ಬ್ರೇಕಿಂಗ್ ನ್ಯೂಸ್
13-07-21 03:47 pm Mangalore Correspondent ಕರಾವಳಿ
ಬಂಟ್ವಾಳ, ಜುಲೈ 13: ಮನೆಯಲ್ಲಿ ಗ್ಯಾಸ್ ಗೀಸರ್ ಬಳಸಿ ಸ್ನಾನ ಮಾಡುತ್ತಿದ್ದ ಯುವಕನೊಬ್ಬ ಬಾತ್ ರೂಮಿನಲ್ಲೇ ಉಸಿರುಕಟ್ಟಿ ಸಾವು ಕಂಡ ಘಟನೆ ಫರಂಗಿಪೇಟೆಯಲ್ಲಿ ನಡೆದಿದೆ. ಫರಂಗಿಪೇಟೆಯ ಮಾರಿಪಳ್ಳ ನಿವಾಸಿ ಇಸ್ಮಾಯಿಲ್ ಎಂಬವರ ಪುತ್ರ ಇಜಾಸ್ ಅಹ್ಮದ್ (23) ಮೃತ ಯುವಕ. ಜುಲೈ 12ರಂದು ಸಂಜೆ ಬಾತ್ ರೂಮಿನಲ್ಲಿ ಸ್ನಾನ ಮಾಡುತ್ತಿದ್ದಾಗ ಘಟನೆ ನಡೆದಿದೆ.
ಮಳೆ ಇದ್ದುದರಿಂದ ಗೀಸರ್ ಆನ್ ಮಾಡಿ, ಇಜಾಸ್ ಸ್ನಾನಕ್ಕೆ ಹೋಗಿದ್ದ. ಆದರೆ, ಒಂದು ಗಂಟೆ ಕಳೆದರೂ ಹೊರಗೆ ಬರದ್ದನ್ನು ಕಂಡು ತಂದೆ ಮತ್ತು ಇತರ ಸೋದರರು ಸೇರಿ ಬಾಗಿಲು ಬಡಿದು ಕರೆದಿದ್ದಾರೆ. ಬಾಗಿಲು ಬಡಿದರೂ ಸ್ಪಂದಿಸದ್ದರಿಂದ ಬಳಿಕ ಒಡೆದು ನೋಡಿದಾಗ, ಇಜಾಸ್ ನೆಲದಲ್ಲಿ ಕುಸಿದು ಬಿದ್ದಿರುವುದು ಕಂಡಿದೆ. ಕೂಡಲೇ ಆಸ್ಪತ್ರೆಗೆ ಒಯ್ದಿದ್ದು, ವೈದ್ಯರು ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ.
ಗೀಸರ್ ವರ್ಕಿಂಗ್ ಇರುವಾಗ ಕಾರ್ಬನ್ ಮೋನೋಕ್ಸೈಡ್ ಬಿಡುಗಡೆಯಾಗುವುದು ಮತ್ತು ಈ ವೇಳೆ ಬಾತ್ ರೂಮ್ ಬಾಗಿಲು ಬಂದ್ ಮಾಡಿದ್ದರಿಂದ ಅದನ್ನು ಸೇವಿಸಿ ಮೃತಪಟ್ಟಿದ್ದಾನೆ ಎನ್ನಲಾಗುತ್ತಿದೆ. ಇಜಾಸ್ ಹುಬ್ಬಳ್ಳಿಯಲ್ಲಿ ಆಭರಣ ಮಳಿಗೆಯಲ್ಲಿ ಕೆಲಸಕ್ಕಿದ್ದು, ವಾರದ ಹಿಂದಷ್ಟೇ ಊರಿಗೆ ಬಂದಿದ್ದ. ಇಜಾಸ್ ಅಹ್ಮದ್, ತಂದೆ, ತಾಯಿ ಮತ್ತು ಮೂವರು ಸೋದರರನ್ನು ಅಗಲಿದ್ದಾರೆ.
The youth died due to asphyxiation while having a bath due to the gas geyser. This incident is reported from Maripalla of Farangipet in the taluk on the afternoon of Monday, July 12. Ijaz Ahmed (23), son of Ismail, is the youth who died in this incident. He was having a bath in the bathroom with the geyser on.
17-09-26 04:13 pm
HK News Staffer
ಚಿತ್ರರಂಗದ ಸಾರ್ವಕಾಲಿಕ ಶ್ರೇಷ್ಠ ನಟ ಅನಂತನಾಗ್ ಗೆ '...
16-09-26 10:40 pm
Tulu Language, Shivraj Tangadagi: ತುಳುವಿಗೆ 2ನ...
16-09-26 01:51 pm
Pradeep Eshwar, Pratap Simha: ಪೊಲೀಸ್ ಠಾಣೆಗೆ...
15-09-26 09:13 pm
Imran Pasha, Pratap Simha: ನಿನ್ನಂತಹ ಒಂದು ಲಕ್...
15-09-26 04:46 pm
13-09-26 09:00 pm
HK News
80s ಫೋಟೋ ಟ್ರೆಂಡ್ಗೆ ಮಾರುಹೋಗಿದ್ದೀರಾ? ಹುಷಾರ್ ;...
12-09-26 01:10 pm
ಕಾಶ್ಮೀರಿ ಪಂಡಿತರಿಗೆ ಮತ್ತೆ ಬೆದರಿಕೆ ; ಉದ್ಯೋಗ ಬಿಟ...
10-09-26 01:23 pm
ನೇಪಾಳ ಪ್ರವಾಹ ; ಹತ್ತು ದಿನಗಳ ಬಳಿಕ ಜಲವಿದ್ಯುತ್ ಸು...
05-09-26 11:55 am
ಮುಂದಿನ ಒಂದು ವರ್ಷದಲ್ಲಿ ಒಂದು ಸಾವಿರ ವಿದ್ಯಾಭಾರತಿ...
04-09-26 08:14 pm
17-09-26 08:48 pm
HK News Staffer
Mangalore, DK Shivakumar, Coastal Karnataka,...
17-09-26 08:02 pm
Mangalore, Yathindra Siddaramaiah, Umar Khali...
17-09-26 06:29 pm
ಸಚಿವ ಸಂಪುಟ ಸಭೆಗೆ ಕ್ಷಣಗಣನೆ ; ಪಡೀಲ್ ಜಿಲ್ಲಾಧಿಕಾರ...
17-09-26 05:12 pm
ಗಣೇಶ ವಿಸರ್ಜನಾ ಮೆರವಣಿಗೆ ವೇಳೆ ಮಸೀದಿ, ಮದರಸಾ ಮೇಲೆ...
17-09-26 09:41 am
17-09-26 02:22 pm
HK News Staffer
Bangalore Murder, Crime: ಪ್ರೀತಿಸಿ ಮದುವೆಯಾಗಿದ್...
17-09-26 01:56 pm
Bangalore kidnap, Crime: ಬೆಂಗಳೂರಿನಲ್ಲಿ ಶಾಕ್...
17-09-26 12:35 pm
Manglore Cyber crime, Stock Market: ಷೇರು ಮಾರ್...
17-09-26 11:45 am
ಬೆಳ್ತಂಗಡಿ; ಗೃಹಪ್ರವೇಶಕ್ಕೆ ಹೋದಾಗ ಮನೆಗೆ ಕನ್ನ, ₹1...
16-09-26 11:18 am