ಬ್ರೇಕಿಂಗ್ ನ್ಯೂಸ್
09-07-21 04:36 pm Mangalore Correspondent ಕರಾವಳಿ
ಮಂಗಳೂರು, ಜುಲೈ 9: ರಾಜ್ಯದಲ್ಲಿ ಗೋಹತ್ಯೆ ನಿಷೇಧ ಕಾಯ್ದೆ ಜಾರಿಗೆ ಬಂದರೂ ಅದರ ಅನುಷ್ಠಾನ ಸರಿಯಾಗಿ ಆಗುತ್ತಿಲ್ಲ. ಅಕ್ರಮ ಗೋಹತ್ಯೆ, ಅಕ್ರಮ ಗೋಸಾಗಣೆ ನಿರಂತರವಾಗಿ ನಡೆಯುತ್ತಿದೆ. ಈಗ ಬಕ್ರೀದ್ ಹಬ್ಬ ಸಮೀಪಿಸುತ್ತಿದ್ದು, ಆ ಸಂದರ್ಭದಲ್ಲಿ ಮತ್ತೆ ಗೋವುಗಳ ವಧೆಯಾಗಲಿದೆ. ಅಂತಹ ಸಂದರ್ಭದಲ್ಲಿ ಕಾನೂನು ಸುವ್ಯವಸ್ಥೆಯಲ್ಲಿ ತೊಂದರೆಗಳಾದರೆ ನಾವು ಹೊಣೆಯಾಗಲ್ಲ ಎಂದು ವಿಶ್ ಹಿಂದು ಪರಿಷತ್ ವಿಭಾಗ ಮುಖ್ಯಸ್ಥ ಪ್ರೊ.ಎಂ.ಬಿ. ಪುರಾಣಿಕ್ ಹೇಳಿದ್ದಾರೆ.
ಕದ್ರಿಯ ವಿಶ್ವ ಹಿಂದು ಪರಿಷತ್ ಕಾರ್ಯಾಲಯದಲ್ಲಿ ಸುದ್ದಿಗೋಷ್ಠಿ ನಡೆಸಿದ ಪುರಾಣಿಕ್, ರಾಜ್ಯದಲ್ಲಿ ಜಾರಿಗೆ ಬಂದಿರುವ ಗೋಹತ್ಯೆ ಕಾನೂನು ಪ್ರಬಲವಾಗಿದೆ. ಅಕ್ರಮವಾಗಿ ಗೋವನ್ನು ಹತ್ಯೆ ಮಾಡುವುದು ಕಂಡುಬಂದರೆ 3ರಿಂದ ಏಳು ವರ್ಷದ ವರೆಗೆ ಶಿಕ್ಷಿಸಲು ಅವಕಾಶವಿದೆ. 5 ಲಕ್ಷ ರೂ. ವರೆಗೆ ದಂಡವನ್ನೂ ವಿಧಿಸಬಹುದು. ಯಾವುದೇ ಕಡೆ ಗೋವನ್ನು ಹತ್ಯೆ ಮಾಡಿದ್ದು ಕಂಡುಬಂದರೆ ಆ ಕಟ್ಟಡ, ಮನೆಯನ್ನು ಮುಟ್ಟುಗೋಲು ಹಾಕುವುದಕ್ಕೂ ಅವಕಾಶಗಳಿವೆ. ಆದರೆ, ಈ ರೀತಿಯ ಕಾನೂನು ಬಂದಿದ್ದರೂ, ಅದರ ಅನುಷ್ಠಾನ ಆಗುತ್ತಿಲ್ಲ ಎಂದು ಹೇಳಿದರು.
ಗೋಹತ್ಯೆ ವಿಚಾರ ಹಿಂದುಗಳ ಭಾವನೆಗೆ ಘಾಸಿಗೊಳಿಸುವಂಥದ್ದು. ಹಾಗಾಗಿ, ಇದರ ಕಾರಣಕ್ಕೆ ಈ ಹಿಂದೆ ಕೋಮು ಗಲಭೆ ಆಗಿದ್ದೂ ಇದೆ. ಆದರೆ, ಅಂತಹುದಕ್ಕೆ ಜಿಲ್ಲಾಡಳಿತ ಅವಕಾಶ ಕೊಡಬಾರದು. ಕಾನೂನು ಏನಿದೆಯೋ ಅದನ್ನು ಸೂಕ್ತವಾಗಿ ಪಾಲನೆ ಮಾಡಿದಲ್ಲಿ ಅಕ್ರಮ ಗೋಹತ್ಯೆ, ಗೋಸಾಗಣೆಗೆ ಕಡಿವಾಣ ಬೀಳುತ್ತದೆ. ಪೊಲೀಸರು ಈ ಬಗ್ಗೆ ಯಾವ ರೀತಿಯ ಕ್ರಮ ಕೈಗೊಳ್ಳಬೇಕೋ ಅದನ್ನು ಮಾಡಬೇಕು ಎಂದು ಪುರಾಣಿಕ್ ಆಗ್ರಹಿಸಿದರು.
ಅಧಿಕೃತ ಕಸಾಯಿಖಾನೆಗಳಲ್ಲಿ ಸಿಸಿಟಿವಿ ಅಳವಡಿಸಬೇಕು ಎಂದು ಮಂಗಳೂರು ಮಹಾನಗರ ಪಾಲಿಕೆಯಲ್ಲಿ ನಿರ್ಣಯ ಆಗಿತ್ತು. ಆದರೆ, ಇನ್ನೂ ಕೂಡ ಕುದ್ರೋಳಿ ಕಸಾಯಿಖಾನೆಯಲ್ಲಿ ಸಿಸಿಟಿವಿ ಹಾಕಿಲ್ಲ ಎಂದು ಗೋರಕ್ಷಾ ದಳದ ದಿನೇಶ್ ಪೈ ಹೇಳಿದರು. ಇದಕ್ಕೆ ಈಗ ಬಿಜೆಪಿಯದ್ದೇ ಆಡಳಿತ ಇದೆಯಲ್ಲ. ಯಾಕೆ ಹಾಕಿಸಿಲ್ಲ ಎಂದು ಪ್ರಶ್ನೆ ತೂರಿಬಂತು. ನಾವು ಆಗ್ರಹ ಮಾಡಿದ್ದೇವೆ. ಆಡಳಿತದವರು ತಮ್ಮ ಕಾರ್ಯ ಮಾಡಬೇಕು ಎಂದು ದಿನೇಶ್ ಪೈ ಚುಟುಕಾಗಿ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಗೋಪಾಲ ಕುತ್ತಾರ್, ಪುನೀತ್ ಅತ್ತಾವರ, ಪ್ರದೀಪ್ ಪಂಪ್ವೆಲ್, ಗುರುಪ್ರಸಾದ್ ಉಳ್ಳಾಲ ಉಪಸ್ಥಿತರಿದ್ದರು.
Vishwa Hindu Parishad and Bajrang Dal called for strict enforcement of the anti-cow slaughter law. "If anyone is caught slaughtering cows, illegally storing meat, or illegally transporting cattle then the public needs to inform Bajrang Dal representatives or call on the animal helpline number 8277100200 (24/7). They send across videos or photos as proof," he added.
28-03-26 02:54 pm
HK News Staffer
ಭಾರತದಲ್ಲಿ ಮತ್ತೆ ಲಾಕ್ಡೌನ್ ; ಜಾಲತಾಣದಲ್ಲಿ ಟ್ರೆಂ...
27-03-26 04:49 pm
ಶಾರ್ಟ್ ಕಟ್ ದಾರಿಯೆಂದು ತುಂಗಭದ್ರಾ ನದಿಗೆ ನುಗ್ಗಿಸಿ...
27-03-26 04:04 pm
ನಡುರಸ್ತೆಯಲ್ಲೇ ಪತ್ನಿಯ ಕತ್ತು ಕತ್ತರಿಸಿ ಭೀಕರ ಕೊಲೆ...
27-03-26 03:52 pm
ಚಿಕ್ಕಮಗಳೂರಿನಲ್ಲಿ ಭೂಗತ ಪಾತಕಿ ದಾವೂದ್ ಇಬ್ರಾಹಿಂ ಬ...
26-03-26 10:27 pm
28-03-26 04:06 pm
HK News Staffer
ನೇಪಾಳದಲ್ಲಿ ಝೆನ್ ಝೀ ಕ್ರಾಂತಿ ನಿಗ್ರಹಿಸಲು ಮುಂದಾಗಿ...
28-03-26 02:58 pm
ಟ್ರಂಪ್ ದಿಢೀರ್ ರಾಜಕೀಯ ಹೆಜ್ಜೆ ; ಯುದ್ಧ ಗಡುವು ಹತ್...
27-03-26 04:07 pm
ಗಲ್ಫ್ ಯುದ್ಧದ ಪರಿಣಾಮ ಊಹಿಸುವುದು ಕಷ್ಟ, ಕೋವಿಡ್ನಂ...
27-03-26 12:11 pm
ಅಮೆರಿಕ ಷರತ್ತಿಗೆ ಪಟ್ಟು ಬಿಡದ ಇರಾನ್ ; ಗಲ್ಫ್ ದೇಶಗ...
26-03-26 09:44 pm
27-03-26 03:38 pm
HK News Staffer
ಇನಾಯತ್ ಆಲಿ ನೇತೃತ್ವದಲ್ಲಿ ಏ.4ರಂದು ಗುರುಪುರ ಜೋಡುಕ...
26-03-26 10:51 pm
ಮಂಗಳೂರು ಸಿಟಿ ಪೊಲೀಸರ ಹೆಸರಲ್ಲೇ ನಕಲಿ ವೆಬ್ಸೈಟ್ !...
26-03-26 10:29 pm
ನವ ಮಂಗಳೂರು ಬಂದರು ಸ್ಥಾಪನೆಗೊಂಡ ಬಳಿಕ 40 ಸಾವಿರ ಹಡ...
26-03-26 07:19 pm
ಸುಹಾಸ್ ಶೆಟ್ಟಿ ಕೊಲೆ ಪ್ರಕರಣ ; ಸಾಮಾಜಿಕ ಜಾಲತಾಣದಲ್...
25-03-26 08:44 pm
28-03-26 02:56 pm
HK News Staffer
Tablet Arif Murder, Mangalore: ಜಾನ್ ಅಬ್ರಹಾಂ ಮ...
27-03-26 10:02 pm
ಲ್ಯಾಂಬೋರ್ಗಿನಿ ಕಾರು ಡ್ರಿಫ್ಟಿಂಗ್ ; ಶೋಕಿ ಮಾಡಿ ತಗ...
27-03-26 09:34 pm
ಹೊಸ ಬಾವಿ ಕೊರೆಯುತ್ತಿದ್ದ ವೇಳೆ ದುರಂತ ; ಮೂವತ್ತು ಅ...
27-03-26 09:32 pm
Puttenahalli, Inspector Ravi, Case: ಪುಟ್ಟೇನಹಳ...
27-03-26 08:37 pm