ಬ್ರೇಕಿಂಗ್ ನ್ಯೂಸ್
07-07-21 10:04 pm Mangaluru Correspondent ಕರಾವಳಿ
ಮಂಗಳೂರು, ಜುಲೈ 7: ಮಹಾನಗರಪಾಲಿಕೆ ವ್ಯಾಪ್ತಿಯ ಪಚ್ಚನಾಡಿಯಲ್ಲಿರುವ ಒಳಚರಂಡಿಯ ತ್ಯಾಜ್ಯ ನೀರು ಶುದ್ಧೀಕರಣ ಘಟಕ (ಸೆಕೆಂಡರಿ ಟ್ರೀಟ್ ಮೆಂಟ್ ಪ್ಲಾಂಟ್- ಎಸ್.ಟಿ.ಪಿ.) ಮತ್ತು ಪಿಲಿಕುಳದಲ್ಲಿರುವ ಟಶಿ೯ಯರಿ ಟ್ರೀಟ್ ಮೆಂಟ್ ಪ್ಲಾಂಟ್ (ಟಿ.ಟಿ.ಪಿ.) ಗೆ ಬುಧವಾರ ಮೇಯರ್ ಪ್ರೇಮಾನಂದ ಶೆಟ್ಟಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಈ ಬಗ್ಗೆ ಪತ್ರಿಕಾ ಹೇಳಿಕೆ ನೀಡಿರುವ ಮೇಯರ್ ಪ್ರೇಮಾನಂದ ಶೆಟ್ಟಿ , ಒಳಚರಂಡಿಯ ತ್ಯಾಜ್ಯ ನೀರನ್ನು ಎಸ್ ಟಿಪಿ ಘಟಕದಲ್ಲಿ ಶುದ್ಧೀಕರಿಸುತ್ತಿದ್ದು ಈ ಶುದ್ಧೀಕೃತ ನೀರನ್ನು ಪಿಲಿಕುಳದಲ್ಲಿರುವ ಟಿ.ಟಿ.ಪಿ.ಗೆ ಬಿಡಲಾಗುತ್ತದೆ. ಅಲ್ಲಿ ಮತ್ತೆ ತ್ಯಾಜ್ಯ ನೀರನ್ನು ಸ್ವಚ್ಚ ನೀರನ್ನಾಗಿ ಪರಿವತಿ೯ಸಿ ಪಿಲಿಕುಳ ನಿಸಗ೯ಧಾಮದಲ್ಲಿ ಗಿಡಗಳಿಗೆ ನೀಡಲು ಬಳಸಲಾಗುತ್ತದೆ. ಪ್ರತಿ ದಿನ ಹೀಗೆ ಬರುವ 6.5 ಎಂ.ಎಲ್.ಡಿ ತ್ಯಾಜ್ಯ ನೀರನ್ನು ಪಿಲಿಕುಳಕ್ಕೆ ಪ್ರತಿ ನಿತ್ಯ ನೀಡಲಾಗುತ್ತಿದ್ದು, ಉಳಿದ ಎಸ್.ಟಿ.ಪಿ. ಯಿಂದ ಹರಿದ 2.2 ಎಂ.ಎಲ್.ಡಿ ಹೆಚ್ಚುವರಿ ನೀರನ್ನು ಪಾಲಿಕೆಯ ಸ್ವಾಭಾವಿಕ ನಾಲೆಯ ಮುಖಾಂತರ ಫಲ್ಗುಣಿ ನದಿಗೆ ಬಿಡಲಾಗುತ್ತದೆ ಎಂದು ತಿಳಿಸಿದ್ದಾರೆ. ಈ ಮೂಲಕ ತ್ಯಾಜ್ಯ ನೀರನ್ನು ಫಲ್ಗುಣಿ ನದಿಗೆ ಬಿಡುತ್ತಿರುವುದಾಗಿ ಸ್ವತಃ ಮೇಯರ್ ಹೇಳಿಕೊಂಡಂತಾಗಿದೆ.
ಹೆಡ್ಲೈನ್ ಕರ್ನಾಟಕ ಇತ್ತೀಚೆಗೆ, ಪಚ್ಚನಾಡಿ ಘಟಕದಿಂದ ತ್ಯಾಜ್ಯ ನೀರನ್ನು ನೇರವಾಗಿ ಫಲ್ಗುಣಿ ನದಿಗೆ ಬಿಡಲಾಗುತ್ತಿದೆ ಎಂದು ವಿಡಿಯೋ ಸಹಿತ ವರದಿ ಮಾಡಿ, ಮಹಾನಗರ ಪಾಲಿಕೆಯ ಅಧಿಕಾರಿಗಳ ಬೇಜವಾಬ್ದಾರಿಯನ್ನು ಹೊರಗೆಳೆದಿತ್ತು. ಇದರ ಬಗ್ಗೆ ಸ್ಥಳೀಯ ಸಾರ್ವಜನಿಕರು ಹೋರಾಟ ನಡೆಸಿಕೊಂಡು ಬಂದರೂ, ಪಾಲಿಕೆಯಿಂದ ನಿರ್ಲಕ್ಷ್ಯವೇ ಉತ್ತರವಾಗಿತ್ತು. ಈ ಬಗ್ಗೆ ಸಿಎಂ ಕಚೇರಿಗೆ ಸ್ಥಳೀಯರು ಪತ್ರ ಬರೆದು, ಕುಡಿಯುವ ನೀರು ಬಳಸುವ ಅಣೆಕಟ್ಟಿಗೆ ತ್ಯಾಜ್ಯ ನೀರು ಸೇರುತ್ತಿರುವ ಬಗ್ಗೆ ಗಮನ ಸೆಳೆದಿದ್ದರು. ಸಿಎಂ ಕಚೇರಿಯಿಂದ ಮಂಗಳೂರು ಮಹಾನಗರ ಪಾಲಿಕೆಗೆ ಶಿಸ್ತು ಕ್ರಮ ಜರಗಿಸಲು ಸೂಚನೆ ಬಂದಿತ್ತು. ಸಿಎಂ ಕಚೇರಿಯ ಚಾಟಿಯಿಂದ ಎಚ್ಚೆತ್ತ ಪಾಲಿಕೆಯ ಅಧಿಕಾರಸ್ಥರು 15 ದಿನಗಳ ಬಳಿಕ ಪಚ್ಚನಾಡಿ ಘಟಕಕ್ಕೆ ಭೇಟಿ ನೀಡಿದ್ದಾರೆ.
ನೀವೇ ಕುಡಿದು ತೋರಿಸಿ ಎಂದ ಕಮಿಷನರ್ !
ಎರಡು ದಿನಗಳ ಹಿಂದೆ ಪಾಲಿಕೆ ಕಮಿಷನರ್ ಅಕ್ಷಯ್ ಶ್ರೀಧರ್ ಸ್ಥಳಕ್ಕೆ ತೆರಳಿ, ಅಧಿಕಾರಿಗಳ ವಿರುದ್ಧ ಗರಂ ಆಗಿದ್ದರು. ನೀರನ್ನು ಶುದ್ಧೀಕರಿಸಿಯೇ ನದಿಗೆ ಬಿಡುತ್ತಾ ಇದ್ದೇವೆ ಎಂದ ಅಲ್ಲಿನ ಸಿಬಂದಿಯಲ್ಲಿ ಹಾಗಾದ್ರೆ ನೀವೇ ಇದನ್ನು ಕುಡಿದು ತೋರಿಸಿ ಎಂದು ಕಮಿಷನರ್ ಸವಾಲೆಸೆದಿದ್ದರು. ಇದರಿಂದ ಪೆಚ್ಚು ಮೋರೆ ಹಾಕಿದ್ದರು ಅಲ್ಲಿನ ಗುತ್ತಿಗೆ ಸಿಬಂದಿ ಮತ್ತು ಕಾರ್ಪೊರೇಟರ್.
ಇದೀಗ ಸ್ವತಃ ಮೇಯರ್ ಕೂಡ ಸ್ಥಳಕ್ಕೆ ತೆರಳಿ, ಅಲ್ಲಿನ ವಾಸ್ತವ ಸ್ಥಿತಿಯನ್ನು ಅರಿಯುವ ಪ್ರಯತ್ನ ಮಾಡಿದ್ದಾರೆ. ಶುದ್ಧೀಕರಣಗೊಳಿಸಿದ ನೀರನ್ನು ಎಷ್ಟರ ಮಟ್ಟಿಗೆ ಶುದ್ಧ ಆಗಿದೆ ಎಂದು ಅಧಿಕಾರಿಗಳಿಂದಲೇ ಪರೀಕ್ಷೆಗೆ ನಡೆಸುವ ಮೂಲಕ ಬಿಸಿ ಮುಟ್ಟಿಸಿದ್ದಾರೆ.
ಇದೇ ವೇಳೆ, ತಮ್ಮ ಹೇಳಿಕೆಯಲ್ಲಿ ಎಸ್.ಟಿ.ಪಿಯಿಂದ ಹೊರಗಡೆ ಹರಿದ ನೀರನ್ನು ಮರವೂರು ಸೇತುವೆಯ ಮೇಲ್ಭಾಗಕ್ಕೆ ಬಿಡದಂತೆ ಸಾವ೯ಜನಿಕರು ಮನವಿ ಮಾಡಿದ ಹಿನ್ನೆಲೆಯಲ್ಲಿ ಅದನ್ನು ಕೆಳಭಾಗಕ್ಕೆ ಬಿಡಲು ಕ್ರಮ ಕೈಗೊಳ್ಳಲಾಗುತ್ತಿದೆ. ಈ ಬಗ್ಗೆ ಜೂನ್ 22 ರಂದು ಜಿಲ್ಲಾ ಉಸ್ತುವಾರಿ ಸಚಿವರ ನೇತೃತ್ವದಲ್ಲಿ ತೀಮಾ೯ನಿಸಿದಂತೆ ಸುಮಾರು ರೂ. 2.5 ಕೋಟಿ ವೆಚ್ಚದ ಕಾಮಗಾರಿಯ ಪ್ರಸ್ತಾವನೆಯನ್ನು ಪಾಲಿಕೆಯಿಂದ ಸರಕಾರಕ್ಕೆ ಸಲ್ಲಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.
ಮೇಯರ್ ಭೇಟಿ ವೇಳೆ ಪಚ್ಚನಾಡಿ ಕಾರ್ಪೊರೇಟರ್ ಸಂಗೀತ ನಾಯಕ್ ಮತ್ತು ಕಾಯ೯ಪಾಲಕ ಅಭಿಯಂತರ ಗುರುಪ್ರಸಾದ್ ಉಪಸ್ಥಿತರಿದ್ದರು.
Sewage drain mixes with Maravoor Dam Water Complaint Mayor visits Spot for inspection. In a shocking incident, Sewage water is been continuously released into Maravoor Dam where people of 12 Gram Panchayat Consume dirty water every day. The Issue has reached Karnataka CM and a letter of immediate inquiry and action has been ordered against MCC officials but the MCC officials haven't visited the spot for inspection nor take any action.
22-04-25 02:37 pm
HK News Desk
ಜನಿವಾರ ತೆಗೆಸಿರುವ ಕ್ರಮ ನಿಯಮಬಾಹಿರ, ಧಾರ್ಮಿಕ ನಂಬಿ...
22-04-25 01:00 pm
R Ashok, Census Probe: ಜಾತಿಗಣತಿ ವರದಿಯೇ ನಕಲಿ,...
21-04-25 07:27 pm
ನ್ಯಾ.ಕೃಷ್ಣ ದೀಕ್ಷಿತ್, ನ್ಯಾ.ಹೇಮಂತ್ ಚಂದನಗೌಡರ್ ಸೇ...
21-04-25 07:10 pm
Jayaprakash Hegde; ಹಿಂದೂಗಳಂತೆ ಮುಸ್ಲಿಮರಲ್ಲು 93...
19-04-25 03:04 pm
21-04-25 07:46 pm
HK News Desk
Pope Francis Death, Vatican, Catholic: ಕೆಥೋಲಿ...
21-04-25 02:13 pm
No GST on UPI Payments: ಎರಡು ಸಾವಿರಕ್ಕಿಂತ ಮೇಲಿ...
20-04-25 08:42 pm
Jagdeep Dhankhar, Justice Varma case: ರಾಷ್ಟ್ರ...
18-04-25 02:21 pm
ನ್ಯಾಷನಲ್ ಹೆರಾಲ್ಡ್ ಪ್ರಕರಣ ; ಸೋನಿಯಾ, ರಾಹುಲ್ ವಿರ...
16-04-25 03:54 pm
21-04-25 10:32 pm
Mangalore Correspondent
Puttur, Arun Putila: ಬ್ರಾಹ್ಮಣರು ಮತ್ತೆ ಪರಶುರಾಮ...
21-04-25 07:08 pm
Mangalore Chakravarti Sulibele, Ujre; ಸರ್ಕಾರವ...
20-04-25 05:42 pm
DK Shivakumar, Dharmasthala temple, Mangalore...
20-04-25 12:51 pm
Wafq Protest Mangalore, Police FIR; ವಕ್ಫ್ ವಿರ...
19-04-25 06:19 pm
21-04-25 01:03 pm
Bangalore Correspondent
Karnataka DGP Om Prakash Murder, wife: ನಿವೃತ್...
20-04-25 10:52 pm
ರಾಮಕೃಷ್ಣ ಆಶ್ರಮದ ಕಾರ್ಯದರ್ಶಿಗೇ ಟೋಪಿ ; ಇಡಿ ಅಧಿಕಾ...
20-04-25 07:26 pm
Gold smuggling case, Mangalore Court Verdict,...
19-04-25 10:46 pm
Ullal Gang Rape, Crime, Update, Mangalore: ಗ್...
19-04-25 09:22 pm