ಬ್ರೇಕಿಂಗ್ ನ್ಯೂಸ್
25-06-21 11:48 am Mangalore Correspondent ಕರಾವಳಿ
ಮಂಗಳೂರು, ಜೂನ್ 25: ಮೌರಿಷ್ಕಾ ಪಾರ್ಕ್ ಅಪಾರ್ಟ್ಮೆಂಟಿನಲ್ಲಿ ವೃದ್ಧ ದಂಪತಿಯ ಕತ್ತಲ ವಾಸ ಮುಂದುವರಿದಿರುವ ಮಧ್ಯೆಯೇ ಆಶಾಕಿರಣದ ಬೆಳಕು ಮೂಡಿದೆ. ಪ್ರಕರಣದ ಬಗ್ಗೆ ಪೊಲೀಸರು ಕೆಚೆಲ್ಲಿ ಕುಳಿತಿದ್ದರೆ, ಜಿಲ್ಲಾಧಿಕಾರಿಗಳು ಸಮಸ್ಯೆ ಬಗೆಹರಿಸುವ ಭರವಸೆ ನೀಡಿದ್ದಾರೆ. ವೀಣಾ ಪ್ರಭು ದಂಪತಿಯನ್ನು ಕಚೇರಿಗೆ ಕರೆದು ಜಿಲ್ಲಾಧಿಕಾರಿ ರಾಜೇಂದ್ರ ಕೆ.ವಿ. ಮಾತನಾಡಿದ್ದಾರೆ. ಏನೇ ತಕರಾರು ಇದ್ದರೂ, ಅಸೋಸಿಯೇಶನ್ ಕಡೆಯಿಂದ ಮನೆಯ ಕರೆಂಟ್ ತೆಗೆಯುವುದು ತಪ್ಪು. ಜಟಾಪಟಿ ಕೋರ್ಟಲ್ಲಿದ್ದರೆ, ಕೋರ್ಟ್ ಕರೆಂಟ್ ತೆಗೆಯಲು ಹೇಳಿದೆಯೇ ಎಂದು ಜಿಲ್ಲಾಧಿಕಾರಿ ಪ್ರಶ್ನಿಸಿದ್ದಾರೆ. ಸಮಸ್ಯೆ ಬಗೆಹರಿಸುವಂತೆ ಪಾಲಿಕೆಯ ಕಮಿಷನರ್ ಗೆ ಖುದ್ದಾಗಿ ಸೂಚನೆ ನೀಡಿದ್ದಲ್ಲದೆ, ಪ್ರಕರಣದ ವರದಿ ನೀಡಲು ಪ್ರೊಬೇಷನರಿ ಐಎಎಸ್ ಅಧಿಕಾರಿ ಒಬ್ಬರನ್ನು ಜಿಲ್ಲಾಧಿಕಾರಿ ನೇಮಕ ಮಾಡಿದ್ದಾರೆ.
ಇದೇ ವೇಳೆ, ಪಾಂಡೇಶ್ವರದ ಮತ್ತೊಂದು ವೃದ್ಧ ದಂಪತಿಗೆ ಅಲ್ಲಿನ ಅಪಾರ್ಟ್ಮೆಂಟ್ ಅಸೋಸಿಯೇಶನ್ ಮೂರು ವರ್ಷಗಳಿಂದ ಕುಡಿಯುವ ನೀರನ್ನೇ ಕಡಿತಗೊಳಿಸಿ ಶಿಕ್ಷೆ ನೀಡುತ್ತಿರುವ ಬಗ್ಗೆ ಹೆಡ್ ಲೈನ್ ಕರ್ನಾಟಕ ಬೆಳಕು ಚೆಲ್ಲಿತ್ತು. ಅದರಲ್ಲೂ ಪೊಲೀಸರು ತಮಗೆ ಉಸಾಬರಿಯೇ ಬೇಡ ಎಂದು ದೂರ ಉಳಿದಿದ್ದಾರೆ. ಆದರೆ, ಯಾವುದೇ ಕುಟುಂಬಕ್ಕೆ ನೀರು ಕೊಡದೇ ಕಿರುಕುಳ ನೀಡುವುದು ಆತನ ಬದುಕುವ ಹಕ್ಕನ್ನು ಕಸಿದಂತೆ. ಪೊಲೀಸರು ಮನಸ್ಸು ಮಾಡಿದರೆ ಈ ಕೆಲಸವನ್ನು ಮಾಡಬಹುದು ಎಂದು ಹೆಡ್ ಲೈನ್ ವರದಿ ಉಲ್ಲೇಖ ಮಾಡಿತ್ತು.
ನೀರು ಕೊಡದ್ದಕ್ಕೆ ಉರ್ವಾದಲ್ಲಿ ಎಫ್ಐಆರ್
ಇಂತಹುದೇ ಮತ್ತೊಂದು ಪ್ರಕರಣದಲ್ಲಿ ಇದೀಗ ಉರ್ವಾ ಠಾಣೆಯ ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ. ಚಿಲಿಂಬಿಯ ಫ್ಲಾಟ್ ನಲ್ಲಿ ನೀರು ಕೊಡದೇ ಕುಟುಂಬಕ್ಕೆ ಕಿರುಕುಳ ನೀಡುತ್ತಿರುವ ಬಗ್ಗೆ ಅಪಾರ್ಟ್ಮೆಂಟ್ ಅಸೋಸಿಯೇಶನ್ ಅಧ್ಯಕ್ಷನ ವಿರುದ್ಧವೇ ಪೊಲೀಸರು ಎಫ್ಐಆರ್ ಮಾಡಿದ್ದಾರೆ. ಚಿಲಿಂಬಿಯ ಬೆಂಕೋ ಅಪಾರ್ಟ್ಮೆಂಟಿನಲ್ಲಿ ಮನೆ ಖರೀದಿಸಿದ್ದ ಮುಂಬೈ ಮೂಲದ ನೋಯಲ್ ಲೆವಿಸ್ ಎಂಬವರು ಸಂಕಷ್ಟಕ್ಕೆ ಸಿಲುಕಿದ್ದರು. ಅಲ್ಲಿನ ಅಸೋಸಿಯೇಶನ್ ಜೊತೆಗಿನ ಜಟಾಪಟಿಯಿಂದಾಗಿ ನೀರು ಕಡಿತಗೊಳಿಸಿ ಕಿರುಕುಳ ನೀಡುತ್ತಿರುವ ಬಗ್ಗೆ ಹೆಡ್ ಲೈನ್ ಕರ್ನಾಟಕ ಎರಡು ತಿಂಗಳ ಹಿಂದೆ ವರದಿ ಮಾಡಿತ್ತು. ಪ್ರಕರಣದಲ್ಲಿ ಉರ್ವಾ ಪೊಲೀಸರು ನೋಯಲ್ ನೀಡಿದ್ದ ದೂರನ್ನು ಸ್ವೀಕರಿಸದೆ ಸತಾಯಿಸುತ್ತಿರುವ ಬಗ್ಗೆಯೂ ವರದಿಯಲ್ಲಿ ಉಲ್ಲೇಖಿಸಲಾಗಿತ್ತು.
ವರದಿ ಪ್ರಕಟವಾದ ಬಳಿಕ ಎಚ್ಚೆತ್ತಿದ್ದ ಪೊಲೀಸರು ಇತ್ತಂಡಗಳಿಂದಲೂ ದೂರು ಸ್ವೀಕರಿಸಿ, ಉರ್ವಾ ಠಾಣೆಯಲ್ಲಿ ಎಫ್ಐಆರ್ ದಾಖಲಿಸಿದ್ದರು. ನೋಯಲ್ ಪುತ್ರಿ ನೀಡಿದ ದೂರಿನಂತೆ ಯುವತಿ ಮೇಲೆ ಕೈಮಾಡಿದ್ದ ಬಗ್ಗೆ ಗಣೇಶ್ ವಿರುದ್ಧ ಪ್ರಕರಣ ಮತ್ತು ಅಸೋಸಿಯೇಶನ್ ಕಡೆಯಿಂದ ನೀಡಿದ್ದ ದೂರಿನ ಆಧಾರದಲ್ಲಿ ನೋಯಲ್ ವಿರುದ್ಧ ದಲಿತ ನಿಂದನೆ ಪ್ರಕರಣ ದಾಖಲಾಗಿತ್ತು. ಆನಂತರದ ಬೆಳವಣಿಗೆಯಲ್ಲಿ ಅಪಾರ್ಟ್ಮೆಂಟ್ ಅಸೋಸಿಯೇಶನ್ ಅಧ್ಯಕ್ಷ ಗಣೇಶ್ ವಿರುದ್ಧ ಮೊನ್ನೆ ಜೂನ್ 17ರಂದು ಉರ್ವಾ ಪೊಲೀಸರು ಮತ್ತೊಂದು ಎಫ್ಐಆರ್ ಮಾಡಿದ್ದಾರೆ.
ಅಪಾರ್ಟ್ಮೆಂಟಿನ ಇತರ ನಿವಾಸಿಗಳ ಜೊತೆ ಸೇರಿಕೊಂಡು ಗಣೇಶ್ ಅವರು, ನೋಯಲ್ ಕುಟುಂಬಕ್ಕೆ ನೀರು ಕೊಡದೇ ಸತಾಯಿಸುತ್ತಿದ್ದು ಮಾನಸಿಕ ಕಿರುಕುಳ ನೀಡುತ್ತಿದ್ದಾರೆಂದು ಪ್ರಕರಣ ದಾಖಲಾಗಿದೆ. ಸಾಮಾಜಿಕ ಕಾರ್ಯಕರ್ತನಾಗಿರುವ ಜೋಹಾನ್ ಸಿಕ್ವೇರ ದೂರು ನೀಡಿದ್ದು, ನೀರು ಕೊಡದೇ ಹಿಂಸೆ ನೀಡುತ್ತಿರುವ ಬಗ್ಗೆ ಪ್ರಕರಣ ದಾಖಲಿಸುವಂತೆ ಉರ್ವಾ ಪೊಲೀಸರಿಗೆ ಒತ್ತಡ ಹೇರಿ ಕೇಸು ದಾಖಲಿಸಿದ್ದಾರೆ.
ನೀರು, ಕರೆಂಟ್ ಕೊಡುವುದು ಮೂಲಭೂತ ಹಕ್ಕಿನ ಉಲ್ಲಂಘನೆ ಎನ್ನುವ ನೆಲೆಯಲ್ಲಿ ಪೊಲೀಸರು ಪ್ರಕರಣ ದಾಖಲಿಸಿದರೆ, ಮೇಲಿನ ಎಲ್ಲ ಕುಟುಂಬಗಳಿಗೂ ನ್ಯಾಯ ಲಭಿಸಬಹುದು. ಬಡಪಾಯಿ ಕುಟುಂಬಗಳ ವಿರುದ್ಧ ದರ್ಪ ತೋರುವ ಅಪಾರ್ಟ್ಮೆಂಟ್ ಅಸೋಸಿಯೇಶನ್ ಮತ್ತು ಬಿಲ್ಡರುಗಳಿಗೆ ಪಾಠವನ್ನೂ ಕಲಿಸಿದಂತಾಗುತ್ತದೆ.
Mangalore Elderly Couple without Electricity since 3 years Dc Dr. Rajendra Kumar orders probe in the case. Also an FIR has been filed on Ganesh of Beneco apartment at Urwa for disconnecting water supply to the house of a tenant.
21-04-25 07:27 pm
Bangalore Correspondent
ನ್ಯಾ.ಕೃಷ್ಣ ದೀಕ್ಷಿತ್, ನ್ಯಾ.ಹೇಮಂತ್ ಚಂದನಗೌಡರ್ ಸೇ...
21-04-25 07:10 pm
Jayaprakash Hegde; ಹಿಂದೂಗಳಂತೆ ಮುಸ್ಲಿಮರಲ್ಲು 93...
19-04-25 03:04 pm
Janivara, Shivamogga, Suspend: ಜನಿವಾರ ತೆಗೆಸಿದ...
19-04-25 12:24 pm
Bidar Cet Exam, Janivara issue: ಜನಿವಾರ ಹಾಕಿದ್...
18-04-25 05:38 pm
21-04-25 07:46 pm
HK News Desk
Pope Francis Death, Vatican, Catholic: ಕೆಥೋಲಿ...
21-04-25 02:13 pm
No GST on UPI Payments: ಎರಡು ಸಾವಿರಕ್ಕಿಂತ ಮೇಲಿ...
20-04-25 08:42 pm
Jagdeep Dhankhar, Justice Varma case: ರಾಷ್ಟ್ರ...
18-04-25 02:21 pm
ನ್ಯಾಷನಲ್ ಹೆರಾಲ್ಡ್ ಪ್ರಕರಣ ; ಸೋನಿಯಾ, ರಾಹುಲ್ ವಿರ...
16-04-25 03:54 pm
21-04-25 10:32 pm
Mangalore Correspondent
Puttur, Arun Putila: ಬ್ರಾಹ್ಮಣರು ಮತ್ತೆ ಪರಶುರಾಮ...
21-04-25 07:08 pm
Mangalore Chakravarti Sulibele, Ujre; ಸರ್ಕಾರವ...
20-04-25 05:42 pm
DK Shivakumar, Dharmasthala temple, Mangalore...
20-04-25 12:51 pm
Wafq Protest Mangalore, Police FIR; ವಕ್ಫ್ ವಿರ...
19-04-25 06:19 pm
21-04-25 01:03 pm
Bangalore Correspondent
Karnataka DGP Om Prakash Murder, wife: ನಿವೃತ್...
20-04-25 10:52 pm
ರಾಮಕೃಷ್ಣ ಆಶ್ರಮದ ಕಾರ್ಯದರ್ಶಿಗೇ ಟೋಪಿ ; ಇಡಿ ಅಧಿಕಾ...
20-04-25 07:26 pm
Gold smuggling case, Mangalore Court Verdict,...
19-04-25 10:46 pm
Ullal Gang Rape, Crime, Update, Mangalore: ಗ್...
19-04-25 09:22 pm