನಿಟ್ರ್ಯಾಪ್ ; ರಹಸ್ಯ ಮಾಹ...
09-08-26 04:07 pm
ಡೇವಿಡ್ ಡಿಸೋಜಾ ಹತ್ಯೆ ಪ್ರಕರಣ ; ಶಾರ್ಪ್ ಶೂಟರ್ ರಾಜ...
09-08-26 03:34 pm
ಇನ್ಸ್ಟಾಗ್ರಾಂನಲ್ಲಿ ವರ್ಕ್ ಫ್ರಮ್ ಹೋಮ್ ಹೆಸರಲ್ಲಿ...
09-08-26 12:56 pm
ರೇಣುಕಾಸ್ವಾಮಿ ಗಂಭೀರವಾಗಿ ಗಾಯಗೊಂಡಿದ್ದರೂ ದರ್ಶನ್ ಹ...
09-08-26 12:03 pm