ಬ್ರೇಕಿಂಗ್ ನ್ಯೂಸ್
19-06-21 04:57 pm Mangaluru Correspondent ಕರಾವಳಿ
ಉಳ್ಳಾಲ, ಜೂ.19: ಕಂಠ ಪೂರ್ತಿ ಕುಡಿದು ಸ್ಕೂಟರ್ ಚಲಾಯಿಸುತ್ತಿದ್ದ ಯುವಕರಿಬ್ಬರು ಸ್ಕಿಡ್ ಆಗಿ ಬಿದ್ದು ಗಂಭೀರ ಗಾಯಗೊಂಡಿದ್ದರೂ, ಆಸ್ಪತ್ರೆಗೆ ದಾಖಲಿಸಲು ಬಂದ ಜನರಿಗೆ ಹಿಂದುತ್ವದ ಪಾಠ ಹೇಳಿದ ಘಟನೆ ತೊಕ್ಕೊಟ್ಟು ಬಳಿಯ ಬಬ್ಬುಕಟ್ಟೆ ಶಾಲೆ ಬಳಿ ನಡೆದಿದೆ.
ಮಧ್ಯಾಹ್ನ 3.15ರ ಸುಮಾರಿಗೆ ತೊಕ್ಕೊಟ್ಟು ಸಮೀಪದ ಬಬ್ಬುಕಟ್ಟೆಯ ಶಾಲೆಯ ಬಳಿ ಯುವಕರಿಬ್ಬರು ಚಲಾಯಿಸುತ್ತಿದ್ದ ಸ್ಕೂಟರ್ ಸ್ಕಿಡ್ ಆಗಿ ಬಿದ್ದಿದೆ. ಕೂಡಲೇ ವಾಹನ ಸವಾರರು, ಸ್ಥಳೀಯರು ಯುವಕರ ಸಹಾಯಕ್ಕೆ ಓಡೋಡಿ ಬಂದಿದ್ದಾರೆ. ಘಟನೆಯಲ್ಲಿ ಸ್ಕೂಟರ್ ನಲ್ಲಿದ್ದ ಓರ್ವ ಯುವಕನ ಮುಖ ಮೂತಿ ಒಡೆದು ರಕ್ತದೋಕುಳಿ ಹರಿಯುತ್ತಿತ್ತು. ಗಾಯಾಳು ಯುವಕರನ್ನು ಆಸ್ಪತ್ರೆಗೆ ಸೇರಿಸಲು ನೆರೆದಿದ್ದವರು ಮುಂದಾಗಿದ್ದ ವೇಳೆ ಸ್ಕೂಟರ್ ನಿಂದ ಬಿದ್ದು ಓರೆ, ಕೋರೆಯಾಗಿ ನಿಂತಿದ್ದ ಯುವಕರ ಬಾಯಲ್ಲಿ ಅವಾಚ್ಯ ಶಬ್ದಗಳೇ ಹೊರಬಿದ್ದಿವೆ. ಗಾಯಾಳು ಯುವಕರಿಬ್ಬರು ಕುಡಿದ ಮತ್ತಿನಲ್ಲಿ ನಿಲ್ಲುವುದಕ್ಕೆ ಆಗದಿದ್ದರೂ ಹಿಂದುತ್ವದ ಪಾಠ ಹೇಳಿದ್ದಾರೆ. ಯುವಕರು ಬಬ್ಬುಕಟ್ಟೆಯಲ್ಲಿ ಬಿದ್ದಿದ್ದರೂ ಸಹ ಫೋನಲ್ಲಿ ತಾವು ರೈಲ್ವೇ ಸ್ಟೇಷನ್ ಎದುರು ಬಿದ್ದಿರುವುದಾಗಿ ಹೇಳುತ್ತಿದ್ದು ಅವರು ಎಷ್ಟು ಕುಡಿದಿದ್ದಾರೆ ಎನ್ನುವುದನ್ನು ತೋರಿಸುತ್ತಿತ್ತು.
ನೆರೆದಿದ್ದ ಮಂದಿ ಆಸ್ಪತ್ರೆಗೆ ಸೇರಿಸಲು ಮುಂದಾದಾಗ ಕ್ರುದ್ದಗೊಂಡ ಗಾಯಾಳು ಯುವಕರು ನೀವೊಂದು ಹಿಂದೂಗಳಾ, ಹಿಂದುತ್ವ ಗೊತ್ತಿದ್ಯಾ ನಿಮಗೆ ಎಂದು ಹಿಂದುತ್ವದ ಹೆಸರಲ್ಲಿ ಬೈದಿದ್ದಾರೆ.
ಅರ್ಧ ತಾಸಿನ ಕಾಲ ನಶೆಯಲ್ಲಿದ್ದ ಯುವಕರು ರಸ್ತೆ ಮಧ್ಯದಲ್ಲೇ ದೊಂಬರಾಟ ನಡೆಸಿದ್ದು ಸಂಚಾರಕ್ಕೆ ತೊಂದರೆಯಾಗಿತ್ತು. ವಿಷಯ ತಿಳಿದು ಉಳ್ಳಾಲ ಪೊಲೀಸರು ಸ್ಥಳಕ್ಕೆ ಬಂದಾಗ ಯುವಕರ ನಶೆ ಸ್ವಲ್ಪ ಮಟ್ಟಿಗೆ ಇಳಿದಿದ್ದು ಪೊಲೀಸರು ನಶೆಯಲ್ಲಿದ್ದ ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ.
Mangalore Bike skids off-road in Thokottu Injured Drunk Men gives Speech on Hindutva. Ullal police reached the spot and took both and have admitted them to the hospital.
05-05-25 01:30 pm
HK News Desk
ಅಲ್ಲೊಂದು, ಇಲ್ಲೊಂದು ಕೊಲೆ ಆಗತ್ತೆ, ಅದನ್ಯಾಕೆ ಧರ್ಮ...
04-05-25 09:55 pm
ಸಿಇಟಿ ಬಳಿಕ ನೀಟ್ ಪರೀಕ್ಷೆಗೂ ಜನಿವಾರಕ್ಕೆ ಕತ್ತರಿ !...
04-05-25 09:26 pm
ಹಿಮಾಲಯ - ದೆಹಲಿಗೆ ಸುನಾಮಿ, ಮಹಾನ್ ನಾಯಕರ ದುರ್ಮರಣ...
04-05-25 09:15 pm
Bangalore Girl Naked, HSR Layout: ಬೆಂಗಳೂರಿನಲ್...
04-05-25 02:27 pm
05-05-25 11:10 pm
HK News Desk
ಪಾಕ್ ವಾಯು ಪ್ರದೇಶದಲ್ಲಿ ಭಾರತದ ವಿಮಾನಗಳಿಗೆ ನಿರ್ಬಂ...
30-04-25 06:59 pm
India Pakistan War: ಭಾರತೀಯ ಸೇನಾಪಡೆಗೆ ಪರಮಾಧಿಕಾ...
30-04-25 03:14 pm
Pakistan, No-fly zone islamabad: ಭಾರತದ ಪ್ರತೀಕ...
30-04-25 02:13 pm
ಮೋದಿ 'ಗಾಯಬ್' ಎಂದು ಕಾಂಗ್ರೆಸ್ ಪೋಸ್ಟ್ ; ಕಾಂಗ್ರೆಸ...
29-04-25 03:45 pm
05-05-25 10:59 pm
Mangalore Correspondent
Suhas Shetty murder, MP Brijesh Chowta, Param...
05-05-25 10:43 pm
Mangalore Suhas Shetty murder, BJP Umanath Ko...
05-05-25 07:15 pm
MLA Harish Poonja, Dinesh Gundurao: ಬುರ್ಖಾಧಾರ...
05-05-25 05:10 pm
Suhas Shetty Murder, VHP, Bajpe Police: ಸುಹಾಸ...
05-05-25 03:24 pm
03-05-25 02:16 pm
Mangalore Correspondent
Suhas Shetty Murder, Thokottu Attack, Mangalo...
02-05-25 12:00 pm
Mangalore Bajpe Murder, Suhas Shetty: ಹಳೆ ದ್ವ...
01-05-25 10:06 pm
Mangalore, Illegal Rice, crime: ಉತ್ತರ ಕರ್ನಾಟಕ...
30-04-25 04:09 pm
Mangalore Mudipu Murder, Mob, Police, Crime:...
29-04-25 09:59 pm