ಬ್ರೇಕಿಂಗ್ ನ್ಯೂಸ್
01-07-21 05:10 pm Mangalore Correspondent ಕರಾವಳಿ
ಮಂಗಳೂರು, ಜುಲೈ 1: ಸಾಕು ದನಗಳನ್ನು ಹೊರಗಡೆ ಕಟ್ಟುವ ವಿಚಾರದಲ್ಲಿ ಜಗಳವಾಗಿ ತಂದೆಯೇ ತನ್ನ ಮಗನ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದ ಪ್ರಕರಣದಲ್ಲಿ ತೀವ್ರ ಗಾಯಗೊಂಡಿದ್ದ ಮಗ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾನೆ.
ನಗರದ ಜಪ್ಪಿನಮೊಗರು ಎಂಬಲ್ಲಿ ವಾರದ ಹಿಂದೆ ಈ ದುರ್ಘಟನೆ ನಡೆದಿತ್ತು. ಸ್ವಾಮೀತ್ ಶೆಟ್ಟಿ (25) ಎಂಬಾತ ಸುಟ್ಟ ಗಾಯಗಳೊಂದಿಗೆ ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿದ್ದರು. ಆದರೆ ಚಿಕಿತ್ಸೆ ಫಲಿಸದೆ ಅವರು ಮೃತಪಟ್ಟಿದ್ದಾರೆ.


ಆರೋಪಿ ವಿಶ್ವನಾಥ ಶೆಟ್ಟಿ (52) ಎಂಬವರನ್ನು ಪೊಲೀಸರು ಬಂಧಿಸಿದ್ದಾರೆ. ಈ ಬಗ್ಗೆ ಕಂಕನಾಡಿ ನಗರ ಠಾಣೆಯಲ್ಲಿ ಅ.ಕ್ರ 85/2021 ಕಲಂ 504, 506, 323, 307 ಐಪಿಸಿ ಪ್ರಕರಣ ದಾಖಲಾಗಿದೆ.
ಒಂದು ವಾರದ ಹಿಂದೆ ಜಪ್ಪಿನಮೊಗರು ಗ್ರಾಮದ ಕೊಪ್ಪರಿಗೆಗುತ್ತು ಎಂಬಲ್ಲಿ ಸಾಕು ದನಗಳನ್ನು ಹೊರಗಡೆ ಕಟ್ಟಿ ಹಾಕಿದ್ದ ವಿಚಾರದಲ್ಲಿ ಕುಡಿದು ಬಂದ ವಿಶ್ವನಾಥ ಶೆಟ್ಟಿ ಮಗನೊಂದಿಗೆ ತಕರಾರು ಮಾಡಿ ಹೊಡೆದಿದ್ದ. ಬಳಿಕ ಮನೆಯ ಒಳಗಡೆ ಬಂದು ಬಾಗಿಲು ಮುಚ್ಚಿ, ಪ್ಲಾಸ್ಟಿಕ್ ಕ್ಯಾನಲ್ಲಿದ್ದ ಪೆಟ್ರೊಲ್ ಅನ್ನು ಮಗನ ಮೈಗೆ ಸುರಿದು ಸಿಗರ್ ಲೈಟರಿನಿಂದ ಬೆಂಕಿ ಹಚ್ಚಿದ್ದರು. ಬೆಂಕಿ ತಗಲಿ ಗಂಭೀರ ಸ್ಥಿತಿಯಲ್ಲಿದ್ದ ಮಗನನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಕುಡಿದ ಮತ್ತಿನಲ್ಲಿ ಎಸಗಿದ್ದ ಪಾಪ ಕೃತ್ಯ ಈಗ ತಂದೆಗೇ ಉರುಳಾಗಿ ಪರಿಣಮಿಸಿದ್ದು ನತದೃಷ್ಟ ಯುವಕ ಸಾವು ಕಂಡಿದ್ದಾನೆ.
Read: ದನವನ್ನು ಕಟ್ಟುವ ವಿಚಾರದಲ್ಲಿ ಮಗನಿಗೇ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ ತಂದೆ
Swamith Shetty (25), who was admitted to a private hospital in critical condition after his father Vishwanath Shetty (52) poured petrol on him and set him on fire over an issue of managing cattle at their home, succumbed to his injuries on the morning of Thursday, July 1.
17-09-26 04:13 pm
HK News Staffer
ಚಿತ್ರರಂಗದ ಸಾರ್ವಕಾಲಿಕ ಶ್ರೇಷ್ಠ ನಟ ಅನಂತನಾಗ್ ಗೆ '...
16-09-26 10:40 pm
Tulu Language, Shivraj Tangadagi: ತುಳುವಿಗೆ 2ನ...
16-09-26 01:51 pm
Pradeep Eshwar, Pratap Simha: ಪೊಲೀಸ್ ಠಾಣೆಗೆ...
15-09-26 09:13 pm
Imran Pasha, Pratap Simha: ನಿನ್ನಂತಹ ಒಂದು ಲಕ್...
15-09-26 04:46 pm
13-09-26 09:00 pm
HK News
80s ಫೋಟೋ ಟ್ರೆಂಡ್ಗೆ ಮಾರುಹೋಗಿದ್ದೀರಾ? ಹುಷಾರ್ ;...
12-09-26 01:10 pm
ಕಾಶ್ಮೀರಿ ಪಂಡಿತರಿಗೆ ಮತ್ತೆ ಬೆದರಿಕೆ ; ಉದ್ಯೋಗ ಬಿಟ...
10-09-26 01:23 pm
ನೇಪಾಳ ಪ್ರವಾಹ ; ಹತ್ತು ದಿನಗಳ ಬಳಿಕ ಜಲವಿದ್ಯುತ್ ಸು...
05-09-26 11:55 am
ಮುಂದಿನ ಒಂದು ವರ್ಷದಲ್ಲಿ ಒಂದು ಸಾವಿರ ವಿದ್ಯಾಭಾರತಿ...
04-09-26 08:14 pm
17-09-26 08:48 pm
HK News Staffer
Mangalore, DK Shivakumar, Coastal Karnataka,...
17-09-26 08:02 pm
Mangalore, Yathindra Siddaramaiah, Umar Khali...
17-09-26 06:29 pm
ಸಚಿವ ಸಂಪುಟ ಸಭೆಗೆ ಕ್ಷಣಗಣನೆ ; ಪಡೀಲ್ ಜಿಲ್ಲಾಧಿಕಾರ...
17-09-26 05:12 pm
ಗಣೇಶ ವಿಸರ್ಜನಾ ಮೆರವಣಿಗೆ ವೇಳೆ ಮಸೀದಿ, ಮದರಸಾ ಮೇಲೆ...
17-09-26 09:41 am
17-09-26 02:22 pm
HK News Staffer
Bangalore Murder, Crime: ಪ್ರೀತಿಸಿ ಮದುವೆಯಾಗಿದ್...
17-09-26 01:56 pm
Bangalore kidnap, Crime: ಬೆಂಗಳೂರಿನಲ್ಲಿ ಶಾಕ್...
17-09-26 12:35 pm
Manglore Cyber crime, Stock Market: ಷೇರು ಮಾರ್...
17-09-26 11:45 am
ಬೆಳ್ತಂಗಡಿ; ಗೃಹಪ್ರವೇಶಕ್ಕೆ ಹೋದಾಗ ಮನೆಗೆ ಕನ್ನ, ₹1...
16-09-26 11:18 am