ಬ್ರೇಕಿಂಗ್ ನ್ಯೂಸ್
12-06-21 04:04 pm Mangalore Correspondent ಕರಾವಳಿ
ಮಂಗಳೂರು, ಜೂನ್ 12: ಅಕ್ರಮವಾಗಿ ಒಳನುಸುಳಿ ಬಂದು ಮಂಗಳೂರಿನಲ್ಲಿ ನೆಲೆಸಿದ್ದ 38 ಮಂದಿ ಲಂಕಾ ಪ್ರಜೆಗಳನ್ನು ವಿಚಾರಣೆ ನಡೆಸಲು ತಮಿಳುನಾಡಿನ ಪೊಲೀಸರು ಮಂಗಳೂರಿಗೆ ಆಗಮಿಸಿದ್ದಾರೆ. ಡಿವೈಎಸ್ಪಿ ನೇತೃತ್ವದ 9 ಮಂದಿ ಪೊಲೀಸರ ತಂಡ ಮಂಗಳೂರಿಗೆ ಆಗಮಿಸಿದ್ದು, ಕೂಲಂಕಷ ತನಿಖೆಗೆ ಮುಂದಾಗಿದೆ.
ಕೆನಡಾಕ್ಕೆ ತೆರಳುವ ಉದ್ದೇಶದಿಂದ ಭಾರತಕ್ಕೆ ನುಸುಳಿ ಬಂದಿದ್ದರು ಅನ್ನೋದು ಮಂಗಳೂರು ಪೊಲೀಸರ ತನಿಖೆಯಲ್ಲಿ ಗೊತ್ತಾಗಿತ್ತು. ಅಲ್ಲದೆ, ಅದಕ್ಕಾಗಿ ಏಜನ್ಸಿ ಮೂಲಕ ಹತ್ತು ಲಕ್ಷ ರೂ. ವರೆಗೆ ಹಣ ನೀಡಿದ್ದರು ಎನ್ನಲಾಗಿತ್ತು. ಆದರೆ, ಏಜನ್ಸಿ ಮೂಲಕ ತೆರಳುವುದಾದರೆ ಭಾರತಕ್ಕೆ ಏಕೆ ಬರಬೇಕಿತ್ತು. ಮಂಗಳೂರಿಗೆ ಬರುವ ಅಗತ್ಯ ಏನಿದೆ ? ನೇರವಾಗಿ ಶ್ರೀಲಂಕಾದಿಂದಲೇ ತೆರಳಬಹುದಿತ್ತಲ್ಲ ಎಂಬ ಪ್ರಶ್ನೆ ಎದ್ದಿತ್ತು. ಈ ಬಗ್ಗೆ ಮಂಗಳೂರು ಕಮಿಷನರ್ ಬಳಿ ಕೇಳಿದರೆ, ಆ ಬಗ್ಗೆ ಇನ್ನೂ ಗೊತ್ತಾಗಿಲ್ಲ. ವಿಚಾರಣೆ ನಡೆಸಲಿದ್ದೇವೆ ಎಂದಿದ್ದರು.


ತಮಿಳುನಾಡು ಪೊಲೀಸರು ಹೇಳುವ ಪ್ರಕಾರ, ಲಂಕನ್ನರು ಈ ರೀತಿ ಭಾರತಕ್ಕೆ ಬರುವುದು, ಇಲ್ಲಿಂದ ಎಲ್ಲೆಲ್ಲೋ ಹೋಗುವುದು ಮೊದಲೇನಲ್ಲ. ಹೆಚ್ಚಾಗಿ ಕೇರಳ, ತಮಿಳುನಾಡಿಗೆ ಬರುತ್ತಾರೆ. ತಮಿಳು ಮಾತನಾಡುವುದರಿಂದ ಮೀನು ಕಾರ್ಮಿಕರ ಸೋಗಿನಲ್ಲಿ ಭಾರತ ಪ್ರವೇಶಿಸಿ, ಇದ್ದುಬಿಡುತ್ತಾರೆ. ಇದೇ ರೀತಿ, ಬಂದವರು ಕೆಲವರು ತಾವಾಗೇ ಬೋಟ್ ಮಾಡಿಕೊಂಡು ಆಸ್ಟ್ರೇಲಿಯಾ, ಕೆನಡಾಕ್ಕೆ ತೆರಳುತ್ತಾರಂತೆ.
ಇದಲ್ಲದೆ, ಶ್ರೀಲಂಕಾದಲ್ಲಿ ತಮ್ಮ ಮನೆ, ಕುಟುಂಬ ಎಲ್ಲವನ್ನೂ ಬಿಟ್ಟು ಬರುತ್ತಾರೆ. ತಮ್ಮ ಹೆಸರಲ್ಲಿ ಜಾಗ ಏನಾದ್ರೂ ಇದ್ದರೆ ಅದನ್ನೂ ಮಾರಿಕೊಂಡು ಬರುತ್ತಾರೆ. ಕೆಲವು ದಲ್ಲಾಳಿ ಏಜನ್ಸಿಗಳು ಕೆನಡಾ, ಆಸ್ಟ್ರೇಲಿಯಾಕ್ಕೆ ಕರೆದೊಯ್ಯುವ ಭರವಸೆ ನೀಡಿ, ಹಣವನ್ನು ದೋಚುತ್ತಾರೆ. ಆದರೆ, ಈ ರೀತಿ ವ್ಯವಸ್ಥಿತವಾಗಿ ಬಂದು ಸೇರುವುದಕ್ಕೆ ಯಾವುದೋ ಏಜನ್ಸಿಯವರು ಕೆಲಸ ಮಾಡಿರುತ್ತಾರೆ. ತಮಿಳುನಾಡಿನಲ್ಲಿ ಈ ಬಾರಿ 28 ಮಂದಿ ಲಂಕನ್ನರನ್ನು ಪತ್ತೆ ಮಾಡಿದ್ದೇವೆ. ಅವರ ಜೊತೆಗಾರರು ಮಂಗಳೂರಿನಲ್ಲಿ ಇರುವುದನ್ನು ತಿಳಿದು, ಮಂಗಳೂರು ಪೊಲೀಸರಿಗೆ ಮಾಹಿತಿ ನೀಡಲಾಗಿತ್ತು ಎಂದು ತನಿಖೆಗೆ ಬಂದಿರುವ ತಮಿಳುನಾಡು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.



ಮಂಗಳೂರಿನ ಮೀನುಗಾರಿಕಾ ಬಂದರಿನಲ್ಲಿ ಅತಿ ಹೆಚ್ಚು ತಮಿಳುನಾಡು ಮೂಲದ ಕಾರ್ಮಿಕರಿದ್ದಾರೆ. ಈ ತಮಿಳಿಯರ ಜೊತೆ ಸೇರಿ, ಲಂಕನ್ನರೂ ಮೀನುಗಾರಿಕೆ ಕೆಲಸಕ್ಕೆ ಮುಂದಾಗುತ್ತಾರೆ. ನೋಡುವುದಕ್ಕೆ ಒಂದೇ ರೀತಿ ಇದ್ದರೂ, ಲಂಕನ್ನರು ಮಾತನಾಡುವ ಭಾಷೆ ಆಧರಿಸಿ, ಅವರನ್ನು ಪತ್ತೆ ಮಾಡಲಾಗುತ್ತದೆ. ಸಾಧಾರಣವಾಗಿ ತಮಿಳುನಾಡಿನ ಮಂದಿ, ಲಂಕನ್ನರನ್ನು ಅವರು ಆಡುವ ಭಾಷೆಯಿಂದಲೇ ಗುರುತು ಹಿಡಿಯುತ್ತಾರೆ. ಆದರೆ, ಇತರರಿಗೆ ಹೀಗೆ ಪತ್ತೆ ಮಾಡುವುದು ಸಾಧ್ಯವಾಗಲ್ಲ. ಹೀಗಾಗಿ ಕೇರಳದ ಕೊಚ್ಚಿ, ಮಂಗಳೂರು ಹೀಗೆ ಬಂದರು ಪ್ರದೇಶಗಳಲ್ಲಿ ಬಂದು ಉಳಿದುಕೊಳ್ಳುತ್ತಾರೆ.


ಮೊನ್ನೆ ಬಂದಿದ್ದ 38 ಮಂದಿ ಲಂಕನ್ನರ ಪೈಕಿ, ಇಬ್ಬರು ಮಂಗಳೂರಿನ ಸ್ಥಳೀಯ ಬೋಟ್ ಒಂದರಲ್ಲಿ ಸಮುದ್ರಕ್ಕೆ ತೆರಳಿದ್ದರು. ಯಾರಿಗೂ ಗೊತ್ತೇ ಆಗದ ರೀತಿ, ಸ್ಥಳೀಯ ಕಾರ್ಮಿಕರ ಜೊತೆ ಬೆರೆತಿದ್ದರು ಅನ್ನೋ ವಿಚಾರ ಪೊಲೀಸರ ಕಾರ್ಯಾಚರಣೆ ಸಂದರ್ಭ ಪತ್ತೆಯಾಗಿದೆ. ಮಂಗಳೂರಿನಲ್ಲಿ ಪತ್ತೆಯಾದವರನ್ನು ತಮಿಳುನಾಡಿಗೆ ಒಯ್ದು ಸಮಗ್ರ ವಿಚಾರಣೆ ನಡೆಸುತ್ತೇವೆ. ಇವರ ಹಿಂದೆ ಯಾರಿದ್ದಾರೆ ಅನ್ನುವುದನ್ನು ಪತ್ತೆ ಮಾಡುತ್ತೇವೆ. ಆಬಳಿಕ ಅವರನ್ನು ಗೃಹ ಇಲಾಖೆಯ ಅನುಮತಿ ಪಡೆದು ಶ್ರೀಲಂಕಾಕ್ಕೆ ಗಡೀಪಾರು ಮಾಡಲಾಗುವುದು ಎಂದು ತಮಿಳುನಾಡು ಪೊಲೀಸರು ತಿಳಿಸಿದ್ದಾರೆ.


ಕಳೆದ ಮಾರ್ಚ್ 17ರಂದು ತೂತುಕುಡಿ ಬಂದರಿಗೆ ಆಗಮಿಸಿದ್ದ ಲಂಕನ್ನರನ್ನು ಬಳಿಕ ತಮಿಳುನಾಡಿನಲ್ಲಿ ವಿಧಾನಸಭೆ ಚುನಾವಣೆ ಎದುರಾಗಿದ್ದರಿಂದ ಬೆಂಗಳೂರಿಗೆ ಒಯ್ಯಲಾತ್ತು. ಆನಂತರ ಮಂಗಳೂರಿಗೆ ತಂದು ಇರಿಸಲಾಗಿತ್ತು ಅನ್ನುವ ಮಾಹಿತಿಯಿದೆ. ಹಾಗಾದ್ರೆ, ಇವರನ್ನು ಒಂದೆಡೆಯಿಂದ ಇನ್ನೊಂದೆಡೆಗೆ ಒಯ್ಯಲು ವ್ಯವಸ್ಥಿತವಾದ ಏಜನ್ಸಿ ಇರುವುದು ದೃಢಪಟ್ಟಿದೆ. ಮಂಗಳೂರು ಮತ್ತು ತಮಿಳುನಾಡು ಪೊಲೀಸರು ಜಂಟಿಯಾಗಿ ತನಿಖೆಗೆ ಮುಂದಾದರೆ, ಇದರ ಹಿಂದಿರುವ ಏಜಂಟರನ್ನು ಪತ್ತೆ ಮಾಡುವುದು ಕಷ್ಟವಾಗಲಿಕ್ಕಿಲ್ಲ.
Read: ಅಂತಾರಾಷ್ಟ್ರೀಯ ಮಾನವ ಕಳ್ಳಸಾಗಣೆ ಜಾಲ ಪತ್ತೆ ; ಕೆನಡಾಕ್ಕೆ ತೆರಳಲು ಪ್ಲಾನ್ ಹಾಕಿದ್ದ 38 ಲಂಕನ್ನರ ಸೆರೆ !
A team of 9 Police officers with DYSP of Q Crime Branch Police from Coimbatore, Tamilnadu have come to Mangaluru for enquiry over 38 Sri Lankans being detained by Mangaluru Police.
17-09-26 04:13 pm
HK News Staffer
ಚಿತ್ರರಂಗದ ಸಾರ್ವಕಾಲಿಕ ಶ್ರೇಷ್ಠ ನಟ ಅನಂತನಾಗ್ ಗೆ '...
16-09-26 10:40 pm
Tulu Language, Shivraj Tangadagi: ತುಳುವಿಗೆ 2ನ...
16-09-26 01:51 pm
Pradeep Eshwar, Pratap Simha: ಪೊಲೀಸ್ ಠಾಣೆಗೆ...
15-09-26 09:13 pm
Imran Pasha, Pratap Simha: ನಿನ್ನಂತಹ ಒಂದು ಲಕ್...
15-09-26 04:46 pm
13-09-26 09:00 pm
HK News
80s ಫೋಟೋ ಟ್ರೆಂಡ್ಗೆ ಮಾರುಹೋಗಿದ್ದೀರಾ? ಹುಷಾರ್ ;...
12-09-26 01:10 pm
ಕಾಶ್ಮೀರಿ ಪಂಡಿತರಿಗೆ ಮತ್ತೆ ಬೆದರಿಕೆ ; ಉದ್ಯೋಗ ಬಿಟ...
10-09-26 01:23 pm
ನೇಪಾಳ ಪ್ರವಾಹ ; ಹತ್ತು ದಿನಗಳ ಬಳಿಕ ಜಲವಿದ್ಯುತ್ ಸು...
05-09-26 11:55 am
ಮುಂದಿನ ಒಂದು ವರ್ಷದಲ್ಲಿ ಒಂದು ಸಾವಿರ ವಿದ್ಯಾಭಾರತಿ...
04-09-26 08:14 pm
17-09-26 08:48 pm
HK News Staffer
Mangalore, DK Shivakumar, Coastal Karnataka,...
17-09-26 08:02 pm
Mangalore, Yathindra Siddaramaiah, Umar Khali...
17-09-26 06:29 pm
ಸಚಿವ ಸಂಪುಟ ಸಭೆಗೆ ಕ್ಷಣಗಣನೆ ; ಪಡೀಲ್ ಜಿಲ್ಲಾಧಿಕಾರ...
17-09-26 05:12 pm
ಗಣೇಶ ವಿಸರ್ಜನಾ ಮೆರವಣಿಗೆ ವೇಳೆ ಮಸೀದಿ, ಮದರಸಾ ಮೇಲೆ...
17-09-26 09:41 am
17-09-26 02:22 pm
HK News Staffer
Bangalore Murder, Crime: ಪ್ರೀತಿಸಿ ಮದುವೆಯಾಗಿದ್...
17-09-26 01:56 pm
Bangalore kidnap, Crime: ಬೆಂಗಳೂರಿನಲ್ಲಿ ಶಾಕ್...
17-09-26 12:35 pm
Manglore Cyber crime, Stock Market: ಷೇರು ಮಾರ್...
17-09-26 11:45 am
ಬೆಳ್ತಂಗಡಿ; ಗೃಹಪ್ರವೇಶಕ್ಕೆ ಹೋದಾಗ ಮನೆಗೆ ಕನ್ನ, ₹1...
16-09-26 11:18 am